Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮುಟ್ಟಿನ ದಿನಗಳಲ್ಲಿ ಅತಿಯಾದ ನೋವು: ಇದು ಸಾಧಾರಣವಲ್ಲ, ಈ ಭಯಾನಕ ಸಮಸ್ಯೆಗಳ ಸೂಚನೆ
ಮಹಿಳೆಯರು ಋತುಸ್ರಾವಕ್ಕೆ ಒಳಗಾದಾಗ ಸಾಮಾನ್ಯವಾಗಿ ಮುಟ್ಟಿನ ನೋವನ್ನು ಅನುಭವಿಸುತ್ತಾರೆ. ಕೆಲವರಿಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡರೆ ಇನ್ನೂ ಕೆಲವರಿಗೆ ಸೊಂಟ, ಬೆನ್ನು ಹೀಗೆ ಸಾಕಷ್ಟು ರೀತಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಈ ನೋವು ಯಾತನಾದಾಯಕವಾಗಿದ್ದರೂ ಸಹ ಸಹಿಸಿಕೊಳ್ಳಲು ಸಾಧ್ಯವಾಗುಷ್ಟರ ಮಟ್ಟಿಗೆ ನೋವು ಇರುತ್ತದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಸಹಿಸಲು ಸಾಧ್ಯವೇ ಇಲ್ಲವೆನೋ ಎಂಬಷ್ಟರ ಮಟ್ಟಿಗೆ ನೋವು ಕಾಡುತ್ತದೆ.

ಈ ರೀತಿಯ ಅನುಭವ ನಿಮಗೂ ಆಗುತ್ತಿದ್ದರೆ ಖಂಡಿತ ಇದು ಉತ್ತಮ ಆರೋಗ್ಯದ ಲಕ್ಷಣವಲ್ಲ. ನಿಮ್ಮ ದಿನನಿತ್ಯದ ಕೆಲಸಗಳಿಗೆ ನಿಮ್ಮ ಮುಟ್ಟಿನ ನೋವು ಯಾವುದೇ ರೀತಿಯ ಭಂಗ ನೀಡದೇ ಇದ್ದರೆ ಅದನ್ನು ಸಾಮಾನ್ಯ ನೋವು ಎಂದು ಹೇಳಬಹದು. ಆದರೆ ಎದ್ದೆಳಲೂ ಆಗದಷ್ಟರ ಮಟ್ಟಿಗೆ ನೋವು ಕಾಡುತ್ತಿದ್ದರೆ ಇದನ್ನು ನೀವು ಗಂಭೀರವಾಗಿ ಪರಿಗಣಿಸಬೇಕು ಎಂದೇ ಅರ್ಥ. ಇಂಥಾ ಸಂದರ್ಭಗಳಲ್ಲಿ ತಡಮಾಡದೇ ನೀವು ಪ್ರಸೂತಿ ತಜ್ಞರನ್ನು ಭೇಟಿ ಮಾಡುವುದು ಒಳಿತು.
ಮುಟ್ಟಿನ ಸಂದರ್ಭದಲ್ಲಿ ಈ ರೀತಿ ಅಸಮಾನ್ಯ ನೋವು ಕಾಣಿಸಿಕೊಳ್ಳುವುದರ ಹಿಂದೆ ಸಾಕಷ್ಟು ಕಾರಣಗಳು ಇರುತ್ತವೆ. ನಾವು ತಿನ್ನುವ ಆಹಾರ, ನಮ್ಮ ಜೀವನಶೈಲಿ, ನಮ್ಮ ಆರೋಗ್ಯ ಸಮಸ್ಯೆಗಳು ಹೀಗೆ ನಾನಾ ಕಾರಣಗಳಿಂದ ನಿಮಗೆ ಸಹಿಸಲು ಸಾಧ್ಯವಾಗದಷ್ಟರ ಮಟ್ಟಿಗೆ ನೋವು ಇರುತ್ತದೆ. ಹಾಗಾದರೆ ಆ ಕಾರಣಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ :
ಕುಟುಂಬದಲ್ಲಿ ಈ ರೀತಿಯ ಹಿನ್ನೆಲೆ ಇದ್ದಾಗ : ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಅಸಹನೀಯ ನೋವಿಗೆ ಕುಟುಂಬದ ಹಿನ್ನೆಲೆ ಕೂಡ ಕಾರಣವಾಗಬಹುದು. ನಿಮ್ಮ ತಾಯಿ,ಅಜ್ಜಿ ಹೀಗೆ ಯಾರಿಗಾದರೂ ಅವರ ಋತುಸ್ರಾವದ ದಿನಗಳಲ್ಲಿ ಅತಿಯಾದ ನೋವು ಇದ್ದರೆ ಇದು ಅನುವಂಶಿಕವಾಗಿ ಮುಂದುವರಿಯುವ ಸಾಧ್ಯತೆ ಇರುತ್ತದೆ.
ಧೂಮಪಾನ/ ಮದ್ಯಪಾನದ ಅಭ್ಯಾಸ : ಕೆಲವು ಮಹಿಳೆಯರಿಗೆ ಅತಿಯಾಗಿ ಧೂಮಪಾನ ಹಾಗೂ ಮದ್ಯಪಾನದ ಅಭ್ಯಾಸ ಇರುತ್ತದೆ. ಇಂಥವರು ಕೂಡ ಮುಟ್ಟಿನ ಸಂದರ್ಭದಲ್ಲಿ ಅತೀವ ಯಾತನೆ ಅನುಭವಿಸುತ್ತಾರೆ.
ಡಿಸ್ಮೊನೊರಿಯಾ : ಇದೊಂದು ವೈದ್ಯಕೀಯ ಸ್ಥಿತಿಯಾಗಿದ್ದು ಮುಟ್ಟಿನ ನೋವಿಗೆ ಕಾರಣವಾಗುತ್ತದೆ. ಋತುಸ್ರಾವದ ಒಂದು ವಾರಗಳವರೆಗೂ ಈ ಸಮಸ್ಯೆ ನಿಮ್ಮನ್ನು ಕಾಡಬಹುದು. ಡಿಸ್ಮೊನೊರಿಯಾ ಆದ ಸಂದರ್ಭದಲ್ಲಿ ಹೊಟ್ಟೆ, ಸೊಂಟ, ತೊಡೆಯ ಭಾಗದಲ್ಲಿ ಅತೀವವಾದ ನೋವು ಕಾಣಿಸಿಕೊಳ್ಳುತ್ತದೆ .
ಎಂಡೊಮೆಟ್ರಿಯೊಸಿಸ್ : ಇದೊಂದು ಆರೋಗ್ಯ ಸಮಸ್ಯೆ ಆಗಿದ್ದು ಕೆಲವು ಮಹಿಳೆಯರು ಗರ್ಭಾಶಯದ ಒಳಪದರದಲ್ಲಿ ಇರಬೇಕಾದ ಅಂಗಾಶವೊಂದು ಹೊರ ಪದರದಲ್ಲಿ ಬೆಳೆಯುತ್ತಿರುತ್ತದೆ. ಇದು ಋತುಸ್ರಾವದ ಸಂದರ್ಭದಲ್ಲಿ ಅಸಹನೀಯ ನೋವನ್ನು ಉಂಟು ಮಾಡುತ್ತದೆ. ಇದು ಕೇವಲ ಮುಟ್ಟಿನ ದಿನಗಳಲ್ಲಿ ಮಾತ್ರವಲ್ಲ ಸಂಭೋಗದ ಸಂದರ್ಭದಲ್ಲಿ ಕೂಡ ನೋವು ಉಂಟಾಗುವಂತೆ ಮಾಡುತ್ತದೆ.
ಅಡೆನೊಮೈಯೋಸಿಸ್ : ಈ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಕೂಡ ಮುಟ್ಟಿನ ಸಂದರ್ಭದಲ್ಲಿ ಹಾಗೂ ಸಂಭೋಗದ ಸಮಯದಲ್ಲಿ ಅತೀವ ನೋವನ್ನು ಅನುಭವಿಸುತ್ತಾರೆ .ಒಂದು ಅಥವಾ ಎರಡು ದಿನಗಳ ಕಾಲ ಈ ನೋವು ಮುಂದುವರಿಯುತ್ತದೆ. ಸಾಮಾನ್ಯವಾಗಿ 30 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಗರ್ಭಾಶಯದ ಫೈಬ್ರಾಯ್ಡ್ಗಳು : ಇವುಗಳು ಕ್ಯಾನ್ಸರ್ಕಾರಕಗಳಲ್ಲ ಆದರೂ ಸಹ ಇವುಗಳು ತೀವ್ರ ಸಮಸ್ಯೆಯನ್ನು ಕೊಡುತ್ತವೆ. ಗರ್ಭಾಶಯದ ಒಳಗೆ ಅಥವಾ ಹೊರಗೆ ಇವುಗಳು ಬೆಳೆಯುತ್ತವೆ. ಈ ಸಮಸ್ಯೆಯನ್ನು ಹೊಂದಿರುವ ಮಹಿಳೆಯರು ಅತೀವ ರಕ್ತಸ್ರಾವ, ಸಹಿಸಲು ಸಾಧ್ಯವಾಗದಷ್ಟರಮಟ್ಟಿಗಿನ ಮುಟ್ಟಿನ ಸೆಳೆತವನ್ನು ಹೊಂದಿರುತ್ತಾರೆ. ಕೆಲವರಿಗೆ ಫೈಬ್ರಾಯ್ಡ್ ಗಡ್ಡೆಗಳು ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಇನ್ನೂ ಕೆಲವರಿಗೆ ಇದು ಶಸ್ತ್ರಚಿಕಿತ್ಸೆಯವರೆಗೆ ತೆಗೆದುಕೊಂಡು ಹೋಗುತ್ತದೆ .
IUD ಬಳಕೆ : ಕೆಲವು ಮಹಿಳೆಯರು ಗರ್ಭಧಾರಣೆಯನ್ನು ತಪ್ಪಿಸಲು ತಾಮ್ರದಿಂದ ತಯಾರಿಸಿದ IUD ಬಳಕೆ ಮಾಡುತ್ತಾರೆ. ಇವುಗಳು ಕೂಡ ತೀವ್ರತರವಾದ ಮುಟ್ಟಿನ ಸೆಳೆತಕ್ಕೆ ಕಾರಣವಾಗಬಹುದು. ಇದು ಪ್ರೊಸ್ಟಗ್ಲಾಂಡಿನ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮುಟ್ಟಿನ ನೋವು ತಡೆಯಲು ಸಾಧ್ಯವಿಲ್ಲವೆಂದರೆ ಗರ್ಭ ನಿರೋಧಕ್ಕೆ ಬೇರೆ ದಾರಿ ಹುಡುಕಿಕೊಳ್ಳುವುದು ಒಳ್ಳೆಯದು.
ಗರ್ಭಕಂಠದ ಸ್ಟೆನೋಸಿಸ್ : ಈ ಸಮಸ್ಯೆ ಇರುವವರಿಗೆ ರಕ್ತಸ್ರಾವ ಸಮಪರ್ಕವಾಗಿ ಆಗುವುದಿಲ್ಲ. ಇದರಿಂದ ಗರ್ಭಾಶಯದಲ್ಲಿ ರಕ್ತದ ಶೇಖರಣೆ ಉಂಟಅಗುತ್ತದೆ. ಇದರಿಂದ ಅತೀವವಾದ ನೋವು ಕಾಣಿಸಿಕೊಳ್ಳುತ್ತದೆ . ಕಡಿಮೆ ರಕ್ತಸ್ರಾವ ಹೊಂದಿರುವವರು ಸಾಮಾನ್ಯವಾಗಿ ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.
ಮುಟ್ಟಿನ ನೋವಿನಿಂದ ಪಾರಾಗುವುದು ಹೇಗೆ..?
ಮುಟ್ಟಿನ ನೋವು ಸಾಮಾನ್ಯದಾಗಿದ್ದರೆ ಅದನ್ನು ತಡೆದುಕೊಳ್ಳಬಹುದು. ಆದರೆ ಅದರ ಜೊತೆಯಲ್ಲಿ ನೀವು ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯವಿದೆ. ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳನ್ನು ತ್ಯಜಿಸಬೇಕು. ನಿಯಮಿತ ವ್ಯಾಯಾಮ ಹಾಗೂ ಉತ್ತಮ ಆಹಾರ ಕ್ರಮ ನಿಮ್ಮ ಆಯ್ಕೆಯಾಗಿರಲಿ.
ಸಂಸ್ಕರಿಸಿದ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ನಿಜಕ್ಕೂ ಒಳ್ಳೆಯದು. ಅಲ್ಲದೇ ಸರಿಯಾದ ನಿದ್ರೆ ಕೂಡ ನಿಮ್ಮನ್ನು ಋತುಸ್ರಾವದ ನೋವಿನಿಂದ ಪಾರು ಮಾಡುತ್ತದೆ. ಮುಟ್ಟಿನ ಸಂದರ್ಭದಲ್ಲಿ ನೋವು ಕಾಣಿಸಿಕೊಂಡಾಗ ಹೀಟ್ ಪ್ಯಾಡ್ಗಳನ್ನು ಮೈಮೇಲೆ ಇಟ್ಟುಕೊಳ್ಳಿ. ಹೆಚ್ಚೆಚ್ಚು ನೀರು ಕುಡಿಯಿರಿ. ಈ ರೀತಿ ಒಳ್ಳೆಯ ಅಭ್ಯಾಸಗಳ ಮೂಲಕ ಋತುಮತಿಯರು ಮುಟ್ಟಿನ ಸೆಳೆತದಿಂದ ಮುಕ್ತಿ ಹೊಂದಲು ಸಾಧ್ಯವಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


