Latest Updates
-
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ? -
ಸ್ವಾತಂತ್ರ್ಯ ದಿನಾಚರಣೆ: ಮಳೆಯಲ್ಲೂ ಮಿಂಚಲು ಇಲ್ಲಿದೆ ಸಿಂಪಲ್ ಟ್ರೈಕಲರ್ ಫ್ಯಾಷನ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: 10 ನಿಮಿಷದಲ್ಲಿ ತ್ರಿರಂಗ ಲುಕ್ನಲ್ಲಿ ಮಿಂಚುವುದು ಹೇಗೆ? -
ಸ್ವಾತಂತ್ರ್ಯ ದಿನದ 'ತಿರಂಗಾ ರೈಡ್': ಮಳೆಗಾಲದಲ್ಲಿ ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿವೆ ಬೆಸ್ಟ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: ಪರೇಡ್ ವೀಕ್ಷಿಸುವ ಮುನ್ನ ಈ 10 ನಿಮಿಷದ ವ್ಯಾಯಾಮ ಮರೆಯದಿರಿ! -
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು!
ಈ ಕಾರಣಕ್ಕೂ ಅಸ್ತಮಾ ಹೆಚ್ಚಾಗುವುದು ಎಂದು ಬಹುತೇಕರಿಗೆ ಗೊತ್ತೇ ಇರಲ್ಲ
ಮೇ 2 ವಿಶ್ವ ಅಸ್ತಮಾ ದಿನ. ಅಸ್ತಮಾ ಕಾಯಿಲೆ ತಡೆಗಟ್ಟುವುದು ಹೇಗೆ ಎಂದು ಜನರಿಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. 2023ರಲ್ಲಿ 'ಅಸ್ತಮಾ ಕೇರ್ ಫಾರ್ ಆಲ್' ಥೀಮ್‌ನಲ್ಲಿ ಆಚರಿಸಲಾಗುವುದು. ಅಸ್ತಮಾ ಇರುವವರು ಬೇಸಿಗೆಗಾಲ, ಮಳೆಗಾಲ, ಚಳಿಗಾಲ ಎನ್ನದೆ ಎಲ್ಲಾ ಕಾಲದಲ್ಲೂ ಎಚ್ಚರಿಕೆವಹಿಸಬೇಕು.

ಅದರಲ್ಲೂ ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಅಧಿಕವಿರುವ ಕಡೆಯಂತೂ ಅಸ್ತಮಾ ಕಾಯಿಲೆ ಮತ್ತಷ್ಟು ಉಲ್ಬಣವಾಗುವುದು. ಅದರಲ್ಲೂ ಈ ಕಾರಣಗಳಿಂದ ಕೂಡ ಅಸ್ತಮಾ ಹೆಚ್ಚಾಗುತ್ತಿದೆ ಎಂಬುವುದು ಬಹುತೇಕರಿಗೆ ಗೊತ್ತೇ ಇರಲ್ಲ, ಆ ಅಸಾಮಾನ್ಯ ಕಾರಣಗಳು ಯಾವುವು ಎಂದು ನೋಡೋಣ:
1. ಗುಡುಗು
ಮಳೆಗಾಲದಲ್ಲಿ ಅಸ್ತಮಾ ಸಮಸ್ಯೆ ಹೆಚ್ಚಾಗುವುದು, ನಾವೆಲ್ಲಾ ತಂಪು ವಾತಾವರಣದಿಂದ ಉಂಟಾಗುವುದು ಎಂದು ಭಾವಿಸುತ್ತೇವೆ, ಆದರೆ ಅದೊಂದೇ ಕಾರಣವಲ್ಲ ಗುಡುಗಿ ಕೂಡ ಅಸ್ತಮಾ ಸಮಸ್ಯೆ ಹೆಚ್ಚಿಸುತ್ತದೆ ಎಂಬುವುದು ಗೊತ್ತೇ? ಆದ್ದರಿಂದ ಗುಡುಗು ಬರುವಾಗ ಅಸ್ತಮಾ ಸಮಸ್ಯೆ ಇರುವವರು ಮನೆಯ ಒಳಗಡೆ ಇರುವುದು ಒಳ್ಳೆಯದು.
2. ತಣ್ಣನೆಯ ಗಾಳು
ತಣ್ಣನೆಯ ಗಾಳಿ ಅಸ್ತಮಾ ಸಮಸ್ಯೆ ತುಂಬಾನೇ ಹೆಚ್ಚು ಮಾಡುತ್ತದೆ, ಇದರಿಂದ ಕೆಮ್ಮು, ದಮ್ಮು, ಉಸಿರಾಟದಲ್ಲಿ ತೊಂದರೆ ಉಂಟಾಗುವುದು. ಗಾಡಿಯಲ್ಲಿ ಹೋಗುವಾಗ ತಣ್ಣನೆಯ ಗಾಳಿ ಹಿತ ಅನಿಸಿದರೂ ಅಸ್ತಮಾ ಇರುವವರು ಕಿವಿಗೆ ಕಾಟನ್ ಹಾಕಿ ಅಥವಾ ಕಿವಿ ಮುಚ್ಚುವಂತೆ ಕ್ಯಾಪ್ ಧರಿಸಿ.
3. ಸೌದೆ ಹೊಗೆಯ
ಸೌದೆ ಉರಿಯುವ ಕಡೆ ಅಸ್ತಮಾ ರೋಗಿಗಳು ನಿಂತರೆ ಅದರ ಹೊಗೆ ಸೇವಿಸುವುದರಿಂದ ಅಸ್ತಮಾ ಸಮಸ್ಯೆ ಹೆಚ್ಚುವುದು.
4.ಕಟು ವಾಸನೆ
ಪರ್ಫ್ಯೂಮ್, ಕ್ಲೀನಿಂಗ್ ಪ್ರಾಡೆಕ್ಟ್, ಅಡುಗೆ ಮಾಡುವಾಗ ಬರುವ ವಾಸನೆ ಇವೆಲ್ಲಾ ಕೂಡ ಅಸ್ತಮಾ ಸಮಸ್ಯೆ ಮತ್ತಷ್ಟು ಹೆಚ್ಚಿಸುವುದು.
5. ಅತಿಯಾದ ಮಾನಸಿಕ ಒತ್ತಡ
ಅಸ್ತಮಾ ರೋಗಿಗಳು ಈ ಒಂದು ಅಂಶವನ್ನು ಗಮನಿಸಿರಬಹುದು. ಮಾನಸಿಕ ಒತ್ತಡ ಹೆಚ್ಚಾದಾಗ ಉಸಿರಾಟದಲ್ಲಿ ತೊಂದರೆ ಉಂಟಾಗುವುದು, ಎಷ್ಟು ಉದ್ವೇಗಕ್ಕೆ ಒಳಗಾಗುತ್ತಾರೋ ಉಸಿರಾಟಕ್ಕೆ ತೊಂದರೆಯಾಗುವುದು. ಆದ್ದರಿಂದ ಅಸ್ತಮಾ ರೋಗಿಗಳು ಧ್ಯಾನದ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡರೆ ಅಸ್ತಮಾ ಕೂಡ ನಿಯಂತ್ರಣದಲ್ಲಿರುತ್ತದೆ.
6. ಮುಟ್ಟಿನ ಸಮಯದಲ್ಲಿ
ಮುಟ್ಟಿನ ಸಮಯದಲ್ಲಿ ಕೆಲವರಿಗೆ ಅಸ್ತಮಾ ಸಮಸ್ಯೆ ಹೆಚ್ಚಾಗುವುದು. ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಸಮಸ್ಯೆ ಹೆಚ್ಚಾಗುವುದು, ಇದರಿಂದಾಗಿ ಕೂಡ ಅಸ್ತಮಾ ಸಮಸ್ಯೆ ಹೆಚ್ಚಾಗುವುದು.
7. ಆಸಿಡ್ ರಿಫ್ಲೆಕ್ಸ್
ಇದರಿಂದ ಕೂಡ ಅಸ್ತಮಾ ಸಮಸ್ಯೆ ಅಧಿಕವಾಗುವುದು. ಆದ್ದರೆ ನೀವು ಆಸಿಡ್ ರಿಫ್ಲೆಕ್ಸ್ ಉಂಟಾಗದಂತೆ ಜಾಗ್ರತೆವಹಿಸಿ.
* ಅತಿಯಾಗಿ ಸೇವಿಸಬೇಡಿ
* ತಿಂದ ತಕ್ಷಣ ಮಲಗಬೇಡಿ
* ಕೆಫೀನ್, ಕಾರ್ಬೋನೇಟ್ ಪಾನೀಯ ಕುಡಿಯುವುದು, ಮದ್ಯತ, ಸಿಟ್ರಸ್ ಹಣ್ಣು -ಆಹಾರ ಸೇವಿಸಬೇಡಿ.
* ಚಾಕೋಲೆಟ್ ಹಾಗೂ ಖಾರದ ಪದಾರ್ಥಗಳನ್ನು ಸೇವಿಸಬೇಡಿ.
* ಮಾನಸಿಕ ಒತ್ತಡ ನಿಯಂತ್ರಣದಲ್ಲಿಡಿ.
8. ವ್ಯಾಯಾಮ ನೋಡಿಕೊಂಡು ಮಾಡಿ
ವ್ಯಾಯಾಮದ ಮೊದಲ ನಿಯಮವೇ ನಮ್ಮ ದೇಹ ಏನು ಹೇಳುತ್ತದೆ ಅದನ್ನು ಕೇಳಬೇಕೆನ್ನುವುದು. ಎಲ್ಲರೂ ಮಾಡುತ್ತಿದ್ದಾರೆ ಎಂದು ತುಂಬಾ ವ್ಯಾಯಾಮ ಮಾಡಬಾರದು. ಅಸ್ತಮಾ ರೋಗಿಗಳಿಗೆ ಮಿತ ವ್ಯಾಯಾಮ ಒಳ್ಳೆಯದು. ವ್ಯಾಯಾಮದ ಮಧ್ಯ ವಿಶ್ರಾಂತಿ ಬೇಕೆನಿಸಿದಾಗ ದೇಹವನ್ನು ಅತಿಯಾಗಿ ದಂಡಿಸದೆ ವ್ಯಾಯಾಮ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
