Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕಾಫಿ ಕುಡಿದರೆ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತಾ? ಯಾರೆಲ್ಲಾ ಕುಡಿಯಬೇಕು ಗೊತ್ತಾ?
ನಮ್ಮಲ್ಲಿ ಕಾಫಿ ಪ್ರಿಯರಿಗೆ ಬರಗಾಲವಿಲ್ಲ. ಊಟ ತಿಂಡಿ ಬೇಕಿದ್ದರೂ ಬಿಡುತ್ತೇವೆ ಆದರೆ ಕಾಫಿ ಬಿಡಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಕಾಫಿಯನ್ನು ಪ್ರೀತಿಸುವವರಿದ್ದಾರೆ.ಸಾಮಾನ್ಯವಾಗಿ ಕಾಫಿಯನ್ನು ಬೆಳಗ್ಗಿನ ಜಾವ ಅಥವಾ ಸಂಜೆ ವೇಳೆ ಸೇವಿಸುತ್ತಾರೆ. ನಮ್ಮ ಮೂಡ್ ಅನ್ನು ತಾಜಾಗೊಳಿಸಲು ಕಾಫಿ ಸಹಾಯ ಮಾಡುತ್ತದೆ ಎಂಬ ಅಭಿಪ್ರಾಯ ಅನೇಕರದ್ದರು. ಆದರೆ ಇದೀಗ ಹೊಸದೊಂದು ಅಧ್ಯಯನ ಬೆಳಕಿಗೆ ಬಂದಿದ್ದು ಕಾಫಿ ನಮ್ಮ ಮೂಡ್ ತಾಜಾಗೊಳಿಸೋದು ಮಾತ್ರವಲ್ಲ ಉತ್ತಮ ನಿದ್ರೆ ಬರೋಕೂ ಕಾಫಿ ಬೇಕು ಎಂದು ಹೇಳಿದೆ.
ನಾವೆಲ್ಲ ಶಾಲೆಗೆ ಹೋಗುವಾಗ ಪರೀಕ್ಷಾ ಸಂದರ್ಭದಲ್ಲಿ ನಿದ್ದೆಯನ್ನು ಹೋಗಲಾಡಿಸಲು ಕಾಫಿ ಅಥವಾ ಚಹವನ್ನೋ ಸೇವಿಸುತ್ತಿದ್ದೆವು. ಆದರೆ ನಿದ್ರಾ ತಜ್ಞರೊಬ್ಬರು ನೀಡಿದ ಮಾಹಿತಿಯ ಪ್ರಕಾರ ಕೆಲವು ಪ್ರಕಾರದ ಜನರಿಗೆ ಉತ್ತಮ ನಿದ್ರೆ ಸಿಗಬೇಕು ಎಂದರೆ ಅವರು ಕಾಫಿ ಕುಡಿಬೇಕು ಅಂತಾ ಹೇಳಿದ್ದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಆಹಾರ ತಜ್ಞರು ರಾತ್ರಿ ವೇಳೆ ಕೆಫಿನ್ ಅಂಶಯುಕ್ತ ಆಹಾರ ಸೇವನೆ ಮಾಡಬಾರದು ಎಂದೇ ಸಲಹೆ ನೀಡುತ್ತಾರೆ. ಆದರೂ ಕಾಫಿ ಒಂದು ಉತ್ತಮ ನಿದ್ದಾ ಉತ್ತೇಜಕ ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಪ್ರತಿಯೊಬ್ಬರು ಮಲಗುವ ಮುನ್ನ ಕಾಫಿ ಕುಡಿಯಲೇಬೇಕು ಎಂದು ಶಿಫಾರಸು ಮಾಡಲು ಸಹ ಸಾಧ್ಯವಿಲ್ಲ. ಆಯ್ದ ವಿಭಾಗಕ್ಕೆ ಸೇರಿದವರಿಗೆ ಮಾತ್ರ ನಿದ್ರಾ ತಜ್ಞರು ಕಾಫಿ ಕುಡಿಯುವಂತೆ ಸಲಹೆ ನೀಡುತ್ತಾರೆ. ಹಾಗಾದರೆ ರಾತ್ರಿ ವೇಳೆ ಕಾಫಿ ಕುಡಿಯುವ ವರ್ಗಕ್ಕೆ ಸೇರಿದವರು ಯಾರು ಎಂಬುದನ್ನು ತಿಳಿದುಕೊಳ್ಳೋಣ :
ಮಲಗುವ ಮುನ್ನ ಕಾಫಿ ಕುಡಿದರೆ ನಿದ್ರೆ ಬರುತ್ತದೆ ಎಂಬ ಮಾತು ಎಲ್ಲರಿಗೂ ಸತ್ಯವಾಗುವುದಿಲ್ಲ. ಆಯ್ದ ಮೂರು ವಿಭಾಗಕ್ಕೆ ಸೇರಿದವರಿಗೆ ಮಾತ್ರ ಕಾಫಿ ನಿದ್ರೆಗೆ ಸಹಾಯ ಮಾಡುತ್ತದೆ. ಹಾಗಾದರೆ ಆ ಮೂರು ವಿಭಾಗ ಯಾವುದು..? ಆ ಮೂರು ಆಯ್ದ ವಿಭಾಗದಲ್ಲಿ ನಾವಿದ್ದೇವಾ..?
1. ಕಾಫಿಯನ್ನು ಎಂಜಾಯ್ ಮಾಡುವ ದಂಪತಿ ನೀವಾಗಿರಬೇಕು : ನಿಮಗೆ ಮದುವೆಯಾಗಿದ್ದು ಸತಿ ಪತಿಯಿಬ್ಬರೂ ಕಾಫಿ ಪ್ರಿಯರಾಗಿದ್ದರೆ ಈ ಕಾಫಿ ನಿಮಗೆ ಉತ್ತಮ ನಿದ್ದೆ ಕೊಡಬಲ್ಲದು. ಕೆಲವರಿಗೆ ಕಾಫಿ ಸೇವನೆಯು ಅವರ ಜೀರ್ಣಕ್ರಿಯೆ ವೇಗವನ್ನು ಕಡಿಮೆ ಮಾಡಿ ಎಚ್ಚರವಿರುವಂತೆ ಮಾಡಬಹುದು. ಇನ್ನೂ ಕೆಲವರಿಗೆ ಚಯಾಚಪಯ ವೇಗವನ್ನು ಹೆಚ್ಚಿಸಿ ಉತ್ತಮ ನಿದ್ರೆಯನ್ನು ಕೊಡಬಲ್ಲದು. ದಂಪತಿ ಹಾಸಿಗೆಯಲ್ಲಿ ಕುಳಿತು ಕಾಫಿ ಹೀರುತ್ತಾ ದಿನದ ಆಗು ಹೋಗುಗಳ ಬಗ್ಗೆ ಮಾತನಾಡಿ ಗುಣಮಟ್ಟದ ಸಮಯ ಕಳೆದ ಬಳಿಕ ಉತ್ತಮ ನಿದ್ರೆಗೆ ಜಾರುತ್ತಾರೆ ಎಂಬುದು ನಿದ್ರಾ ತಜ್ಞರ ಅಭಿಪ್ರಾಯವಾಗಿದೆ.
2. ನೀವೊಬ್ಬ ಕಾಫಿ ಪ್ರಿಯರಾಗಿದ್ದಾಗ : ಕೆಲವರಿಗೆ ಕಾಫಿ ಇಲ್ಲದೇ ದಿನವೇ ಆರಂಭವಾಗುವುದಿಲ್ಲ. ಕಾಫಿಯಲ್ಲಿರುವ ಆಂಟಿಆಕ್ಸಿಡಂಟ್ ಗುಣಗಳು ನಿಮಗೆ ಒಂದು ರೀತಿ ತೃಪ್ತಿಕರ ಭಾವವನ್ನು ನೀಡುತ್ತದೆ. ಪ್ರತಿನಿತ್ಯ ಕಾಫಿ ಕುಡಿಯುವ ಅಭ್ಯಾಸ ಇರುವವರಿಗೆ ಕಾಫಿ ಒಂದು ರೀತಿಯಲ್ಲಿ ನಿರಾಳತೆ ಭಾವವನ್ನು ಕೊಡಲು ಆರಂಭಿಸಿರುತ್ತದೆ. ಇಂಥವರು ರಾತ್ರಿ ವೇಳೆಯೂ ಕಾಫಿ ಸೇವನೆ ಮಾಡುವುದರಿಂದ ವಿಶ್ರಾಂತ ಭಾವಕ್ಕೆ ಜಾರಿ ಉತ್ತಮ ನಿದ್ರೆ ಹೋಗಲು ಸಾಧ್ಯವಿದೆ.
3. ADHD ಯಿಂದ ಹೊಂದಿರುವವರು : ADHD ಹೊಂದಿರುವವರಿಗೆ ಕಾಫಿ ಸೇವನೆಯಿಂದ ಸಾಮಾನ್ಯರಿಗಿಂತ ಜಾಸ್ತಿ ಡೊಪಮೈನ್ ಬಿಡುಗಡೆಯಾಗುತ್ತದೆ. ಆಗ ಜನರು ವಿಶ್ರಾಂತ ಭಾವಕ್ಕೆ ಜಾರುತ್ತಾರೆ. ಹೀಗಾಗಿ ADHD ಹೊಂದಿರುವವರು ರಾತ್ರಿ ಕಾಫಿ ಸೇವನೆ ಮಾಡುವುದರಿಂದ ಗುಣಮಟ್ಟದ ನಿದ್ರೆ ಪಡೆಯಬಹುದಾಗಿದೆ.
ಕಾಫಿ ನಿದ್ರೆಗೆ ಮದ್ದು ಎನ್ನುವುದನ್ನು ಎಲ್ಲರೂ ಒಪ್ಪುವುದಿಲ್ಲ. ಕೆಫಿನ್ ಅಂಶವನ್ನು ರಾತ್ರಿ ವೇಳೆ ಸೇವಿಸದೇ ಇರುವುದು ಒಳ್ಳೆಯದು ಎನ್ನುವುದು ಬಹುತೇಕ ವೈದ್ಯರ ಅಭಿಪ್ರಾಯ. ಹೀಗಾಗಿ ರಾತ್ರಿ ಮಲಗುವ ವೇಳೆ ಕಾಫಿ ಸೇವನೆ ಮಾಡಬಹುದೇ..? ಇದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲವೇ..? ಆರೋಗ್ಯಕ್ಕೆ ಯಾವುದಾದರೂ ಹಾನಿ ಕಾದಿದೆಯೇ..? ಈ ಎಲ್ಲದರ ಬಗ್ಗೆ ವೈದ್ಯರೊಂದಿಗೆ ಮುಕ್ತವಾಗಿ ಚರ್ಚಿಸಿ ಬಳಿಕ ರಾತ್ರಿ ವೇಳೆ ಕಾಫಿ ಕುಡಿಯುವುದನ್ನು ಆರಂಭಿಸುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
