Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮಹಿಳೆಯರೇ, ನಿಮ್ಮ ಅಂಡರ್‌ವೇರ್‌ನಲ್ಲಿ ಕಂಡು ಬರುವ ಈ 3 ಬದಲಾಣೆಯೇ ಸಾಕು ನಿಮ್ಮ ಆರೋಗ್ಯದ ಬಗ್ಗೆ ತಿಳಿಯಲು
ಜನನೇಂದ್ರೀಯದ ಆರೋಗ್ಯ ಬರೀ ಲೈಂಗಿಕ ಆರೋಗ್ಯವನ್ನು ಸೂಚಿಸುವುದ್ದಲ್ಲ ಅದು ಮಹಿಳೆಯರ ಒಟ್ಟು ಆರೋಗ್ಯ ಸೂಚಿಸುತ್ತದೆ. ಧರಿಸುವ ಅಂಡರ್‌ವೇರ್‌ನಲ್ಲಾಗುವ ಬದಲಾವಣೆ ನೋಡಿದರೆ ದೇಹದಲ್ಲಿ ಏನ ಬದಲಾವಣೆಯಾಗಿದೆ ಎಂಬ ಸೂಚನೆ ಸಿಗುತ್ತದೆ. ಸ್ವಲ್ಪ ಬಿಳುಪು ಹೋಗುವುದು ಸಹಜ, ಆದರೆ ಬಿಳುಪು ಹೋಗುವುದರಲ್ಲಿ ವ್ಯತ್ಯಾಸ ಕಂಡು ಬಂದಾಗ ಅಥವಾ ಋತುಚಕ್ರದ ರಕ್ತಸ್ರಾವದಲ್ಲಿ ವ್ಯತ್ಯಾಸ ಕಂಡು ಬಂದಾಗ ಅದು ನಮ್ಮ ದೇಹದ ಆರೋಗ್ಯವನ್ನು ಸೂಚಿಸುತ್ತದೆ.

ಜನನೇಂದ್ರೀಯದ ಬಗ್ಗೆ ಹೇಳುವುದಾದರೆ
ಜನನೇಂದ್ರೀಯ pH ಸಮತೋಲನದಲ್ಲಿರಬೇಕು. ಜನನೇಂದ್ರೀಯವನ್ನು ನೀರು ಹಾಕಿ ಸ್ವಚ್ಛಗೊಳಿಸಿದರೆ ಸಾಕು. ಯಾವುದೇ ಸೋಪು ಅಥವಾ ಲಿಕ್ವಿಡ್ ಬಳಸಬೇಡಿ. ಜನನೇಂದ್ರೀಯದಲ್ಲಿರುವ ಒಳ್ಳೆಯ ಬ್ಯಾಕ್ಟಿರಿಯಾಗಳು ಜನನೇಂದ್ರೀಯದ ಆರೋಗ್ಯ ಕಾಪಾಡುವ ಕಾರ್ಯವನ್ನು ಮಾಡುತ್ತದೆ. ಸೋಪು ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಇತರ ಪ್ರಾಡಕ್ಟ್ ಬಳಸಿ ಆ ಭಾಗವನ್ನು ಸ್ವಚ್ಛಗೊಳಿಸುವುದರಿಂದ ಆರೋಗ್ಯಕರ ಬ್ಯಾಕ್ಟಿರಿಯಾಗಳು ನಾಶವಾಗಿ ಸಮಸ್ಯೆ ಹೆಚ್ಚಬಹುದು.
ಏನಾದರೂ ಸಮಸ್ಯೆವಿದ್ದಾಗ ವೈದ್ಯರು ನಿಮಗೆ ಸಲಹೆ ನೀಡುತ್ತಾರೆ. ನೀವಾಗಿ ಸೋಪು ಹಚ್ಚುವುದು, ಇತರ ಪ್ರಾಡೆಕ್ಟ್ ಬಳಸುವುದು ಮಾಡಬೇಡಿ. ಪ್ರತಿಯೊಬ್ಬ ಮಹಿಳೆ ತನ್ನ ಅಂಡರ್‌ವೇರ್‌ನಲ್ಲಿ ಕೆಲವೊಂದು ಬದಲಾವಣೆ ಕಾಣುತ್ತಾಳೆ. ಅದು ಬಿಳುಪು ಇರಬಹುದು ಅಥವಾ ಇತರ ಅಂಶಗಳಿರಬಹುದು. ಈ ಮೂರು ಅಂಶಗಳ ಬಗ್ಗೆ ತಿಳಿದುಕೊಂಡರೆ ನಿಮ್ಮ ಆರೋಗ್ಯದ ಬಗ್ಗೆ ಮತ್ತಷ್ಟು ತಿಳಿಯಲು ಸಹಕಾರಿಯಾಗುವುದು.
1. ಬಿಳುಪು ಹೋಗುವುದು
ಋತುಚಕ್ರದ ಅವಧಿ ಪ್ರಾರಂಭವಾಗಿ ಮೆನೋಪಾಸ್ ಹಂತ ತಲುಪುವವರೆಗೂ ಬಿಳುಪು ಹೋಗುವುದು ಸಹಜ ಪ್ರಕ್ರಿಯೆ. ಬಿಳುಪು ಹೋಗುವುದರಲ್ಲೂ ಹಲವು ವಿಧಗಳಿವೆ, ಅವುಗಳೆಂದರೆ
* ಮೊಟ್ಟೆಯ ಬಿಳಿಯಂತೆ ಬಿಳುಪು ಹೋಗುವುದು: ಇದು ಓವ್ಯೂಲೇಷನ್ ಅಂದರೆ ಅಂಡೋತ್ಪತ್ತಿ ಸಮಯದಲ್ಲಿ ಕಂಡು ಬರುತ್ತದೆ. ಈ ಸಮಯದಲ್ಲಿ ಮಿಲನ ಕ್ರಿಯೆ ನಡೆದರೆ ವೀರ್ಯಾಣು ಅಂಡಾಣು ಜೊತೆ ಸೇರಿ ಗರ್ಭಧಾರಣೆಯಾಗುವುದು.
ಹಾಲಿನ ಕೆನೆಯಂತೆ ಬಿಳುಪು ಹೋಗುವುದು: ಮೊಟ್ಟೆಯ ಬಿಳಿಯಂತೆ ಬಿಳುಪು ಹೋಗುವ ಮುನ್ನ ಹಾಲಿನ ಕೆನೆಯಂತೆ ಬಿಳುಪು ಹೋಗುವುದು, ಇದು ಜನನೇಂದ್ರೀಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಈ ಬಗೆಯ ಬಿಳುಪು ಹೋಗುವುದು ತುಂಬಾನೇ ಸಹಜ.
ಕಂದು ಅಥವಾ ರಕ್ತದ ಬಣ್ಣದಲ್ಲಿ ಬಿಳುಪು ಹೋಗುವುದು:
ಈ ಬಗೆಯಲ್ಲಿ ಬಿಳುಪು ಹೋಗುವುದು ಮುಟ್ಟಿನ ಸಮಯದಲ್ಲಿ ಸಹಜ. ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರಲ್ಲಿ ಕೂಡ ಈ ರೀತಿ ಕಂಡು ಬರುವುದು.
ಹಳದಿ ಅಥವಾ ನಿಯೋನ್ ಬಣ್ಣದಲ್ಲಿ ಬಿಳುಪು ಹೋಗುವುದು: ಈ ರೀತಿ ಕಂಡು ಬಂದರೆ ಏನಾದರೂ ಸೊಂಕು ತಗುಲಿದೆ ಎಂಬುವುದರ ಸೂಚನೆಯಾಗಿದೆ. ಈ ರೀತಿಯಾದಾಗ ಆ ಬಿಳುಪು ತುಂಬಾ ದುರ್ವಾಸನೆ ಹೊಂದಿರುತ್ತದೆ ಅದರ ಜೊತೆಗೆ ಆ ಭಾಗದಲ್ಲಿ ತುರಿಕೆ, ಮೂತ್ರ ಮಾಡುವಾಗ ಉರಿ ಈ ರೀತಿಯ ಸಮಸ್ಯೆ ಕಂಡು ಬರುವುದು.
ಪಿಂಕ್ ಬಣ್ಣದಲ್ಲಿ ಬಿಳುಪು ಹೋಗುವುದು: ಮುಟ್ಟಾಗುವ ಸ್ವಲ್ಪ ಮುಂಚೆ ಅಥವಾ ಮುಟ್ಟಾಗಿ 4 ದಿನಗಳು ಕಳೆದ ಮೇಲೆ ಕಂಡು ಬರುವುದು. ಅದಲ್ಲದೆ ಉಳಿದ ಸಮಸಯದಲ್ಲಿ ಕಂಡು ಬರುವುದಾದರೆ ಗರ್ಭಕೋಶದಲ್ಲಿ ಏನಾದರೂ ಸಮಸ್ಯೆವಿರಬಹುದು, ವೈದ್ಯರಿಗೆ ತೋರಿಸಿ.
ಬೂದು ಬಣ್ಣದಲ್ಲಿ ಬಿಳುಪು ಹೋಗುವುದು: ಬ್ಯಾಕ್ಟಿರಿಯಾ ಸೋಂಕು ಉಂಟಾದಾಗ ಈ ರೀತಿ ಕಂಡು ಬರುವುದು.
2. ರಕ್ತ ಕಲೆ
ಮುಟ್ಟಿನ ಸಮಯದಲ್ಲಿ ರಕ್ತ ಕಲೆ ಕಂಡು ಬರುವುದು ಸಹಜ. ಕೆಲವರಿಗೆ ಗರ್ಭಾವಸ್ಥೆಯಲ್ಲೂ ಈ ರೀತಿ ಕಂಡು ಬರುವುದು. ಗರ್ಭನಿರೋಧಕ ಮಾತ್ರೆ ತೆಗೆದುಕೊಂಡಾಗ ಅಥವಾ ಮೆನೋಪಾಸ್ ಹಂತದಲ್ಲಿ ಅಥವಾ ಲೈಂಗಿಕ ಸೋಂಕು ಉಂಟಾದಾಗ ಕೂಡ ಈ ರೀತಿ ಕಂಡು ಬರುವುದು. ಮುಟ್ಟಿನ ಸಮಯದಲ್ಲಿ ಹೊರತು ಪಡಿಸಿ ಇತರ ಸಮಯದಲ್ಲಿ ಈ ರೀತಿ ಕಂಡು ಬರುತ್ತಿದ್ದರೆ ನೀವು ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.
3.ಅಂಡರ್‌ವೇರ್ ಒದ್ದೆಯಾಗುವುದು
ಜನನೇಂದ್ರೀಯ ಅದಷ್ಟಕ್ಕೇ ಸ್ವಚ್ಛವಾಗುವುದು ಆದ್ದರಿಂದ ಆ ಭಾಗದಲ್ಲಿ ತೇವಾಂಶ ಸಹಜ, ಬೇಸಿಗೆಯಲ್ಲಿ ತುಸು ಅಧಿಕವಿರುವುದು. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಅದಲ್ಲದೆ ಲೈಂಗಿಕ ಆಸಕ್ತಿ ಉಂಟಾದಾಗ ಕೂಡ ಒದ್ದೆಯ ಅನುಭವ ಉಂಟಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












