Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹುಷಾರ್.. ಡೇ ಟೈಮ್ ನಿದ್ದೆ ನಿಮ್ಮ ಆಯಸ್ಸನ್ನೇ ಕಮ್ಮಿ ಮಾಡುತ್ತೆ! ಇಂದೇ ಈ ಅಭ್ಯಾಸ ಬಿಡಿ.. ಶಾಕಿಂಗ್ ಸತ್ಯ ಬಹಿರಂಗ
ಎಚ್ಚರ.. ಡೇ ಟೈಮ್ ನಿದ್ದೆ ನಿಮ್ಮ ಆಯಸ್ಸನ್ನೇ ಕಡಿಮೆ ಮಾಡುತ್ತೆ! ಇಂದೇ ಈ ಅಭ್ಯಾಸ ಬಿಡಿ. ಹೌದು, ಮಧ್ಯಾಹ್ನದ ನಿದ್ದೆಯಿಂದ ನಿಮ್ಮ ದೇಹದಲ್ಲಿ ಏನಾಗುತ್ತೆ ಗೊತ್ತಾ? ಶಾಕಿಂಗ್ ಸತ್ಯ ಇಲ್ಲಿದೆ. ಪ್ರಸ್ತುತ ಬದಲಾದ ಜೀವನಶೈಲಿಯಲ್ಲಿ ಅನೇಕರು ರಾತ್ರಿ ತಡವಾಗಿ ಮಲಗಿ (Sleeping), ಬೆಳಗ್ಗೆ ಬೇಗ ಏಳುತ್ತಾರೆ. ಈ ರೀತಿ ರಾತ್ರಿ ಸರಿಯಾಗಿ ನಿದ್ರೆ (Sleep) ಆಗದಿದ್ದಾಗ, ಅದರ ಕೊರತೆಯನ್ನು ನೀಗಿಸಲು ಹಗಲಿನಲ್ಲಿ ದೀರ್ಘಕಾಲ ಮಲಗುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ.
'ರಾತ್ರಿ ನಿದ್ದೆ ಮಾಡದಿದ್ದರೆ ಏನಂತೆ, ಹಗಲಿನಲ್ಲಿ ಮಲಗುತ್ತೇವಲ್ಲ' ಅನ್ನೋ ಸಮಾಧಾನ ಇವರದು. ಆದರೆ, ಪ್ರಕೃತಿಯ ನಿಯಮದಂತೆ ರಾತ್ರಿ ನಿದ್ರೆ ಮಾಡುವುದಕ್ಕೂ ಹಗಲಿನಲ್ಲಿ ಮಲಗುವುದಕ್ಕೂ (Daytime Sleeping) ಭಾರಿ ವ್ಯತ್ಯಾಸವಿದೆ. ಡೇ ಟೈಮ್ ನಿದ್ರೆಯು ನಿಮ್ಮ ಆಯಸ್ಸನ್ನು ಕಡಿಮೆ ಮಾಡುವುದಲ್ಲದೆ, ನಿಮ್ಮನ್ನು ಹತ್ತಾರು ಕಾಯಿಲೆಗಳ ಕೂಪಕ್ಕೆ ತಳ್ಳಬಹುದು (Side Effects of Day Sleep) ಅನ್ನೋದು ನಿಮಗೆ ಗೊತ್ತೇ?

ಹಗಲು ನಿದ್ರೆ & ದೇಹದ ಗಡಿಯಾರ
ನಮ್ಮ ದೇಹದ ಒಳಗೆ ಒಂದು ಜೈವಿಕ ಗಡಿಯಾರವಿದೆ. ಇದು ಸೂರ್ಯನ ಬೆಳಕಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ರಾತ್ರಿಯ ಕತ್ತಲಿನಲ್ಲಿ ಮಲಗಿದಾಗ ಮಾತ್ರ ದೇಹವು ಚೇತರಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಹಗಲಿನಲ್ಲಿ ದೀರ್ಘಕಾಲ ಮಲಗುವುದರಿಂದ ಈ ಜೈವಿಕ ಚಕ್ರ ಏರುಪೇರಾಗುತ್ತೆ. ಸಂಶೋಧನೆಗಳ ಪ್ರಕಾರ, 10-15 ನಿಮಿಷಗಳ ಚಿಕ್ಕ ಹಗಲು ನಿದ್ರೆ (ಪವರ್ ನ್ಯಾಪ್) ಮೆದುಳಿಗೆ ಉಲ್ಲಾಸ ನೀಡುತ್ತದೆ. ಆದರೆ, ಇದು 30 ನಿಮಿಷಕ್ಕಿಂತ ಹೆಚ್ಚಾದರೆ ಅದು ಅನಾರೋಗ್ಯಕ್ಕೆ (Side Effects of Sleeping in Afternoon) ಅಡಿಪಾಯವಾಗುತ್ತೆ.
ಡೇ ಟೈಮ್ ನಿದ್ರೆಯಿಂದಾಗುವ ಪ್ರಾಬ್ಲಂಗಳಿವು!
ಅನಿದ್ರಾ
ಡೇ ಟೈಮ್ ಹೆಚ್ಚು ಮಲಗುವುದರಿಂದ ನೈಟ್ ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತೆ. ಇದು ಕ್ರಮೇಣ ಅನಿದ್ರಾ ರೋಗಕ್ಕೆ (Insomnia) ದಾರಿ ಮಾಡಿಕೊಡುತ್ತೆ. ರಾತ್ರಿ ಸರಿಯಾಗಿ ನಿದ್ರೆ ಬರದಿದ್ದರೆ ಮೆದುಳು ಸುಸ್ತಾಗುತ್ತೆ. ಇದರಿಂದ ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಮರೆವು
ಡೇ ಟೈಮ್ ಹ್ಯಾಬಿಟ್ (ಅಭ್ಯಾಸ) ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಇದು ಖಿನ್ನತೆ, ಗೊಂದಲ ಮತ್ತು ನೆನಪಿನ ಶಕ್ತಿ ಕಡಿಮೆಯಾಗಲು ಕಾರಣವಾಗಬಹುದು. ಸದಾ ಮಂಕಾಗಿರುವುದು ಮತ್ತು ಯಾವುದೋ ಯೋಚನೆಯಲ್ಲಿ ಮುಳುಗಿರುವುದು ಹಗಲು ನಿದ್ರೆಯ ಅಡ್ಡಪರಿಣಾಮಗಳು.
ವರ್ತನೆ
ದಿನವಿಡೀ ಮಲಗುವವರಲ್ಲಿ ಕಿರಿಕಿರಿ ಮತ್ತು ಸಿಡುಕುತನ ಹೆಚ್ಚಾಗಿ ಕಂಡುಬರುತ್ತದೆ. ಸಣ್ಣ ವಿಷಯಗಳಿಗೂ ಅತಿಯಾಗಿ ಪ್ರತಿಕ್ರಿಯಿಸುವುದು ಅಥವಾ ಯಾರಿಗಾದರೂ ಸಿಡಿಮಿಡಿಗೊಳ್ಳುವುದು ನಿಮ್ಮ ಸಾಮಾಜಿಕ ಜೀವನದ ಮೇಲೆ ಪ್ರಭಾವ ಬೀರಬಹುದು.
ಆಲಸ್ಯ
ಹಗಲಿನಲ್ಲಿ ಮಲಗಿ ಎದ್ದ ನಂತರ ದೇಹಕ್ಕೆ ಚೈತನ್ಯ ಸಿಗುವ ಬದಲು ಹೆಚ್ಚು ಆಲಸ್ಯ ಮತ್ತು ಸುಸ್ತು ಅನುಭವವಾಗುತ್ತದೆ. ಇದು ಯಾವುದೇ ಕೆಲಸದಲ್ಲಿ ಮನಸ್ಸು ಕೇಂದ್ರೀಕರಿಸಲು ಬಿಡುವುದಿಲ್ಲ. ಇದರಿಂದ ಉತ್ಪಾದಕತೆ ಕುಂಠಿತಗೊಳ್ಳುತ್ತದೆ.
ರೋಗಗಳು
ದೀರ್ಘಕಾಲ ರಾತ್ರಿ ಜಾಗರಣೆ ಮಾಡಿ ಹಗಲಿನಲ್ಲಿ ಮಲಗುವವರಲ್ಲಿ ರಕ್ತದೊತ್ತಡ (BP), ಮಧುಮೇಹ (Diabetes) ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿರುತ್ತದೆ. ಅಷ್ಟೇ ಅಲ್ಲದೆ, ಇದು ಅತಿಯಾದ ಬೊಜ್ಜು ಮತ್ತು ದೃಷ್ಟಿ ದೌರ್ಬಲ್ಯಕ್ಕೂ ಕಾರಣವಾಗಬಹುದು.

ಪರಿಹಾರವೇನು?
ರಾತ್ರಿ ನಿದ್ರೆ
ರಾತ್ರಿ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಿ.
ಸಮಯ ಪಾಲನೆ
ಮಲಗಲು ಮತ್ತು ಏಳಲು ಒಂದು ನಿಶ್ಚಿತ ಸಮಯವನ್ನು ನಿಗದಿಪಡಿಸಿಕೊಳ್ಳಿ.
ಪವರ್ ನ್ಯಾಪ್ ಸಾಕು
ಒಂದು ವೇಳೆ ಹಗಲಿನಲ್ಲಿ ನಿದ್ರೆ ಬಂದರೂ ಅದು 20 ನಿಮಿಷಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಿ.
ದೈಹಿಕ ಚಟುವಟಿಕೆ
ಪ್ರತಿದಿನ ವ್ಯಾಯಾಮ ಮಾಡುವುದರಿಂದ ರಾತ್ರಿ ನಿದ್ರೆ ಚೆನ್ನಾಗಿ ಬರುತ್ತದೆ. ಇದರಿಂದ ಹಗಲಿನಲ್ಲಿ ಮಲಗುವ ಅವಶ್ಯಕತೆ ಬರುವುದಿಲ್ಲ.
ಒಟ್ಟಾರೆ, ಆರೋಗ್ಯವೇ ಭಾಗ್ಯ. ಹಗಲಿನಲ್ಲಿ ಮಲಗುವ ಅಭ್ಯಾಸವು ತಾತ್ಕಾಲಿಕವಾಗಿ ನಿಮಗೆ ಆರಾಮ ನೀಡಬಹುದು. ಆದರೆ, ಭವಿಷ್ಯದಲ್ಲಿ ಇದು ನಿಮ್ಮನ್ನು ಆಸ್ಪತ್ರೆಗೆ ಅಲೆಯುವಂತೆ ಮಾಡಬಹುದು. ಹಾಗಾಗಿ, ಇಂದೇ ಈ ಅಭ್ಯಾಸವನ್ನು ಬಿಟ್ಟು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications