Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಚಳಿ ಅಂತ ರೂಂ ಹೀಟರ್ ಬಳಸಿದರೆ ಈ ಅಡ್ಡಪರಿಣಾಮಗಳಿವೆ ಗೊತ್ತಾ?
ಚಳಿಗಾಲ ಶುರುವಾಗಿದೆ, ಅಕಾಲಿಕ ಮಳೆ ಬರುವಾಗ ಚಳಿಗಾಲವೋ ಮಳೆಗಾಲವೋ ಡೌಟು ಬರುವಂತಿದೆ ಅಲ್ವಾ? ಚಳಿಗಾಲವಿರಲಿ, ಮಳೆಗಾಲವಿರಲಿ ಕೆಲವು ರೂಂ ಹೀಟರ್ ಬಳಸುತ್ತಾರೆ. ರೂಂ ಹೀಟರ್ ಬಳಸಿದಾಗ ಮನೆಯೊಳಗಡೆ ತುಂಬಾ ಹಿತ ಅನಿಸುವುದು, ಚಳಿ ಇರಲ್ಲ, ಆರಾಮವಾಗಿ ನಿದ್ದೆ ಬರುತ್ತದೆ, ಇನ್ನು ಅಸ್ತಮಾ ಇರುವವರಿಗೆ ತುಂಬಾ ಚಳಿ ಸಹಿಸಲು ಸಾಧ್ಯವಾಗುವುದಿಲ್ಲ, ಹೀಗಾಗಿ ರೂಂ ಹೀಟರ್ ಬಳಸುತ್ತಾರೆ.
ಆದರೆ ಹೀಟರ್ ಬಳಸಿದಾಗ ಇದರಿಂದ ತುಂಬಾ ಅಡ್ಡಪರಿಣಾಮಗಳೂ ಇವೆ, ಆದ್ದರಿಂದ ನೀವು ರೂಂ ಹೀಟರ್ ಬಳಸುತ್ತಿದ್ದರೆ ಅದರ ಅಡ್ಡಪರಿಣಾಮಗಳ ಬಗ್ಗೆ ತಿಳಿದಿರುವುದು ಒಳ್ಳೆಯದು:

ತ್ವಚೆ ಒಣಗುವುದು/ಡ್ರೈಯಾಗುವುದು
ನೀವು ರೂಂ ಹೀಟರ್ ಬಳಸಿದಾಗ ತ್ವಚೆ ಡ್ರೈಯಾದಂತೆ ಆಗುವುದು ಗಮನಕ್ಕೆ ಬಂದಿರಬಹುದು. ಅಷ್ಟು ಮಾತ್ರವಲ್ಲ ಕಣ್ಣು ಕೂಡ ಡ್ರೈಯಾಗುವುದು. ಗಂಟಲು ಒಣಗುವುದು. ಈ ರೀತಿಯಾದಾಗ ಕೆಲವರಿಗೆ ಏಕೆ ಈ ರೀತಿ ಆಗುತ್ತಿದೆ ಎಂದು ಗೊತ್ತಿರುವುದಿಲ್ಲ, ನೀವು ರೂಂ ಹೀಟರ್ ಬಳಸಿದಾಗ ಈ ರೀತಿಯಾಗುತ್ತಿದ್ದರೆ ಅದು ರೂಂ ಹೀಟರ್‌ನಿಂದಲೇ ಉಂಟಾಗುತ್ತಿರುತ್ತದೆ.
ಉಸಿರಾಟದ ಸಮಸ್ಯೆ
ರೂಂ ಹೀಟರ್ ಬಳಸುವುದರಿಂದ ಉಸಿರಾಟದ ಸಮಸ್ಯೆ ಉಂಟಾಗುವುದು. ಸೋಂಕು, ಅಲರ್ಜಿ ಈ ಬಗೆಯ ಸಮಸ್ಯೆ ಉಂಟಾಗುವುದು. ಅಲ್ಲದೆ ಒಬ್ಬರಿಗೆ ಮನೆಯಲ್ಲಿ ಶೀತವಿದ್ದರೆ ರೂಂ ಹೀಟರ್ ಬಳಸಿದಾಗ ಬೇಗನೆ ಮನೆಯ ಇತರ ಸದಸ್ಯರಿಗೂ ಹರಡುವುದು.
ಕಾರ್ಬನ್ ಮಾನಾಕ್ಸೈಡ್ ವಿಷಕಾರಿ
ರೂಂ ಹೀಟರ್ ಬಳಸಿದಾಗಕಾರ್ಬನ್ ಮಾನಾಕ್ಸೈಡ್ ಬಿಡುಗಡೆಯಾಗುತ್ತದೆ, ಇದೊಂದು ರೀತಿ ಒಂದು ರೀತಿಯ ಸೈಲೆಂಟ್ ಕಿಲ್ಲರ್. ಇದರಿಂದ ತಲೆನೋವು, ಸುಸ್ತು ಈ ಬಗೆಯ ಸಮಸ್ಯೆ ಕಂಡು ಬರುವುದು. ಸರಿಯಾದ ಗಾಳಿ ಓಡಾಟ ಇಲ್ಲದಿದ್ದರೆ ಈ ಬಗೆಯ ಸಮಸ್ಯೆ ಕಾಡುವುದು.
ಓವರ್ ಹೀಟ್ ಆದರೆ ಬೆಂಕಿ ಹೊತ್ತಿಕೊಳ್ಳಬಹುದು
ಕೆಲವೊಮ್ಮೆ ಹೀಟರ್ ತುಂಬಾನೇ ಬಿಸಿಯಾದರೆ ಅದರಿಂದ ಬೆಂಕಿ ಕೂಡ ಹೊತ್ತಿಕೊಳ್ಳುವ ಅಪಾಯವಿದೆ, ಅಚಾನಕ್ ಅದಕ್ಕೆ ತಾಗಿದರೆ ಮೈ ಸುಡುವುದು, ಮಕ್ಕಳು ಇರುವ ಮನೆಯಲ್ಲಿ ಬಳಸುವುದು ಇನ್ನೂ ಅಪಾಯಕಾರಿ.
ಅಸ್ತಮಾ ಹೆಚ್ಚಾಗುವುದು
ಕೆಲವರು ಅಸ್ತಮಾ ಇರುವವರು ರೂಂ ಹೀಟರ್ ಇದ್ದರೆ ಒಳ್ಳೆಯದು ಎಂದು ಚಳಿಗಾಲದಲ್ಲಿ ರೂಂ ಹೀಟರ್ ಬಳಸುತ್ತಾರೆ, ಆದರೆ ಇದು ಅಸ್ತಮಾ ಸಮಸ್ಯೆ ಮತ್ತಷ್ಟು ಹೆಚ್ಚು ಮಾಡುತ್ತೆ. ಇದರಿಂದ ಅಲರ್ಜಿ ಸಮಸ್ಯೆ ಉಂಟಾಗುವುದು.
ತ್ವಚೆಗೆ ಒಳ್ಳೆಯದಲ್ಲ
ಚಳಿಗಾಲದಲ್ಲಿ ತ್ವಚೆ ಡ್ರೈಯಾಗುವುದು ಸಾಮಾನ್ಯ, ಆದರೆ ಹೀಟರ್ ಬಳಸುವುದರಿಮದ ತ್ವಚೆ ಮತ್ತಷ್ಟು ಡ್ರೈಯಾಗುತ್ತೆ. ಇದರಿಂದ ತ್ವಚೆಯಲ್ಲಿ ತುರಿಕೆ, ಉರಿ ಈ ಬಗೆಯ ಸಮಸ್ಯೆ ಕಂಡು ಬರುವುದು.
ಮನೆಯೊಳಗಡೆ ಮಾಲಿನ್ಯ ಹೆಚ್ಚಾಗುವುದು
ಹೀಟರ್‌ನಲ್ಲಿ ದೂಳು ಕೂರುತ್ತದೆ, ಇದು ಕೂಡ ಮನೆಯೊಳಗಡೆ ಮಾಲಿನ್ಯ ಹೆಚ್ಚಿಸುತ್ತೆ, ಆದ್ದರಿಂದ ಅಲರ್ಜಿ, ಅಸ್ತಮಾ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ.
ಚಳಿಗಾಲದಲ್ಲಿ ಬೆಚ್ಚಗಿರಲು ಏನು ಮಾಡಬೇಕು?
ನೀವು ಚಳಿಗಾಲದಲ್ಲಿ ಬೆಚ್ಚಗಿರಲು ಉಣ್ಣೆಯ ಬಟ್ಟೆಗಳನ್ನು ಧರಿಸಿ, ಇದನ್ನು ಮೈಯನ್ನು ಬೆಚ್ಚಗಿಡುವುದು, ಆದ್ದರಿಂದ ಶೀತ ಸಮಸ್ಯೆ ಉಂಟಾಗುವುದಿಲ್ಲ.
ಈ ಬಗೆಯ ಆಹಾರಗಳು ಮೈಯನ್ನು ಬೆಚ್ಚಗಿಡಲು ಸಹಾಯ ಮಾಡುತ್ತೆ
ಸೂಪ್
ಹಣ್ಣುಗಳು
ಡ್ರೈ ಫ್ರೂಟ್ಸ್
ಖಾರ ಪದಾರ್ಥಗಳು
ಮಾಂಸಾಹಾರ
ಜೇನು
ತುಪ್ಪ
ಈ ಬಗೆಯ ಆಹಾರ ಚಳಿಗಾಲದಲ್ಲಿ ನಿಮ್ಮ ಮೈ ಬೆಚ್ಚಗಿಡುತ್ತೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
