Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಖಾಲಿ ಹೊಟ್ಟೆಗೆ ಮೊಸರು ಹಾಗೂ ಸಕ್ಕರೆ ಸೇವಿಸಿದ್ರೆ ಇಷ್ಟೆಲ್ಲಾ ಲಾಭಗಳಿದ್ಯಾ?
ನಮ್ಮ ಅಜ್ಜಿ ನಾನು ಮನೆಯಿಂದ ಹೊರಗಡೆ ಹೋಗಬೇಕಾದರೆ ಯಾವಾಗಲೂ ಮೊಸರನ್ನು ಸಕ್ಕರೆಯೊಂದಿಗೆ ಮಿಶ್ರಣ ಮಾಡಿ ತಿನ್ನಿಸ್ತಿದ್ಲು. ಬೇಡ ಬೇಡ ಅಂದ್ರು ಕೇಳ್ತಿರ್ಲಿಲ್ಲ. ಕೊನೆಗೆ ಒತ್ತಾಯ ಮಾಡಿ ತಿನ್ನಿಸ್ತಿದ್ಲು. ಮನೆಯಿಂದ ಹೊರ ಹೋಗೋ ಮೊದಲು ಮೊಸರು ಹಾಗೂ ಸಕ್ಕರೆ ತಿಂದ್ರೆ ಶುಭ ಶಕುನ. ಎಲ್ಲವೂ ಒಳ್ಳೆಯದಾಗುತ್ತೆ ಅಂತ ಹೇಳ್ತಿದ್ಲು.
ನಮ್ಮ ಹಿರಿಯರು ಏನೇ ಮಾಡಿದ್ರು ಅದರ ಹಿಂದೆ ಒಂದು ಉದ್ದೇಶ ಇದ್ದೇ ಇರುತ್ತಿತ್ತು. ನಮಗೆಲ್ಲಾ ಗೊತ್ತಿರೋ ಹಾಗೆ ಮೊಸರು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಇದರ ಜೊತೆಗೆ ಸಕ್ಕರೆ ನಮ್ಮ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಕಾಪಾಡಲು ಸಹಾಯ ಮಾಡುತ್ತದೆ. ಅಷ್ಟಕ್ಕು ಬೆಳ್ಳಂ ಬೆಳಗ್ಗೆ ಖಾಲಿ ಹೊಟ್ಟೆಗೆ ಮೊಸರು-ಸಕ್ಕರೆ ಸೇವಿಸೋದ್ರಿಂದ ಏನಾಗುತ್ತೆ? ಆರೋಗ್ಯಕ್ಕೆ ಯಾವ ರೀತಿ ಉಪಯೋಗವಾಗಲಿದೆ ಅನ್ನೋದನ್ನ ಹೇಳ್ತೀವಿ.

ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ
ಮೊಸರಿನಲ್ಲಿ ಉಪಯುಕ್ತ ಬ್ಯಾಕ್ಟೀರಿಯಾಗಳಿದೆ. ಇದು ನಮ್ಮ ಹೊಟ್ಟೆಯನ್ನು ಆರೋಗ್ಯವಾಗಿಡುತ್ತದೆ. ಬೆಳ್ಳಂ ಬೆಳಗ್ಗೆ ಮೊಸರು ಸೇವಿಸೋದ್ರಿಂದ ನಮ್ಮ ಕರುಳಿಗೆ ತುಂಬಾನೇ ಒಳ್ಳೆಯದು. ಉಪಯುಕ್ತ ಬ್ಯಾಕ್ಟೀರಿಯಾಗಳು ನಮ್ಮ ಹೊಟ್ಟೆಯಲ್ಲಿ ಬೆಳವಣಿಗೆ ಹೊಂದಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಬ್ಯಾಕ್ಟೀರಿಯಾಗಳು ನಿಮ್ಮ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸೋದಷ್ಟೇ ಅಲ್ಲದೇ, ಕರುಳಿನ ಕ್ಯಾನ್ಸರ್ ಸಮಸ್ಯೆ ಕೂಡ ಇದರಿಂದ ಪರಿಹಾರವಾಗುತ್ತದೆ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ನಿಮಗೊತ್ತಾ? ನಿಮ್ಮ ದೇಹವು ಹಾಲಿಗಿಂತ ವೇಗವಾಗಿ ಮೊಸರನ್ನು ಜೀರ್ಣಿಸಿಕೊಳ್ಳುತ್ತದೆ. ಹೀಗಾಗಿ ನೀವು ಬ್ರೇಕ್‌ಫಾಸ್ಟ್ ಜೊತೆಗೆ ಮೊಸರನ್ನು ಕೂಡ ಸೇವಿಸಬಹುದು. ಯಾಕಂದ್ರೆ ಇದು ವೇಗವಾಗಿ ಜೀರ್ಣವಾಗುತ್ತದೆ.
ಮೂತ್ರನಾಳದ ಸೋಂಕಿನ ಸಮಸ್ಯೆಗೆ ಪರಿಹಾರ
ಮಹಿಳೆಯರಿಗೆ ಮೂತ್ರನಾಳದ ಸೋಂಕು ಸಾಮಾನ್ಯ ಸಮಸ್ಯೆಯಾಗಿದೆ. ಇದು ಮುಖ್ಯವಾಗಿ ಮೂತ್ರಕೋಶ ಮತ್ತು ಮೂತ್ರನಾಳದ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರು ಮೂತ್ರನಾಳದ ಸೋಂಕಿನಿಂದ ಬಳಲುತ್ತಿರುವಾಗ ಮೂತ್ರ ವಿಸರ್ಜಿಸುವ ಸಂದರ್ಭದಲ್ಲಿ ನೋವು ಉಂಟಾಗುತ್ತದೆ. ಅದಕ್ಕಾಗಿ ಬೆಳಗ್ಗೆ ಒಂದು ಬಟ್ಟಲು ಮೊಸರು ಮತ್ತು ಸಕ್ಕರೆಯನ್ನು ಸೇವಿಸಬೇಕು. ಇದು ಸುಡುವ ಸಂವೇದನೆಯನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ. ಮೊಸರು ನಿಮ್ಮ ಮೂತ್ರಕೋಶವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಮೊಸರಿನಲ್ಲಿ ವಿಟಮಿನ್ ಎ, ಇ, ಸಿ, ಬಿ -2, ಬಿ -12 ಮತ್ತು ಕ್ಯಾರೊಟಿನಾಯ್ಡ್‌ಗಳಂತಹ ಬಹಳಷ್ಟು ಪೋಷಕಾಂಶಗಳನ್ನು ಹೊಂದಿದೆ. ನೀವೇನಾದರೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಬೆಳಗ್ಗೆ ಮೊಸರು ಹಾಗೂ ಸಕ್ಕರೆಯನ್ನು ಸೇವಿಸುವುದು ಉತ್ತಮ.
ತಕ್ಷಣದ ಗ್ಲೂಕೋಸ್ ಆಗಿ ಕೆಲಸ ಮಾಡುತ್ತದೆ
ದಿನವಿಡೀ ಸರಿಯಾಗಿ ಕಾರ್ಯನಿರ್ವಹಿಸಲು ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ಗ್ಲೂಕೋಸ್ ಅಗತ್ಯವಿದೆ. ಬೆಳಿಗ್ಗೆ ಒಂದು ಬೌಲ್ ಸಕ್ಕರೆ ಮತ್ತು ಮೊಸರು ಸೇವಿಸುವುದು ತುಂಬಾನೇ ಒಳ್ಳೆಯದು. ಇದು ಇಡೀ ದಿನ ನಿಮ್ಮನ್ನು ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ.
ನಿಮ್ಮ ಹೊಟ್ಟೆಯನ್ನು ತಂಪಾಗಿಡುತ್ತದೆ
ನೀವು ಮಲಬದ್ಧತೆ, ಅಜೀರ್ಣ, ಅಥವಾ ಅಸಿಡಿಟಿಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಒಂದು ಬೌಲ್ ಸಕ್ಕರೆ ಸೇರಿಸಿದ ಮೊಸರು ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ಸಕ್ಕರೆ ಮತ್ತು ಮೊಸರಿನ ಈ ಸಂಯೋಜನೆಯು ನಿಮ್ಮ ಹೊಟ್ಟೆಗೆ ತುಂಬಾನೇ ಉತ್ತಮ. ಇದು ಪಿತ್ತಕೋಶದ ದೋಷವನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯಲ್ಲಿ ಕಿರಿಕಿರಿ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ.
ಬೆಳಗ್ಗೆ ಸಕ್ಕರೆಯ ಜೊತೆಗೆ ಮೊಸರು ಸೇವಿಸೋದ್ರಿಂದ ಹತ್ತಾರು ಆರೋಗ್ಯಕಾರಿ ಪ್ರಯೋಜನಗಳಿದೆ. ಆದರೆ ನಿಮಗೆ ಶೀತ, ಕಫಾ ಸಮಸ್ಯೆ ಇರುವಾಗ, ಮಧುಮೇಹ ರೋಗಿಗಳು, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಇದನ್ನು ಸೇವಿಸಬೇಡಿ. ಉಳಿದಂತೆ ಯಾವುದೇ ರೀತಿ ಸಮಸ್ಯೆ ಇಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











