Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ವಿಶ್ವ ಕ್ಯಾನ್ಸರ್ ದಿನ 2025: ಭಾರತದಲ್ಲಿ ಅಪಾಯಕಾರಿ 6 ಕ್ಯಾನ್ಸರ್ ಯಾವುದು ಗೊತ್ತಾ?
ವಿಶ್ವದಲ್ಲಿ ಮಾನವ ಕುಲಕ್ಕೆ ಅತ್ಯಂತ ಅಪಾಯಕಾರಿಯಾಗಿ ಕಾಡುತ್ತಿರುವ ಸಮಸ್ಯೆ ಯಾವುದಾದರು ಇದ್ದರೆ ಅದು ಕ್ಯಾನ್ಸರ್. ಇಡೀ ವಿಶ್ವದಲ್ಲಿ ಅತೀ ಹೆಚ್ಚು ಮರಣ ಪ್ರಮಾಣ ಇರುವ ಒಂದು ಕಾಯಿಲೆ ಎನ್ನಬಹುದು. ಅದರಲ್ಲೂ ಅಮೆರಿಕ ಹಾಗೂ ಭಾರತದಲ್ಲಿ ಈ ಪ್ರಮಾಣ ಅತ್ಯಧಿಕವಾಗಿದೆ. ದಿನದಿಂದ ದಿನಕ್ಕೆ ಕ್ಯಾನ್ಸರ್ ಪೀಡಿತರ ಸಂಖ್ಯೆ ಏರುತ್ತಲೇ ಇದೆ.
ಪ್ರತಿ ವರ್ಷ ನಾವು ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸುತ್ತೇವೆ. ಕ್ಯಾನ್ಸರ್ ಕುರಿತಂತೆ ಜಾಗೃತಿ ಮೂಡಿಸಲು ಮೀಸಲಾಗಿಟ್ಟಿರುವ ದಿನವಾಗಿದೆ. ಹಾಗೆ ಈ ದಿಂನದಂದು ನಾವು ಇಂದು ಜನರನ್ನು ಅಪಾಯಕ್ಕೆ ತಳ್ಳುತ್ತಿರುವ 6 ಅಪಾಯಕಾರಿ ಕ್ಯಾನ್ಸರ್ ವಿಧಗಳು ಯಾವುದು ಅನ್ನೋದನ್ನು ತಿಳಿದುಕೊಳ್ಳೋಣ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತದಲ್ಲಿ 1,496,972 ಕ್ಯಾನ್ಸರ್ ಪ್ರಕರಣಗಳಿವೆ ಎಂದು ಅಂದಾಜಿಸಿದೆ.

ಕೆಲವೊಂದು ಕ್ಯಾನ್ಸರ್‌ಗಳು ಚಿಕಿತ್ಸೆ ಹಾಗೂ ಆರೈಕೆ ತಡವಾದ ಹಿನ್ನೆಲೆ ಸಾವಿಗೆ ಕಾರಣವಾಗುವುದು ನೋಡಬಹುದು. ಏಕೆಂದರೆ ಎಷ್ಟು ವಿಧವಾದ ಕ್ಯಾನ್ಸರ್ ಇದೆ, ಆ ಕ್ಯಾನ್ಸರ್‌ನ ಲಕ್ಷಣವೇನು? ಎಂಬ ಕುರಿತು ತಿಳಿವಳಿಕೆ ಇಲ್ಲದೆ ಈ ಸಮಸ್ಯೆ ಮತ್ತಷ್ಟು ಉಲ್ಬಣವಾಗಲು ಕಾರಣವಾಗುತ್ತಿದೆ. ಚಿಕಿತ್ಸೆ ಸಿಗದೆ ಹಲವರು ಕೊನೆಯುಸಿರೆಳೆಯುವುದು ನೋಡಬಹುದು. ಹಾಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದಿರುವುದು ಕೂಡ ಒಂದು ಕಾರಣ ಎನ್ನಬಹುದು.
ಸ್ತನ ಕ್ಯಾನ್ಸರ್
ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅತ್ಯಂತ ಪ್ರಚಲಿತ ಕ್ಯಾನ್ಸರ್ ಆಗಿದೆ. ಸ್ತನ ಕ್ಯಾನ್ಸರ್ ಎಂದ ಮಾತ್ರಕ್ಕೆ ಮಹಿಳೆಯರು ಮಾತ್ರ ತುತ್ತಾಗುತ್ತಾರೆ ಎಂದರ್ಥವಲ್ಲ ಪುರುಷರಲ್ಲಿಯೂ ಸ್ತನ ಕ್ಯಾನ್ಸರ್ ಪ್ರಮಾಣ ಏರುಗತಿಯಲ್ಲಿದೆ. ಸ್ತನದಲ್ಲಿ ಗಡ್ಡೆಗಳು, ಸ್ತನದ ಆಕಾರ ಗಾತ್ರದಲ್ಲಿನ ಬದಲಾವಣೆ, ನೋವು ಈ ಕ್ಯಾನ್ಸರ್‌ನ ಲಕ್ಷಣವಾಗಿದೆ.
ಶ್ವಾಸಕೋಶದ ಕ್ಯಾನ್ಸರ್
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಒಳಗಾಗುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಮಹಾನಗರಲ್ಲಿ ಹಾಗೂ ಮುಖ್ಯವಾಗಿ ಧೂಮಪಾನ ಸಾಮಾನ್ಯ ಕಾರಣಗಳಾಗಿವೆ. ನಿರಂತರ ಕೆಮ್ಮು, ಎದೆ ನೋವು ಮತ್ತು ತೂಕ ಇಳಿಕೆಯಾಗುವುದು ಈ ಶ್ವಾಸಕೋಶ ಕ್ಯಾನ್ಸರ್‌ನ ಪ್ರಮುಖ ಲಕ್ಷಣವಾಗಿದೆ.
ಬಾಯಿಯ ಕ್ಯಾನ್ಸರ್
ಬಾಯಿಯ ಕ್ಯಾನ್ಸರ್ ಭಾರತದಲ್ಲೇ ಹೆಚ್ಚು ಎನ್ನಬಹುದು. ತಂಬಾಕು ಸೇವನೆ, ಗುಟ್ಕಾ ಸೇವನೆಗೆ ಸಂಬಂಧಿಸಿದ ಈ ಕ್ಯಾನ್ಸರ್ ಅಪಾಯಕಾರಿಯಾಗಿ ಹರಡಿದೆ. ಆರಂಭದಲ್ಲಿ ಬಾಯಿಯ ಹುಣ್ಣು ಎಂಬುದಾಗಿ ತಿಳಿದು ಹಲವು ನಿರ್ಲಕ್ಷ್ಯ ಮಾಡುವುದೇ ಈ ಬಾಯಿ ಕ್ಯಾನ್ಸರ್ ಅಪಾಯ ಹೆಚ್ಚುವಂತೆ ಮಾಡುತ್ತದೆ.
ಗರ್ಭಕಂಠದ ಕ್ಯಾನ್ಸರ್
ಇತ್ತೀಚಿನ ದಿನಗಳಲ್ಲಿ ಭಾರತೀಯ ಮಹಿಳೆಯರಲ್ಲಿ ಅತೀ ಹೆಚ್ಚಾಗಿ ಕಾಡಿದ ಕ್ಯಾನ್ಸರ್‌ನ ವಿಧ ಇದಾಗಿದೆ. ಸಾಧ್ಯವಾದಷ್ಟು ಬೇಗ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗುರುತಿಸುವುದು ಅತ್ಯಂತ ಮುಖ್ಯವಾದ ಅಂಶವಾಗಿದೆ. ಇತ್ತೀಚಿಗೆ ಈ ಕ್ಯಾನ್ಸರ್ ಕುರಿತು ಎಲ್ಲಾ ಕಡೆ ಜಾಗೃತಿ ಮೂಡಿಸಲು ಮುಂದಾಗಲಾಗುತ್ತಿದೆ.
ಉದರ ಕ್ಯಾನ್ಸರ್
ನಮ್ಮ ಆಹಾರದ ಕ್ರಮದಿಂದಾಗಿ ನಮ್ಮ ಉದರದಲ್ಲಿ ಉಂಟಾಗುವ ಕ್ಯಾನ್ಸರ್ ಇದು. ಭಾರತದಲ್ಲಿ ಈ ಕ್ಯಾನ್ಸರ್ ಸಾಮಾನ್ಯವಾಗಿ ಹರಡುತ್ತಿದೆ. ನಿರಂತರ ಹೊಟ್ಟೆ ನೋವು, ಅಜೀರ್ಣ ಸಮಸ್ಯೆ, ತೂಕ ಇಳಿಕೆಯಂತಹ ಲಕ್ಷಣಗಳ ನಾವು ನೋಡಬಹುದು. ಸಂಸ್ಕರಿಸಿದ ಆಹಾರ ಈ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ವರದಿಗಳು ಹೇಳಿವೆ.
ಕೊಲೊರೆಕ್ಟಲ್ ಕ್ಯಾನ್ಸರ್
ಪುರುಷರು ಮತ್ತು ಮಹಿಳೆಯರಿಬ್ಬರ ಮೇಲೂ ಪರಿಣಾಮ ಬೀರುವ ಕೊಲೊರೆಕ್ಟಲ್ ಕ್ಯಾನ್ಸರ್ ಹೆಚ್ಚುತ್ತಿದೆ. ಉದರ ಕ್ಯಾನ್ಸರ್‌ನಂತೆ ಆಹಾರ ಕ್ರಮದ ಕಾರಣ ಕರುಳಿನ ಆರೋಗ್ಯದಲ್ಲಿ ಹದಗೆಡುವುದು. ಹೆಚ್ಚಾಗಿ ವಯಸ್ಕರಲ್ಲಿ ಈ ಕ್ಯಾನ್ಸರ್ ಕಂಡುಬರುತ್ತದೆ. ಭಾರತದಲ್ಲಿ ಈ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರ ನಡುವೆ ಲಿವರ್ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ ಕೂಡ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications