Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಲ್ಲದ ಟೀ ಆರೋಗ್ಯಕರ ಎಂದು ಸೇವಿಸುತ್ತಿದ್ದೀರಾ? ನಿಮ್ಮ ಊಹೆಯೇ ತಪ್ಪು ನೋಡಿ!
ಸಕ್ಕರೆ ಒಳ್ಳೆಯದಲ್ಲ, ಬೆಲ್ಲ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು. ಅದರಲ್ಲಿಯೂ ಈ ಕೋವಿಡ್ ಬಂದು ಹೋದ ಮೇಲೆ ಜನರಿಗೆ ಆರೋಗ್ಯದ ಬಗ್ಗೆ ತುಸು ಕಾಳಜಿ ಹೆಚ್ಚಾಗಿದೆ, ಹಾಗಾಗಿ ಸಕ್ಕರೆ ಬದಲಿಗೆ ಸಂಪೂರ್ಣವಾಗಿ ಬೆಲ್ಲ ಬಳಸುತ್ತಿರುವ ಎಷ್ಟೋ ಮನೆಗಳಿವೆ.
ಹಾಗಾದರೆ ಈ ಬೆಲ್ಲವನ್ನು ಬಳಸುವುದರಿಂದ ಯಾವುದೇ ಅಡ್ಡಪರಿಣಾಮವಿಲ್ಲವೇ? ಇದರ ಬಗ್ಗೆ ಆಯುರ್ವೇದ ವೈದ್ಯರಾಗಿರುವ ಡಾ. ಸೌಮ್ಯಶ್ರಿ ಶರ್ಮ ಹಂಚಿಕೊಂಡಿರುವ ಉಪಯುಕ್ತ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ:

ಬೆಲ್ಲ ಎಂದ ತಕ್ಷಣ ಅದು ಸಂಪೂರ್ಣ ಆರೋಗ್ಯಕರವೇ?
ಬೆಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಬೆಲ್ಲದಲ್ಲಿ ಅನೇಕ ಜೀವಸತ್ವಗಳಿವೆ, ಬೆಲ್ಲವನ್ನು ಹಲವು ಆಯುರ್ವೇದ ಔಷಧಗಳಲ್ಲಿ ಸೇರಿಸಲಾಗುವುದು. ಆದರೆ ಮಿತಿ ಮೀರಿದ ಬೆಲ್ಲದ ಸೇವನೆ ಒಳ್ಳೆಯದಲ್ಲ.
ಬೆಲ್ಲದಲ್ಲಿಯೂ ಸಿಹಿಯಂಶವಿದೆ
ಸಕ್ಕರೆಯಲ್ಲಿ ಶೇ. 100ರಷ್ಟು ಸಕ್ಕರೆಯಂಶವಿದೆ, ಆದರೆ ಬೆಲ್ಲದಲ್ಲಿಯೂ ಶೇ. 75-80ರಷ್ಟು ಸಕ್ಕರೆಯಂಶವಿದೆ, ಹಾಗಾಗಿ ನಾವು ಬೆಲ್ಲ ಅಲ್ವಾ ಪರ್ವಾಗಿಲ್ಲ ಎಂದು ತಿನ್ನಲಾರಂಭಿಸಿದರೆ ಅದು ಕೂಡ ಶರೀರಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ಕಲಬೆರಿಕೆಯ ಬೆಲ್ಲಗಳೂ ಮಾರುಕಟ್ಟೆಗೆ ಬಂದಿವೆ
ಈಗ ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಎಂದು ಜನರು ಬೆಲ್ಲದ ಬಳಕೆ ಹೆಚ್ಚು ಮಾಡುತ್ತಿದ್ದಾರೆ, ಆದರೆ ಈಗ ಮಾರುಕಟ್ಟೆಯಲ್ಲಿ ಕಲಬೆರಿಕೆಯ ಬೆಲ್ಲಗಳು ಮಾರುಕಟ್ಟೆಗೆ ಬರುತ್ತಿದೆ. ಇಂಥ ಬೆಲ್ಲಗಳ ಸೇವನೆ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಸಾವಯವ ಬೆಲ್ಲ ಅಂತೆಲ್ಲಾ ಬರುತ್ತೆ, ಈ ಬಗ್ಗೆ ಕೂಡ ಜನರು ಎಚ್ಚರಿಕೆವಹಿಸಬೇಕು.
ಇನ್ನು ಬೆಲ್ಲ ಒಳ್ಳೆಯದೆಂದು ಬೆಲ್ಲದ ಟೀ ಒಳ್ಳೆಯದಲ್ಲ
ಈಗ ಬೆಲ್ಲದ ಟೀ ದೊರೆಯುವ ಹಲವು ಚಹದ ಅಂಗಡಿಗಳು ತೆರೆದಿವೆ, ನಾವು ಅದನ್ನು ತುಂಬಾನೇ ಆರೋಗ್ಯಕರ ಎಂದು ಹೆಚ್ಚು ಬೆಲೆ ಕೊಟ್ಟು ಖರೀದಿಸುತ್ತೇವೆ. ಆದರೆ ಆಯುರ್ವೇದ ವೈದ್ಯರ ಪ್ರಕಾರ ಬೆಲ್ಲದ ಟೀ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಲಿಗೆ ಬೆಲ್ಲ ಹಾಕಿ ಅದಕ್ಕೆ ಟೀ ಪುಡಿ ಹಾಕಿ ಮಾಡಿದ ಆ ಟೀ ಕುಡಿಯುವುದರಿಂದ ಇದು ಚಯಪಚಯ ಕ್ರಿಯೆ ಮೇಲೆ ಪರಿಣಾಮ ಬೀರುವುದು. ಹಾಗಾಗಿ ಹೊಟ್ಟೆಯ ಆರೋಗ್ಯದ ದೃಷ್ಟಿಯಿಂದ ಬೆಲ್ಲ ಹಾಕಿದ ಟೀ ಕುಡಿಯಬೇಡಿ.
ಬೆಲ್ಲ ಒಳ್ಳೆಯದೇ, ಆದರೆ ಮಿತಿಯಲ್ಲಿ ತಿನ್ನಬೇಕು
ಬೆಲ್ಲ ಒಳ್ಳೆಯದೆಂದು ನಾವು ಮಿತಿ ಮೀರಿ ಬೆಲ್ಲ ತಿನ್ನುವುದು ಒಳ್ಳೆಯದಲ್ಲ, ಅಲ್ಲದೆ ಮಾರುಕಟ್ಟೆಯಲ್ಲಿ ಇದು ಶುದ್ಧ ಬೆಲ್ಲ ಎಂಬ ಮಾರುಕಟ್ಟೆಯ ಜಾಹೀರಾತಿಗೆ ಮರುಳಾಗಿ ಖರೀದಿಸಬೇಡಿ. ಬೆಲ್ಲದಲ್ಲಿ ಹಲವು ವಿಧಗಳಿವೆ, ಹಲವು ಬಣ್ಣದಲ್ಲಿ ಸಿಗುತ್ತದೆ.
ಬೆಲ್ಲ ಬದಲಿಗೆ ಬೆಲ್ಲದ ಜೋನಿ ಬಳಸಬಹುದು
ನೀವು ಬೆಲ್ಲದ ಬದಲಿಗೆ ಬೆಲ್ಲದ ಜೋನಿ ಕೂಡ ಬಳಸಬಹುದು, ಬೆಲ್ಲದ ಜೋನಿ ಹಳೆಯದಾದರೆ ಇನ್ನೂ ಒಳ್ಳೆಯದು. ತುಂಬಾ ಹಳೆಯ ಜೋನಿ ಸಕ್ಕರೆಯ ರೀತಿ ಹರಳಾಗುವುದು, ಸಕ್ಕರೆಯನ್ನು ಬಳಸುವುದು ಒಳ್ಳೆಯದು.
ಮಕ್ಕಳ ಹಾಲಿಗೆ ಬೆಲ್ಲ ಹಾಕಿಕೊಡಬೇಡಿ
ಮಕ್ಕಳ ಹಾಲಿ ಈ ಬೆಲ್ಲ, ಸಕ್ಕರೆ ಹಾಕಿ ನೀಡುವ ಬದಲಿಗೆ ಹಾಲನ್ನು ಹಾಗ ಕುಡಿಯಲು ನೀಡಿ ಅಥವಾ ಕಲ್ಲು ಸಕ್ಕರೆ ಹಾಕಿ ನೀಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications