Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
Blood Type Diet: ನೀವು ಎಷ್ಟು ಫಿಟ್? ಏನು ತಿನ್ನಬೇಕು ಮತ್ತು ರಕ್ತದಾನ ಹೇಗೆ ಮಾಡಬೇಕು? ಡಾಕ್ಟರ್ ಹೇಳಿದ ಸತ್ಯ
ರಕ್ತ ನಮ್ಮ ಜೀವದ್ರವ. ಇದಕ್ಕೆ ಬೆಲೆಕಟ್ಟಲು, ಪರ್ಯಾಯ ಒದಗಿಸಲು ಸಾಧ್ಯವಿಲ್ಲ. ನಮ್ಮ ದೇಹದ ಹಲವಾರು ಕೆಲಸಗಳನ್ನು ರಕ್ತ ಸತತವಾಗಿ ನಿರ್ವಹಿಸುತ್ತಲೇ ಇರುತ್ತದೆ. ಆದರೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿಮ್ಮ ರಕ್ತದ ಗುಂಪಿಗೆ ಅನುಗುಣವಾದ ಆಹಾರ ಸೇವಿಸಬೇಕು. ಹೌದು, ನೀವು ರಕ್ತದ ಪ್ರಕಾರದ ಆಹಾರದ ಬಗ್ಗೆ ಕೇಳಿದ್ದೀರಾ? 'ನಿಮ್ಮ ರಕ್ತದ ಪ್ರಕಾರಕ್ಕೆ ಅನುಗುಣವಾಗಿ ತಿನ್ನಿರಿ' ಎಂದು ಹಲವು ಅಧ್ಯಯನಗಳು ಶಿಫಾರಸು ಮಾಡಿವೆ. ಬಹುಶಃ ನಿಮ್ಮ ಡಯಟ್ ಕೆಲಸ ಮಾಡುತ್ತಿಲ್ಲವೇ? ಹಾಗಿದ್ರೆ, ಅದು ನಿಮ್ಮ ಶೈಲಿ ಅಲ್ಲಿರಬಹುದು. ಬನ್ನಿ, ರಕ್ತದ ಪ್ರಕಾರವು ಆಹಾರ, ಆರೋಗ್ಯ ಮತ್ತು ರಕ್ತದಾನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿಯೋಣ.
ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು (World Blood Donor Day 2025) ಆಚರಿಸಲಾಗುತ್ತದೆ. ರಕ್ತದಾನವು ಒಂದು ಜೀವವನ್ನು ಉಳಿಸುತ್ತದೆ. ಹೀಗಾಗಿ, ದಾನಗಳಲ್ಲಿ ಬಹಳ ಶ್ರೇಷ್ಠ ದಾನ ರಕ್ತದಾನವಾಗಿದೆ. ನಾವು ಆರೋಗ್ಯವಾಗಿರಲು ಶುದ್ದ ರಕ್ತ ತುಂಬಾ ಅವಶ್ಯಕ. ಪ್ರತಿ ವರ್ಷ ಹೊಸ ಥೀಮ್‌ನೊಂದಿಗೆ ವಿಶ್ವ ರಕ್ತದಾನಿಗಳ ದಿನ ಆಚರಿಸಲಾಗುತ್ತದೆ. ಈ ದಿನದಂದು ಬ್ಲಡ್ ಟೈಪ್ ಡಯಟ್ ಬಗ್ಗೆ ತಿಳಿಯಲೇಬೇಕು. ಏಕೆಂದರೆ, ದೇಹಕ್ಕೆ ಯಾವ ರೀತಿಯ ಪೌಷ್ಟಿಕಾಂಶ ಬೇಕು, ಎಷ್ಟು ಪ್ರಮಾಣದಲ್ಲಿ ಬೇಕೆಂಬುದನ್ನು ಕೂಡ ರಕ್ತದ ಗುಂಪು ನಿರ್ಧರಿಸುತ್ತದೆ.

ಬ್ಲಡ್ ಟೈಪ್ ಡಯಟ್ ಎಂದರೆ ಏನು?
1996 ರಲ್ಲಿ ನ್ಯಾಚುರೋಪಥಿಕ್ ವೈದ್ಯರಾದ ಪೀಟರ್ ಡಿ'ಅಡಾಮೊ ಒಂದು ಪುಸ್ತಕ ಪ್ರಕಟಿಸಿದ್ದಾರೆ. ಈ ಪುಸ್ತಕದಲ್ಲಿ ಅವರು ಯಾವ ಆಹಾರವನ್ನು ತಿನ್ನಬೇಕು ಎಂಬುದನ್ನು ರಕ್ತದ ಗುಂಪಿನ ಆಧಾರದ ಮೇಲೆ ನಿರ್ಧರಿಸಬೇಕು ಎಂದು ಹೇಳಿದ್ದಾರೆ. ಈ ರೀತಿಯ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡರೆ, ನೀವು ಆರೋಗ್ಯವಾಗಿರಬಹುದು. ದೀರ್ಘಾಯುಷ್ಯ ಹೊಂದಬಹುದು ಮತ್ತು ತಾನು ಇಚ್ಚಿಸುವಂತೆ ತೂಕವನ್ನು ಹೊಂದಬಹುದು ಎಂದು ವಿವರಿಸಿದ್ದಾರೆ. ಸಾಸ್, ಮಸಾಲೆ ಮತ್ತು ವ್ಯಾಯಾಮದ ಆಯ್ಕೆಯು ನಿಮ್ಮ ರಕ್ತದ ಪ್ರಕಾರವನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ. ಈ ಪುಸ್ತಕವು ಬೇಗನೆ ಜನರನ್ನು ಸೆಳೆಯಿತು. ಜನರು ಸಹ ತಮ್ಮ ರಕ್ತದ ಗುಂಪಿ ತಕ್ಕಂತೆ ಹೊಸದಾಗಿ ತಮ್ಮ ತಿನ್ನುವ ಕ್ರಮ, ವ್ಯಾಯಾಮದ ಶೈಲಿ ಮತ್ತು ಆಲೋಚಿಸುವ ವಿಧಾನವನ್ನೇ ಬದಲಾಯಿಸಿದರು.
ಮನುಷ್ಯನ ಆರೋಗ್ಯಕ್ಕೆ ಸಂಬಂಧಪಟ್ಟಂತೆ ರಕ್ತದ ಗುಂಪು ಆನುವಂಶಿಕ ಅಂಶವಾಗಿರುತ್ತದೆ. ನಮ್ಮ ರಕ್ತದಲ್ಲಿ ಮುಖ್ಯವಾಗಿ ನಾಲ್ಕು ಗುಂಪುಗಳಿವೆ. ಅವುಗಳೇ ಎ, ಬಿ, ಒ ಮತ್ತು ಎಬಿ ಮಾದರಿಗಳು. ಡಯಟ್ ಮಾಡುವವರು ತಮ್ಮ ರಕ್ತದ ಗುಂಪು ಪ್ರಕಾರ ಆಹಾರವನ್ನು ಸೇವಿಸಬೇಕಾಗುತ್ತದೆ. ರಕ್ತದ ಗುಂಪು ಪ್ರಕಾರ, ವ್ಯಕ್ತಿಯ ಮಾನಸಿಕ ಸ್ಥಿತಿ ಮತ್ತು ದೇಹದ ಉಷ್ಣತೆ ಬದಲಾಗುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ವ್ಯಕ್ತಿಯ ರಕ್ತದ ಗುಂಪು ಮತ್ತು ಪೋಷಕಾಂಶಗಳು ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ ಎನ್ನುವುದು ಆಹಾರ ತಜ್ಞರ ಅಭಿಪ್ರಾಯ.
ರಕ್ತದ ಗುಂಪಿನ ಡಯಟ್
ದೇಹಕ್ಕೆ ಯಾವ ರೀತಿಯ ಪೌಷ್ಟಿಕಾಂಶ ಎಷ್ಟು ಪ್ರಮಾಣದಲ್ಲಿ ಬೇಕು ಎಂಬುದನ್ನು ರಕ್ತದ ಗುಂಪು ನಿರ್ಧರಿಸುತ್ತದೆ. ಇದಲ್ಲದೆ, ವ್ಯಕ್ತಿಯಲ್ಲಿ ಡಯಾಬಿಟಿಸ್, ಕಿಡ್ನಿ ಸಮಸ್ಯೆ, ಜಿಐಟಿ, ಸ್ಥೂಲತೆ, ಅಧಿಕ ರಕ್ತದೊತ್ತಡವನ್ನು ರಕ್ತದ ಗುಂಪಿನ ಡಯಟ್ ನಿರ್ಧರಿಸುತ್ತದೆ. ಅದರಂತೆ ನಿರ್ದಿಷ್ಟ ಆಹಾರ ಸೇವಿಸುವುದು, ಸುಲಭವಾಗಿ ಜೀರ್ಣವಾಗಲು ಬಿಡುವುದು, ಶಕ್ತಿಯ ಮಟ್ಟ ಹೆಚ್ಚಿಸುವುದು, ರೋಗಗಳ ತಡೆಗಟ್ಟುವಿಕೆ ಮತ್ತು ಅನಾರೋಗ್ಯ ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ. ಇವು ತೂಕ ಕಳೆದುಕೊಳ್ಳಲು ಸಹಕಾರಿ ಮಾಡುವುದಲ್ಲದೆ, ದೇಹಕ್ಕೆ ಪೌಷ್ಟಿಕಾಂಶವನ್ನು ಸಹ ನೀಡುತ್ತದೆ.
ನಿಮ್ಮ ರಕ್ತದ ಗುಂಪಿಗೆ ಅಥವಾ ಮಾದರಿಗೆ ತಕ್ಕ ಆಹಾರ
ನಿಮ್ಮ ರಕ್ತದ ಗುಂಪಿಗೆ ಅಥವಾ ಮಾದರಿಗೆ ಅನುಗುಣವಾಗಿ ನೀವು ಆಹಾರ ಸೇವಿಸಬೇಕು. ನಿಮ್ಮ ದೇಹಕ್ಕೆ ಸೇರುವ ಚೆನ್ನಾಗಿ ಜೀರ್ಣವಾಗುವ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಇಲ್ಲದಿದ್ದರೆ, ರಕ್ತದ ಗುಂಪು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವುದಿಲ್ಲ. ನಿಮ್ಮ ರಕ್ತದ ಗುಂಪಿಗೆ ತಕ್ಕಂತೆ ಆಹಾರ ಸೇವಿಸಿದರೆ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಅಲ್ಲದೆ ಅನೇಕ ಖಾಯಿಲೆಗಳನ್ನು ಕೂಡ ತಡೆಗಟ್ಟಬಹುದು. ನಿಮ್ಮ ರಕ್ತದ ಗುಂಪಿಗೆ ತಕ್ಕಂತೆ ಸೇವಿಸಬಹುದಾದ ಮತ್ತು ಸೇವಿಸಬಾರದ ಆಹಾರಗಳು ಇಲ್ಲಿವೆ.
'O' ರಕ್ತದ ಗುಂಪಿನವರು ತಿನ್ನಬೇಕಾದ ಆಹಾರಗಳು
ಒ ಗುಂಪಿನ ರಕ್ತ ಹೊಂದಿರುವವರು ಹೆಚ್ಚು ಪ್ರೋಟೀನ್ ಹೊಂದಿರುವ ಆಹಾರಗಳನ್ನು ತಿನ್ನಬೇಕು. ತರಕಾರಿಗಳು, ಮಾಂಸ, ಮೀನು, ಹಣ್ಣುಗಳು. ಮೊಟ್ಟೆ, ಕ್ಯಾಲೆ, ಲೆಟಿಸ್, ಬ್ರೊಕೊಲಿ, ಈರುಳ್ಳಿ, ಕುಂಬಳಕಾಯಿ, ಸೌತೆಕಾಯಿ, ಹೀರೆಕಾಯಿ, ಕೆಂಪು ಮೆಣಸಿನ ಕಾಯಿ, ಒಕ್ರಾ, ಬೆಳ್ಳುಳ್ಳಿ, ಶುಂಠಿ, ಚೆರ್ರಿಗಳು, ಅಂಜೂರದ ಹಣ್ಣುಗಳನ್ನು ತಿನ್ನಬಹುದು. ಪ್ರಾಣಿಜನ್ಯ ಆಹಾರಗಳು ಈ ಗುಂಪಿನ ರಕ್ತ ಹೊಂದಿರುವವರಿಗೆ ಉತ್ತಮ.
ಇನ್ನು ಒ ಗುಂಪಿನ ರಕ್ತದವರು ಗೋಧಿ, ಜೋಳ ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬಾರರು. ಪಾಲಕ್, ಎಲೆಕೋಸು, ಕಾರ್ನ್, ಹೂಕೋಸು, ಬಿಳಿಬದನೆ, ಅಣಬೆಗಳು, ಕಿತ್ತಳೆ, ಕಿವಿ, ಸ್ಟ್ರಾಬೆರಿ, ಬ್ಲಾಕ್ಬೆರ್ರಿ, ತೆಂಗಿನಕಾಯಿ, ಹಸಿರು ಬಟಾಣಿ, ಕಡಲೆಕಾಯಿ ಬೆಣ್ಣೆ ಉತ್ತಮವಲ್ಲ.
'A' ರಕ್ತದ ಗುಂಪಿನವರು ತಿನ್ನಬೇಕಾದ ಆಹಾರಗಳು
ಎ ರಕ್ತದ ಗುಂಪು ಹೊಂದಿರುವವರಿಗೆ ಪ್ರಾಣಿಜನ್ಯ (ಮಾಂಸ) ಆಹಾರ ಅಷ್ಟು ದೇಹಕ್ಕೆ ಸೇರುವುದಿಲ್ಲ. ಗೋಧಿಭರಿತ ಸಸ್ಯಹಾರ ಉತ್ತಮ. ನೀವು ಅನ್ನ, ಓಟ್ಸ್, ಪಾಸ್ತಾ, ಕುಂಬಳಕಾಯಿ, ಬೀಜಗಳು, ಪೀನಟ್ಸ್, ಅಪ್ರಿಕೊಟ್ಸ್, ಫಿಗ್ಸ್, ನಿಂಬೆಹಣ್ಣು, ರೈಸಿನ್ಸ್, ಅಮರಂತ್, ಬಕ್ ವೀಟ್ ಮೊದಲಾದವುಗಳನ್ನು ಸೇವಿಸಬಹುದು.
ಎ ಗುಂಪಿನ ರಕ್ತದವರು ಹಾಲು ಉತ್ಪನ್ನಗಳು, ಜೋಳ ಸೇವನೆ ಮಾಡಬಾರದು. ಬಾಳೆ, ತೆಂಗಿನಕಾಯಿ, ಪಪ್ಪಾಯಿ, ಗೋಡಂಬಿ, ಪಿಸ್ತಾ, ಬಿಯರ್ ಬೇಡ. ಪ್ರಾಣಿಗಳ ಆಹಾರ ಅಂದರೆ ಚಿಕನ್, ಮೀನು, ಮೊಟ್ಟೆ ಅಥವಾ ಓಟ್ಸ್ ಮುಂತಾದ ಆಹಾರಗಳು ಉತ್ತಮವಲ್ಲ.
'B' ರಕ್ತದ ಗುಂಪಿನವರು ತಿನ್ನಬೇಕಾದ ಆಹಾರಗಳು
ರಕ್ತದ ಗುಂಪಿನ ರಕ್ತ ಹೊಂದಿರುವವರು, ಚಿಕನ್, ಜೋಳ, ಕಡಲೆಕಾಯಿ, ಗೋಧಿ ಸೇವಿಸಬಾರದು. ಹಸಿರು ತರಕಾರಿಗಳು, ಮೊಟ್ಟೆ, ಕಡಿಮೆ ಕೊಬ್ಬಿನ ಪದಾರ್ಥಗಳು ಉತ್ತಮ. ಓಟ್ಸ್, ಹಾಲು, ಹಾಲಿನ ಉತ್ಪನ್ನಗಳು ಕೂಡ ಬಿ ಗುಂಪಿನ ರಕ್ತ ಹೊಂದಿರುವವರಿಗೆ ಒಳ್ಳೆಯದು.
ಬಿ ಗುಂಪಿನ ರಕ್ತ ಹೊಂದಿರುವವರ ದೇಹಕ್ಕೆ ಪ್ರಾಣಿಗಳ ಆಹಾರವಾದ ಚಿಕನ್, ಮೀನು, ಮೊಟ್ಟೆ ಓಟ್ಸ್ ಹೊಂದುವುದಿಲ್ಲ. ಹಾಗೆಯೇ ಕಾರ್ನ್, ಹುರುಳಿ, ಟೊಮ್ಯಾಟೊ, ಕಡಲೆಕಾಯಿ, ಎಳ್ಳಿನ ಬೀಜಗಳ ಸೇವನೆ ಬೇಡ.
'AB' ರಕ್ತದ ಗುಂಪಿನವರು ತಿನ್ನಬೇಕಾದ ಆಹಾರಗಳು
ಎಬಿ ಗುಂಪಿನ ರಕ್ತದವರು ಸಮುದ್ರ ಆಹಾರಗಳು, ಮೊಸರು, ಮೇಕೆ ಹಾಲು, ಮೊಟ್ಟೆ ತಿನ್ನಬಹುದು. ವಾಲ್ ನಟ್ಸ್, ಧಾನ್ಯಗಳು, ಓಟ್ಸ್, ಸ್ಪೆಲ್ಡ್, ಮೊಳಕೆಯೊಡೆದ ಗೋಧಿ, ಕೋಸುಗಡ್ಡೆ, ಹೂಕೋಸು, ಬೀಟ್ಗೆಡ್ಡೆಗಳು, ಸೌತೆಕಾಯಿ, ಪ್ಲಮ್ಸ್, ಹಣ್ಣುಗಳು ಈ ಗುಂಪಿನ ರಕ್ತದ ವ್ಯಕ್ತಿಗಳಿಗೆ ಸೇವನೆಗೆ ಉತ್ತಮ. ಅನ್ನ ಮತ್ತು ದಾಲ್, ರೋಟಿ ಮತ್ತು ದಾಲ್, ದಲಿಯಾ, ಕಿಚಡಿ, ಕೆಂಪು ಅನ್ನ ಸಹ ಒಳ್ಳೆಯದು.
ಎಬಿ ಗುಂಪಿನ ರಕ್ತ ಹೊಂದಿರುವವರ ದೇಹಕ್ಕೆ ಕೆಫೀನ್, ಆಲ್ಕೋಹಾಲ್, ಹಾಲು, ಹುರುಳಿ, ಕಾರ್ನ್, ತೆಂಗಿನಕಾಯಿ, ಬಾಳೆಹಣ್ಣು, ಮಾವಿನಹಣ್ಣು, ಕಪ್ಪು ಚಹಾ ಇತ್ಯಾದಿ ಆಹಾರಗಳು ಒಗ್ಗುವುದಿಲ್ಲ.
ರಕ್ತದ ಗುಂಪಿಗೆ ತಕ್ಕಂತೆ ಆಹಾರ ಸೇವಿಸಿದರೆ ಇಷ್ಟೆಲ್ಲಾ ಲಾಭ
- ಜೀರ್ಣಕ್ರಿಯೆ ಸುಧಾರಿಸುತ್ತದೆ.
- ತೂಕ ಸಮತೋಲನದಲ್ಲಿರುತ್ತದೆ.
- ಶಕ್ತಿಸ್ಥಾಯಿಯು ಹೆಚ್ಚುತ್ತದೆ.
- ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳು ದೂರವಿರುತ್ತವೆ.
ಈ ಡಯಟ್‌ನ ನಷ್ಟವೇನು?
ನಿಮಗೂ ಈ ಪ್ರಶ್ನೆ ಹುಟ್ಟಿರಬಹುದು. ಇದು ನ್ಯಾಯ ಸಮ್ಮತವಾಗಿದೆ. ಏಕೆಂದರೆ, ಕೆಲವರು ರಕ್ತದ ಗುಂಪು ಆಧರಿತ ಡಯಟ್ ತೆಗೆದುಕೊಂಡಾಗ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ, ನಿಮ್ಮ ರಕ್ತದ ಗುಂಪಿನ ಆಧಾರದ ಮೇಲೆ ಆಹಾರ ಸೇವಿಸಲು ಮೊದಲು, ನೀವು ನಿಮ್ಮ ಬ್ಲಡ್ ಗ್ರೂಪ್ ತಿಳಿದಿರಬೇಕು. ಆ ನಂತರ ಡಯಟ್ ಪಾಲಿಸಬೇಕಾಗುತ್ತದೆ. ವೈಯಕ್ತಿಕ ಇಚ್ಛೆಗಳಿಂದ ತೊಂದರೆ ಉಂಟಾಗಬಹುದು. ಉದಾಹರಣೆಗೆ, O ರಕ್ತದ ಗುಂಪಿನ ವ್ಯಕ್ತಿ ಶಾಕಾಹಾರಿಯಾಗಿದ್ದರೆ, ಮೀನು ಅಥವಾ ಮಾಂಸ ಆಧಾರಿತ ಆಹಾರ ಪಾಲನೆ ಕಷ್ಟ.
ಡಾ. ಅಡಾಮೊ ಪ್ರಕಾರ ರಕ್ತದ ಗುಂಪಿನ ಆಹಾರ ಏಕೆ ಮುಖ್ಯ?
ನ್ಯಾಚುರೋಪಥಿಕ್ ವೈದ್ಯ ಮತ್ತು ಲೇಖಕ ಡಾ. ಅಡಾಮೊ ಅವರು 'ಈಟ್ ರೈಟ್ ಫಾರ್ ಯುವರ್ ಟೈಪ್' (Eat Right for Your Type) ಪುಸ್ತಕದಲ್ಲಿ ರಕ್ತದ ಗುಂಪಿನ ಆಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ರಕ್ತದ ಗುಂಪಿನ ಆಹಾರಕ್ರಮವನ್ನು ಸಂಶೋಧಿಸಿದ ಬಳಿಕ ಪ್ರತಿಯೊಂದು ರೀತಿಯ ಆಹಾರವು ಲೆಕ್ಟಿನ್ ಅನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ. ಇದು ಒಂದು ರೀತಿಯ ಪ್ರೋಟೀನ್. ಈ ಪ್ರೋಟೀನ್ ಪ್ರತಿ ರಕ್ತದ ಗುಂಪಿನ ಜನರ ಮೇಲೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಇದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ರಕ್ತದ ಗುಂಪನ್ನು ಆಧರಿಸಿ ಆಹಾರವನ್ನು ತಿನ್ನುವುದರಿಂದ ತೂಕ ನಷ್ಟವಷ್ಟೇ ಅಲ್ಲ, ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದು ಡಾ. ಅಡಾಮೊ ಹೇಳಿದ್ದಾರೆ. ಲೆಕ್ಟಿನ್ ಪ್ರೋಟೀನ್ ಒಂದು ಅಂಟಿಕೊಳ್ಳುವ ಪ್ರೋಟೀನ್ ಆಗಿದೆ. ರಕ್ತದ ಗುಂಪಿಗೆ ಹೊಂದಿಕೆಯಾಗದ ಲೆಕ್ಟಿನ್‌ಗಳು ದೇಹಕ್ಕೆ ಹಾನಿ ಮಾಡುತ್ತದೆ.
ಅತ್ಯುತ್ತಮ ಆರೋಗ್ಯಕ್ಕಾಗಿ ನಿರ್ದಿಷ್ಟ ಆಹಾರ ಅಗತ್ಯ
ಆಹಾರವು ವ್ಯಕ್ತಿಯ ಪೌಷ್ಟಿಕಾಂಶದ ಅಗತ್ಯತೆ ಮತ್ತು ಆರೋಗ್ಯವನ್ನು ವೃದ್ಧಿಸುವಲ್ಲಿ ಹೆಚ್ಚು ಅಗತ್ಯ. ಪ್ರತಿ ರಕ್ತದ ಪ್ರಕಾರವು, ಅತ್ಯುತ್ತಮ ಆರೋಗ್ಯಕ್ಕಾಗಿ ನಿರ್ದಿಷ್ಟ ಆಹಾರಗಳ ಅಗತ್ಯವಿರುತ್ತದೆ. 'O' ಪಾಸಿಟಿವ್ ಇರುವವರು ಹೆಚ್ಚಾಗಿ ಧಾನ್ಯ ಮತ್ತು ಡೈರಿಯ ಉತ್ಪನ್ನವನ್ನು ಸೀಮಿತಗೊಳಿಸುವುದು ಹಾಗೂ ಮಾಂಸ ಮತ್ತು ಮೀನುಗಳಂತಹ ಹೆಚ್ಚಿನ ಪ್ರೋಟೀನ್ ಆಹಾರ ಸೇವಿಸುವುದು ಉತ್ತಮ. ರಕ್ತದ ಗುಂಪು 'A' ಹೊಂದಿರುವವರು ಹಣ್ಣು, ತರಕಾರಿ ಮತ್ತು ಧಾನ್ಯಗಳಲ್ಲಿ ಸಮೃದ್ಧವಾಗಿರುವ ಸಸ್ಯಾಹಾರಿ ಆಹಾರ ಸೇವಿಸಬೇಕು. ಈ ಮೂಲಕ ರಕ್ತದ ಗುಣಮಟ್ಟವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು.
ಅದೇ ರೀತಿ 'B' ಗುಂಪು ಇರುವವರು ಮಾಂಸ, ಡೈರಿ ಮತ್ತು ಧಾನ್ಯ ಒಳಗೊಂಡ ಸಮತೋಲಿತ ಆಹಾರದಿಂದ ಪ್ರಯೋಜನ ಪಡೆಯಬಹುದು. 'AB' ರಕ್ತದ ಗುಂಪು ಹೊಂದಿರುವವರು 'A' ಮತ್ತು 'B' ಗುಂಪಿನವರು ಸೇವಿಸುವ ಆಹಾರ ಸೇವನೆ ಉತ್ತಮ. ಹೀಗೆ ಪ್ರತಿಯೊಂದು ರಕ್ತದ ಗುಂಪಿಗೂ ಅದರದ್ದೇ ಆದ ಆಹಾರ ಕ್ರಮಗಳನ್ನು ಸಮತೋಲಿತವಾಗಿ ಸೇವಿಸುವುದರಿಂದ ರಕ್ತದ ಗುಣಮಟ್ಟ ಹಾಗೂ ಹರಿವನ್ನು ಸೂಕ್ತವಾಗಿ ಕಾಪಾಡಿಕೊಳ್ಳಬಹುದು.
- ಭಾರತಿ ಕುಮಾರ್, ಆಹಾರ ತಜ್ಞೆ, ಫೋರ್ಟಿಸ್ ಆಸ್ಪತ್ರೆ, ನಾಗರಭಾವಿ, ಬೆಂಗಳೂರು.



Click it and Unblock the Notifications












