Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ವಿಶ್ವ ಮಧುಮೇಹ ದಿನ: ಸಕ್ಕರೆ ತಿಂದರೆ ಡಯಾಬಿಟಿಸ್ ಬರುತ್ತಾ? ಟೈಪ್ 2 ಹರಡುವುದು ಹೇಗೆ?
ಡಯಾಬಿಟಿಸ್ ಅಥವಾ ಮಧುಮೇಹ ಅಥವಾ ಸಕ್ಕರೆ ರೋಗ ತುಂಬಾ ಹಳೆ ಕಾಯಿಲೆ. ಆದ್ರೆ ಇತ್ತೀಚಿಗೆ ಈ ಕಾಯಿಲೆ ಬಹಳಷ್ಟು ಮಂದಿಗೆ ಕಾಡತೊಡಗಿದೆ. ಜೀವನ ಶಯಲಿ, ಆಹಾರ ಕ್ರಮದಂತಹ ಕಾರಣವೂ ಸೇರಿ ಅನುವಂಶಿಯವಾಗಿಯೂ ಹಲವರಲ್ಲಿ ಇದು ಕೊಡುಗೆಯಾಗಿ ಬರುತ್ತಿದೆ. ಡಯಾಬಿಟಿಸ್ ಎಂದರೆ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ನಿಯಂತ್ರಣ ವ್ಯವಸ್ಥೆಯಲ್ಲಿ ಉಂಟಾಗುವ ದೋಷದಿಂದ ಬರುವ ಕಾಯಿಲೆ.
ನಾವು ಸೇವಿಸುವ ಆಹಾರದಲ್ಲಿರುವ ಸಕ್ಕರೆ ಪ್ರಮಾಣವು ಗ್ಲೂಕೋಸ್ ಆಗಿ ಪರಿವರ್ತನೆಗೊಂಡು ರಕ್ತದೊಡನೆ ಬೆರೆಯುತ್ತದೆ. ನಮ್ಮ ಪ್ಯಾಂಕ್ರಿಯಾಸ್ ಗ್ರಂಥಿಯು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇನ್ನು ಈ ಮಧುಮೇಹದಲ್ಲಿ 2 ಪ್ರಕಾರಗಳಿವೆ ಟೈಪ್ 1 ಹಾಗೂ ಟೈಪ್ 2 ಎಂದು ವಿಭಾಗಿಸಲಾಗಿದೆ.

ಭಾರತವೂ ಸೇರಿದಂತೆ ಇಡೀ ವಿಶ್ವದಲ್ಲಿ ಟೈಪ್ 2 ಡಯಾಬಿಟಿಸ್‌ನಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲಿ ಸರಿ ಸುಮಾರು 21 ಕೋಟಿ ಮಂದಿ ಮಧುಮೇಹಕ್ಕೆ ಒಳಗಾಗಿದ್ದಾರೆ. ಈ ಮಧುಮೇಹ ಕಾಯಿಲೆಗೆ ಬರೋಬ್ಬರಿ 3 ಸಾವಿರ ವರ್ಷಗಳ ಇತಿಹಾಸವಿದೆ. 1890ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಕಂಡುಬಂದಿತ್ತು ಎನ್ನಲಾಗುತ್ತದೆ.
ನಮ್ಮ ದೇಹದಲ್ಲಿ ಇನ್ಸುಲಿನ್ ಬಿಡುಗಡೆಯಲ್ಲಿ ಏರಿಳಿತ ಹಾಗೆ ಬೀಟಾ ಕೋಶಗಳ ನಾಶದಿಂದಾಗಿ ಉಂಟಾಗುವುದೇ ಟೈಪ್ 1 ಮಧುಮೇಹವಾಗಿದೆ. ಆದ್ರೆ ಟೈಪ್ 2 ಮಧುಮೇಹದಲ್ಲಿ ನಮ್ಮ ಆಹಾರ, ಜೀವನ ಶೈಲಿ ಸೇರಿ ಹಲವು ಬಾಹ್ಯ ಅಂಶಗಳು ಕಾರಣವಾಗಿರುತ್ತದೆ.
ಸಕ್ಕರೆ ತಿಂದರೆ ಮಧುಮೇಹ ಬರುತ್ತಾ?
ಹೆಚ್ಚು ಸಕ್ಕರೆ ಸೇವನೆಯಿಂದ ಮಧುಮೇಹ ಬರುತ್ತದೆ ಎಂಬ ವಾದವಿದೆ. ಈ ವಾದ ಬಹುಪಾಲ ನಿಜವೂ ಹೌದು. ಹಾಗೆ ಎಲ್ಲಾ ಮಧುಮೇಹಗಳಿಗೂ ಸಕ್ಕರೆಯೇ ಕಾರಣ ಎಂಬುದು ಕೂಡ ಅಷ್ಟೇ ಸುಳ್ಳು. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, ಟೈಪ್ 1 ಮಧುಮೇಹವು ಸ್ವಯಂ ನಿರೋಧಕ ಸ್ಥಿತಿಯಾಗಿದ್ದು, ಇದರಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ದೇಹದ ಇನ್ಸುಲಿನ್ ಉತ್ಪಾದಿಸುವ ಕೋಶಗಳ ಮೇಲೆ ದಾಳಿ ಮಾಡುತ್ತದೆ ಮತ್ತು ಇದು ಸಕ್ಕರೆ ಸೇವನೆಯಿಂದ ಉಂಟಾಗುವುದಿಲ್ಲ ಎಂದು ತಿಳಿದುಬರುತ್ತದೆ.
ನೀವು ನಿತ್ಯ ಸಕ್ಕರೆ ಟೀ, ಸಂಸ್ಕರಿಸಿದ ಸಕ್ಕರೆಯುಕ್ತ ಆಹಾರ ಸೇವನೆ ಮಾಡುತ್ತಿದ್ದರೆ ಇದು ನಿಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲೋರಿ ನೀಡಲಿ ಕಾರಣವಾಗುತ್ತದೆ. ಹಾಗೆ ತೂಕ ಹೆಚ್ಚಳಕ್ಕೂ ಕೂಡ ಇದು ಕಾರಣವಾಗಲಿದೆ. ಹೊಟ್ಟೆಯ ಸುತ್ತ ಕೊಬ್ಬು ಶೇಖರಣೆಯಾಗುವುದು ಟೈಪ್ 2 ಮಧುಮೇಹಿಗಳಲ್ಲಿ ಹೆಚ್ಚಾಗಿ ಕಂಡುಬರುವ ಒಂದು ಲಕ್ಷಣ ಎನ್ನಬಹುದು.
ಸಿಹಿ ಸೋಡಾಗಳು ಮತ್ತು ಕಾರ್ಬೋರೇಟೆಟ್ ನೀರಿನಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇನ್ಸೂಲಿನ್ ಮಟ್ಟದಲ್ಲಿ ತಕ್ಷಣದ ಏರಿಳಿತಕ್ಕೆ ಕಾರಣವಾಗುವ ಅಂಶವಿರುತ್ತದೆ. ಸಕ್ಕರೆ ಪಾನೀಯಗಳನ್ನು ಆಗಾಗ್ಗೆ ಸೇವಿಸುವ ಜನರು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಹಾಗೆ ನಿಯಮಿತ ರೀತಿಯಲ್ಲಿ ವ್ಯಾಯಾಮ ಮಾಡದೇ ಇರುವುದು, ಸರಿಯಾದ ಆಹಾರ ಸೇವನೆ ಇಲ್ಲದಿರುವುದು, ಅತ್ಯಧಿಕ ಸಕ್ಕರೆ ಸವಿಯುವುದು ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತಿದೆ.
ಅದರಲ್ಲೂ ಇತ್ತೀಚಿಗೆ ಪ್ಯಾಕ್ ಮಾಡಲಾದ ಆಹಾರಗಳು, ಸಂಸ್ಕರಿಸಿದ ಆಹಾರ, ಕೃತಕ ಸಿಹಿ ಅಂತಹ ಅಂಶಗಳು ದೇಹ ಸೇರುವುದು ಕೂಡ ಡಯಾಬಿಟಿಸ್‌ಗೆ ಕಾರಣವಾಗುತ್ತಿದೆ. ಈಗ ವಿಶ್ವದಾದ್ಯಂತ ಬರೋಬ್ಬರಿ 82 ಕೋಟಿಗೂ ಅಧಿಕ ಮಂದಿ ಈ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಈ 82 ಕೋಟಿಯಲ್ಲಿ ಭಾರತದ 21 ಕೋಟಿ ಮಂದಿಯೂ ಸೇರಿದ್ದಾರೆ. ವಿಶ್ವದಲ್ಲೇ ಅತ್ಯಧಿಕ ಮಧುಮೇಹಿಗಳಿರುವುದು ಭಾರತದಲ್ಲೇ. ಚೀನಾದಲ್ಲಿ ಸುಮಾರು 14 ಕೋಟಿ ಮಂದಿ ಸಿಗಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications