Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹಣೆ ಮೇಲಿನ ಮೊಡವೆ ಕ್ಯಾನ್ಸರ್ ಆಗಿ ಬದಲು..! ಆಘಾತಕ್ಕೊಳಗಾದ ಮಹಿಳೆ!
ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಹುಡುಗ ಅಥವಾ ಹುಡುಗಿಯರ ಮುಖದಲ್ಲಿ ಮೊಡವೆಗಳು ಎದ್ದಾಗ ಎಲ್ಲಿಲ್ಲದ ಸಮಸ್ಯೆಯಂತೆ ನೋಡುತ್ತಾರೆ. ಈ ಮೊಡವೆಗಳು ಮುಖದ ಮೇಲೆ ಕಲೆಗಳು ಉಳಿಯುವಂತೆ ಮಾಡುತ್ತದೆ. ಇದು ಹಲವರಿಗೆ ದೊಡ್ಡ ಸಮಸ್ಯೆಯಂತೆ ಕಾಣುತ್ತದೆ. ಅದರಲ್ಲೂ ಮುಖದ ಮೇಲೆ ಕಲೆಗಳು ಅಂದರೆ ಎಲ್ಲರಿಗೂ ಹಿಂಸೆ ನೀಡುತ್ತಿರುತ್ತದೆ.
ಆದ್ರೆ ಇಲ್ಲೊಬ್ಬಾಕೆ ತನ್ನ ಹಣೆ ಮೇಲಿನ ಮೊಡವೆಯಿಂದಾಗಿ ತಲೆ ನೋವು ಮಾತ್ರವಲ್ಲ ಈಗ ಜೀವಕ್ಕೆ ಹಾನಿಯಾಗುವಂತಹ ಅಚ್ಚರಿ ವಿಚಾರ ಹೊರಬಿದ್ದಿದ್ದು ಆಕೆ ಕೂಡ ಶಾಕ್‌ಗೆ ಒಳಗಾಗಿದ್ದಾಳೆ. ಮೊದಲು ಹಣೆ ಮೇಲೆ ಇರುವುದು ಮೊಡವೆ ಎಂದುಕೊಳ್ಳಲಾಗಿತ್ತು. ಆದ್ರೆ ಇದು ಕ್ಯಾನ್ಸರ್ ಎಂದು ತಿಳಿದು ಆಘಾತವಾಗಿದೆ.

ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಮೊಡವೆ ಎಂದು ಭಾವಿಸಿದ್ದಳು ಆದರೆ ಅದು ಚರ್ಮ ರೋಗವಾಗಿ ತಿರುಗಿದೆ. ಆದ್ರೆ ಈ ಚರ್ಮ ರೋಗ ಆಕೆಗೆ ಬಂದಿದ್ದಾದ್ರು ಹೇಗೆ ಎಂಬುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಮೊಡವೆಗಳು ಎಲ್ಲರಲ್ಲೂ ಕಂಡು ಬರುವ ಸಾಮಾನ್ಯ ಪ್ರಕ್ರಿಯೆ. ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ ಅನುಭವಿಸುತ್ತಾರೆ, ಹಾರ್ಮೋನುಗಳ ಬದಲಾವಣೆಗಳು, ಮಾಲಿನ್ಯ, ಆಹಾರ, ಅನುವಂಶೀಯತೆ ಸೇರಿ ಹಲವು ರೀತಿಯ ಕಾರಣಗಳಿಂದ ಮೊಡವೆ ಉಂಟಾಗುತ್ತದೆ. ಆದ್ರೆ ಆಸ್ಟ್ರೇಲಿಯಾದ ಮಹಿಳೆ ಹಣೆಯ ಮೇಲೆ ಕಂಡುಬಂದ ಮೊಡವೆ ಈಗ ಕ್ಯಾನ್ಸರ್ ಎಂಬುದು ತಿಳಿದುಬಂದಿದೆ.
32 ವರ್ಷದ ಆಸ್ಟ್ರೇಲಿಯನ್ ಮಹಿಳೆ ರಾಚೆಲ್ ಒಲಿವಿಯಾ ಆರಂಭದಲ್ಲಿ ತನ್ನ ಹಣೆಯ ಮೇಲೆ ಕಾಣಿಸಿಕೊಂಡ ಸಣ್ಣದಾದ ಮೊಡವೆಯ ಒಂದು ಆಕಾರವನ್ನು ನಿರ್ಲಕ್ಷಿಸಿದಳು. ಅದನ್ನು ತನ್ನ ಕೈಗಳಿಂದ ಒತ್ತಿ ಹಾಕಿದ್ದಾಳೆ. ನಂತರ ಅದರ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ. ಯಾವಾಗಲು ಕಾಣಿಸಿಕೊಳ್ಳುವ ಸಾಧಾರಣ ಮೊಡವೆ ಎಂದು ಭಾವಿಸಿದ್ದಳ.
ಅಚ್ಚರಿ ಏನೆಂದರೆ ಸಾಧಾರಣವಾಗಿ ಮೊಡವೆಗಳು ವಾರದಲ್ಲಿ ಒಣಗಿ ಕಪ್ಪು ಕಲೆಗಳಾಗಿ ನಿಲ್ಲುತ್ತವೆ. ಆದರೆ ರಾಚೆಲ್ ಒಲಿವಿಯಾ ಅವರ ಹಣೆಯ ಮೇಲೆ ಆಗಿದ್ದ ಕೆಂಪು ಬಣ್ಣದ ಮೊಡವೆಯೂ ತಿಂಗಳುಗಳಾದರು ಹಾಗೆಯೇ ಇತ್ತು. ಜೊತೆಗೆ ದೊಡ್ಡದಾಗುತ್ತಾ ಸಾಗಿತ್ತು.
"ನಾನು ಅದನ್ನು ಒಂದು ವರ್ಷದವರೆಗೆ ಆ ಮೊಡವೆಯನ್ನು ಹಾಗೆಯೇ ಬಿಟ್ಟಿದ್ದೆ, ಆದರೆ ಅದು ಎಂದಿಗೂ ವಾಸಿಯಾಗದಿದ್ದಾಗ, ವೈದ್ಯರ ಬಳಿ ತೋರಿಸಲು ಮುದಾಗಿದ್ದೆ, ಅನಂತರವೆ ಇದೊಂದು ಚರ್ಮದ ಕ್ಯಾನ್ಸರ್ ಲಕ್ಷಣ ಎಂಬುದು ನನಗೆ ತಿಳಿದುಬಂದಿದೆ ಎಂದು ಒಲಿವಿಯಾ ಹೇಳಿದ್ದಾರೆ.
ಆಕೆಗೆ ಈ ಕ್ಯಾನ್ಸರ್ ಉಂಟಾಗಲು ಸೂರ್ಯನ ಕಿರಣಗಳಿಗೆ ಹೆಚ್ಚು ಒಡ್ಡಿಕೊಂಡಿದ್ದರ ಪರಿಣಾಮವಾಗಿ ಉಂಟಾಗಿತ್ತು ಎಂದು ವದ್ಯರು ಕೂಡ ದಢಪಡಿಸಿದರು. ಬಿಸಿಲಿನಿಂದ ಆಕೆಯ ಹಣೆಯ ಮೇಲೆ ಈ ಕ್ಯಾನ್ಸರ್ ಲಕ್ಷಣಗಳ ಕಂಡುಬಂದಿತ್ತು ಎಂದು ವರದಿಯಾಗಿದೆ. ಆದರೆ ಆಕೆಯ ಪ್ರಕಾರ ಆಕೆಯ ಮೈಯನ್ನು ಹೆಚ್ಚು ಆಕೆ ಬಿಸಿಲಿನಲ್ಲಿ ತೆರೆದಿಟ್ಟಿದ್ದೇ ಇಲ್ಲವಂತೆ.
ಬಾಸೆಲ್ ಸೆಲ್ ಕಾರ್ಸಿನೋಮ ಎಂಬುದು ಚರ್ಮ ಕ್ಯಾನ್ಸರ್‌ನ ಒಂದು ಅಪರೂಪದ ವಿಧವಾಗಿದೆ. ಇದರಲ್ಲಿ ಬಿಳಿ, ಕಂದು, ಕೆಂಪು ಬಣ್ಣದ ಮೊಡವೆ ಆಕಾರದ ರಚನೆಗಳು ಚರ್ಮದ ಮೇಲೆ ಮೂಡುತ್ತವೆ. ಇದು ಆಕ್ರಮಣಕಾರಿ ಅಲ್ಲದ ಸ್ವರೂಪದಲ್ಲಿ ಕಂಡುಬರುತ್ತದೆ. ಈ ಕ್ಯಾನ್ಸರ್ ಅನ್ನು ಬಹುಬೇಗ ಗುರುತಿಸಿದರೆ ಚಿಕಿತ್ಸೆಯೂ ಸುಲಭವಾಗುತ್ತದೆ. ಆದ್ರೆ ತಡವಾದರೆ ಅದರ ಪರಿಣಾಮ ಜೀವಕ್ಕೆ ಅಪಾಯ ತಂದೊಡ್ಡುತ್ತದೆ.
ಒಲಿವಿಯಾಗೆ ಈ ಕ್ಯಾನ್ಸರ್ ವಿರುದ್ಧ ಕೀಮೋಥೆರಪಿಗೆ ಒಳಗಾಗಬೇಕಾಯಿತು. ಈ ಕ್ಯಾನ್ಸರ್ ಮುಖ್ಯವಾಗಿ ಸೂರ್ಯನ ವಿಕಿರಣ ಕ್ರಿಯೆಯಿಂದ ಹರಡುವ ಕಾರಣ ಬೇಸಿಗೆಯಲ್ಲಿ ಚರ್ಮದ ಆರೈಕೆ ಕಡೆ ಗಮನ ಇಡುವುದು ಮುಖ್ಯವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
