Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಲಗಿದ್ದಾಗ ಶಾಪಿಂಗ್ ಮಾಡುವ ವಿಚಿತ್ರ ಕಾಯಿಲೆ..! ಸಾಲದ ಸುಳಿಗೆ ಸಿಲುಕಿದ ಮಹಿಳೆ..!
ಶಾಪಿಂಗ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ಅದ್ರಲ್ಲೂ ಮಹಿಳೆಯರಿಗಂತು ಶಾಪಿಂಗ್ ಅಂದರೆ ಪಂಚ ಪ್ರಾಣ. ಬೇಕಾದ್ರೆ ಇಡೀ ದಿನ ಶಾಪಿಂಗ್ ಮಾಡಲು ಅವರು ಸಿದ್ಧರಿರುತ್ತಾರೆ. ಎಲ್ಲಿ ಬೇಕಾದರು, ಎಷ್ಟು ದೂರವಾದರು ತೆರಳಿ ಶಾಪಿಂಗ್ ಮಾಡುತ್ತಾರೆ. ಮಹಿಳೆಯರಿಗೆ ಶಾಪಿಂಗ್ ಅಂದರೆ ಬೇಜಾರಾಗುವುದೇ ಇಲ್ಲ.
ಆದ್ರೆ ಇಲ್ಲೊಬ್ಬ ಮಹಿಳೆಗೆ ಈ ಶಾಪಿಂಗ್ ಶಾಪವಾಗಿ ಪರಿಣಮಿಸಿದೆ. ಬರೀ ಶಾಪವಲ್ಲ ಆಕೆಯನ್ನ ಸಾಲದ ಸುಳಿಗೆ ನೂಕಿದೆ. ಆಕೆಗೆ ಜಗತ್ತಿನಲ್ಲೇ ಯಾರಿಗೂ ಇಲ್ಲದ ಕಾಯಿಲೆಯೊಂದು ಕಾಡುತ್ತಿದೆ. ಅದೇನೆಂದರೆ ಆಕೆ ಮಲಗಿದ್ದಾಗ ಆನ್‌ಲೈನ್ ಶಾಪಿಂಗ್ ಮಾಡುತ್ತಾಳೆ. ಹೌದು ನಾವು ಎಚ್ಚರವಾಗಿದ್ದಾಗ ಆಫ್‌ಲೈನ್, ಆನ್‌ಲೈನ್ ಶಾಪಿಂಗ್ ಮಾಡಿದರೆ ಇಲ್ಲೊಬ್ಬ ಮಹಿಳೆ ಮಲಗಿದ್ದಾಗ ಶಾಪಿಂಗ್ ಮಾಡುತ್ತಾಳೆ.

ಇದನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು, ಈ ರೀತಿಯ ಘಟನೆಯೊಂದು ನಡೆದಿರುವುದು ಈಗ ಅಚ್ಚರಿಗೆ ಕಾರಣವಾಗಿದೆ. ಇಂಗ್ಲೆಂಡ್ ಎಸೆಕ್ಸ್‌ನ 42 ವರ್ಷದ ಕೆಲ್ಲಿ ನೈಪ್ಸ್ ಎಂಬಾಕೆ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದು ಆಕೆ ಮಲಗಿದ್ದಾಗ ಶಾಪಿಂಗ್ ಮಾಡುತ್ತಾಳೆ. ನಿದ್ರೆಯಲ್ಲಿ ಶಾಪಿಂಗ್ ಮಾಡಿ ಈಗ ಸಾಲದ ಸುಳಿಗೆ ಸಿಲುಕಿದ್ದಾಳೆ. ಆಕೆ ನಿದ್ರೆಯಲ್ಲಿ ಆನ್‌ಲೈನ್ ಶಾಪಿಂಗ್ ಕನಸು ಕಂಡು ಆರ್‌ಇಎಂ (Rappid Eye Movement) ಪ್ರಕ್ರಿಯೆಯಲ್ಲಿ ತನ್ನ ಕಾರ್ಡ್‌ಗಳ ಬಳಸಿ ಆರ್ಡರ್ ಮಾಡುತ್ತಾಳೆ ಎಂದು ತಿಳಿದುಬಂದಿದೆ.
ಆಕೆಗೆ 2018 ರಲ್ಲಿ ಅಪರೂಪದ ನಿದ್ರೆಯ ಅಸ್ವಸ್ಥತೆಯಾದ ಪ್ಯಾರಾಸೋಮ್ನಿಯಾ ರೋಗನಿರ್ಣಯ ಮಾಡಲಾಯಿತು. ಅದು ಅವಳ ನಿದ್ರೆಯಲ್ಲಿ ಉಸಿರುಕಟ್ಟುವಿಕೆಯ ಕಾಯಿಲೆಗೂ ಒಳಗಾಗಿದ್ದಾಳೆ. ಪ್ಯಾರಾಸೋಮ್ನಿಯಾಸ್ ಹೊಂದಿರುವ ವ್ಯಕ್ತಿಯು ಎಚ್ಚರವಾಗಿರುವಂತೆ ತೋರಬಹುದು, ನಡೆಯುವುದು ಅಥವಾ ಮಾತನಾಡುವುದು, ಅಥವಾ ತಿನ್ನುವುದು ಅಥವಾ ಇತರ ಚಟುವಟಿಕೆಗಳನ್ನು ಮಾಡುವುದು ಆದರೆ ಮೆದುಳು ಭಾಗಶಃ ಮಾತ್ರ ಎಚ್ಚರವಾಗಿರುವ ಕಾರಣ ಇದು ಅವರ ಅರಿವಿಲ್ಲದೆ ನಡೆಯುತ್ತದೆ. ಸರಳವಾಗಿ ಹೇಳಬೇಕೆಂದರೆ ಮದ್ಯಪಾನ ಮಾಡಿದ ವ್ಯಕ್ತಿ ಒಂದು ನಿದ್ರೆಯ ಬಳಿಕ ಎಲ್ಲವನ್ನೂ ಮರೆತು ಹೋಗುವುದು, ಆದ್ರೆ ನಿದ್ರೆಗೂ ಮುನ್ನ ಅವರು ಮಾಡುತ್ತಿರುವ ಕೆಲಸದ ಮೇಲೆ ಅವರ ಹಿಡಿತವೇ ಇಲ್ಲದಿರುವುದು.
ಹಲವು ವರ್ಷದಲ್ಲಿ ಆಕೆ ಎಚ್ಚರಗೊಂಡಾಗ ಆಕೆಯ ಡೆಬಿಡ್ ಕಾರ್ಟ್ ಕ್ರೆಡಿಟ್ ಕಾರ್ಡ್‌ನಿಂದ ಹಣ ಕಡಿತಗೊಂಡಿರುವ ಮೆಸೇಜ್ ನೋಡುತ್ತಿದ್ದಳು. ಆದರೆ ರಾತ್ರಿ ಏನಾಗಿದೆ ಎಂಬುದು ಆಕೆಗೆ ನೆನಪಾಗುವುದಿಲ್ಲ. ಒಮ್ಮೆ ಆಕೆ ಇಡೀ ಬಾಸ್ಕೆಟ್ ಬಾಲ್ ಕೋರ್ಟ್ ಅನ್ನೇ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಳು, ಹಸಿರು ಹಾಸು, ಬಾಲ್, ನೆಟ್, ಪೋಲ್, ಬ್ಯಾಕ್ ಬೋರ್ಡ್ ಎಲ್ಲವೂ ಸೇರಿದ್ದ ಪ್ಯಾಕೇಜ್ ಅದಾಗಿತ್ತು. ಹೀಗಾಗಿ ಇದೊಂದೆ ಆರ್ಡರ್ ಸುಮಾರು 3.16 ಲಕ್ಷ ರೂಪಾಯಿ ಬಿಲ್ ಮಾಡಿತ್ತು.
ಆಕೆ ಫ್ರಿಡ್ಜ್, ಮಕ್ಕಳ ಆಟದ ಮನೆ, ಪುಸ್ತಕಗಳು, ಟೇಬಲ್, ಸಿಹಿ ತಿಂಡಿಗಳು, ಸೇರಿ ಹತ್ತಾರು ರೀತಿಯ ವಸ್ತುಗಳು ಸಹ ಸೇರಿವೆ. ಆಕೆ ಆನ್‌ಲೈನ್‌ನಲ್ಲಿ ತನ್ನ ಎಲ್ಲಾ ಕಾರ್ಡ್‌ಗಳ ಬಳಕೆ ನಿಲ್ಲಿಸಿದ ಬಳಿಕ ಈ ರೀತಿ ಆನ್‌ಲೈನ್ ಶಾಪಿಂಗ್ ಕೊನೆಯಾಗಿತ್ತು. ಆದ್ರೆ ಅಷ್ಟರಾಗಲೆ ಆಕೆ ಸಾಲಕ್ಕೆ ಸಿಲುಕಿದ್ದಳು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
