Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಪೂಜೆ, ಮತ್ತಿತರ ಕಾರಣಗಳಿಂದ ಮುಟ್ಟಾಗುವುದನ್ನು ತಡೆಯುವ ಮಾತ್ರೆ ತೆಗೆದುಕೊಂಡಿದ್ದೀರಾ?
ಹೆಣ್ಣು ಮಕ್ಕಳು ಋತುಮತಿಯಾದಾಗಿನಿಂದ ಅವಳು ಮೆನೋಪಾಸ್ ಹಂತಕ್ಕೆ ಬರುವವರೆಗೆ ಪ್ರತಿ ತಿಂಗಳು ಅವಳಿಗೆ ಮುಟ್ಟಾಗುತ್ತದೆ. ಇದು ಪ್ರಕೃತಿಯ ಸಹಜ ನಿಯಮ, ಅಲ್ಲದೆ ಅವಳು ಪ್ರತಿ ತಿಂಗಳು ಮುಟ್ಟಾಗುತ್ತಿದ್ದರೆ ಅವಳ ಆರೋಗ್ಯ ಚೆನ್ನಾಗಿರುತ್ತದೆ, ಸಂತಾನೋತ್ಪತ್ತಿ ಸಾಮರ್ಥ್ಯ ಚೆನ್ನಾಗಿರುತ್ತೆ. ಅದೇ ಅನಿಯಮಿತ ಮುಟ್ಟಿನ ಸಮಸ್ಯೆಯಿದ್ದರೆ ಹಾರ್ಮೋನ್ ಸಮಸ್ಯೆಗಳಿರಬಹುದು, pcos ಸಮಸ್ಯೆವಿರಬಹುದು ಅಥವಾ ಮತ್ತಿತರ ಕಾರಣಗಳಿಂದ ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾಗಬಹುದು.

ಅನಿಯಮಿತ ಮುಟ್ಟಿನ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಮಾಡಬಾರದು, ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯಬೇಕು, ಇಲ್ಲದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮದುವೆಯಾಗದೆ ಇರುವ ಹೆಣ್ಣು ಮಕ್ಕಳು ಅಥವಾ ಮದುವೆಯಾಗಿದ್ದು ಮಕ್ಕಳಾಗದಿದ್ದರೆ ಅಂಥವರು ಈ ಅನಿಯಮಿತ ಮುಟ್ಟಿನ ಸಮಸ್ಯೆ ನಿರ್ಲಕ್ಷ್ಯ ಮಾಡಲೇಬಾರದು, ಏಕೆಂದರೆ ಇದು ನಿಮ್ಮ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ತುಂಬಾನೇ ಪ್ರಭಾವ ಬೀರುವುದು. ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರೆಗೆ ಗರ್ಭಧಾರಣೆಗೆ ತೊಂದರೆಯಾಗಬಹುದು, ಹಾಗಾಗಿ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು.
ಇನ್ನು ಮಹಿಳೆಯರು ಕೆಲವೊಮ್ಮೆ ತಾವಾಗಿಯೇ ಮುಟ್ಟನ್ನು ಮುಂದೆಕ್ಕೆ ಹಾಕುತ್ತಾರೆ. ಮನೆಯಲ್ಲಿ ಪೂಜೆಯಿದೆ ಅಥವಾ ಟ್ರಾವೆಲ್ ಇದೆ, ಮದುವೆ ಸಮಾರಂಭವಿದೆ ಎಂದು ಮಾತ್ರೆ ತೆಗೆದು ಮುಟ್ಟನ್ನು ಮುಂದೆಕ್ಕೆ ಹಾಕುತ್ತಾರೆ. ಆದರೆ ಈ ರೀತಿ ಮಾಡಲೇಬಾರದು ಎಂದು ಡಾ. ಅಂಜನಪ್ಪ ಟಿ ಹೆಚ್ ತಿಳಿಸುತ್ತಾರೆ.
ಮುಟ್ಟು ಮುಂದೂಡಲು ಮಾತ್ರೆ ತೆಗೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ
ಮುಟ್ಟು ಎಂಬುವುದು ನೈಸರ್ಗಿಕ ಕ್ರಿಯೆ, ಪ್ರತ 28 ದಿನಗಳಿಗೊಮ್ಮೆ ಮುಟ್ಟಾಗುವುದು, ಆದರೆ ಅದನ್ನು ಮಾತ್ರೆ ತೆಗೆದು ಮುಂದೆಕ್ಕೆ ಹಾಕುವುದು ದೇಹದ ಮೇಲೆ ಪರಿಣಾಮ ಬೀರುವುದು, ಹಾರ್ಮೋನ್‌ಗಳ ಅಸಮತೋಲನ ಉಂಟು ಮಾಡುತ್ತದೆ. ಆದ್ದರಿಂದ ಪೂಜೆ, ಮತ್ತಿತರ ಕಾರಣಗಳಿಗೆ ಮುಟ್ಟು ಮುಂದೆಕ್ಕೆ ಹಾಕಬೇಡಿ, ಬದಲಿಗೆ ಶುಚಿತ್ವದ ಕಡೆಗೆ ಗಮನಹರಿಸಿ. ಶುಚಿತ್ವದ ಕಡೆ ಗಮನಹರಿಸಿದರೆ ಸಾಕು, ದೇವರ ಪೂಜೆ ಕಾರ್ಯದಲ್ಲಿ ಭಾಗಿಯಾಗಬಹುದು, ಇದನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಬೇಕು. ಮುಟ್ಟಾದಾಗ ಮನೆಯಿಂದ ಹೊರಗಡೆ ಕೂರಿಸುವುದು ಇವೆಲ್ಲಾ ಅವೈಜ್ಞಾನಿ ಪದ್ಧತಿ ಎಂಬುವುದಾಗಿ ಹೇಳಿದ್ದಾರೆ.
ಸರಿಯಾಗಿ ಮುಟ್ಟಾಗದೇ ಇದ್ದಾಗ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಬೇಕು
ಮದುವೆಯಾಗಿರಲಿ, ಮದುವೆಯಾಗದೇ ಇರಲಿ ಮುಟ್ಟಾಗುತ್ತಿಲ್ಲ ಎಂದಾದರೆ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸುವುದು ಒಳ್ಳೆಯದು, ಹಲವು ಹೆಣ್ಮಕ್ಕಳು ಇಂಥ ವಿಷಯಗಳಲ್ಲಿ ಮುಜುಗರ ಪಡುತ್ತಾರೆ. ಏಕೆ ಮುಟ್ಟಾಗಿಲ್ಲ ಎಂದು ಪರೀಕ್ಷೆ ಮಾಡಿಸಿದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಮುಂದೆ ಮಗು ಬೇಕೆಂದು ಬಯಸಿದಾಗ ಗರ್ಭಧಾರಣೆಗೆ ಯಾವುದೇ ತೊಂದರೆಯಾಗಲ್ಲ.
ಜನನೇಂದ್ರೀಯ ಶುಚಿತ್ವದ ಕಡೆಗೆ ಗಮನಹರಿಸಿ
ಹೆಣ್ಣು ಮಕ್ಕಳು ಶುಚಿತ್ವದ ಕಡೆಗೆ ಗಮನಹರಿಸಿ, ಮುಂಭಾಗದಿಂದ ಹಿಂಭಾಗ ತೊಳೆಯಬೇಕು, ಸೋಪು, ಮತ್ತಿತರ ಸುವಾಸನೆ ಇರುವ ಕ್ರೀಮ್ ಬಳಸಬೇಡಿ, ನೀರು ಹಾಕಿ ತೊಳೆಯಿರಿ. ಮುಟ್ಟಿನ ಸಮಯದಲ್ಲಿ ಆಗಾಗ ಪ್ಯಾಡ್ ಬದಲಾಯಿಸಿ, ಒಂದೇ ಪ್ಯಾಡ್ ದಿನವಿಡೀ ಬಳಸಬೇಡಿ. ಕೆಲವರು ರಕ್ತಸ್ರಾವ ಕಡಿಮೆ ಇದೆ ಎಂದು ಇಡೀ ದಿನ ಒಂದು ಪ್ಯಾಡ್ ಬಳಸುತ್ತಾರೆ, ಆ ತಪ್ಪು ಮಾಡಬೇಡಿ ಎಂಬುವುದಾಗಿ ವೈದ್ಯರು ಸಲಹೆ ನೀಡುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications