Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಸಣ್ಣ ಸಮಸ್ಯೆ ಅಂತ ಈ ಲಕ್ಷಣ ನಿರ್ಲಕ್ಷ್ಯ ಮಾಡಲೇಬೇಡಿ, ಬ್ರೈನ್ ಟ್ಯೂಮರ್ ಆಗಿರಬಹುದು!
ಜೂನ್ 8ನ್ನು ವರ್ಲ್ಡ್ ಬ್ರೈನ್ ಟ್ಯೂಮರ್ ಡೇ ಆಚರಿಸಲಾಗುವುದು. ಬ್ರೈನ್ ಟ್ಯೂಮರ್ ಕುರಿತು ಜನರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ತುಂಬಾ ಜನ ಬ್ರೈನ್ ಟ್ಯೂಮರ್‌ನ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ.
ಬ್ರೈನ್ ಟ್ಯೂಮರ್‌ನ್ನು ಆರಂಭದಲ್ಲಿಯೇ ಗುರುತಿಸಿದರೆ ಚಿಕಿತ್ಸೆ ಗುಣಮುಖರಾಗಬಹುದು. ಇದರ ಲಕ್ಷಣಗಳು ಆರಂಭದಲ್ಲಿ ಗೋಚರಿಸುವುದು, ಆದರೆ ಹೆಚ್ಚಿನವರಿಗೆ ಅದು ಬ್ರೈನ್ ಟ್ಯೂಮರ್ ಲಕ್ಷಣ ಎಂದು ತಿಳಿಯದೆ ಅವುಗಳನ್ನು ನಿರ್ಲಕ್ಷ್ಯ ಮಾಡಿ ಆರೋಗ್ಯಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಈ ಬಗೆಯ ಲಕ್ಷಣಗಳು ಕಂಡು ಬರುತ್ತಿದ್ದರೆ ಬ್ರೈನ್ ಟ್ಯೂಮರ್ ಇದೆಯೇ ಪರೀಕ್ಷೆ ಮಾಡಿಸಿದರೆ ಒಳ್ಳೆಯದು:

ಆಗಾಗ ತಲೆನೋವು ಬರುವುದು
ತಲೆನೋವು ಅನೇಕ ಕಾರಣಗಳಿಂದ ಉಂಟಾಗುತ್ತದೆ, ಆದರೆ ಆಗಾಗ ತಲೆನೋವು ಬರುತ್ತಿದೆ ಎಂದಾದರೆ ತಲೆನೋವಿನ ಮಾತ್ರೆ ತೆಗೆದು ಸುಮ್ಮನೆಯಾಗಬೇಡಿ. ಈ ಮಾತ್ರೆಗಳಿಂದ ನಿಮಗೆ ತಾತ್ಕಾಲಿಕವಾಗಿ ನೋವು ಕಡಿಮೆಯಾಗುವುದು, ಆದರೆ ಆಗಾಗ ತಲೆನೋವು ಬರುತ್ತಲೇ ಇರುತ್ತದೆ.
ಕಣ್ಣು ಮಂಜಾಗುವುದು, ದೃಷ್ಟಿ ಕಡಿಮೆಯಾಗುವುದು
ಬ್ರೈನ್ ಟ್ಯೂಮರ್‌ನ ಮತ್ತೊಂದು ಸೈಲೆಂಟ್ ಲಕ್ಷಣವೆಂದರೆ ಕಣ್ಣು ಮಂಜಾಗುವುದು, ಅಥವಾ ಸರಿಯಾಗಿ ಕಾಣದಿರುವುದು. ಅದರಲ್ಲಿ ನೀವು ಎದ್ದು ನಿಂತಾಗ ಅಥವಾ ನಿಮ್ಮ ನಿಂತ ಅಥವಾ ಕೂತ ಭಂಗಿಯಲ್ಲಿ ಬದಲಾವಣೆಯಾದಾಗ ಕಣ್ಣುಗಳು ಮಂಜಾಗುವುದು ಈ ರೀತಿ ಪದೇ ಪದೇ ಆಗುತ್ತಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ.
ಸುಸ್ತು
ದಿನವಿಡೀ ತುಂಬಾನೇ ಸುಸ್ತು. ಇದರಿಂದಾಗಿ ನಿಮ್ಮ ದಿನನಿತ್ಯದ ಕೆಲಸದ ಕಡೆಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ, ಸದಾ ಮಲಗೇ ಇರಬೇಕೆಂದು ಅನಿಸುವುದು. ಸುಸ್ತು ಇರುವ ಕಾರಣ ಕೆಲಸದಲ್ಲಿ ಏಕಾಗ್ರತೆ ಕೂಡ ಕಡಿಮೆಯಾಗುವುದು.
ತಲೆ ಸುತ್ತುವುದು
ಇದ್ದಕ್ಕಿದ್ದಂತೆ ತಲೆ ಸುತ್ತುವುದು, ನೀವು ನಡೆಯುವಾಗ ಅಥವಾ ಗಾಡಿ ಚಲಿಸುವಾಗ ದೇಹ ಅಸಮತೋಲನ ಉಂಟಾಗುವುದು. ನಿಮ್ಮ ಮೆದುಳು ನಮ್ಮ ದೇಹದ ಪ್ರತಿಯೊಂದು ಭಾಗಕ್ಕೆ ಸಿಗ್ನಲ್ ಕಳುಹಿಸುತ್ತಿರುತ್ತದೆ, ಅದರಂತೆ ನಮ್ಮ ದೇಹದ ಅಂಗಾಂಗಗಳು ಕಾರ್ಯನಿರ್ವಹಿಸುತ್ತಿರುತ್ತದೆ. ನಮ್ಮ ಮೆದುಳು ಸರಿಯಾದ ಸಿಗ್ನಲ್ ಕಳುಹಿಸದೇ ಇದ್ದಾಗ ದೇಹ ಸಮತೋಲನ ತಪ್ಪುವುದು. ಬ್ರೈನ್ ಟ್ಯೂಮರ್ ಉಂಟಾದಾಗ ಮೆದುಳಿನ ಕಾರ್ಯದ ಮೇಲೆ ಪರಿಣಾಮ ಬೀರುವುದು, ಇದರಿಂದಾಗಿ ಈ ರೀತಿ ಉಂಟಾಗುವುದು.
ಬಂಜೆತನ
ನಮ್ಮ ದೇಹದಲ್ಲಿ ಹಾರ್ಮೋನ್‌ಗಳ ಮೇಲೂ ಮೆದುಳು ತುಂಬಾನೇ ಪ್ರಭಾವ ಬೀರುತ್ತದೆ. ಹಾರ್ಮೋನ್‌ಗಳ ಅಸಮತೋಲನ ಉಂಟಾದಾಗ ಗರ್ಭಧಾರಣೆಗೂ ತೊಂದರೆ ಉಂಟಾಗುವುದು.
ಪಿಡ್ಸ್ ಬರುವುದು
ಮೂರ್ಛೆ ರೋಗದ ಸಮಸ್ಯೆ ಇದುವರೆಗೆ ಇರಲಿಲ್ಲ, ಆದರೆ ಇತ್ತೀಚೆಗೆ ಕಂಡು ಬರುತ್ತಿದೆ ಎಂದರೆ ನಿರ್ಲಕ್ಷ್ಯ ಮಾಡಬೇಡಿ. ಮೂರ್ಛೆ ರೋಗ ಬರುತ್ತಿರುವವರಲ್ಲಿ ಮೂವರಲ್ಲಿ ಒಬ್ಬರಿಗೆ ಬ್ರೈನ್ ಟ್ಯೂಮರ್ ಸಮಸ್ಯೆ ಇರುತ್ತದೆ. ಮೂರ್ಛೆರೋಗ ಬಂದು ವ್ಯಕ್ತಿ ಪ್ರಜ್ಞೆ ಕಳೆದುಕೊಳ್ಳಬಹುದು ಅಥವಾ ಮೂರ್ಛೆ ರೋಗ ಬಂದು ಕೆಲವು ನಿಮಿಷದ ನಂತರ ಸಹಜ ಸ್ಥಿತಿಗೆ ಮರಳಬಹುದು. ಕೆಲವರಿಗೆ ಒಮ್ಮೆ ಮೂರ್ಛೆ ರೋಗ ಬಂದು ಕೆಲವು ತಿಂಗಳು ಯಾವುದೇ ಸಮಸ್ಯೆ ಇರಲ್ಲ, ನಂತರ ಒಂದೇ ದಿನದಲ್ಲಿ 2-3 ಬಾರಿ ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ಮೂರ್ಛೆರೋಗ ಕಂಡು ಬರುವುದು. ಈ ರೀತಿ ಕಂಡು ಬಂದರೆ ಕ್ಲಿನಿಕ್‌ಗೆ ಹೋಗಿ ಮಾತ್ರೆ ತಗೊಂಡು ಸುಮ್ಮನಾಗಬೇಡಿ, ಮೆದುಳಿನ ಸ್ಕ್ಯಾನಿಂಗ್ ಮಾಡಿಸಿ ಬ್ರೈನ್‌ನಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದು ಪರೀಕ್ಷಿಸಿ.
ಕೇಳಿಸದೆ ಇರುವುದು
ಬ್ರೈನ್ ಟ್ಯೂಮರ್ ಸಮಸ್ಯೆ ಇರುವವರಿಗೆ ಕಿವಿಗೂ ಸಮಸ್ಯೆ ಉಂಟಾಗುವುದು. ಆಗಾಗ ತಲೆನೋವು ಬರುತ್ತಿದೆ, ಕಿವಿ ಕೇಳಿಸದೆ ಇರುವುದು ಅಥವಾ ಕಿವಿಯಲ್ಲಿ ಏನೋ ರೀತಿಯ ಶಬ್ದ ಕೇಳಿಸುವುದು, ಇದರಿಂದ ತುಂಬಾ ಕಿರಿಕಿರಿ ಅನಿಸುವುದು ಆದರೆ ನೀವು ಬ್ರೈನ್ ಟ್ಯೂಮರ್ ಪರೀಕ್ಷೆ ಮಾಡಿಸಿ.
ಬ್ರೈನ್ ಟ್ಯೂಮರ್ ಬಂದಾಗ ಅದನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿದರೆ ಸೂಕ್ತ ಚಿಕಿತ್ಸೆ ಮೂಲಕ ಗುಣಮುಖರಾಗಬಹುದು. ಆದ್ದರಿಂದ ಆರಂಭದಲ್ಲಿ ಕಂಡು ಬರುವ ಈ ಬಗೆಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
