Latest Updates
-
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ?
ದಡೂತಿ ದೇಹದ ಬಟಿಸ್ಟಾ ತೂಕ ಕಳೆದುಕೊಂಡು ಹೀಗಾಗಿದ್ಯಾಕೆ..?
ನೀವು ಚಿಕ್ಕವರಿರುವಾಗ ಡಬ್ಲ್ಯೂಡಬ್ಲ್ಯೂಇ ವ್ರೆಸ್ಟ್ಲಿಂಗ್ (ಕುಸ್ತಿ) ನೋಡಿರಬಹುದು. ಅದರಲ್ಲಿ ಒಂದಿಷ್ಟು ಮಂದಿ ನಿಮ್ಮ ಫೇವರಿಟ್ ಸಹ ಇರಬಹುದು. ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿ ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡಿದ್ದ ಜಾನ್ ಸೀನಾ ಹಾಗೆ ಭಾರತದ ಗ್ರೇಟ್ ಖಲಿ, ತ್ರಿಪಲ್ ಹೆಚ್, ದಿ ರಾಕ್ ಹೀಗೆ ಒಂದಿಷ್ಟು ಮಂದಿ ನಿಮಗೆ ಗೊತ್ತರಲುಬಹುದು.
ಇವರ ಜೊತೆಗಿದ್ದ ಇನ್ನೊಬ್ಬ ಬಟಿಸ್ಟಾ ಕುರಿತಂತೆಯೂ ನಿಮಗೆ ತಿಳಿದಿರಬಹುದು. ಅಜಾನುಭಾಹುವಿನ ಹಾಗಿದ್ದ ಆತ ಎಲ್ಲರ ಫೇವರಿಟ್ ಆಗಿದ್ದ. ಆದ್ರೆ ಈಗ ಆತ ಈ ಕುಸ್ತಿಯಿಂದ ದುರವೇ ಉಳಿದಿದ್ದಾರೆ. ಇತ್ತೀಚಿಗೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸುವಂತಹ ರೂಪಕ್ಕ ಅವರುಬದಲಾಗಿದ್ದಾರೆ.

ದಡೂತಿ ದೇಹದ ವ್ಯಕ್ತಿ ಈಗ ಸಣಕಲಾಗಿ ಬದಲಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಡೇವ್ ಬೌಟಿಸ್ಟಾ ತನ್ನ ಹೊಸ ಚಿತ್ರ ದಿ ಕಿಲ್ಲರ್ಸ್ ಗೇಮ್‌ಗಾಗಿ ಬರೋಬ್ಬರಿ 22 ಕೆ.ಜಿ ತೂಕ ಇಳಸಿಕೊಂಡು ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದ್ದಾರೆ. 55 ವರ್ಷದ ಈತ ಈಗ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಅವರ ಮುಂದಿನ ಸಿನಿಮಾಗೆ 22 ಕೆ.ಜಿ ತೂಕ ಇಳಿಸಿದ್ದಾರೆ.
ಈಗ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರು ಸ್ಲಿಮ್ ಆಗಿ ಕಾಣಿಸಿಕೊಂಡಿರುವುದು ಎಲ್ಲರಿಗೂ ಆತಂಕದ ಜೊತೆಗೆ ಅಚ್ಚರಿ ಮೂಡಿಸಿದೆ. ಅಚ್ಚರಿ ವಿಚಾರ ಏನೆಂದರೆ ಒಂದು ಕಾಲದಲ್ಲಿ ಅವರು ಬರೋಬ್ಬರಿ 136 ಕೆ.ಜಿ ತೂಕ ಇದ್ದರೂ. ಈ ವೇಳೆ ಕುಸ್ತಿಯಲ್ಲಿ ಅಜಾನುಭಾಹು ರೀತಿ ಕಾನಿಸಿಕೊಂಡಿದ್ದರು. ಬಳಿಕ ನಿಯಮಿತವಾಗಿ ತೂಕ ಇಳಿಸಿಕೊಂಡಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಇಷ್ಟೊಂದು ಪ್ರಮಾಣದಲ್ಲಿ ತೂಕ ಇಳಿಸಲು ಕಾರಣ ಬಿಚ್ಚಿಟ್ಟಿದ್ದರು. ನನ್ನ ತೂಕ ಇಳಿಸಲು ಮುಖ್ಯ ಕಾರಣ ಸಿನಿಮಾ ಎಂದು ಹೇಳಿದ್ದರು. ಹಾಗೆ ಮಾಂಸಹಾರ ಸಂಪೂರ್ಣ ತ್ಯಜಿಸಿ, ಸಸ್ಯಹಾರ ಊಟ ಮಾಡುತ್ತಿದ್ದರಂತೆ. ರಾತ್ರಿ ಸಂಪೂರ್ಣ ಸಲಾಡ್, ಸಸ್ಯಹಾರ ಕಠಿಣ ಡಯೆಟ್ ಫಾಲೋ ಮಾಡಿರುವುದಾಗಿ ಹೇಳಿದ್ದಾರೆ.
ನಾನು ಮತ್ತು ನನ್ನ ತರಬೇತುದಾರರು ಗಂಟೆಗಳ ಕಾಲ ಹರಸಾಹಸ ಪಡುವುದನ್ನು ಬಿಟ್ಟು ಬೇರೇನೂ ಮಾಡಲಿಲ್ಲ. ಕಠಿಣ ನಿಯಮಗಳು ದಿನವಿಡಿ ಕಸರತ್ತು ಬಿಟ್ಟು ಬೇರೆ ಏನನ್ನೂ ಚಿಂತಿಸಿರಲಿಲ್ಲ. ತೂಕ ಇಳಿಸಿಕೊಂಡ ಬಳಿಕ ನಾನು ಹೆಚ್ಚು ಆರೋಗ್ಯವಂತನಾಗಿದ್ದೇನೆ. ಬಹಳಷ್ಟು ಮಾಂಸ ಖಂಡಗಳನ್ನು ನಾನು ತ್ಯಾಗ ಮಾಡಿದ್ದೇನೆ. ಇದರಿಂದ ಓಡಾಡುವುದು, ಕೆಲಸಗಳ ಮಾಡಿಕೊಳ್ಳುವುದು ಈಗ ಸುಲಭವಾಗಿದೆ ಎಂದಿದ್ದಾರೆ.
ತೂಕ ಇಳಿಸಲು ಅವರು ಮಾಡಿದ್ದೇನು?
22 ಕೆ.ಜಿ ಇಳಿಸುವ ಉದ್ದೇಶದಿಂದ ಡಯೆಟ್ ಆರಂಭಿಸಿದ್ದ ಅವರು, ತಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿದ್ದರು. ಅದರಲ್ಲು ಮಾಂಸಹಾರ ತ್ಯಜಿಸಿದ್ದರಂತೆ. ಸೊಪ್ಪು ತರಕಾರಿ, ಹಣ್ಣು, ಹಸಿ ತರಕಾರಿ ಸೇವನೆಯಷ್ಟೇ ಅವರ ಆಹಾರವಾಗಿತ್ತು. ಹೊರಗಿನ ಊಟಕ್ಕೆ ಬ್ರೇಕ್, ಸ್ನ್ಯಾಕ್ಸ್, ಬರ್ಗರ್ ಯಾವುದನ್ನು ಹತ್ತಿರಕ್ಕೆ ಸೇರಿಸಲಿಲ್ಲ. ಕೊನೆಯ 1 ತಿಂಗಳು ಕಠಿಣ ವ್ರತಾಚರಣೆ ನಡೆಸಿದ್ದರಂತೆ. ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು, ರಾತ್ರಿ 7 ಗಂಟೆ ಒಳಗೆ ಮಾತ್ರ ಏನಾದರು ಸೇವಿಸುವುದು.
ಆಗಾಗ ಹಸಿವಾದಾಗ ನೀರು ಕುಡಿಯುವುದು, ಹಣ್ಣು ಸೇವಿಸುವುದು ಮಾಡಿದ್ದರಂತೆ. ಹಾಗೆ ಗಂಟೆಗಳ ಕಾಲ ಜಿಮ್‌ನಲ್ಲಿ ವರ್ಕ್‌ಔಟ್ ಎಂದಿಗೂ ತಪ್ಪಿಸಲಿಲ್ಲವಂತೆ.
ವಾಸ್ತವಿಕ ಗುರಿಗಳನ್ನು ಹೊಂದಿಸಲು ಖಚಿತಪಡಿಸಿಕೊಳ್ಳಿ ಮತ್ತು ಹೆಚ್ಚು ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಪ್ರಯತ್ನಿಸಬೇಡಿ. ತಜ್ಞರ ಪ್ರಕಾರ, ನೀವು ಯಾವಾಗಲೂ ತೂಕ ನಷ್ಟದ ಆರೋಗ್ಯಕರ ಮತ್ತು ಸಮರ್ಥನೀಯ ದರವನ್ನು ಗುರಿಯಾಗಿರಿಸಿಕೊಳ್ಳಬೇಕು.ನಿಮ್ಮ ದೈನಂದಿನ ದಿನಚರಿಯಲ್ಲಿ ಸಣ್ಣ ಆದರೆ ನಿರ್ಧರಿಸಿದ ಬದಲಾವಣೆಗಳನ್ನು ಮಾಡುವುದು ತೂಕವನ್ನು ಕಳೆದುಕೊಳ್ಳುವ ಅತ್ಯುತ್ತಮ ಮಾರ್ಗವಾಗಿದೆ. ಅಂದರೆ ಆತುರಕ್ಕೆ ಬಿದ್ದು ತೂಕ ಇಳಿಸಲು ಮುಂದಾದರೆ ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications