Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುರುಷರಿಗಿಂತ ಮಹಿಳೆಯರಿಗೆ ಬೇಕು ಹೆಚ್ಚು ನಿದ್ರೆ.! ಏಕೆ ಗೊತ್ತಾ?
ನಿದ್ರೆ ಯಾರಿಗೆ ಬೇಡ ಹೇಳಿ ಒಂದು ಐದು ನಿಮಿಷ ಮಲಗಿ ಏಳುವವರಿಂದ ಹಿಡಿಡು ಕುಂಭಕರ್ಣನಂತೆ ಮಲಗುವವರೂ ಇದ್ದಾರೆ. ಅದರಲ್ಲೂ ಬೆಳಗ್ಗೆ ಬೇಗ ಏಳುವವರಿಂದ ಹಿಡಿದು ಮಧ್ಯಾಹ್ನದ ವರೆಗೂ ಮಲಗುವವರಿದ್ದಾರೆ. ಆದ್ರೆ ಎಷ್ಟು ಗಂಟೆ ಮಲಗಬೇಕು, ಎಷ್ಟು ಗಂಟೆಯ ನಿದ್ರೆ ಆರೋಗ್ಯಕ್ಕೆ ಉತ್ತಮ, ನಿದ್ರಾಹೀನತೆ ಏಕೆ ಸಂಭವಿಸುತ್ತೆ, ಯಾರು ಹೆಚ್ಚು ನಿದ್ರೆ ಮಾಡಬೇಕು ಎಂಬ ಪ್ರಶ್ನೆಗಳು ಇಂದಿಗೂ ಚರ್ಚೆಯಾಗುತ್ತಿವೆ.
ಆದರೆ ಪುರುಷರು ಹೆಚ್ಚು ನಿದ್ರೆ ಮಾಡಬೇಕೋ ಅಥವಾ ಮಹಿಳೆಯರು ಹೆಚ್ಚು ನಿದ್ರೆ ಮಾಡಬೇಕೋ ಎಂಬುದು ಇಂದಿಗೂ ಚರ್ಚೆಯಾಗುತ್ತಿದೆ. ಪುರುಷರಗಿಂತಲೂ ಮಹಿಳೆಯರ ಮೆದುಳು ಹೆಚ್ಚು ಕೆಲಸ ಮಾಡುತ್ತಂತೆ. ಅಧ್ಯಯನಗಳ ಪ್ರಕಾರ ಸ್ತ್ರೀಯರ ಮೆದುಳು ಬಹುಕಾರ್ಯಗಳ ಮಾಡುವ ಸಂಕೀರ್ಣ ವ್ಯವಸ್ಥೆಯಂತೆ. ಹೀಗಾಗಿ ಅವರಿಗೆ ವಿಶ್ರಾಂತಿಯ ಅಗತ್ಯಕ್ಕಿಂತ ನಿದ್ರೆಯ ಅಗತ್ಯ ಹೆಚ್ಚಾಗಿರುತ್ತದೆ ಎಂದಿದೆ.

2020 ರಲ್ಲಿ ಸ್ಲೀಪ್ ಫೌಂಡೇಶನ್ ವರದಿ ಮಾಡಿದಂತೆ ಮಹಿಳೆಯರು ಪುರುಷರಿಗಿಂತ ನಿದ್ರಾಹೀನತೆಯಿಂದ ಬಳಲುತ್ತಿರುವ ಸಾಧ್ಯತೆ 40% ಹೆಚ್ಚು ಎಂದು ತಿಳಿಸಿದೆ. ಹೀಗಾಗಿ ಪುರುಷರಗಿಂತ ಹೆಚ್ಚು ನಿದ್ರೆಯ ಅವಶ್ಯಕತೆ ಮಹಿಳೆಯರಿಗಿದೆಯಂತೆ. ಆದರೆ ಅವರು ಮನೆಯಲ್ಲಿ ಕಡಿಮೆ ನಿದ್ರೆ ಮಾಡುವುದು ಸಹ ಮಹಿಳೆಯರೇ ಆಗಿರುತ್ತಾರೆ.
ಹಾಗಾದ್ರೆ ಮಹಿಳೆಯರು ನಿದ್ರಾಹೀನತೆಯಿಂದ ಬಳಲುತ್ತಿರುವುದೇಕೆ? ನಿದ್ರಾಹೀನತೆಯಿಂದ ಅವರ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂದು ತಿಳಿದಿದ್ಯಾ?
ಹೆಚ್ಚಿದ ದುರ್ಬಲತೆ: ನಿದ್ರೆಯ ಅಭಾವವದಿಂದಾಗಿ ಹೃದಯರಕ್ತನಾಳದ ಕಾಯಿಲೆ ಮತ್ತು ಮನಸ್ಥಿತಿ ಅಸ್ವಸ್ಥತೆಗಳಂತಹ ಪರಿಸ್ಥಿತಿಗಳನ್ನು ಪ್ರಚೋದಿಸಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಆತಂಕ-ಖಿನ್ನತೆ ಸಂಪರ್ಕ: ಮಹಿಳೆಯರು ಆತಂಕ ಮತ್ತು ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಅಂಕಿ ಅಂಶಗಳು ತೋರಿಸುತ್ತದೆ, ನಿದ್ರೆಯ ಸಮಸ್ಯೆಗಳೊಂದಿಗೆ ಅವರು ಖಿನ್ನತೆಯತ್ತ ಸಾಗುವ ನಿದರ್ಶನಗಳ ಸಂಖ್ಯೆ ಅಧಿಕವಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಹಾರ್ಮೋನ್ ಅಡಚಣೆಗಳು: ಋತುಚಕ್ರ, ಗರ್ಭಾವಸ್ಥೆ ಮತ್ತು ಋತುಬಂಧವು ಹಾರ್ಮೋನುಗಳ ಏರಿಳಿತಗಳಿಂದ ಮಹಿಳೆಯರಲ್ಲಿ ನಿದ್ರೆಯ ಮಾದರಿಯನ್ನು ಅಡ್ಡಿಪಡಿಸುತ್ತದೆ.
ಪುರುಷರು ಸಾಮಾನ್ಯವಾಗಿ ಹೆಚ್ಚು ಸ್ಥಿರವಾದ ಹಾರ್ಮೋನ್ ಮಟ್ಟವನ್ನು ಹೊಂದಿರುತ್ತಾರೆ, ಆದರೆ ಅವರು ಒತ್ತಡ, ನಿದ್ರೆಯ ಅಸ್ವಸ್ಥತೆಗಳು ಮತ್ತು ಜೀವನಶೈಲಿಯ ಆಯ್ಕೆಗಳಿಂದ ಉಂಟಾಗುವ ನಿದ್ರೆಯ ಸಮಸ್ಯೆಗಳನ್ನು ಅನುಭವಿಸಬಹುದು.
ವಯಸ್ಸು ಮತ್ತು ನಿದ್ರೆಯ ಮೇಲೆ ಅದರ ಪ್ರಭಾವ
ನಮ್ಮ ವಯಸ್ಸು ಮತ್ತು ನಿದ್ರೆಯ ಸಮಯ ಸಹ ಈ ಅಂಶಗಳ ಮೇಲೆ ಪ್ರಭಾವ ಉಂಟುಮಾಡುತ್ತದೆ. ನಿದ್ರೆಯ ಗುಣಮಟ್ಟ ಮತ್ತು ಹಾರ್ಮೋನ್ ಮಟ್ಟವನ್ನು ಪರಿಣಾಮ ಬೀರುತ್ತದೆ. ಹೇಗಾದರೂ, ಪರಿಣಾಮವು ಮಹಿಳೆಯರಲ್ಲಿ ಹೆಚ್ಚಾಗಿರುತ್ತದೆ, ಪುರುಷರಿಗೆ ಹೋಲಿಸಿದರೆ ಮಹಿಳೆಯರು ಋತುಬಂಧದ ಸಮಯದಲ್ಲಿ ಹೆಚ್ಚಿನ ನಿದ್ರಾ ಭಂಗವನ್ನು ಅನುಭವಿಸಬಹುದು, ಅವರು ವಯಸ್ಸಾದಂತೆ ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಸಂಬಂಧಿಸಿದ ಬದಲಾವಣೆಗಳನ್ನು ನೋಡಬಹುದು.
ಋತುಚಕ್ರದ ವೇಳೆ ಆಗುವಂತಹ ನಿದ್ರಾಹೀನತೆಯನ್ನು ನಿವಾರಣೆ ಮಾಡಲು ಸರಿಯಾದ ಆಹಾರ ಕ್ರಮ ಮತ್ತು ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಋತುಚಕ್ರದ ವೇಳೆ ನಿದ್ರಾಹೀನತೆಯನ್ನು ನಿವಾರಿಸಲು ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಂಡು ಹೋಗಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಇರುವಾಗ ಆರೋಗ್ಯದಲ್ಲಿ ಉಂಟಾಗುವ ಅನೇಕ ಬದಲಾವಣೆಯನ್ನು ಮಹಿಳೆ ಸೂಕ್ತ ರೀತಿಯಲ್ಲಿ ಎದುರಿಸಬೇಕಾಗುತ್ತದೆ. ಆ ಸಮಯದಲ್ಲಿ ನಿದ್ರೆ ಅತ್ಯವಶ್ಯಕವಾಗಿದ್ದರೂ ನಿದ್ರೆ ಮಾಡಲು ಸಾಧ್ಯವಾಗದು.
ಸರಿಯಾಗಿ ನಿದ್ರೆ ಬಾರದಿದ್ದರೆ ಈ ಕೆಳಗಿನ ಮನೆ ಮದ್ದು ಬಳಸಿ ನೋಡಿ.
ಬೆಂಜೋಯಿನ್ ಎಣ್ಣೆ: ಇದನ್ನು ಹಚ್ಚಿದಾಗ ವಿಶ್ರಾಂತಿ ದೊರೆಯುವುದು. ಟೆನ್ಷ್ಯನ್, ಚಿಂತೆ, ಮಾನಸಿಕ ಒತ್ತಡದ ಕಾರಣಗಳಿಂದ ನಿದ್ದೆ ಬರದಿದ್ದರೆ ಇದನ್ನು ಹಚ್ಚಿದರೆ ಸಾಕು ಎಲ್ಲಾ ಸಮಸ್ಯೆಗಳಿಂದ ಮನಸ್ಸು ನಿರರ್ಗಳವಾಗುವುದು ಮತ್ತು ಸುಖವಾದ ನಿದ್ದೆ ಬರುತ್ತದೆ.
ಜಾಸ್ಮಿನ್ ಎಣ್ಣೆ: ಖಿನ್ನತೆ ಅಥವಾ ಉಸಿರಾಟದ ತೊಂದರೆಗಳಿಂದ ನಿದ್ದೆ ಬರದಿದ್ದರೆ ಮಲುಗುವ ಮುಂಚೆ ಜಾಸ್ಮಿನ್ ಎಣ್ಣೆ ಹಚ್ಚಿದರೆ ಸಾಕು. ಅದರ ಸುವಾಸನೆಗೆ ಮನಸ್ಸಿಗೆ ವಿಶ್ರಾಂತಿ ಸಿಕ್ಕಿದಂತೆ ಭಾಸವಾಗುವುದರಿಂದ ಚೆನ್ನಾಗಿ ಬರುತ್ತದೆ.
ಲ್ಯಾವೆಂಡರ್ ಎಣ್ಣೆ: ನೋವು ನಿವಾರಣೆಯಲ್ಲಿ ಈ ಎಣ್ಣೆ ತುಂಬಾ ಪರಿಣಾಮಕಾರಿಯಾಗಿದೆ. ತಲೆನೋವಿನಿಂದ ನಿದ್ದೆ ಬರದಿದ್ದರೆ ಈ ಎಣ್ಣೆ ಬಳಸಿದರೆ ಸಾಕು, ತಲೆನೋವು ಕಡಿಮೆಯಾಗಿ ನಿದ್ದೆ ತಕ್ಷಣ ಬರುತ್ತದೆ.
ಯೋಗ: ನಿದ್ದೆ ಸಮಸ್ಯೆ ಹೋಗಲಾಡಿಸುವಲ್ಲಿ ಯೋಗ ತುಂಬಾ ಪರಿಣಾಮಕಾರಿಯಾದ ವಿಧಾನವಾಗಿದೆ. ಯೋಗದಲ್ಲಿ ಅಂಗಾತ ಮಲಗಿಕೊಂಡು 20 ನಿಮಿಷ ಕಾಲವಿದ್ದರೆ ಒತ್ತಡಗಳು ಕಡಿಮೆಯಾಗುತ್ತದೆ. ಈ ರೀತಿ ಯೋಗಾಭ್ಯಾಸದಿಂದ ದೇಹದ ಪ್ರತಿಯೊಂದು ಭಾಗಕ್ಕೆ ವಿಶ್ರಾಂತಿ ದೊರೆಯುವುದರಿಂದ ನಿದ್ರಾ ಹೀನತೆ ಸಮಸ್ಯೆ ನಿವಾರಣೆಯಾಗುವುದು.
ಗಿಡಮೂಲಿಕೆಗಳು: ಲ್ಯಾವೆಂಡರ್ ಟೀ ಮಾಡಿ ಕುಡಿಯುವುದರಿಂದ ಕೂಡ ನಿದ್ದೆ ಬರದಿರುವ ಸಮಸ್ಯೆಯನ್ನು ಹೋಗಲಾಡಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications