Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬರಿಗಾಲಿನಲ್ಲಿ ನಡೆಯುತ್ತೀರಾ? ಇದು ಉತ್ತಮ ಅಭ್ಯಾಸವಲ್ಲ..! ಅಪಾಯವೂ ಇದೆ
ಆರೋಗ್ಯ ಕಾಪಾಡಿಕೊಳ್ಳುವ ವಿಧಾನವಾಗಿ ಹಲವರು ವಾಕಿಂಗ್ ಮೊರೆ ಹೋಗುತ್ತಾರೆ. ಊಟ ಮಾಡಿದ ಬಳಿಕ, ಸಂಜೆ, ಬೆಳಗ್ಗೆ ಹೀಗೆ ಒಂದಲ್ಲಾ ಒಂದು ಸಮಯದಲ್ಲಿ ವಾಕಿಂಗ್ ಮಾಡೋದನ್ನ ನಾವು ನೋಡಬಹುದು. ವಾಕಿಂಗ್ ಮಾಡೋದು ಆರೋಗ್ಯದ ದೃಷ್ಟಿಯಿಂದ ಉತ್ತಮ ಅಭ್ಯಾಸವಾಗಿದೆ. ವಾಕಿಂಗ್ ಮಾಡುವಾಗ ನಾವು ಚಪ್ಪಲಿ ಧರಿಸಿರುತ್ತೇವೆ, ಹಾಗೆ ಮನೆಯಿಂದ ಹೊರಹೋದಾಗ ಮಾತ್ರ ಧರಿಸುತ್ತೇವೆ.
ನೀವು ಮನೆಯಲ್ಲಿ ಓಡಾಡುವಾಗ ಎಂದಿಗೂ ಚಪ್ಪಲಿ ಧರಿಸೋದಿಲ್ಲ. ಮನೆಯೊಳಗೆ ಯಾವಾಗಲು ಚಪ್ಪಲಿ ಇಲ್ಲದ ಕಾಲಿನಲ್ಲಿ ಓಡಾಡುತ್ತೇವೆ. ಅದ್ರಲ್ಲೂ ಹಿಂದೂ ಸಂಪ್ರದಾಯದಲ್ಲಿ ಚಪ್ಪಲಿಯನ್ನ ಮನೆಯೊಳಗೆ ಹಾಕುವುದಿರಲಿ ತರುವಂತೆಯೂ ಇಲ್ಲ. ಹೀಗಾಗಿ ಚಪ್ಪಲಿ ಮನೆಯಿಂದ ಹೊರಗಿರುವ ವಸ್ತು ಆಗಿದೆ. ಏಕೆಂದರೆ ಮನೆಯೊಳಗೆ ಚಪ್ಪಲಿ ಹಾಕಬಾರದಂತೆ. ಹೀಗಾಗಿ ನಾವು ಮನೆಯಲ್ಲಿ ಬರಿ ಕಾಲಿನಲ್ಲಿ ನಡೆದಾಡುತ್ತೇವೆ. ಆದರೆ ಬಲಿಗಾಲಿನಲ್ಲಿ ನಡೆಯುವುದು ಕೆಲವು ಸಮಸ್ಯೆಗೆ ದಾರಿಯಾಗುತ್ತೆ.

ಬರಿ ಕಾಲಿನಲ್ಲಿ ಓಡಾಡುವುದರಿಂದಾಗು ಸಮಸ್ಯೆಗಳ ಕುರಿತು ನಿಮಗೆ ಅರಿವಿದೆಯೇ? ಬರಿಗಾಲಿನಲ್ಲಿ ನಡೆಯೋದ್ರಿಂದ ನಿಮಗೆ ಎಷ್ಟೆಲ್ಲಾ ಸಮಸ್ಯೆಗಳು ಎದುರಾಗುತ್ತೆ ಎನ್ನುವುದು ನಿಮ್ಮ ಗಮನಕ್ಕೆ ತಂದಿದ್ದೇವೆ ನೋಡಿ.
ಪಾದದ ಗಾಯಗಳ ಹೆಚ್ಚಿನ ಅಪಾಯ
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮನೆಯಲ್ಲಿ ಬರಿಗಾಲಿನಲ್ಲಿ ಓಡಾಡುವುದರಿಂದಾಗಿ ಪಾದದಲ್ಲಿ ಗಾಯವಾಗುವ ಅಪಾಯ ಹಾಗೂ ಗಾಯವಾಗಿದ್ದರೆ ಅದು ದೊಡ್ಡದಾಗುವ ಅಪಾಯ ಹೆಚ್ಚಿಸಲಿದೆಯಂತೆ. ಜೊತೆಗೆ ಪಾದಗಳು ಹೆಚ್ಚು ನುಣುಪಾಗಿರುವುದರಿಂದ ನೀವು ಬರಿಗಾಲಿನಲ್ಲಿ ಓಡಾಡುವುದರಿಂದಾಗಿ ಜಾರಿ ಬೀಳಬಹುದು.
ಶಿಲೀಂಧ್ರ ಸೋಂಕು, ಉಗುರು ಸೋಂಕಿನ ಅಪಾಯ
ಬರಿ ಗಾಲಿನಲ್ಲಿ ನಡೆಯುವುದು ಶಿಲೀಂದ್ರ ಸೋಂಕು ಅಥವಾ ಬೆರಳು, ಉಗುರು ಸೋಂಕಿಗೆ ಕಾರಣವಾಗಬಹುದು. ಚಪ್ಲಲಿ ಇಲ್ಲದೆಯೇ ನಾವು ನೀರಿನಲ್ಲಿ ಓಡಾಡುವುದರಿಂದಾಗ ಈ ರೀತಿ ಆಗಬಹುದು. ಬರಿಗಾಲಿನಲ್ಲಿ ಹೋಗುವುದು ಹೆಚ್ಚು ಹೆಚ್ಚು ಅಪಾಯಕಾರಿ. ಅಮೇರಿಕನ್ ಪೊಡಿಯಾಟ್ರಿಕ್ ಮೆಡಿಕಲ್ ಅಸೋಸಿಯೇಷನ್ ಪ್ರಕಾರ, ನೀವು ಕ್ರೀಡಾಪಟುವಿನ ಕಾಲು, ಹುಕ್ವರ್ಮ್, ಕಾಲ್ಬೆರಳ ಉಗುರು ಶಿಲೀಂಧ್ರ, ಕಾಲ್ಸಸ್ ಮತ್ತು ಇತರ ಬ್ಯಾಕ್ಟೀರಿಯಾ-ಉಂಟುಮಾಡುವ ಪರಿಸ್ಥಿತಿಗಳಿಂದ ಸೋಂಕಿಗೆ ಒಳಗಾಗಬಹುದು.
ಪ್ಲಾಂಟರ್ ಫ್ಯಾಸಿಟಿಸ್ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ
ಪ್ಲ್ಯಾಂಟರ್ ನರಹುಲಿಗಳು, ವೆರುಕಾಸ್ ಎಂದೂ ಕರೆಯಲ್ಪಡುತ್ತವೆ, ಅಸ್ವಸ್ಥತೆಯನ್ನು ಉಂಟುಮಾಡಬಹುದು. ಅಂದರೆ ಹಿಮ್ಮಡಿ ನೋವು ಕಾಣಿಸಿಕೊಳ್ಳುವುದು ಅಥವಾ ಗಟ್ಟಿಯಾದ ಸ್ಥಳದಲ್ಲಿ ನಡೆದಾಡುವಾಗ ಕಾಲಿನ ಬಿಂಬದಿ ಭಾಗದಲ್ಲಿ ನೋವು ಕಾಣಿಸಿಕೊಳ್ಳಲು ನಾವು ಚಪ್ಪಲಿ ಧರಿಸದೆ ಓಡಾಡುವುದು ಸಹ ಒಂದು ಕಾರಣವಾಗಿದೆ.
ನಿಮ್ಮ ಪಾದದ ಆಕಾರವನ್ನು ಶಾಶ್ವತವಾಗಿ ಬದಲಾಗಬಹುದು
ಬರಿಗಾಲಿನಲ್ಲಿ ನಡೆಯುವುದು ನಿಮ್ಮ ಪಾದದ ಆಕಾರವನ್ನು ಶಾಶ್ವತವಾಗಿ ಬದಲಾಯಿಸುತ್ತದೆ. ಇಡೀ ದೇಹದ ಗಾತ್ರ ಪಾದದ ಮೇಲೆ ಬೀಳುವುದರಿಂದ ನೀವು ಚಪ್ಪಲಿ ಇಲ್ಲದೆ ವರ್ಷಗಳ ಕಾಲ ನಡೆದಾಗ ಪಾದದ ಆಕಾರ ಬದಲಾಗುತ್ತದೆ. ಹೆಚ್ಚು ಚಪ್ಪಟೆಯಾಗಿ ರೂಪುಗೊಳ್ಳುತ್ತದೆ. ಜರ್ನಲ್ ಆಫ್ ಫೂಟ್ ಮತ್ತು ಆಂಕಲ್ ರಿಸರ್ಚ್‌ನಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನದ ಪ್ರಕಾರ, ಅಭ್ಯಾಸವಾಗಿ ಬರಿಗಾಲಿನಿಂದ ಶಾಶ್ವತವಾಗಿ ಪಾದದ ಯಂತ್ರಶಾಸ್ತ್ರ ಮತ್ತು ಮೋಟಾರ್ ಕಾರ್ಯಕ್ಷಮತೆಯನ್ನು ಬದಲಾಯಿಸಬಹುದು ಎಂದಿದೆ.
ಬೆನ್ನು ನೋವು, ಸ್ಪೈನಲ್ ಕಾರ್ಡ್ ನೋವು
ನಿಮ್ಮ ಪಾದದ ಆರೋಗ್ಯ ನೇರವಾಗಿ ಸೊಂಟ ಹಾಗೂ ಬೆನ್ನು ಮೂಳೆಯ ಆರೋಗ್ಯಕ್ಕೆ ಸಂಬಂಧ ಪಟ್ಟಿದೆ. ನಮ್ಮ ಪಾದಗಳು ನಮ್ಮ ಸಂಪೂರ್ಣ ದೇಹವನ್ನು ಬೆಂಬಲಿಸುವ ಪ್ರಮುಖ ಅಂಗವಾಗಿದೆ. ಆದರೆ ಸರಿಯಾದ ಪಾದರಕ್ಷೆಗಳ ಕೊರತೆಯು ನಿಮ್ಮ ಪಾದಗಳ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡಬಹುದು, ಇದು ಬೆನ್ನು ಅಥವಾ ಮೊಣಕಾಲು ನೋವಿಗೆ ಕಾರಣವಾಗುತ್ತದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಲಾಜಿಕಲ್ ಡಿಸಾರ್ಡರ್ಸ್ ಮತ್ತು ಸ್ಟ್ರೋಕ್ ತನ್ನ ವರದಿಯೊಂದರಲ್ಲಿ ತಿಳಿಸಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

