Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಿಶ್ವ ರಕ್ತದೊತ್ತಡ ದಿನ 2023:ಬಿಪಿ ಹೆಚ್ಚಿದ್ದರೆ ನಿಜವಾಗಲೂ ಕೋಪ ಹೆಚ್ಚಾಗುತ್ತಾ?
ಅವರಿಗೆ ಬಿಪಿ ಇದೆ, ಹಾಗಾಗಿ ಬೇಗನೆ ಕೋಪಗೊಳ್ಳುತ್ತಾರೆ, ಚಿಕ್ಕ ವಿಷಯಕ್ಕೆ ಸಿಕ್ಕಾಪಟ್ಟೆ ಕೋಪಗೊಳ್ಳುತ್ತಾರೆ ಎಂದು ಹೇಳುವುದನ್ನು ಕೇಳಿರಬಹುದು. ನಿಜವಾಗಲೂ ಅತ್ಯಧಿಕ ರಕ್ತದೊತ್ತಡದಿಂದಾಗಿ ಕೋಪ ಬರುವುದಾ ಅಥವಾ ಕೋಪ ಹೆಚ್ಚಾದಾಗ ರಕ್ತದೊತ್ತಡ ಹೆಚ್ಚಾಗುವುದಾ? ಈ ಕುರಿತು ವಿವರವಾಗಿ ನೋಡೋಣ ಬನ್ನಿ:
ಅತ್ಯಧಿಕ ರಕ್ತದೊತ್ತಡದಿಂದಾಗಿ ಕೋಪ ಹೆಚ್ಚಾಗಲ್ಲ, ಆದರೂ ಕೋಪಕ್ಕೂ-ರಕ್ತದೊತ್ತಡಕ್ಕೂ ಸಂಬಂಧವಿದೆ
ಬಿಪಿ ಸಮಸ್ಯೆ ಇದೆ ಎಂದರೆ ಕೋಪ ಬರುವುದಿಲ್ಲ, ಆದರೆ ಅತ್ಯಧಿಕ ಕೋಪಗೊಳ್ಳುವುದರಿಂದ ರಕ್ತದೊತ್ತಡ ಹೆಚ್ಚಾಗಿ ಸಮಸ್ಯೆ ಉಂಟಾಗಬಹುದು. ಕೋಪದಿಂದಾಗಿ ರಕ್ತದೊತ್ತಡ ಹೆಚ್ಚಾಗಿ ಇದರಿಂದ ಹೃದಯಾಘಾತ, ಹೃದಯ ಸ್ತಂಭನ ಈ ಬಗೆಯ ಸಮಸ್ಯೆಯೂ ಉಂಟಾಗಬಹುದು. ಕೋಪದಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ, ಆದ್ದರಿಂದ ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು.

ಕೋಪದಿಂದಾಗಿ ಮಾನಸಿಕ ನೆಮ್ಮದಿ ಹಾಳಾಗುವುದು, ಆರೋಗ್ಯ ಸಮಸ್ಯೆ ಹೆಚ್ಚಾಗುವುದು. ಅತಿಯಾದ ಕೋಪ ಮನುಷ್ಯನಿಗೆ ಅನೇಕ ಸಮಸ್ಯೆಗಳನ್ನು ತರುತ್ತದೆ. ಅತಿಯಾದ ಕೋಪದಿಂದ ತೆಗೆದುಕೊಳ್ಳುವ ನಿರ್ಧಾರಗಳು ಅವನ ಮೇಲೆ ಮತ್ತಷ್ಟು ಪರಿಣಾಮ ಬೀರುವುದು. ಕೋಪದಿಂದಾಗಿ ಮನುಷ್ಯ ಖಿನ್ನತೆಗೆ ಜಾರುವುದು, ಮಾನಸಿಕ ನೆಮ್ಮದಿ ದೂರಾಗುವುದು, ಸಾಮಾಜಿಕವಾಗಿ ಕೂಡ ಆ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರುವುದು, ಜನರು ಕೋಪದ ಸ್ವಭಾವದಿಂದಾಗಿ ದೂರ ಸರಿಯಲು ಪ್ರಯತ್ನಿಸುತ್ತಾರೆ. ಅತಿಯಾದ ಕೋಪದಿಂದಾಗಿ ರಕ್ತದೊತ್ತಡ ಅಧಿಕವಾಗಿ ಪಾರ್ಶ್ವವಾಯು ಉಂಟಾಗುವುದು. ಈ ರೀತಿ ಕೋಪ ತುಂಬಾನೇ ಸಮಸ್ಯೆ ತರುತ್ತದೆ.
ಅತ್ಯಧಿಕ ರಕ್ತದೊತ್ತಡ ಸಮಸ್ಯೆಯಿರುವವರು ಬಿಪಿ ನಿಯಂತ್ರಣದಲ್ಲಿಡಲು ಸಲಹೆಗಳು:
ನಿಮ್ಮ ಸೊಂಟದ ಸುತ್ತಳತೆ ಕಡೆಗೆ ಗಮನಹರಿಸಿ
ಯಾವಾಗ ಸೊಂಟದ ಸುತ್ತಳತೆ ಹೆಚ್ಚಾಗುವುದು ಅಂದರೆ ಮೈ ತೂಕ ಹೆಚ್ಚಾಗುವುದು, ಆವಾಗ ರಕ್ತದೊತ್ತಡಸ ಸಮಸ್ಯೆ ಕೂಡ ಹೆಚ್ಚಾಗುವುದು. ರಕ್ತದೊತ್ತಡ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ತಡೆಗಟ್ಟಲು ಮೈ ತೂಕವನ್ನು ನಿಯಂತ್ರಣದಲ್ಲಿಡಬೇಕು.
ಪ್ರತಿನಿತ್ಯ ವ್ಯಾಯಾಮ ಮಾಡಿ
ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು. ದಿನದಲ್ಲಿ 30 ನಿಮಿಷ ವ್ಯಾಯಾಮ ಮಾಡಲೇಬೇಕು. ವಾಕಿಂಗ್, ಜಿಮ್, ಯೋಗಾಸನ ಹೀಗೆ ನಿಮಗೆ ಯಾವುದು ಇಷ್ಟವಾಗುವುದೋ ಅದನ್ನು ಮಾಡಿ, ಜೊತೆಗೆ 15 ನಿಮಿಷ ಪ್ರಾಣಯಾಮ ಮಾಡಿ, ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿಯಾಗಿದೆ.
ಆರೋಗ್ಯಕರ ಆಹಾರ ಸೇವಿಸಿ
ನಮ್ಮ ಆಹಾರಕ್ರಮ ಕೂಡ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುವುದು. ಆದ್ದರಿಂದ ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಬೇಕು. ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಬಳಸಿ, ಮಾಂಸಾಹಾರ ಮಿತಿಯಲ್ಲಿ ಸೇವಿಸಿ. ಸಂಸ್ಕರಿಸಿದ ಆಹಾರ, ಫಾಸ್ಟ್ ಫುಡ್ಸ್ ಇವುಗಳಿಂದ ದೂರವಿರಿ.
ಸೋಡಿಯಂಶ ಅಂಶವಿರುವ ಆಹಾರವನ್ನು ಕಡಿಮೆ ಸೇವಿಸಿ
ಆಹಾರದ ಲೇಬಲ್ ಓದಿ: ನೀವು ಯಾವುದಾದರೂ ಆಹಾರವನ್ನು ಖರೀದಿಸುವಾಗ ಆಹಾರದ ಲೇಬಲ್ ಓದಿ.
* ಉಪ್ಪಿನಂಶ ಕಡಿಮೆ ಸೇವಿಸಿ: ಸಂಸ್ಕರಿಸಿದ ಆಹಾರ, ಉಪ್ಪಿನಕಾಯಿ, ಚಿಪ್ಸ್ ಇವುಗಳಿಂದ ದೂರವಿರಿ
* ಬಿಪಿ ಸಮಸ್ಯೆ ಇರುವವರು ಉಪ್ಪು ಸ್ವಲ್ಪ ಕಡಿಮೆ ಬಳಸಿ.
* ಮದ್ಯ ಮಿತಿಯಲ್ಲಿರಲಿ
* ಧೂಮಪಾನದಿಂದ ದೂರವಿರಿ
ಚೆನ್ನಾಗಿ ನಿದ್ದೆ ಮಾಡಿ
ಮನುಷ್ಯನಿಗೆ ಕಡಿಮೆಯೆಂದರೆ 8 ಗಂಟೆ ನಿದ್ದೆ ಅವಶ್ಯಕ, ಆದ್ದರಿಂದ ನಿದ್ದೆ ಚೆನ್ನಾಗಿ ಮಾಡಿ. ಆದಷ್ಟು ಒಂದೇ ಸಮಯದಲ್ಲಿ ನಿದ್ದೆಮಾಡಲು ಪ್ರಯತ್ನಿಸಿ. ರಾತ್ರಿ 10 ಗಂಟೆಯ ಒಳಗೆ ಮಲಗಲು ಪ್ರಯತ್ನಿಸಿ, ಬೆಳಗ್ಗೆ 6-6.30ಕ್ಕೆ ಎದ್ದೇಳಲು ಪ್ರಯತ್ನಿಸಿ. ಒಳ್ಳೆಯ ನಿದ್ದೆ ನಿಮ್ಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
