Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಕ್ತದಾನ ಮಾಡಿದರೆ ದಾನಿಗಳಿಗೆ ಈ ಅದ್ಭುತ ಪ್ರಯೋಜನಗಳಿವೆ
ಜೂನ್ 14ನ್ನು ವಿಶ್ವ ರಕ್ತದಾನಿಗಳ ದಿನ. ರಕ್ತದಾನ ಮಹಾದಾನ, ರಕ್ತದಾನ ಮಾಡುವುದರಿಂದ ನಮ್ಮಿಂದ ಒಂದು ಜೀವ ಉಳಿಸಿದ ಪುಣ್ಯ ಹಾಗೂ ಸಮಧಾನ ಸಿಗುತ್ತೆ. ರಕ್ತದಾನದ ಮಹತ್ವ ಗೊತ್ತಾಗುವುದು ನಮ್ಮವರಿಗೆ ರಕ್ತ ಬೇಕಾದಾಗ ಒದ್ದಾಡುತ್ತೇವೆ ಅಲ್ವಾ?
ಆವಾಗ.... ಕೆಲವೊಮ್ಮೆ ಒಂದು ಬಾಟಲಿ ರಕ್ತಹೊಂದಿಸಲು ಹರಸಾಹಸ ಪಡಬೇಕಾಗುತ್ತದೆ, ಆ ಸಮಯದಲ್ಲಿ ಅವರ ಬ್ಲಡ್ ಗ್ರೂಪ್‌ಗೆ ಬೇಕಾದ ರಕ್ತ ಸಿಗದಿದ್ದಾಗ ಯಾರಾದರೂ ನಮಗೆ ರಕ್ತದಾನಿಗಳಿದ್ದರೆ ಬನ್ನಿ ಎಂದು ಕೇಳಿ ಕೊಳ್ಳುತ್ತಾರೆ. ಆ ಸಮಯದಲ್ಲಿ ಯಾರು ರಕ್ತದಾನ ಮಾಡುತ್ತಾರೋ ಅವರು ನಮ್ಮ ಪಾಲಿಗೆ ಸಾಕ್ಷಾತ್ ದೇವರಾಗುತ್ತಾರೆ ಅಲ್ವಾ?

ರಕ್ತ ಕೊಟ್ಟವರಿಗೂ ನನ್ನಿಂದ ಒಂದು ಜೀವ ಉಳಿಸಲು ಸಾಧ್ಯವಾಯ್ತಲ್ಲ ಎಂಬ ಸಮಧಾನ, ತೃಪ್ತಿ. ಆದರೆ ಇದನ್ನೂ ಮೀರಿ ರಕ್ತಕೊಟ್ಟವರಿಗೂ ರಕ್ತದಾನದಿಂದ ತುಂಬಾನೇ ಪ್ರಯೋಜನ ಸಿಗಲಿದೆ. ರಕ್ತದಾನಿಗಳಿಗೆ ಯಾವೆಲ್ಲಾ ಪ್ರಯೋಜನಗಳಿವೆ ಎಂದು ನೋಡುವುದಾದರೆ...
ರಕ್ತದಾನದಿಂದ ರಕ್ತದಾನಿಗಳಿಗೆ ದೊರೆಯುವ ಪ್ರಯೋಜನಗಳು
ದೇಹದಲ್ಲಿ ಕಬ್ಬಿಣದಂಶ ಕಾಪಾಡಲು ತುಂಬಾನೇ ಸಹಕಾರಿ
ಯಾರು ರಕ್ತದಾನ ಮಾಡುತ್ತಾರೋ ಅವರ ದೇಹದಲ್ಲಿ ಕಬ್ಬಿಣದಂಶ ಉತ್ತಮವಾಗಿರುತ್ತದೆ. ಕಬ್ಬಿಣದಂಶ ಕಡಿಮೆಯಾದರೆ ಹೀಮೋಗ್ಲೋಬಿನ್ ಕೊರತೆ ಉಂಟಾಗುವುದು. ಇದರಿಂದ ದೇಹದಲ್ಲಿ ರಕ್ತ ಕಡಿಮೆಯಾಗುವುದು. ಅದೇ ದಾನಿಗಳಲ್ಲಿ ಕಬ್ಬಿಣದಂಶದ ಕೊರತೆ ಉಂಟಾಗುವುದಿಲ್ಲ, ಅಲ್ಲದೆ ರಕ್ತಸಂಚಾರ ಸರಿಯಾಗಿ ನಡೆಯಲು ತುಂಬಾನೇ ಸಹಕಾರಿ.
ಹೊಸ ರಕ್ತಕಣಗಳು ಉತ್ಪತ್ತಿಯಾಗುವುದು
ರಕ್ತದಾನ ಮಾಡಿದಾಗ ದೇಹದಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗುವುದು. ಇದರಿಂದ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ಅನೇಕ ಬಗೆಯ ಕಾಯಿಲೆ ತಡೆಗಟ್ಟಲು ಕೂಡ ಇದು ಸಹಕಾರಿ.
ದೈಹಿಕವಾಗಿ, ಮಾನಸಿಕವಾಗಿ ಈ ಪ್ರಯೋಜನಗಳಿವೆ
* ರಕ್ತದಾನ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು
* ಮನಸ್ಸಿಗೆ ಖುಷಿ, ನೆಮ್ಮದಿ ಸಿಗುವುದು
* ದೈಹಿಕ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
* ಋಣಾತ್ಮಕ ಚಿಂತನೆಗಳು ಕಡಿಮೆಯಾಗುವುದು. ನಾವು ಯಾರಿಗಾದರೂ ಒಳ್ಳೆಯದು ಮಾಡಿದರೆ ನಮ್ಮ ಮನಸ್ಸಿಗೆ ಖುಷಿಯಾಗುವುದು, ಇದರಿಂದಾಗಿ ನಮ್ಮಲ್ಲಿರುವ ಋಣಾತ್ಮಕ ಚಿಂತನೆ ದೂರಾಗುವುದು
* ಒಂಟಿ ಎಂಬ ಭಾವನೆ ದೂರಾಗುವುದು
ಉಚಿತ ಆರೋಗ್ಯ ತಪಾಸಣೆ
ನೀವು ರಕ್ತದಾನ ಮಾಡಲು ಹೋದಾಗ ನಿಮ್ಮ ಆರೋಗ್ಯ ತಪಾಸಣೆ ಮಾಡಿದ ಬಳಿಕವಷ್ಟೇ ರಕ್ತವನ್ನು ಪಡೆಯುತ್ತಾರೆ, ಇಲ್ಲದಿದ್ದರೆ ಪಡೆಯುವುದಿಲ್ಲ. ಇದರಿಂದ ನಿಮಗೆ ಫ್ರೀ ಹೆಲ್ತ್ ಚೆಕಪ್ ಸಿಗುವುದು.
* ಪಲ್ಸ್
* ರಕ್ತದೊತ್ತಡ
* ದೇಹದ ಉಷ್ಣಾಂಶ
* ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಎಷ್ಟಿದೆ ಎಂಬುವುದು
* ಒಂದು ವೇಳೆ ಇದೇ ಮೊದಲ ಬಾರಿ ರಕ್ತದಾನ ಮಾಡುತ್ತಿದ್ದು ನಿಮಗೆ ನಿಮ್ಮ ರಕ್ತದ ಗುಂಪು ಯಾವುದೆಂದು ತಿಳಿಯದಿದ್ದರೆ ಅದನ್ನು ತಿಳಿಯಲು ಕೂಡ ಸಾಧ್ಯವಾಗುವುದು.
ರಕ್ತಪರೀಕ್ಷೆ ಮಾಡುವುದರಿಂದ ಈ ಬಗೆಯ ಕಾಯಿಲೆ ಇದ್ದರೆ ತಿಳಿಯಲು ಸಾಧ್ಯವಾಗುವುದು
* ಹೆಪಟೈಟಿಸ್ ಬಿ
* ಹೆಪಟೈಟಿಸ್ ಸಿ
* ಹೆಚ್‌ಐವಿ
* West Nile virus
* syphilis
* Trypanosoma cruzi
ರಕ್ತದಾನದ ಅಡ್ಡಪರಿಣಾಮಗಳೇನು?
ಆರೋಗ್ಯವಾಗಿರುವವರಿಗೆ ರಕ್ತದಾನ ಮಾಡಿದರೆ ತುಂಬಾನೇ ಒಳ್ಳೆಯದು, ಆದರೆ ಬಳಸುವ ಸೂಜಿ ಹೊಸತಾಗಿರಲಿ.
* ಕೆಲವರಿಗೆ ರಕ್ತದಾನದ ಬಳಿಕ ಸುಸ್ತು, ಸ್ವಲ್ಪ ತಲೆಭಾರವಾಗುವುದು, ಸುಸ್ತು ಕಂಡು ಬರುವುದು. ಆದರೆ ಒಂದೆರಡು ದಿನಗಳಲ್ಲಿ ಸರಿಯಾಗುವುದು
* ಕೆಲವರಿಗೆ ಸೂಜಿ ಸುಚ್ಚಿದ ಭಾಗದಲ್ಲಿ ಊತ, ರಕ್ತ ಸೋರುವುದು ಕಂಡು ಬರುವುದು.
ರಕ್ತದಾನ ಮಾಡುವುದಾದರೆ ತಿಳಿದಿರಬೇಕಾದ ಸಂಗತಿಗಳು
* 17 ವಯಸ್ಸು ಮೇಲ್ಪಟ್ಟವರಾಗಿರಬೇಕು
* ಕನಿಷ್ಠ 55 ಕೆಜಿ ಮೈ ತೂಕವಿರಬೇಕು, ಆರೋಗ್ಯವಂತರಾಗಿರಬೇಕು.
* ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಅಥವಾ ಏನಾದರೂ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅದರ ಬಗ್ಗೆ ಮೊದಲೇ ಹೇಳಬೇಕು.
* ಒಮ್ಮೆ ರಕ್ತದಾನ ಮಾಡಿದ ಮೇಲೆ ಮತ್ತೊಮ್ಮೆ ನೀಡಲು 8 ವಾರಗಳು ಕಾಯಬೇಕು. ಡಬಲ್ ರೆಡ್ ಸೆಲ್ ಡೊನೇಷನ್ ಮಾಡಿದ್ದರೆ 16 ವಾರ ಕಾಯಬೇಕು.
* ಪ್ಲೇಟ್‌ಲೆಟ್ ದಾನವನ್ನು 7 ದಿನಗಳಿಗೊಮ್ಮೆ ಮಾಡಬಹುದು, ವರ್ಷದಲ್ಲಿ 24 ಬಾರಿ ಮಾಡಬಹುದು.
ರಕ್ತದಾನ ಮಾಡುವ ಮೊದಲು
* ಅಪಾಯಿಂಟ್ಮೆಂಟ್‌ಗೆ ಮುಂಚೆ ಹೆಚ್ಚು ನೀರು ಕುಡಿಯಿರಿ
* ಕಡಿಮೆ ಕೊಬ್ಬಿನಂಶವಿರುವ ಆರೋಗ್ಯಕರ ಆಹಾರ ಸೇವಿಸಿ
* ಸಡಿಲವಾದ , ಚಿಕ್ಕ ತೋಳಿನ ಬಟ್ಟೆ ಧರಿಸಿದರೆ ಸುಲಭ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications