Latest Updates
-
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ!
ಸೊಳ್ಳೆಯಿಂದ ಹರಡುವ ಈ 6 ಕಾಯಿಲೆಗಳು ಪ್ರಾಣಕ್ಕೆ ತರಬಹುದು ಕುತ್ತು, ಜಾಗ್ರತೆ!
ಆಗಸ್ಟ್ 20ನ್ನು ವಿಶ್ವ ಸೊಳ್ಳೆ ದಿನವನ್ನಾಗಿ ಆಚರಿಸಲಾಗುವುದು. ಸೊಳ್ಳೆಗಳಿಂದ ಉಂಟಾಗುವ ಅಪಾಯ ಹಾಗೂ ಸೊಳ್ಳೆಯನ್ನು ನಿರ್ಮೂಲನೆ ಮಾಡುವುದು ಹೇಗೆ ಎಂದು ಜನರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುವುದು.
ಸೊಳ್ಳೆ ಎಂಬ ಚಿಕ್ಕ ಜೀವಿಯನ್ನು ನಿರ್ಲಕ್ಷ್ಯ ಮಾಡಿದರೆ ಅವುಗಳು ನಮ್ಮ ಪ್ರಾಣಕ್ಕೆ ಕುತ್ತು ತರಬಹುದು, ಆದ್ದರಿಂದ ಸೊಳ್ಳೆಗಳು ಉಂಟಾಗದಂತೆ ತುಂಬಾನೇ ಎಚ್ಚರವಹಿಸಬೇಕಾಗಿದೆ. ಚಿಕನ್ ಗುನ್ಯಾ, ಮಲೇರಿಯಾ, ಡೆಂಗ್ಯೂ ಈ ಬಗೆಯ ಭಯಾನಕ ರೋಗಗಳು ಹರಡಲು ಸೊಳ್ಳೆಗಳೇ ಕಾರಣ. ಈ ರೋಗಗಳನ್ನು ತಡೆಗಟ್ಟಬೇಕೆಂದರೆ ಮೊದಲು ಸೊಳ್ಳೆಗಳನ್ನು ತಡೆಗಟ್ಟಬೇಕು.

ಸೊಳ್ಳೆ ಕಚ್ಚುವುದರಿಂದ ಈ 7 ಭಯಾನಕ ಸಮಸ್ಯೆಗಳು ಉಂಟಾಗುವುದು:
* ಮಲೇರಿಯಾ: ಮಲೇರಿಯಾ ಸಮಸ್ಯೆ ಮನುಷ್ಯರಿಂದ ಮನುಷ್ಯರಿಗೆ ಸೊಳ್ಳೆಗಳು ಕಚ್ಚುವುದರಿಂದ ಹರಡುವುದು. ಮಲೇರಿಯಾ ಸೋಂಕಿತ ವ್ಯಕ್ತಿಗೆ ಕಚ್ಚಿದ ಸೊಳ್ಳೆ ಮತ್ತೊಬ್ಬ ವ್ಯಕ್ತಿಯನ್ನು ಕಚ್ಚುವುದರಿಂದ ಮಲೇರಿಯಾ ಸೋಂಕು ಮತ್ತೊಬ್ಬರಿಗೆ ಹರಡುವುದು.
* ಡೆಂಗ್ಯೂ: ಡೆಂಗ್ಯೂ ಸಮಸ್ಯೆ ಪ್ರಾಣಕ್ಕೆ ಕುತ್ತು ತರುವಂಥ ಭಯಾನಕ ಸಮಸ್ಯೆಯಾಗಿದೆ. ಜ್ವರ ಬಂದು 3 ದಿನಗಳಾದರೂ ಜ್ವರ ಕಡಿಮೆಯಾಗಿಲ್ಲ, ಮೈಯಲ್ಲಿ ಗುಳ್ಳೆಗಳು ಏಳುವುದು, ವಾಂತಿ, ಬೇಧಿ ಈ ಬಗೆಯ ಲಕ್ಷಣಗಳು ಕಂಡು ಬಂದರೆ ಡೆಂಗ್ಯೂ ಪರೀಕ್ಷೆ ಮಾಡಿಸಿ.
ಚಿಕನ್ಗುನ್ಯಾ: ಈಡೀಸ್ ಎಂಬ ಸೊಳ್ಳೆಯಿಂದಾಗಿ ಚಿಕನ್ಗುನ್ಯಾ ಹರಡುತ್ತದೆ. ಜ್ವರ, ಮಂಡಿಗಳಲ್ಲಿ ನೋವು, ತಲೆನೋವು, ತ್ವಚೆಯಲ್ಲಿ ಗುಳ್ಳೆಗಳು ಏಳುವುದು ಈ ರೀತಿಯ ಲಕ್ಷಣಗಳು ಕಂಡು ಬಂದರೆ ನೀವು ಚಿಕನ್ ಗುನ್ಯಾ ಪರೀಕ್ಷೆ ಮಾಡಿಸಿ.
ಝಿಕಾ ವೈರಸ್: ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ, ಗರ್ಭಿಣಿಯರಿಗೆ ಈ ಕಾಯಿಲೆ ತುಂಬಾನೇ ಅಪಾಯಕಾರಿ. ಪ್ರಾಣಕ್ಕೂ ಕುತ್ತು ತರಬಹುದು. ಝಿಕಾ ವೈರಸ್ ಪತ್ತೆಯಾದ ಕಡೆ ಗರ್ಭಿಣಿಯರು ಸೊಳ್ಳೆ ಕಚ್ಚದಂತೆ ಹೆಚ್ಚಿನ ಜಾಗ್ರತಿವಹಿಸಬೇಕಾಗಿದೆ.
ಕಾಮಲೆ
ಈಡೀಸ್ ಎಂಬ ಸೊಳ್ಳೆಯಿಂದ ಗಂಭೀರ ಕಾಮಲೆ ರೋಗ ಕಂಡು ಬರುವುದು, ಈ ಕಾಯಿಲೆಗೆ ವಿಶ್ವದಲ್ಲಿ 30, 000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
ವೆಸ್ಟ್ ನೈಲ್ ವೈರಸ್
ಇದು ಕೂಡ ಸೊಳ್ಳೆ ಕಚ್ಚುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಯಾಗಿದೆ. ಹೀಗೆ ಸೊಳ್ಳೆ ಕಚ್ಚುವುದರಿಂದ ಅನೇಕ ಗಂಭೀರ ಸಮಸ್ಯೆಗಳು ಉಂಟಾಗುವುದು.
ಸೊಳ್ಳೆ ಹರಡುವುದನ್ನು ತಡೆಗಟ್ಟುವುದು ಹೇಗೆ?
ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಹಾಕಿ ಮರಿ ಮಾಡುವುದು, ಬರೀ ಕೊಳಚೆ ನೀರಷ್ಟೇ ಅಲ್ಲ, ನೀವು ಡ್ರಮ್, ಬಕೆಟ್ನಲ್ಲಿ ನೀರುಗಳನ್ನು ತುಂಬಿಟ್ಟು ಅದನ್ನು ಮುಚ್ಚಿಡದಿದ್ದರೆ, ಅವುಗಳಲ್ಲಿ ಸೊಳ್ಳೆಗಳು ಮೊಟ್ಟೆಯನ್ನು ಹಾಕಿ ಮರಿ ಮಾಡುತ್ತವೆ. ಆದ್ದರಿಂದ ಮೊದಲು ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತೆಂಗಿನ ಚಿಪ್ಪುಗಳು, ಟೈರ್ಗಳು, ಬಾಟಲಿಗಳು ಇವುಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆವಹಿಸಿ.
ಸೊಳ್ಳೆ ಕಚ್ಚುವುದನ್ನು ತಡೆಗಟ್ಟುವುದು ಹೇಗೆ?
* ಸೊಳ್ಳೆ ಕಚ್ಚುವುದನ್ನು ತಡೆಗಟ್ಟಲು ತುಂಬು ತೋಳಿನ ಬಟ್ಟೆಗಳನ್ನು ಧರಿಸಿ, ಮಕ್ಕಳಿಗೂ ತುಂಬು ತೋಳಿನ ಬಟ್ಟೆ ಧರಿಸಿ.
* ಮನೆಯ ಕಿಟಕಿ ಹಾಗೂ ಬಾಗಿಲುಗಳನ್ನು ಸಂಜೆ ಹೊತ್ತಿನಲ್ಲಿ ತೆರೆದಿಡಬೇಡಿ, ಕಿಟಕಿ ತೆರೆದಿಡುವುದಾದರೆ ಸೊಳ್ಳೆ ಪರದೆ ಆಗಿಸಿ.
* ಮಲಗುವಾಗ ಸೊಳ್ಳೆ ಪರದೆಯೊಳಗಡೆ ಮಲಗಿಸಿ.
* ಸೊಳ್ಳೆ ಬತ್ತಿಗಳು ಅಥವಾ mosquito repellent ಬಳಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
