Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವ ಏಡ್ಸ್ ದಿನ: ಏಡ್ಸ್ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು, ಸತ್ಯಾಂಶವೇನು?
ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುವುದು. ಈ ವರ್ಷ ʼಸರಿಯಾದ ಮಾರ್ಗವನ್ನು ಅನುಸರಿಸೋಣ: ನನ್ನ ಆರೋಗ್ಯ, ನನ್ನ ಹಕ್ಕುʼ ಎಂಬ ಧ್ಯೇಯವಾಕ್ಯದೊಂದಿಗೆ ಏಡ್ಸ್ ದಿನವನ್ನು ಆಚರಿಸಲಾಗುವುದು. ಏಡ್ಸ್ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆ ಹೋಗಲಾಡಿಸಿ, ಏಡ್ಸ್ ಬಗ್ಗೆ ಜಾಗ್ರತೆ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು.

ಏಡ್ಸ್ ಸಂಪೂರ್ಣವಾಗಿ ಗುಣಪಡಿಸಲಾಗದ ಕಾಯಿಲೆಯಾಗಿದೆ
ಏಡ್ಸ್ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ, ಆದರೆ ಈ ಕಾಯಿಲೆ ಬಗ್ಗೆ ಮುನ್ನೆಚ್ಚರಿಕೆವಹಿಸಿದರೆ ಏಡ್ಸ್ ಬರುವುದನ್ನು ತಡೆಗಟ್ಟಬಹುದಾಗಿದೆ, ಏಡ್ಸ್ ರೋಗಿಯ ರಕ್ತ ಅಥವಾ ಅಂಗಾಂಗ ದಾನವಾಗಿ ಪಡೆದರೆ, ಅಸುರಕ್ಷಿತ ಲೈಂಗಿಕತೆ ಅಥವಾ ಸೋಂಕಿತ ವ್ಯಕ್ತಿಗೆ ಬಳಸಲಾದ ಸೂಜಿಯನ್ನು ಮತ್ತೆ ಮರುಬಳಿಕೆ ಮಾಡುವುದು ಇವೆಲ್ಲಾ ಏಡ್ಸ್ ರೋಗ ಹರಡುವುದಕ್ಕೆ ಕಾರಣವಾಗಿದೆ, ಈ ಬಗ್ಗೆ ಜಾಗ್ರತೆವಹಿಸಿದರೆ ಏಡ್ಸ್ ರೋಗ ತಡೆಗಟ್ಟಬಹುದು.
ಏಡ್ಸ್ ರೋಗ ಬಂದರೆ ದೇಹದ ಮೇಲೆ ಬೀರುವ ಪ್ರಭಾವವೇನು?
ಒಬ್ಬ ವ್ಯಕ್ತಿಯು ಹೆಚ್‌ಐವಿ ಸೋಂಕಿಗೆ ಒಳಗಾದರೆ ಜೀವ ಕೋಶಗಳ ಮೇಲೆ ದಾಳಿ ಮಾಡುತ್ತದೆ. ಹೀಗಾಗಿ ಏಡ್ಸ್ ರೋಗಿಗಳು ಇತರ ಕಾಯಿಲೆಗಳಿಗೆ ಬಹುಬೇಗನೆ ತುತ್ತಾಗುತ್ತಾನೆ. ಏಡ್ಸ್ ರೋಗಕ್ಕೆ ಒಳಗಾದ ವ್ಯಕ್ತಿ ಚಿಕಿತ್ಸೆ ಜೊತೆಗೆ ಆರೋಗ್ಯಕರ ಜೀವನಶೈಲಿ ಪಾಲಿಸಿ ಏಡ್ಸ್ ಬಂದ ಬಳಿಕ ಕೂಡ 15-20 ವರ್ಷ ಚೆನ್ನಾಗಿ ಬದುಕಿರುವ ಉದಾಹರಣೆಗಳೂ ಇವೆ.
ಏಡ್ಸ್ ರೋಗದ ಲಕ್ಷಣಗಳೇನು?
ಸೋಂಕಿತ ವ್ಯಕ್ತಿಯ ರೋಗಲಕ್ಷಣಗಳು ಒಬ್ಬರಿಂದ ಇನ್ನೊಬ್ಬರಿಗೆ ವಿಭಿನ್ನವಾಗಿರುತ್ತವೆ ಮತ್ತು ವೈರಲ್ ಸೋಂಕಿನ ಹಂತವನ್ನು ಅದು ಅವಲಂಬಿಸಿರುತ್ತದೆ.
ವ್ಯಕ್ತಿಯು ಒಮ್ಮೆ ಸೋಂಕಿಗೆ ಒಳಗಾದ್ರೆ ಎರಡರಿಂದ ಮೂರು ವಾರದೊಳಗೆ ರಾತ್ರಿ ಬೆವರುವಿಕೆ, ಸ್ನಾಯು ನೋವು, ಗಂಟಲು ನೋವು,ಜ್ವರ, ಶೀತ, ದದ್ದು, ಆಯಾಸ, ಸ್ನಾಯು ನೋವುಗಳು, ಊದಿಕೊಂಡ ದುಗ್ಧರಸ ಗ್ರಂಥಿಗಳು ಮತ್ತು ಬಾಯಿ ಹುಣ್ಣು ಈ ಬಗೆಯ ಸಮಸ್ಯೆಯಿಂದ ಬಳಲಬಹುದು.
ಏಡ್ಸ್ ತಡೆಗಟ್ಟಲು ಏನು ಮಾಡಬೇಕು?
ಅಸುರಕ್ಷಿತ ಲೈಂಗಿಕತೆಯಿಂದ ದೂರವಿರಬೇಕು
ಏಡ್ಸ್ ಅಪಾಯವನ್ನು ತಡೆಗಟ್ಟಲು ಕಾಂಡೋಮ್ ಬಳಕೆ ಒಳ್ಳೆಯದು
ಒಬ್ಬರಿಗೆ ಬಳಸಿದ ಸೂಜಿಯನ್ನು ಮತ್ತೊಬ್ಬರಿಗೆ ಬಳಸಬಾರದು
ಒಂದು ವೇಳೆ ಗರ್ಭಿಣಿಯು ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದರೆ, ವೈದ್ಯರು ಆಕೆಗೆ ಹೆಚ್‌ಐ ಔಷಧವನ್ನು ಶಿಫಾರಸ್ಸು ಮಾಡುತ್ತಾರೆ , ಇದರಿಂದ ನವಜಾತ ಶಿಶುವಿಗೆ ಹೆಚ್‌ಐವಿ ಹರಡುವುದನ್ನು ತಡೆಗಟ್ಟಬಹುದು, ಆದರೆ ಸಂಪೂರ್ಣವಾಗಿ ಬರುವುದೇ ಇಲ್ಲ ಎಂದು ಹೇಳಲಾಗುವುದಿಲ್ಲ, ಶೆ.1ರಷ್ಟು ಸಾಧ್ಯತೆ ಕೂಡ ಇದೆ.
ಏಡ್ಸ್ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹಾಗೂ ಸತ್ಯಾಂಶಗಳ ಬಗ್ಗೆ ಡಾ. ಶ್ರೀಧರ್ ಶ್ರೀನಿವಾಸನ್,ವೈದ್ಯಕೀಯ ತಜ್ಞರು,ವಾಸವಿ ಆಸ್ಪತ್ರೆ, ಬೆಂಗಳೂರು ವಿವರಿಸಿದ್ದಾರೆ ನೋಡಿ:
ತಪ್ಪುಕಲ್ಪನೆ 1- ಏಡ್ಸ್ ರೋಗಿಯನ್ನು ಮುಟ್ಟಿದರೆ ಏಡ್ಸ್ ಹರಡುವುದು
ಸತ್ಯಾಂಶ - ಹೆಚ್‌ಐವಿ ಸೋಂಕು ನೇರ ಸಂಪರ್ಕದಿಂದ ಹರಡುವಂತದ್ದಲ್ಲ. ದೇಹದಲ್ಲಿನ ರಕ್ತ, ವೀರ್ಯ, ಯೋನಿ ದ್ರವ ಅಥವಾ ಎದೆ ಹಾಲಿನಂತಹ ದೇಹದ ದ್ರವಗಳ ವಿನಿಮಯದ ಮೂಲಕ ಹರಡುತ್ತದೆ.
ತಪ್ಪುಕಲ್ಪನೆ 2: ಸೊಳ್ಳೆಗಳಿಂದಲೂ ಹೆಚ್‌ಐವಿ ಸೋಂಕು ಹರಡಬಹುದು
ಸತ್ಯಾಂಶ: ವಾಹಕಗಳ ಮೂಲಕ ಈ ಸೋಂಕು ಹರಡುವಂತದ್ದಲ್ಲ. ಈ ವೈರಸ್ ಕೀಟಗಳಲ್ಲಿ ಉಳಿಯಲು ಸಾಧ್ಯವಿಲ್ಲ, ಹಾಗಾಗಿ ಸೊಳ್ಳೆಗಳು ಈ ವೈರಸ್ ಅನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡಲು ಸಾಧ್ಯವಿಲ್ಲ.
ತಪ್ಪುಕಲ್ಪನೆ 3: ಏಡ್ಸ್ ರೋಗಿಯನ್ನು ನೋಡಿದ ತಕ್ಷಣ ಗೊತ್ತಾಗುವುದೇ?
ಸತ್ಯಾಂಶ: ಇಲ್ಲ, ವ್ಯಕ್ತಿಯನ್ನು ನೋಡಿದ ಕೂಡಲೇ ಸೋಂಕು ಇದೆ ಎಂದು ಹೇಳಲು ಆಗುವುದಿಲ್ಲ. ನಿಯಮಿತ ಪರೀಕ್ಷೆಗಳಿಂದ ಮಾತ್ರ ವೈರಲ್ ಸೋಂಕಿನ ಲಕ್ಷಣಗಳನ್ನು ಗುರುತಿಸಲು ಸಾಧ್ಯ.
ತಪ್ಪುಕಲ್ಪನೆ 4: ಕೆಲವು ವರ್ಗದವರು ಮಾತ್ರ ಈ ಸೋಂಕಿಗೆ ತುತ್ತಾಗುತ್ತಿದ್ದಾರೆ
ಸತ್ಯಾಂಶ: ಯಾವುದೇ ವರ್ಗ, ಲಿಂಗ, ಲೈಂಗಿಕ ದೃಷ್ಠಿಕೋನವಿಲ್ಲದೆ ಜನರು ಹೆಚ್‌ಐವಿ ಸೋಂಕಿಗೆ ಒಳಗಾಗುತ್ತಿದ್ದಾರೆ.
ಎಚ್ಐವಿ ತಡೆಗಟ್ಟುವಿಕೆಗೆ ಏನು ಮಾಡಬೇಕು ?
ಕಾಂಡೋಮ್‌ಗಳ ಬಳಕೆ
ಹೆಚ್‌ಐವಿ ವೈರಲ್ ಸೋಂಕಿಗೆ ಒಳಗಾಗುವುದನ್ನು ತಡೆಗಟ್ಟಲು ಎಚ್ಐವಿ ಇಲ್ಲದ ವ್ಯಕ್ತಿಗಳು ಪ್ರಿ-ಎಕ್ಸ್ಪೋಸರ್ ಪ್ರೊಫಿಲ್ಯಾಕ್ಸಿಸ್ (PrEP) ಔಷಧಿಯನ್ನು ಪರಿಗಣಿಸಿ.
ನಿಯಮಿತ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications