ವಿಶ್ವ ಜನ ಸಂಖ್ಯಾ ದಿನ: ಹಾರ್ಮೋನ್‌ ಸಮತೋಲನ ಕಾಪಾಡುವ 12 ಪರಿಣಾಮಕಾರಿ ಗರ್ಭನಿರೋಧಕ ವಿಧಾನಗಳಿವು

ಜುಲೈ 11ನ್ನು ವಿಶ್ವ ಜನ ಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಜನ ಸಂಖ್ಯೆ ಹೆಚ್ಚಳದಿಂದಾಗಿ ದೇಶ ಹಾಗೂ ವಿಶ್ವದ ಮೇಲೆ ಉಂಟಾಗುವ ಅಡ್ಡಪರಿಣಾಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.

ಗರ್ಭಧಾರಣೆ ತಡೆಗಟ್ಟಲು ಶಸ್ತ್ರ ಚಿಕಿತ್ಸೆ ವಿಧಾನವಿದೆ, ಆದರೆ ಎಲ್ಲರಿಗೆ ಈ ವಿಧಾನ ಸೂಕ್ತ ಅನಿಸುವುದಿಲ್ಲ. ನಮಗೆ ಒಂದು ಅಥವಾ ಎರಡು ಮಗು ಸಾಕು ಎಂದು ತೀರ್ಮಾನಿಸಿರುತ್ತಾರೆ, ಆದರೆ ಕೆಲವು ಕಾರಣಗಳಿಂದಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲು ಇಷ್ಟಪಡುವುದಿಲ್ಲ.

World Population Day 2023: 12 Effective Non Hormonal Birth Control Method In Kannada

ಇನ್ನು ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವುದರಿಂದ ಹಾರ್ಮೋನ್‌ಗಳಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ, ಈ ಕಾರಣಕ್ಕೆ ಗರ್ಭಧಾರಣೆ ತಡೆಗಟ್ಟಲು ಇತರ ಸೂಕ್ರ ವಿಧಾನಗಳಾವುವು ಎಂದು ತಿಳಿದುಕೊಳ್ಳಲು ಇಷ್ಟಪಡುತ್ತಾರೆ.

ಈ ವಿಧಾನಗಳನ್ನು ಅನುಸರಿಸುದರೆ ಗರ್ಭಧಾರಣೆಯಾಗುವುದನ್ನು ತಡೆಗಟ್ಟಬಹುದು ಅಲ್ಲದೆ ಈ ಗರ್ಭನಿರೋಧಕ ವಿಧಾನಗಳಿಂದ ದೇಹದಲ್ಲಿ ಯಾವುದೇ ಹಾರ್ಮೋನ್‌ಗಳ ವ್ಯತ್ಯಾಸ ಕೂಡ ಆಗುವುದಿಲ್ಲ:

1. ತಾಮ್ರದ IUD

IUD ಬಳಸುವುದು ಗರ್ಭಧಾರಣೆ ತಡೆಗಟ್ಟಲು ಇರುವ ಪರಿಣಾಮಕಾರಿಯಾದ ವಿಧಾನವಾಗಿದೆ. t-ಶೇಪ್‌ನ ಪೀಸ್‌ ಅನ್ನು ಆಸ್ಪತ್ರೆಯಲ್ಲಿ ಜನನೇಂದ್ರೀಯಕ್ಕೆ ಹಾಕಲಾಗುವುದು. ಇದು ವೀರ್ಯಾಣುಗಳು ಅಂಡಾಣುವಿನ ಸಂಪರ್ಕ ಮಾಡುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಈ ವಿಧಾನ ಗರ್ಭಧಾರಣೆ ತಡೆಗಟ್ಟುವಲ್ಲಿ ತುಂಬಾನೇ ಪರಿಣಾಮಕಾರಿಯಾದ ವಿಧಾನವಾಗಿದೆ. ಅಲ್ಲದೆ ಈ ವಿಧಾನಕ್ಕೆ ಖರ್ಚು ಕೂಡ ಕಡಿಮೆ.

ಇದನ್ನು ಹಾಕಲು ಹಾಗೂ ತೆಗೆಯುವುದನ್ನು ವೃತ್ತಿಪರ ತಜ್ಞರೇ ಮಾಡಬೇಕು. ಇದನ್ನು ಹಾಕಿದಾಗ ಕೆಲವರಿಗೆ ನೋವು, ರಕ್ತಸ್ರಾವ ಈ ಬಗೆಯ ಸಮಸ್ಯೆ ಕಂಡು ಬರುವುದು. ಆದರೆ ಇದು ಒಮ್ಮೆ ಫಿಟ್‌ ಆದರೆ ಮತ್ಯಾವುದೇ ತೊಂದರೆಯಿಲ್ಲ.

2. ಪುರುಷರಿಗೆ ಕಾಂಡೋಮ್

ಗರ್ಭಧಾರಣೆ ತಡೆಗಟ್ಟಲು ಕಾಂಡೋಮ್‌ ವಿಧಾನವನ್ನು ಹೆಚ್ಚಾಗಿ ಬಳಸಲಾಗುವುದು, ಈ ಕಾಂಡೋಮ್ ಬಳಸುವುದರಿಂದ ಗರ್ಭಧಾರಣೆ ತಡೆಗಟ್ಟುವುದು ಮಾತ್ರವಲ್ಲ, ಲೈಂಗಿಕ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಆದರೆ ಕಾಂಡೋಮ್‌ ಶೇ.87ರಷ್ಟು ಸುರಕ್ಷಿತ. ಇದನ್ನು ಪ್ರತಿ ಬಾರಿ ಲೈಂಗಿಕ ಕ್ರಿಯೆ ನಡೆಸುವಾಗ ಬಳಸುವಾಗ ಕಾಂಡೋಮ್‌ ಬಳಸಿದರೆ ಗರ್ಭಧಾರಣೆಯಾಗುವುದನ್ನು ತಡೆಗಟ್ಟಬಹುದು.

3. ಮಹಿಳೆಯರಿಗೆ ಕಾಂಡೋಮ್

ಕಾಂಡೋಮ್‌ ಎಂಬುವುದು ಪುರುಷರಿಗಷ್ಟೇ ಅಲ್ಲ ಮಹಿಳೆಯರಿಗೂ ಇದೆ. ಇದು ಕೂಡ ಶೇ. 79ರಷ್ಟು ಪರಿಣಾಮಕಾರಿ. ಮಹಿಳೆಯರು ಕಾಂಡೋಮ್ ಬಳಸುವುದರಿಂದ ಲೈಂಗಿಕ ಸೋಂಕು ಉಂಟಾಗುವುದನ್ನು ತಡೆಗಟ್ಟಬಹುದು. ಮಹಿಳೆ ಪುರುಷ ಇಬ್ಬರೂ ಕಾಂಡೋಮ್ ಬಳಸುವಿದರಿಂದ ತುಂಬಾನೇ ಸುರಕ್ಷಿತ.

4. ಸರ್ವಿಕಲ್ ಕ್ಯಾಪ್ಸ್ (Diaphragms)

ಇದು ಕೂಡ ಗರ್ಭಧಾರಣೆ ತಡೆಗಟ್ಟಲು ಇರುವ ಮತ್ತೊಂದು ವಿಧಾನವಾಗಿದೆ. ಇದು ಜನನೇಂದ್ರೀಯ ಮೂಲಕ ವೀರ್ಯಾಣು ಅಂಡಾಣುವಿನ ಸಂಪರ್ಕ ಮಾಡುವುದನ್ನು ತಡೆಗಟ್ಟುತ್ತದೆ, ಆದರೆ ಈ ವಿಧಾನದಲ್ಲಿ ಗರ್ಭಧಾರಣೆ ತಡೆಗಟ್ಟಬಹುದೇ ಹೊರತು ಲೈಂಗಿಕ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ.

5. ಕ್ಯಾಲೆಂಡರ್ ವಿಧಾನ

ಇದರಲ್ಲಿ ನೀವು ನಿಮ್ಮ ಮುಟ್ಟಿನ ಚಕ್ರ ಟ್ರ್ಯಾಕ್ ಮಾಡಬೇಕು. ನೀವು ಓವ್ಯೂಲೇಷನ್‌ ಸಮಯವನ್ನು ತಿಳಿದುಕೊಳ್ಳಬೇಕು, ಏಕೆಂದರೆ ಓವ್ಯೂಲೇಷನ್ ಸಮಯವಲ್ಲದೆ ಮತ್ಯಾವ ದಿನಗಳಲ್ಲಿ ಲೈಂಗಿಕ ಸಂಪರ್ಕ ಮಾಡಿದರೆ ಗರ್ಭಧಾರಣೆಯಾಗುವುದಿಲ್ಲ, ಆದ್ದರಿಂದ ಓವ್ಯೂಲೇಷನ್ ಕಿಟ್‌ ಬಳಸಿ ನಿಮ್ಮ ಓವ್ಯೂಲೇಷನ್ ದಿನ ತಿಳಿಯಬಹುದು. ಮುಟ್ಟಾದ 12-14 ದಿನಗಳಲ್ಲಿ ಅಂಡಾಣುಗಳು ಉತ್ಪತ್ತಿಯಾಗುತ್ತದೆ.

6. ಬರ್ತ್‌ ಕಂಟ್ರೋಲ್ ಸ್ಪಾಂಜ್

ಇದರ ಬಗ್ಗೆ ಕೇಳಿದ್ದೀರಾ? ಈ ಬರ್ತ್‌ ಕಂಟ್ರೋಲ್‌ ಸ್ಪಾಂಜ್‌ ಅನ್ನು ಜನನೇಂದ್ರೀಯದ ಒಳಗಡೆ ಹಾಕಿದರೆ 24 ಗಂಟೆ ಸುರಕ್ಷತೆ ಸಿಗಲಿದೆ. ಈ ವಿಧಾನ ಶೇ. 88ರಷ್ಟು ಪರಿಣಾಮಕಾರಿಯಾಗಿದೆ.

7. ಗರ್ಭನಿರೋಧಕ ಜೆಲ್

Phexxi ಎಂಬ ಹೊಸ ವಿಧಾನ ಬಂದಿದೆ. ಇದು ಸ್ಪರ್ಮಿಸೈಡ್ ರೀತಿಯಲ್ಲ, ಆದರೆ ಬಳಸುವ ವಿಧಾನ ಅದೇ ರೀತಿ. ಇದನ್ನು ಜನನೇಂದ್ರೀಯದಲ್ಲಿ ಇದನ್ನು ಬಳಸುವುದರಿಂದ ಇದು pH ಪ್ರಮಾಣ ಕಡಿಮೆಯಾಗಿ ಅಂಡಾಣು ಹಾಗೂ ವೀರ್ಯಾಣು ಸೇರುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.

8. ಹೊರಹಾಕುವುದು

ಲೈಂಗಿಕ ಕ್ರಿಯೆ ನಡೆಸುವ ವೇಳೆ ಪುರುಷ ವೀರ್ಯಾಣು ಹೊರ ಹಾಕಿದರೆ ಗರ್ಭಧಾರಣೆಯಾಗುವುದನ್ನು ತಡೆಗಟ್ಟಬಹುದು.

9. ವ್ಯಾಸೆಕ್ಟಮಿ

ಪುರುಷರು ಗರ್ಭಧಾರಣೆ ತಡೆಗಟ್ಟಲು ವ್ಯಾಸೆಕ್ಟಮಿ ವಿಧಾನ ಬಳಸಬಹುದು.

10. ಟ್ಯೂಬೆಲ್ ಲಿಗೇಷನ್

ಈ ವಿಧಾನ ಕೂಡ ಸೇ. 99ರಷ್ಟು ಪರಿಣಾಮಕಾರಿಯಾಗಿದ್ದು ಈ ವಿಧಾನ ಬಳಸಿ ಗರ್ಭಧಾರಣೆ ತಡೆಗಟ್ಟಬಹುದು. ಆದರೆ ವ್ಯಾಸೆಕ್ಟಮಿ ಅಥವಾ ಈ ವಿಧಾನ ಬಳಸುವುದಾದರೆ ಫ್ಯಾಮಿಲಿ ಪ್ಲ್ಯಾನಿಂಗ್ ಕಂಪ್ಲೀಟ್ ಆಗಿರಬೇಕು.

11. ನ್ಯಾಚುರಲ್ ಸೈಕಲ್

ನಿಮಗೆ ನಿಯಮಿತ ಮುಟ್ಟು ಆಗುತ್ತಿದ್ದರೆ ನ್ಯಾಚುರಲ್‌ ಸೈಕಲ್‌ ಟ್ರ್ಯಾಕ್ ಮಾಡಲು ಕಷ್ಟವಾಗಲ್ಲ, ಇಲ್ಲದಿದ್ದರೆ ಈ ವಿಧಾನ ಸ್ವಲ್ಪ ಕಷ್ಟವಾಗುವುದು.

12. ಚುಚ್ಚುಮದ್ದು:

ಗರ್ಭಧಾರಣೆ ತಡೆಗಟ್ಟಲು ಚುಚ್ಚು ಮದ್ದು ಇದೆ, ಆದರೆ ಇದನ್ನು ತೆಗೆದುಕೊಳ್ಳುವುದರಿಂದ ಕೆಲವರಿಗೆ ಹಾರ್ಮೋನ್‌ಗಳಲ್ಲಿ ಬದಲಾವಣೆಯಾಗಬಹುದು. ಆದರೆ ಎಲ್ಲರಿಗೂ ಆಗುತ್ತೆ ಅಂತಲ್ಲ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

World Population Day 2023: 12 Effective Non Hormonal Birth Control Method In Kannada

World Population Day 2023: Here are 12 affective non horomonal birth control way,read on.
X
Desktop Bottom Promotion