ಲುಪಸ್: ಮಹಿಳೆಯರೇ, ಮುಖದಲ್ಲಿ ಚಿಟ್ಟೆಯಾಕಾರದ ಕಲೆ ಈ ಗಂಭೀರ ಕಾಯಿಲೆಯ ಲಕ್ಷಣ

ಮೇ 10ನ್ನು ವಿಶ್ವ ಲುಪಸ್‌ ದಿನವನ್ನಾಗಿ ಆಚರಿಸಲಾಗುವುದು. ಲುಪಸ್‌ ಎಂಬುವುದು ಅಟೋಇಮ್ಯೂನೆ ಕಾಯಿಲೆಯಾಗಿದ್ದು ದೇಹದಲ್ಲಿರುವ ರೋಗ ನಿರೋಧಕ ವ್ಯವಸ್ಥೆ ದೇಹದ ಅಂಗಾಂಗಗಳ ಮೇಲೆಯೇ ತಪ್ಪಾಗಿ ದಾಳಿ ಮಾಡುವ ಸ್ಥಿತಿಯೇ ಲುಪಸ್.

World Lupus Day

ಲುಪಸ್ ಉಂಟಾದಾಗ ಸಂಧಿವಾತ, ತ್ವಚೆ, ಕಿಡ್ನಿ, ರಕ್ತಕಣಗಳು, ಮೆದುಳು, ಹೃದಯ, ಶ್ವಾಸಕೋಶದ ಉರಿಯೂತ ಉಂಟಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು, ಈ ಕಾಯಿಲೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಕೆಲವರಿಗೆ ಈ ಲುಪಸ್‌ ಉಂಟಾಗುವ ಸಾಧ್ಯತೆ ಅಧಿಕವಿರುತ್ತದೆ. ಯಾರಿಗೆ ಲುಪಸ್ ಅಪಾಯ ಅಧಿಕ, ಇದರ ಲಕ್ಷಣಗಳೇನು, ಚಿಕಿತ್ಸೆಯೇನು ಎಂದು ನೋಡೋಣ ಬನ್ನಿ:

ಲುಪಸ್ ಲಕ್ಷಣಗಳು
ಲುಪಸ್‌ ಲಕ್ಷಣಗಳು ಕೆಲವರಲ್ಲಿ ಶಾಶ್ವತವಾಗಿ ಕಂಡು ಬಂದರೆ ಇನ್ನು ಕೆಲವರಲ್ಲಿ ತಾತ್ಕಾಲಿಕ. ಲುಪಸ್‌ ಕೆಲವರಲ್ಲಿ ಲಕ್ಷಣಗಳು ಇದ್ದಕ್ಕಿದ್ದಂತೆ ಕಂಡು ಬಂದರೆ ಇನ್ನು ಕೆಲವರಲ್ಲಿ ಲಕ್ಷಣಗಳು ಅಷ್ಟಾಗಿ ಗೋಚರಿಸುವುದಿಲ್ಲ. ಲುಪಸ್ ಸಾಮಾನ್ಯ ಲಕ್ಷಣಗಳೆಂದರೆ
* ತಲೆಸುತ್ತು
* ಜ್ವರ
* ಮೈಕೈ ನೋವು, ಊತ, ಕಾಲು-ಕೈಗಳು ಬಿಗಿಯಾದಂತೆ ಅನಿಸುವುದು
* ಮುಖದಲ್ಲಿ ಚಿಟ್ಟೆಯಾಕಾರದ ಗುಳ್ಳೆಗಳು
* ಸೂರ್ಯನ ಬಿಸಿಲಿಗೆ ಹೋದಾಗ ತ್ವಚೆ ಸುಟ್ಟಂತಾಗುವುದು
* ಬೆರಳುಗಳು ಹಾಗೂ ತುದಿಕಾಲು ಚಳಿಯಲ್ಲಿ ಅಥವಾ ಅತಿಯಾದ ಒತ್ತಡಕ್ಕೆ ಒಳಗಾದಾಗ ಬಿಳುಚಿಕೊಳ್ಳುವುದು ಅಥವಾ ನೀಲಿ ಬಣ್ಣಕ್ಕೆ ತಿರುಗುವುದು.
* ಉಸಿರಾಟದಲ್ಲಿ ತೊಂದರೆ
* ಎದೆನೋವು
* ಕಣ್ಣು ಒಣಗುವುದು
* ತಲೆನೋವು, ಗೊಂದಲ, ಮರೆವು

ಲುಪಸ್‌ಗೆ ಕಾರಣವೇನು?
ಇದು ಅಟೋಇಮ್ಯೂನೆ ಕಾಯಿಲೆಯಾಗಿದ್ದು ಕೆಲವರಲ್ಲಿ ವಂಶಪಾರಂಪರ್ಯವಾಗಿ ಬಂದರೆ ಇನ್ನು ಕೆಲವರಿಗೆ ಪರಿಸರದ ಕಾರಣದಿಂದಾಗಿ ಉಂಟಾಗುವುದು. ಲುಪಸ್‌ಗೆ ಕೆಲವೊಂದು ಕಾರಣಗಳೆಂದರೆ
ಸೂರ್ಯನ ಕಿರಣಗಳು: ತುಂಬಾ ಹೊತ್ತು ಬಿಸಿಲಿನಲ್ಲಿ ಕೆಲಸ ಮಾಡಿದರೆ ಈ ರೀತಿಯಾಗಬಹುದು
* ಸೋಂಕು: ಸೋಂಕಿನಿಂದಾಗಿ ಕೆಲವರಲ್ಲಿ ಲುಪಸ್ ಸಮಸ್ಯೆ ಉಂಟಾಗಬಹುದು
* ಔಷಧಗಳು: ಪಿಡ್ಸ್‌ಗೆ ಔಷಧ ತೆಗೆದುಕೊಳ್ಳುತ್ತಿರುವವರಲ್ಲಿ ಅಥವಾ ಇತರ ಆ್ಯಂಟಿಬಯೋಟಿಕ್‌ ತೆಗೆದುಕೊಳ್ಳುವವರಲ್ಲಿ ಕೆಲವೊಮ್ಮೆ ಅಡ್ಡಪರಿಣಾಮ ಉಂಟಾಗಿ ಈ ರೀತಿಯಾಗುವುದು.
ಲುಪಸ್‌ ಯಾರಲ್ಲಿ ಕಂಡು ಬರುವುದು?
* ಲುಪಸ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವುದು
* 15-45 ವರ್ಷದವರಲ್ಲಿ ಹೆಚ್ಚಾಗಿ ಕಂಡು ಬರುವುದು.

ಲುಪಸ್ ಸಮಸ್ಯೆಗಳೇನು?
ಕಿಡ್ನಿಗೆ ಹಾನಿಯಾಗಬಹುದು:ಲುಪಸ್‌ ಕಿಡ್ನಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದರಿಂದ ಕಿಡ್ನಿ ಫೈಲ್ಯೂರ್ ಕೂಡ ಆಗಬಹುದು.
* ಮೆದುಳಿನ ನರಗಳಿಗೆ ಹಾನಿಯಾಗುವುದು: ತಲೆನೋವು, ಸುಸ್ತು, ಕಣ್ಣುಗಳು ಮಂಜಾಗುವುದು, ಪಾರ್ಶ್ವವಾಯು, ಪಿಡ್ಸ್‌ ಈ ಬಗೆಯ ಸಮಸ್ಯೆ ಕಂಡು ಬರಬಹುದು
* ರಕ್ತನಾಳಗಳಿಗೆ ಹಾನಿ: ಲುಪಸ್‌ನಿಂದಾಗಿ ರಕ್ತದಲ್ಲಿ ಸಮಸ್ಯೆ ಉಂಟಾಗಬಹುದು. ಇದರಿಂದಾಗಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದು.
* ಶ್ವಾಸಕೋಶ: ಲುಪಸ್‌ ಸಮಸ್ಯೆಯಿಂದಾಗಿ ಶ್ವಾಸಕೋಶದ ಸೋಂಕು ಉಂಟಾಗಬಹುದು.
* ಹೃದಯ: ಲುಪಸ್‌ ಹೃದಯ ಸಂಬಂಧಿ ಸಮಸ್ಯೆ, ಹೃದಯಾಘಾತ ಉಂಟಾಗಬಹುದು.

ಇತರ ಸಮಸ್ಯೆ:
ಲುಪಸ್‌ನಿಂದಾಗಿ ಸೋಂಕು ಉಂಟಾಗಬಹುದು
* ಇದರಿಂದಾಗಿ ಕ್ಯಾನ್ಸರ್ ಅಪಾಯ ಅಧಿಕ
* ಮೂಳೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು
* ಗರ್ಭಾವಸ್ಥೆಯಲ್ಲಿ ತೊಂದರೆಗಳು ಉಂಟಾಗಬಹುದು.

ಲುಪಸ್ ಪತ್ತೆ ಹೇಗೆ?
ಲುಪಸ್ ಲಕ್ಷಣಗಳನ್ನು ಪ್ರಾರಂಭದಲ್ಲಿ ಪತ್ತೆಹಚ್ಚುವುದು ಕಷ್ಟ. ಇದರ ಕ್ಷಣಗಳು ಸಂಧಿವಾತ, ಮಧುಮೇಹಿಗಳಲ್ಲಿ ಕಂಡು ಬರುವ ಲಕ್ಷಣಗಳಂತೆಯೇ ಕಂಡು ಬರುವುದರಿಂದ ಪ್ರಾರಂಭದಲ್ಲಿ ಪತ್ತೆ ಕಷ್ಟವಾಗಬಹುದು. ಅದರ ಇತರ ಲಕ್ಷಣಗಳು ಕಂಡು ಬರುವಾಗ ಸಮಯ ಹಿಡಿಯಬಹುದು, ಆದ್ದರಿಂದ ಈ ಲುಪಸ್‌ ಬೇಗನೆ ಪತ್ತೆಯಾಗುವುದಿಲ್ಲ. ಲುಪಸ್‌ ಪತ್ತೆಗೆ antinuclear antibody (ANA) ಟೆಸ್ಟ್ ಮಾಡಲಾಗುವುದು.

ಲುಪಸ್‌ಗೆ ಚಿಕಿತ್ಸೆಯೇನು?
* ಲುಪಸ್‌ ಲಕ್ಷಣಗಳು
* ವಯಸ್ಸು
* ತೆಗೆದುಕೊಳ್ಳುತ್ತಿರುವ ಔಷಧಗಳು
* ಇತರ ಆರೋಗ್ಯ ಸಮಸ್ಯೆ
ಇವೆಲ್ಲವನ್ನು ತಿಳಿದುಕೊಂಡು ವೈದ್ಯರು ಔಷಧ ನೀಡುತ್ತಾರೆ. ಕೆಲವರಿಗೆ ಕೂಡಲೇ ಚಿಕಿತ್ಸೆ ಬೇಕಾಗುವುದು, ಇನ್ನು ಕೆಲವರಿಗೆ ಚಿಕಿತ್ಸೆ ಬೇಕಾಗುವುದು ಆದರೆ ತುರ್ತು ಚಿಕಿತ್ಸೆ ಅಗ್ಯತವಿರಲ್ಲ. ಇನ್ನು ಕೆಲವರಿಗೆ ತುರ್ತು ಚಿಕಿತ್ಸೆ ಅಗ್ಯತವಿರುತ್ತದೆ. ವೈದ್ಯರು ರೋಗಿಯ ಗುಣ ಲಕ್ಷಣ ನೋಡಿ ಯಾವ ಬಗೆಯ ಚಿಕಿತ್ಸೆ ನೀಡಬೇಕೆಂಬ ತೀರ್ಮಾನಕ್ಕೆ ಬರುತ್ತಾರೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

World Lupus Day: Causes, Symptoms and Treatment In Kannada

World Lupus Day: What are the causes, symptoms and treatment read on...
Story first published: Tuesday, May 9, 2023, 20:34 [IST]
X
Desktop Bottom Promotion