Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
World Alzheimer’s Day: ಮರೆವು ಈ ಹಂತ ತಲುಪಿದರೆ ತುಂಬಾನೇ ಅಪಾಯಕಾರಿ
ಸೆಪ್ಟೆಂಬರ್ 21 ಅಲ್ಜೈಮರ್ಸ್ ದಿನ. ಮರೆವು ಎಂಬುವುದು ಪ್ರತಿಯೊಬ್ಬರಿಗೆ ಇರುತ್ತದೆ, ಆದರೆ ತುಂಬಾನೇ ಮರೆವು ಎಂಬುವುದು ಒಂದು ಕಾಯಿಲೆ, ಅದನ್ನು ಅಲ್ಜೈಮರ್ಸ್ ಎಂದು ಕರೆಯಲಾಗುವುದು. ಅಲ್ಜೈಮರ್ಸ್ ಕಾಯಿಲೆ ಎಂಬುವುದು ಮೆದುಳು ತನ್ನ ಕೌಶಲ್ಯವನ್ನು ಕಳೆದುಕೊಳ್ಳುವ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಈ ಬಗೆಯ ಸಮಸ್ಯೆ 65 ವರ್ಷದ ಮೇಲಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಅಲ್ಜೈಮರ್ಸ್ ಸಮಸ್ಯೆಯ ಆರಂಭದ ಲಕ್ಷಣಗಳೇನು, ಗಂಭೀರ ಲಕ್ಷಣಗಳೇನು ಎಂದು ನೋಡೋಣ ಬನ್ನಿ:
ಅಲ್ಜೈಮರ್ಸ್ ಆರಂಭದ ಲಕ್ಷಣಗಳು
* ಮರೆವಿನಿಂದಾಗಿ ದೈನಂದಿನ ಜೀವನದಲ್ಲಿ ತೊಂದರೆ ಉಂಟಾಗುವುದು
* ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿರುವುದು
* ಸರಿಯಾದ ದಿನಾಂಕ, ಸ್ಥಳ ನೆನಪಿಗೆ ಬರದಿರುವುದು
* ದಿನನಿತ್ಯದ ಕೆಲಸವನ್ನು ಪೂರ್ಣಗೊಳಿಸಲು ತುಂಬಾ ಸಮಯ ತೆಗೆದುಕೊಳ್ಳುವುದು
* ಕೇಳಿದ ಪ್ರಶ್ನೆಯನ್ನು ಮತ್ತೆ-ಮತ್ತೆ ಕೇಳುವುದು
* ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸಲು ಕಷ್ಟವಾಗುವುದು, ಬಿಲ್ ಪಾವತಿ ಈ ಬಗೆಯ ವಿಷಯಗಳನ್ನು ಮರೆಯುವುದು
* ಸಮಸ್ಯೆಗಳನ್ನು ಬಗೆಹರಿಸಲು ಸಮಸ್ಯೆ ಎದುರಿಸುವುದು'
* ವಸ್ತುಗಳನ್ನು ಯಾವುದೋ ಕಡೆ ಇಟ್ಟು ಮರೆತು ಹೋಗುವುದು
* ಸ್ವಭಾವದಲ್ಲಿ ಬದಲಾವಣೆ, ಬೇಗನೆ ಕೋಪಗೊಳ್ಳುವುದು
ಇವೆಲ್ಲಾ ಆರಂಭದ ಹಂತದಲ್ಲಿ ಕಂಡು ಬರುವ ಲಕ್ಷಣಗಳು
ಅಲ್ಜೈಮರ್ಸ್ ಸಮಸ್ಯೆ ಸ್ವಲ್ಪ ಹೆಚ್ಚಾದಾಗ ಕಂಡು ಬರುವ ಲಕ್ಷಣಗಳು
* ತುಂಬಾನೇ ಗೊಂದಲ, ಕೆಲವೊಂದು ವ್ಯಕ್ತಿಗಳ ಹೆಸರನ್ನು ಕೂಡ ಮರೆತು ಹೋಗುವುದು
* ಸಾಮಾಜಿಕವಾಗಿ ಬೆರೆಯದೆ ಇರುವುದು
* ಮಾತನಾಡುವಾಗ, ಓದುವಾಗ, ಬರೆಯುವಾಗ ತೊಂದರೆಯಾಗುವುದು
* ನಿದ್ದೆಯಲ್ಲಿ ವ್ಯತ್ಯಾಸ ಉಂಟಾಗುವುದು, ಹಗಲು ನಿದ್ದೆ ಮಾಡುವುದು, ರಾತ್ರಿ ನಿದ್ದೆಯಿಲ್ಲದೆ ಕಳೆಯುವುದು
* ಗೊತ್ತಿರುವ ಕೆಲಸವನ್ನೇ ಮಾಡಲು ಕಷ್ಟವಾಗುವುದು
* ಗೊಂದಲ
* ವಿಚಿತ್ರ ವರ್ತನೆ, ಆ ಸಂದರ್ಭಕ್ಕೆ ತಕ್ಕಂತೆ ಮಾತನಾಡದೆ ಇರುವುದು, ಕೆಟ್ಟ ಮಾತುಗಳನ್ನಾಡುವುದು
* ಕೋಪಗೊಳ್ಳುವುದು, ಅಳುವುದು
ಅಲ್ಜೈಮರ್ಸ್ ತುಂಬಾ ಗಂಭೀರವಾದಾಗ ಕಂಡು ಬರುವ ಲಕ್ಷಣಗಳು
* ಮಾತನಾಡಲು ಕಷ್ಟವಾಗುವುದು
* ಇತ್ತೀಚೆಗೆ ನಡೆದ, ಈಗಷ್ಟೇ ನಡೆದ ವಿಷಯಗಳನ್ನು ಮರೆಯುವುದು
* ಕಡಿಮೆ ತಿನ್ನುವುದು
* ಮೈ ತೂಕ ಕಡಿಮೆಯಾಗುವುದು
* ಪಿಡ್ಸ್ ಬರುವುದು
* ಹಲ್ಲು, ತ್ವಚೆ, ಕಾಲುಗಳಲ್ಲಿ ಸಮಸ್ಯೆ ಕಂಡು ಬರುವುದು
* ಮಲ, ಮೂತ್ರ ನಿಯಂತ್ರಣವಿಲ್ಲದೆ ಹೋಗುವುದು
ಅಲ್ಜೈಮರ್ಸ್ ರೋಗಿಗಳು ನ್ಯೂಮೋನಿಯಾ ಕಾಯಿಲೆಗೆ ಬಲಿಯಾಗುತ್ತಾರೆ. ವ್ಯಕ್ತಿಗೆ ಚೆನ್ನಾಗಿ ಅಗೆದು ತಿನ್ನಲು ಸಾಧ್ಯವಾಗದಿದ್ದಾಗ, ದ್ರವಾಂಶವನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದಾಗ ಗಾಳಿಯನ್ನು ಮಾತ್ರ ಸೇವಿಸಿ ನ್ಯೂಮೋನಿಯಾ ಉಂಟಾಗುವುದು.
ಅಲ್ಜೈಮರ್ಸ್ ಪ್ರಾರಂಭದಲ್ಲಿಯೇ ಗೋಚರಿಸಿದಾಗಲೇ ಚಿಕಿತ್ಸೆ ಪಡೆಯುವುದು ಒಳ್ಳೆಯದು
ಅಲ್ಜೈಮರ್ಸ್ ಸಮಸ್ಯೆ ಲಕ್ಷಣಗಳು ಕಂಡು ಬಂದಾಗ ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆಯಲಾರಂಭಿಸಿದರೆ ರೋಗ ಲಕ್ಷಣಗಳು ಗಂಭೀರವಾಗುವುದನ್ನು ತಡೆಗಟ್ಟಬಹುದು. ಆದರೆ ಅಲ್ಜೈಮರ್ಸ್ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ, ನಿಯಂತ್ರಣದಲ್ಲಿಡಬಹುದು ಅಷ್ಟೇ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications