Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಮಹಿಳೆಯರೇ....ಪ್ರೀ ಮೆನೋಪಾಸ್ ತಡೆಗಟ್ಟಲು 20ರ ಹರೆಯದಲ್ಲಿ ವಹಿಸಿ ಜಾಗ್ರತೆ
ಪ್ರೀಮೆನೋಪಾಸ್ ಎಂಬುವುದು ಮಹಿಳೆಯರ ಪಾಲಿಗೆ ದುಃಸ್ವಪ್ನವೇ ಸರಿ. ಪ್ರೀಮೆನೋಪಾಸ್ ಬಂದರೆ ಆಕೆ ಅನೇಕ ಕಾರಣಗಳಿಂದ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಾಳೆ. ಮಗುವಾಗಿರದಿದ್ದರೆ ಗರ್ಭಧಾರಣೆಗೆ ಕಷ್ಟವಾಗುವುದು ಅಲ್ಲದೆ ಗಂಡ-ಹೆಂಡತಿ ನಡುವಿನ ಮಧುರ ಬಾಂಧವ್ಯದ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುವುದು.
ಸಾಕಷ್ಟು ಮಹಿಳೆಯರಲ್ಲಿ 30ನೇ ವಯಸ್ಸಿನಲ್ಲಿ ಪ್ರೀಮೆನೋಪಾಸ್ ಕಂಡು ಬರುತ್ತಿದೆ. ಎಕ್ಸ್‌ಪರ್ಟ್‌ಗಳು ಪ್ರೀಮೆನೋಪಾಸ್ ತಡೆಗಟ್ಟಲು 20 ಹರೆಯದಲ್ಲಿಯೇ ಜಾಗ್ರತೆವಹಿಸಬೇಕೆಂದು ಹೇಳುತ್ತಾರೆ. ಎಕ್ಸ್‌ಪರ್ಟ್ ಸಂಜಿಂತ್ ಶಟ್ಟಿ ( Founder & CEO MIROR) ಪ್ರೀ ಮೆನೋಪಾಸ್ ಕುರಿತು 20ರ ಹರೆಯದಲ್ಲಿ ಈ 10 ವಿಷಯಗಳ ಕಡೆ ಗಮನ ನೀಡಬೇಕೆಂದು ಹೇಳಿದ್ದಾರೆ:

1. ಪ್ರೀಮೆನೋಪಾಸ್ ಕುರಿತು ಅರಿವು ಮುಖ್ಯ
ಯೌವನ ಪ್ರಾಯದ ಹೆಣ್ಮಕ್ಕಳು ಪ್ರೀಮೆನೋಪಾಸ್ ಕುರಿತು ಅರಿತುಕೊಳ್ಳುವುದು ಒಳ್ಳೆಯದು. ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆ ಕಡೆ ಗಮನ ಕೊಡಬೇಕು.
2. ಪ್ರಾರಂಭದಲ್ಲಿಯೇ ಲಕ್ಷಣಗಳನ್ನು ಗುರುತಿಸಿ
ಪ್ರೀಮೆನೋಪಾಸ್ 30 ಹರೆಯದಲ್ಲಿ ಉಂಟಾಗುವುದು. ಇದರ ಲಕ್ಷಣಗಳ ಬಗ್ಗೆ ಗಮನಹರಿಸಿದರೆ ಒಳ್ಳೆಯದು. ಅನಿಯಮಿತ ಮುಟ್ಟು, ಮೂಡ್ ಸ್ವಿಂಗ್, ಹೊಟ್ಟೆ ಉಬ್ಬಿದ ಅನುಭವ, ಹಾಟ್ ಫ್ಲಾಷಷ್ ಮುಂತಾದ ಲಕ್ಷಣಗಳು ಪ್ರೀ ಮೆನೋಪಾಸ್ ಸೂಚನೆಗಳಾಗಿವೆ.
3. ಜೀವನಶೈಲಿ ಕಡೆ ಗಮನಹರಿಸಬೇಕು
ಅನೇಕ ಸಮಸ್ಯೆಗಳಿಗೆ ಜೀವನಶೈಲಿ ಒಂದು ಪ್ರಮುಖ ಕಾರಣವಾಗಿದೆ. ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರಕ್ರಮ, ಒತ್ತಡಮುಕ್ತ ಜೀವನ ಇವೆಲ್ಲಾ ಪ್ರೀ ಮೆನೋಪಾಸ್ ತಡೆಗಟ್ಟಲು ಸಹಕಾರಿಯಾಗಿದೆ.
4. ಫ್ಯಾಮಿಲಿ ಪ್ಲ್ಯಾನಿಂಗ್
ಫ್ಯಾಮಿಲಿ ಪ್ಲ್ಯಾನಿಂಗ್ ಎಲ್ಲಾ ಪ್ರೀ ಮೆನೋಪಾಸ್ ಪ್ರಾರಂಭವಾಗುವ ಮುನ್ನವೇ ಮಾಡಿದರೆ ಒಳ್ಳೆಯದು. ಏಕೆಂದರೆ ಪ್ರೀಮೆನೋಪಾಸ್ ಆದರೆ ಗರ್ಭಧಾರಣೆಗೆ ಕಷ್ಟವಾಗುವುದು. ತುಂಬಾ ತಡವಾಗಿ ಮಗು ಮಾಡಿಕೊಳ್ಳಲು ಬಯಸುವವರು ಎಗ್ ಫ್ರೀಜಿಂಗ್ ಮಾಡಿದರೆ ಒಳ್ಳೆಯದು.
5. ಮಾನಸಿಕ ಆರೋಗ್ಯ
ಮಾನಸಿಕ ಆರೋಗ್ಯ ಶರೀರದ ಮೇಲೆ ಪ್ರಭಾವ ಬೀರುತ್ತದೆ. ಮಾನಸಿಕ ಒತ್ತಡ ಅಧಿಕವಿದ್ದಾಗ ಮೂಡ್ ಸ್ವಿಂಗ್ ಉಂಟಾಗುವುದು. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಗಮನಹರಿಸಬೇಕು.
6. ಮೂಳೆಯ ಆರೋಗ್ಯ
ಮೆನೋಪಾಸ್ ಬಳಿಕ ಸಂಧಿವಾತದ ಸಮಸ್ಯೆ ಹೆಚ್ಚಾಗುವುದು. ಆದ್ದರಿಂದ ಚಿಕ್ಕ ಪ್ರಾಯದಲ್ಲಿಯೇ ಮೂಳೆಗಳ ಆರೋಗ್ಯದ ಕಡೆ ಗಮನಹರಿಸಬೇಕು. ದಿನಾ ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರಕ್ರಮ ಮೂಳೆಗಳ ಆರೋಗ್ಯ ಕಾಪಾಡಲು ಸಹಕಾರಿ.
7. ಮುಕ್ತವಾಗಿ ಮಾತನಾಡಿ
ಮೆನೋಪಾಸ್, ಪ್ರೀಮೆನೋಪಾಸ್ ಕುರಿತು ಮುಕ್ತವಾಗಿ ಮಾತನಾಡಬೇಕು. ಹೀಗೆ ಮಾಡುವುದರಿಂದ ಇದರಿಂದ ಪ್ರೀಮೆನೋಪಾಸ್ ಕುರಿತು ಹೆಚ್ಚಿನವರು ತಿಳಿದುಕೊಳ್ಳುವಂತಾಗುವುದು, ಪ್ರಾರಂಭದಲ್ಲಿಯೇ ಲಕ್ಷಣಗಳು ಕಂಡು ಬಂದರೆ ಎಚ್ಚೆತ್ತುಕೊಳ್ಳಲು ಸಹಕಾರಿಯಾಗಿದೆ
8. ವೃತ್ತಿ ಬದುಕು ಹಾಗೂ ಜೀವನಶೈಲಿ
ವೃತ್ತಿ ಬದುಕಿನ ಒತ್ತಡಗಳು ಪ್ರೀಮೆನೋಪಾಸ್‌ಗೆ ಕಾರಣವಾಗಬಹುದು, ಆದ್ದರಿಂದ ವೃತ್ತಿ ಬದುಕಿನ ಒತ್ತಡಗಳನ್ನು ಕಡಿಮೆ ಮಾಡುವುದರ ಕುರಿತು ಗಮನಹರಿಸಬೇಕು, ಧ್ಯಾನ, ನಿಮ್ಮ ದೇಹದ ಆರೈಕೆ ಕಡೆ ಗಮನ ನೀಡುವುದು, ವ್ಯಾಯಾಮ ಇವೆಲ್ಲಾ ವೃತ್ತಿ ಬದುಕಿನ ಒತ್ತಡ ಕಡಿಮೆ ಮಾಡಲು ಸಹಕಾರಿ.
9. ಬದಲಾವಣೆಗಳನ್ನು ಒಪ್ಪಿಕೊಳ್ಳಿ
ಮೆನೋಪಾಸ್ ಎಂಬುವುದು ಒಂದು ಹಂತದಲ್ಲಿ ಪ್ರತಿಯೊಬ್ಬ ಮಹಿಳೆಯರಿಗೂ ಕಾಡುವ ಸಮಸ್ಯೆಯಾಗಿದೆ. ಪ್ರೀ ಮೆನೋಪಾಸ್ ತಡೆಗಟ್ಟಲು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ, ಮೆನೋಪಾಸ್ ಹಂತವನ್ನು ಧನಾತ್ಮಕವಾಗಿ ಕಾಣಿ, ಹೀಗೆ ಮಾಡುವುದರಿಂದ ಮಾನಸಿಕ ಒತ್ತಡಗಳು ಕಡಿಮೆಯಾಗುವುದು, ಬದುಕನ್ನು ಧನಾತ್ಮಕವಾಗಿ ಸ್ವೀಕರಿಸಲು ಸಾಧ್ಯವಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










