Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ವಿಶ್ವ ಡೌನ್ ಸಿಂಡ್ರೋಮ್ ದಿನ 2023: ಇಂಥ ಮಕ್ಕಳನ್ನು ಸ್ವಾವಲಂಬಿಯನ್ನಾಗಿಸುವುದು ಹೇಗೆ?
ಮಾರ್ಚ್ 21ನ್ನು ವಿಶ್ವ ಡೌನ್ ಸಿಂಡ್ರೋಮ್ ದಿನವನ್ನಾಗಿ ಆಚರಿಸಲಾಗುವುದು. ಡೌನ್ ಸಿಂಡ್ರೋಮ್ ಸಮಸ್ಯೆ ಕುರಿತು ಜನರಲ್ಲಿ ಮತ್ತಷ್ಟು ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುವುದು.
ಡೌನ್ ಸಿಂಡ್ರೋಮ್ ಮಕ್ಕಳೆಂದರೆ ಅವರು ಇತರ ಮಕ್ಕಳಂತೆ ಇರಲ್ಲ, ಇವರನ್ನು ವಿಶೇಷ ಚೇತನ ಎಂದು ಕೂಡ ಕರೆಯಲಾಗುವುದು. ಇಂಥ ಮಕ್ಕಳು ಬೆಳೆಯುತ್ತಿದ್ದಂತೆ ಅವರ ಬುದ್ಧಿಶಕ್ತಿ ಬೆಳೆವಣಿಗೆಯಾಗುವುದಿಲ್ಲ. ಇದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ.

ಡೌನ್ ಸಿಂಡ್ರೋಮ್ ಎಂದರೇನು?
ಡೌನ್ ಸಿಂಡ್ರೋಮ್ ಎಂದರೆ ಆ ವ್ಯಕ್ತಿಯಲ್ಲಿ ಅತ್ಯಧಿಕ ಕ್ರೋಮ್‌ಸೋಮ್ ಇರುತ್ತದೆ. ಸಾಮಾನ್ಯವಾಗಿ ಮಗು ಜನಿಸುವಾಗ 46 ಕ್ರೋಮ್‌ಸೋಮ್‌ಗಳಿರುತ್ತವೆ. ಆದರೆ ಈ ಕ್ರೋಮ್‌ಸೋಮ್‌ಗಳ ಸಂಖ್ಯೆ 46ಕ್ಕಿಂತ ಅಧಿಕವಿದ್ದಾಗ ಅಂಥ ಮಕ್ಕಳಲ್ಲಿ ಡೌನ್ ಸಿಂಡ್ರೋಮ್ ಉಂಟಾಗುವುದು. ಇದರಿಂದಾಗಿ ಅಂಥ ಮಕ್ಕಳ ಬುದ್ಧಿಶಕ್ತಿ ಹಾಗೂ ದೈಹಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುವುದು.
ಡೌನ್ ಸಿಂಡ್ರೋಮ್ ಇರುವ ಮಕ್ಕಳಿಗೆ ಹಾಗೂ ಪೋಷಕರಿಗೆ ನಾವು ನೈತಿಕ ಬೆಂಬಲ ನೀಡಬೇಕಾಗಿರುತ್ತದೆ. ಮಗುವಿಗೆ ಡೌನ್ ಸಿಂಡ್ರೋಮ್ ಇದೆಯೆಂದು ತಿಳಿದಾಗ ತಂದೆ-ತಾಯಿ ಕುಸಿದು ಬಿಡುತ್ತಾರೆ, ಏಕೆಂದರೆ ಪ್ರತಿಯೊಬ್ಬ ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಸಾಕಷ್ಟು ಕನಸುಗಳಿರುತ್ತದೆ. ಆದರೆ ನಮ್ಮ ಮಗು ನಾವು ಅಂದುಕೊಂಡಂತೆ ಇಲ್ಲ ಎಂದಾಗ ಮನಸ್ಸಿಗೆ ತುಂಬಾನೇ ಬೇಸರವಾಗುವುದು.
ಆದರೆ ಇಂಥ ಮಕ್ಕಳಿಗೆ ಪೋಷಕರು ಹಾಗೂ ನಾವು ಬೆಂಬಲ ನೀಡಿದರೆ ಅವರು ಕೂಡ ಮುಂದೆ ಸ್ವಾವಲಂಬಿಯಾಗಿ ಬದುಕಬಹುದು.
ಡೌನ್ ಸಿಂಡ್ರೋಮ್ ಮಕ್ಕಳನ್ನು ಸ್ಪೆಷಲ್ ಸ್ಕೂಲ್‌ಗೆ ಸೇರಿಸಿ
ಡೌನ್ ಸಿಂಡ್ರೋಮ್ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಅವರಿಗಾಗಿಯೇ ಇರುವ ಶಾಲೆಗೆ ಸೇರಿಸಿ. ಪ್ರತಿ ತಾಲೂಕು ಅಥವಾ ಜಿಲ್ಲೆಯಲ್ಲಿ ಇಂಥ ಸ್ಕೂಲ್ ಇದ್ದೇ ಇರುತ್ತದೆ. ಇಂಥ ಸ್ಕೂಲ್‌ನಲ್ಲಿ ಸೇರಿಸುವುದರಿಂದ ಅಲ್ಲಿ ಅವರನ್ನು ಸ್ವಾವಲಂಬಿಯಾಗಿಸುವ ಶಿಕ್ಷಣವನ್ನು ನೀಡಲಾಗುವುದು.
ಮಕ್ಕಳಿಗೆ ಸೋಷಿಯಲ್ ಸ್ಕಿಲ್ ಕಲಿಸಿ
ಇಂಥ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು, ಇವರಿಗೆ ಸೋಷಿಯಲ್ ಸ್ಕಿಲ್ ಕಲಿಸುವುದರ ಮೂಲಕ ಆ ಮಕ್ಕಳು ಕೂಡ ತಮ್ಮ ಕೆಲಸವನ್ನು ತಾವು ಮಾಡಿಕೊಂಡು ಹೋಗುವಂತೆ ಮಾಡಬಹುದು. ಇಂಥ ಮಕ್ಕಳಿಗೆ ಕಲಿಸಲು ನೀವು ವಿಶ್ಯೂಯಲ್ ಬಳಸಿ ಕಲಿಸಿದರೆ ಅವರಿಗೆ ಕಲಿಸಲು ತುಂಬಾನೇ ಸಹಕಾರಿಯಾಗಿದೆ.
ಕಲಿಯಲು ಅವರದ್ದೇ ಸಮಯ ಕೊಡಿ
ಡೌನ್ ಸಿಂಡ್ರೋಮ್ ಮಕ್ಕಳಿಗೆ ಕಲಿಸಲು ತುಂಬಾನೇ ತಾಳ್ಮೆ ಬೇಕಾಗುತ್ತದೆ. ಅವರಿಗೆ ನಾವು ಹೇಳಿದ ತಕ್ಷಣ ಅರ್ಥವಾಗುವುದಿಲ್ಲ. ಒಂದು ವಿಷಯವನ್ನು ಕಲಿಯಲು ತುಂಬಾ ಸಮಯ ತೆಗೆದುಕೊಳ್ಳಬಹುದು. ಅವರಿಗೆ ಏನಾದರೂ ಕಲಿಯಲು ಸಂಪೂರ್ಣ ಸ್ವತಂತ್ರ ನೀಡಿ.
ಪ್ರೀತಿ ತೋರಿಸಿ
ಡೌನ್ ಸಿಂಡ್ರೋಮ್ ಮಕ್ಕಳಿಗೆ ನೀವು ಅನುಕಂಪ ತೋರಿಸುವ ಬದಲಿಗೆ ಪ್ರೀತಿ ತೋರಿಸಿ. ನಿಮ್ಮ ಪ್ರೀತಿ ಅವರಲ್ಲಿ ಆತ್ಮವಿಶ್ವಾಸ ತುಂಬುವುದು.
ಅವರನ್ನು ಸ್ವಾವಲಂಬಿಯನ್ನಾಗಿಸಿ
ಡೌನ್ ಸಿಂಡ್ರೋಮ್ ಎಂದು ಮನೆಯಲ್ಲಿಯೇ ಕೂರಿಸಬೇಕಾಗಿಲ್ಲ, ಅವರಿಗೆ ಏನಾದರೂ ಒಂದು ಕೌಶಲ್ಯ ಇದ್ದೇ ಇರುತ್ತದೆ ಅದನ್ನು ಗುರುತಿಸಿ ಇಲ್ಲದಿದ್ದರೆ ಅವರಿಗೆ ಏನಾದರೂ ಒಂದು ಕೌಶಲ್ಯ ಕಲಿಸಿ. ಅವರೇ ಸ್ವಂತ ಬದುಕು ಕಟ್ಟಿಕೊಳ್ಳುವಷ್ಟು ಅವರನ್ನು ಸ್ವಾವಲಂಭಿಯನ್ನಾಗಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
