Latest Updates
-
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ! -
ಬಿಸಿಲಿಗೆ ಬಾಲ್ಕನಿ ಗಿಡಗಳು ಬಾಡುತ್ತಿವೆಯೇ? ಈ 5 ಸರಳ ಟ್ರಿಕ್ಸ್ ಬಳಸಿ ಗಿಡಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಿ! -
ಹಾಲಿನ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಹಾಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಈ ಪರ್ಯಾಯ ಆಹಾರಗಳೇ ದಾರಿ! -
ರೆಡ್ ಕಾರ್ಪೆಟ್ ಮೇಲೆ ಸದ್ದು ಮಾಡುತ್ತಿರುವ 'ಸೀರೆ-ಗೌನ್' ಮ್ಯಾಜಿಕ್: 2026ರ ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ! -
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಹೆಮೊಫಿಲಿಯಾ: ರಕ್ತಸ್ರಾವ ನಿಲ್ಲದೆ ಪ್ರಾಣಕ್ಕೆ ಅಪಾಯ ತರುವ ಕಾಯಿಲೆಯಿದು
ಏಪ್ರಿಲ್ 16ನ್ನು ವಿಶ್ವ ಹೆಮೊಫಿಲಿಯಾ ದಿನವನ್ನಾಗಿ ಆಚರಿಸಲಾಗುವುದು. ಇದೊಂದು ಅಪರೂಪದ ಕಾಯಿಲೆಯಾಗಿದೆ. ಹೆಮೊಫಿಲಿಯಾ ಸಮಸ್ಯೆ ಇರುವವರಿಗೆ ಏನಾದರೂ ಚಿಕ್ಕ ಗಾಯವಾದರೂ ತುಂಬಾನೇ ರಕ್ತಸ್ರಾವವಾಗುವುದರಿಂದ ತುಂಬಾನೇ ಸಮಸ್ಯೆಯಾಗುವುದು. ಈ ಬಗೆಯ ಸಮಸ್ಯೆ ಇರುವವರಿಗೆ ಇಂಟರ್ನಲ್ ಬ್ಲೀಡಿಂಗ್ (ಅಂದರೆ ಆಂತರಿಕ ರಕ್ತಸ್ರಾವ) ಉಂಟಾಗಿ ಅಂಗಾಂಗಗಳಿಗೆ ತೊಂದರೆಯಾಗುವುದು.

ಹೆಮೊಫಿಲಿಯಾ ಲಕ್ಷಣಗಳು
* ಏನಾದರೂ ಚಿಕ್ಕ ಗಾಯವಾದರೂ ತುಂಬಾನೇ ರಕ್ತಸ್ರಾವವಾಗುವುದು ಅಥವಾ ದಂತ ಚಿಕಿತ್ಸೆ , ಸರ್ಜರಿ ಬಳಿಕ ಅತ್ಯಧಿಕ ರಕ್ತಸ್ರಾವ
* ಚುಚ್ಚುಮದ್ದು ಪಡೆದಾಗ ರಕ್ತಸ್ರಾವವಾಗುವುದು
* ಮಂಡಿ, ಮೊಣಕೈಗಳಲ್ಲಿ ಊತ, ನೋವು
* ಮೂತ್ರ ಅಥವಾ ಮಲದಲ್ಲಿ ರಕ್ತ
* ಯಾವುದೇ ಕಾರಣವಿಲ್ಲದೆ ಮೂಗಿನಲ್ಲಿ ರಕ್ತ ಸುರಿಯುವುದು
* ಚಿಕ್ಕ ಮಕ್ಕಳಲ್ಲಿ ತುಂಬಾನೇ ಅಸ್ವಸ್ಥತೆ
ಮೆದುಳಿನಲ್ಲಿ ರಕ್ತಸ್ರಾವ
ಹೆಮೊಫಿಲಿಯಾ ಸಮಸ್ಯೆ ಇರುವವರಿಗೆ ತಲೆಗೆ ಸ್ವಲ್ಪ ಪೆಟ್ಟಾದರೂ ಇಂಟರ್ನಲ್ ಬ್ಲೀಡಿಂಗ್ ಉಂಟಾಗುವುದು. ಇಂಟರ್ನಲ್ ಬ್ಲೀಡಿಂಗ್ ಉಂಟಾದರೆ ಈ ಲಕ್ಷಣಗಳು ಕಂಡು ಬರುವುದು:
* ತುಂಬಾನೇ ತಲೆನೋವು ಉಂಟಾಗುವುದು
* ವಾಂತಿ
* ತುಂಬಾ ನಿದ್ದೆ
* ಕಣ್ಣು ಮಂಜಾಗುವುದು
* ಸುಸ್ತು, ತಲೆಸುತ್ತು
ಈ ಬಗೆಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ, ಕೂಡಲೇ ವೈದ್ಯರನ್ನು ಕಾಣಿ.
ಹೆಮೊಫಿಲಿಯಾ ಸಮಸ್ಯೆಗೆ ಕಾರಣವೇನು?
ಹೆಮೊಫಿಲಿಯಾ ಸಾಮಾನ್ಯವಾಗಿ ವಂವಾರಂಪರ್ಯವಾಗಿ ಉಂಟಾಗುವುದು. ಕೆಲವರಿಗೆ ಹಾಗೆಯೂ ಕಂಡು ಬರುವುದು, ಇದಕ್ಕೆ ಅಕ್ವೈರ್ಡ್ ಹೆಮೊಫಿಲಿಯಾ ಕಂಡು ಬರುವುದು. ಗರ್ಭಾವಸ್ಥೆಯಲ್ಲಿ, ಅಥವಾ ಅಟೊಇಮ್ಯೂನೆ ಕಂಡೀಷನ್, ಔಷಧ ತೆಗೆದುಕೊಂಡಾಗ ಅದರಿಂದ ಅಡ್ಡಪರಿಣಾಮ ಉಂಟಾದರೆ ಈ ರೀತಿಯಾಗುವುದು.
ಹೆಮೊಫಿಲಿಯಾ ವಂಶಪಾರಂಪರ್ಯವಾಗಿ ಹೇಗೆ ಬರುತ್ತದೆ
ಇದು ತಂದೆ ಅಥವಾ ತಾಯಿಯ X ಕ್ರೋಮೋಸೋಮ್‌ನಿಂದ ಬರುತ್ತದೆ. ಪ್ರತಿಯೊಬ್ಬರಿಗೆ ಎರಡು X ಹಾಗೂ Y ಲಿಂಗ ಕ್ರೋಮೋಸೋಮ್‌ಗಳಿರುತ್ತದೆ. ಗಂಡು ಮಗುವಿಗೆ X ಕ್ರೋಮೋಸೋಮ್ ತಾಯಿಯಿಂದ ಬಂದರೆ ಹಣ್ಣು ಮಗುವಿಗೆ X ಕ್ರೋಮೋಸೋಮ್ ತಂದೆಯಿಂದ ಬರುತ್ತದೆ. ಆದ್ದರಿಂದ ಪೋಷಕರಿಗೆ ಹೆಮೊಫಿಲಿಯಾ ಸಮಸ್ಯೆಯಿದ್ದರೆ ಮಕ್ಕಳಿಗೂ ಬರುವುದು.
ಈ ಹೆಮೊಫಿಲಿಯಾ ಸಮಸ್ಯೆ ಗುಣಪಡಿಸಬಹುದೇ?
ಈ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ. ದಂಪತಿಯಲ್ಲಿ ಯಾರಿಗಾದರೂ ಹೆಮೋಫಿಲಿಯಾ ಸಮಸ್ಯೆಯಿದ್ದರೆ ಮಗುವಿಗೆ ಪ್ಲ್ಯಾನ್ ಮಾಡುವ ಮುನ್ನ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ.
ಹೆಮೊಫಿಲಿಯಾ ಇರುವ ಮಹಿಳೆ ಗರ್ಭಧಾರಣೆಯಾದರೆ
* ಹೆಮೊಫಿಲಿಯಾ ಇರುವ ಮಹಿಳೆ ಗರ್ಭಿಣಿಯಾದರೆ ತುಂಬಾನೇ ಮುನ್ನೆಚ್ಚರಿಕೆವಹಿಸಬೇಕಾಗುತ್ತದೆ. ಅವರು ತಮ್ಮ ವೈದ್ಯರ ಬಳಿ ಈ ಕುರಿತು ಚರ್ಚೆ ಮಾಡಿ ಸೂಕ್ತ ಮುನ್ನೆಚ್ಚರಿಕೆವಹಿಸಬೇಕು. ಏಕೆಂದರೆ ರಕ್ತಸ್ರಾವವಾದರೆ ಇಂಥವರಿಗೆ ರಕ್ತಸ್ರಾವ ನಿಲ್ಲುವುದೇ ಈ ಕಾರಣಕ್ಕೆ ಸರ್ಜರಿ ಅಥವಾ ಹೆರಿಗೆ ಸಮಯದಲ್ಲಿ ತುಂಬಾನೇ ಮುನ್ನೆಚ್ಚರಿಕೆವಹಿಸಬೇಕು.
ಹೆಮೊಫಿಲಿಯಾ ಸಮಸ್ಯೆ ಇರುವವರು ಈ 5 ಬಗೆಯ ಮುನ್ನೆಚ್ಚರಿಕೆವಹಿಸುವುದು ಒಳ್ಳೆಯದು:
NSAIDs ಔಷಧಗಳನ್ನು ತೆಗೆದುಕೊಳ್ಳಬಾರದು: ಹೆಮೊಫಿಲಿಯಾ ಸಮಸ್ಯೆ ಇರುವವರು ಆಸಗಪಿರಿನ್, Clopidogrel, Dexibrufen ಮತ್ತು Diclofenac ಈ ಬಗೆಯ ಔಷಧ ತೆಗೆದುಕೊಳ್ಳಬಾರದು.
* ಮಂಡಿ, ಮೊಣಕೈ ಬಗ್ಗೆ ಜಾಗ್ರತೆ: ಹೆಮೊಫಿಲಿಯಾ ಸಮಸ್ಯೆ ಇರುವವರಿಗೆ ಸಂಧಿ ನೋವು , ಊತ ಅಥವಾ ಇಂಟರ್ನಲ್ ಬ್ಲೀಡಿಂಗ್ ಉಂಟಾಗುವುದು. ಇದರಿಂದ ಮಂಡಿ ಆರೋಗ್ಯದ ಕಡೆಗೆ ತುಂಬಾನೇ ಜಾಗ್ರತೆವಹಿಸಬೇಕು.
ವ್ಯಾಯಾಮ ಮಾಡದೇ ಇರಬೇಡಿ: ಹೆಮೊಫಿಲಿಯಾ ಸಮಸ್ಯೆ ಇರುವವರು ಆಟ ಆಡಬಾರದು, ಬಿದ್ದು ಗಾಯವಾದರೆ ಕಷ್ಟ ಎಂಬ ಭಾವನೆಯಿದೆ, ಆದರೆ ಆರೋಗ್ಯಕ್ಕೆ ವ್ಯಾಯಾಮ ಅವಶ್ಯಕ. ಆದರೆ ಬಿದ್ದು ಗಾಯವಾಗುವಂಥ ಆಟಗಳಿಂದ ದೂರವಿರಿ.
ನಿಮ್ಮ ಜೊತೆ ಹೆಮೊಫಿಲಿಯಾ ಎಂದು ವೈದ್ಯರು ಹೇಳಿರುವ ಚೀಟಿ ಯಾವತ್ತೂ ಜೊತೆಗಿರಲಿ. ಇದರಿಂದ ಒಂದು ವೇಳೆ ಏನಾದರೂ ಗಾಯವಾದರೆ ಆಸ್ಪತ್ರೆಯಲ್ಲಿ ಈ ಕುರಿತು ಸಾಕಷ್ಟು ಮುನ್ನೆಚ್ಚರಿಕೆವಹಿಸಲು ಸಹಕಾರಿ.
ಹೆಮೊಫಿಲಿಯಾ ಇರುವವರು ಇತರರಂತೆ ಸಹಜ ಜೀವನ ನಡೆಸಬಹುದು, ಆದರೆ ಗಾಯವಾಗದಂತೆ ಸ್ವಲ್ಪ ಎಚ್ಚರಿಕೆವಹಿಸಬೇಕು. ಅಷ್ಟೇ...
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications