Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ರೇಬೀಸ್ ಚುಚ್ಚುಮದ್ದು ಪಡೆದರೂ ನಾಯಿ ಕಚ್ಚಿದ್ದ ಮಹಿಳೆ ಸಾವು..! ರೇಬೀಸ್ ಕುರಿತ ಮಾಹಿತಿ ಇಲ್ಲಿದೆ
ರೇಬೀಸ್ ಕಾಯಿಲೆ ಎಷ್ಟು ಮಾರಕ ಎಂಬುದು ನಿಮಗೆಲ್ಲಾ ತಿಳಿಸಿದೆ. ಪ್ರಾಣಿಗಳ ಕಚ್ಚುವಿಕೆಯಿಂದ, ಇಲ್ಲವೆ ಸೋಂಕಿತ ಪ್ರಾಣಿಯ ಲಾಲಾರಸದಿಂದ ಈ ರೋಗ ಹರಡುತ್ತದೆ. ಹೆಚ್ಚಾಗಿ ನಾಯಿ, ಬೆಕ್ಕು, ಬಾವಲಿಗಳ ಮೂಲಕ ರೇಬೀಸ್ ಹರಡುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಸಾವು ಸಹ ಸಂಭವಿಸುತ್ತದೆ.
ಆದರೆ ಈದೀಗ ಬೀದಿ ನಾಯಿ ಕಡಿತದಿಂದ ಆಸ್ಪತ್ರೆಗೆ ಸೇರಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಆದರೆ ವಿಚಿತ್ರ ಎಂದರೆ ಅವರು ರೇಬೀಸ್ ಚುಚ್ಚು ಮದ್ದು ಪಡೆದರೂ ಮೃತಪಟ್ಟಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಕೋಲಾಪುರದ ಮಹಿಳೆ ಕಳೆದೊಂದು ವಾರದ ಹಿಂದೆ ಬೀದಿ ನಾಯಿ ಕಡಿತದಿಂದ ಆಸ್ಪತ್ರೆಗೆ ಸೇರಿದ್ದರು.

ಆದರೆ ಆಸ್ಪತ್ರೆಯಲ್ಲಿ ಅವರಿಗೆ ರೇಬೀಸ್ ಚುಚ್ಚು ಮದ್ದು ಸಹ ನೀಡಲಾಗಿತ್ತು. ಆದರೆ ಮೂರು ದಿನಗಳ ಬಳಿಕ ಅವರು ಮೃತಪಟ್ಟಿದ್ದಾರೆ. ಇದು ದೇಶದಲ್ಲಿ ರೇಬೀಸ್ ಚುಚ್ಚು ಮದ್ದು ಪಡೆದರೂ ಮೃತಪಟ್ಟ ಮೊದಲ ಪ್ರಕರಣ ಎಂದು ಪರಿಗಣಿಸಲಾಗಿದೆ. ಐದು ಡೋಸ್ ರೇಬೀಸ್ ಚುಚ್ಚು ಮದ್ದು ಪಡೆದರೂ ಆಕೆ ಮೃತಪಟ್ಟಿದ್ದೇಕೆ ಎಂಬ ಚರ್ಚೆ ಆರಂಭವಾಗಿದೆ. ಹಾಗಾದರೆ ರೇಬೀಸ್ ಚುಚ್ಚು ಮದ್ದು ಪಡೆದರೂ ಆಕೆ ಮೃತಪಟ್ಟಿದ್ದೇಕೆ. ರೇಬೀಸ್‌ನ ಲಕ್ಷಣವೇನು ಎಂಬುದನ್ನು ನಾವಿಂದು ತಿಳಿಯೋಣ.
ರೇಬೀಸ್ ಚುಚ್ಚು ಮದ್ದು ಏಕೆ ಕೆಲಸ ಮಾಡಲ್ಲಿಲ್ಲ?
ವೈದ್ಯಕೀಯ ಸಂಶೋಧನೆಯಲ್ಲಿ ಪ್ರಗತಿಗಳ ಹೊರತಾಗಿಯೂ ರೇಬೀಸ್ ಚಿಕಿತ್ಸೆಯು ಸಾಂದರ್ಭಿಕವಾಗಿ ವಿಫಲವಾಗಬಹುದು. ಮಹಿಳೆಯ ದೇಹ ರೇಬೀಸ್ ಚುಚ್ಚು ಮದ್ದಿಗೆ ಸ್ಪಂದಿಸದಿರುವುದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಗುರುಗ್ರಾಮ್ ಮಾರೆಂಗೊ ಏಷ್ಯಾ ಆಸ್ಪತ್ರೆ ಔಷಧ ಸಲಹೆಗಾರರ ಡಾ. ಮೋಹನ್ ಕುಮಾರ್ ಸಿಂಗ್ ಹೇಳಿದ್ದಾರೆ.
ರೇಬೀಸ್ ಅಂದ್ರೇನು..?
ರೇಬೀಸ್ ಒಂದು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುವ ಕಾಯಿಲೆಯಾಗಿದೆ. ಇದನ್ನು ಝನೋಟಿಕ್ ವೈರಲ್ ಕಾಯಿಲೆಯಾಗಿ ಗುರುತಿಸಲಾಗಿದೆ. ಶೇ.99ರಷ್ಟು ಪ್ರಕರಣಗಳಲ್ಲಿ ಬೀದಿ ನಾಯಿಗಳು ಈ ರೋಗ ಹರಡಲು ಕಾರಣವಾಗಿವೆ. ಸೋಂಕಿತ ಪ್ರಾಣಿಗಳು ಕೇವಲ ಕಚ್ಚುವುದರಿಂದ ಮಾತ್ರವಲ್ಲ ಅವು ಪರಚುವುದು, ಹಲ್ಲಿನ ಗುರುತು ಮೂಡಿಸುವುದು, ಲಾಲಾರಸ ನಿಮ್ಮ ದೇಹದೊಳಗೆ ಸೇರುವುದು ಸಹ ರೇಬೀಸ್‌ಗೆ ಕಾರಣವಾಗುತ್ತದೆ.
ರೇಬೀಸ್ ಕಾಯಿಲೆಯ ಲಕ್ಷಣಗಳು
ರೇಬೀಸ್ ರೋಗವು ವಾರ, ತಿಂಗಳುಗಳ ಕಾಲ ಮುಂದುವರೆಯಬಹುದು. ಆರಂಭದಲ್ಲಿ ಅಷ್ಟೇನು ಗಂಭೀರವಾಗಿ ಕಾಣದಿದ್ದರೂ ಬರುಬರುತ್ತಾ ಅದರ ತೀವ್ರತೆ ಹೆಚ್ಚಾಗುತ್ತದೆ. ಮೊದಲು ಸಾಮಾನ್ಯ ವೈರಲ್ ಜ್ವರದ ಲಕ್ಷಣಗಳು ಕಂಡುಬಂದರೂ ನಂತರದಲ್ಲಿ ಇದರ ಪರಿಣಾಮ ವ್ಯತಿರಿಕ್ತವಾಗುತ್ತದೆ. ಆತಂಕ, ಗೊಂದಲ, ಭ್ರಮೆ, ಕೂಗುವುದು, ದೇಹದಲ್ಲಿ ವಿಪರೀತ ನೋವು, ಉರಿ ಕಾಣಿಸಿಕೊಳ್ಳುವುದು.
ರೇಬೀಸ್ ವೈರಸ್ ಮೆದುಳು ತಲುಪಿದ ಬಳಿಕ ಆ ವ್ಯಕ್ತಿ ವಿಚಿತ್ರವಾದ ವರ್ತನೆ ತೋರಿಸಬಹುದು. ಇದು ಗಂಭೀರ ಸ್ವರೂಪಕ್ಕೆ ತೆರಳಿದ ಲಕ್ಷಣವಾಗಿದೆ. ಇದರ ಜೊತೆ ತಲೆನೋವು ಸೇರಿದಂತೆ ಜ್ವರಕ್ಕೆ, ಕಚ್ಚಿದ ಸ್ಥಳದಲ್ಲಿ ಅಸ್ವಸ್ಥತೆ, ಚುಚ್ಚುವಿಕೆ, ಅಥವಾ ತುರಿಕೆ ಸಂವೇದನೆಯೂ ಇರಬಹುದು. ವ್ಯಕ್ತಿಯು ಭ್ರಮೆ, ಅಸಹಜ ನಡವಳಿಕೆ, ಭ್ರಮೆಗಳು, ಹೈಡ್ರೋಫೋಬಿಯಾ (ನೀರಿನ ಭಯ) ಮತ್ತು ನಿದ್ರಾಹೀನತೆಯನ್ನು ಅನುಭವಿಸಬಹುದು.
ಯಾರು ರೇಬೀಸ್ ಚುಚ್ಚು ಮದ್ದು ಪಡೆಯಬಹುದು?
ಕೇವಲ ಸಾಕು ನಾಯಿಗಳಿಗೆ ಮಾತ್ರ ರೇಬೀಸ್ ಚುಚ್ಚುಮದ್ದು ಹಾಕಿಸುವುದಲ್ಲ ಬದಲಿಗೆ ನೀವು ಸಹ ಪಡೆಯಬಹುದು. ನಾಯಿಗಳು ಮರಿಗಳಾಗಿದ್ದ ವೇಳೆ ಅವುಗಳಿಗೆ ಈ ಚುಚ್ಚು ಮದ್ದು ಹಾಕಲಾಗುತ್ತದೆ. ಮುಂದೆ ಕಚ್ಚಿದರೆ ಇಲ್ಲವೆ ಗಾಯಗೊಳಿಸಿದರೆ ಯಾರಿಗೂ ಸಮಸ್ಯೆಯಾಗಬಾರದು ಎಂದು ಈ ಕಾರ್ಯ ಮಾಡುತ್ತಾರೆ. ಆದ್ರೆ ಅದರೆ ಯಾರು ಬೇಕಾದು ಈ ಚುಚ್ಚು ಮದ್ದು ಪಡೆಯಬಹುದು. ಇದರಿಂದ ಆರೋಗ್ಯಕ್ಕೆ ಯಾವ ಸಮಸ್ಯೆಯೂ ಆಗುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
