ಟೂತ್‌ ಪೇಸ್ಟ್‌ ಟ್ಯೂಬ್‌ನಲ್ಲಿ ಕಲರ್‌ ಕೋಡ್‌ ಏನನ್ನು ಸೂಚಿಸುತ್ತದೆ? ನಿಮಗೆ ಯಾವ ಟೂತ್‌ಪೇಸ್ಟ್‌ ಸೂಕ್ತ ?

ಟೂತ್‌ಪೇಸ್ಟ್‌ ಬಳಸದವರೇ ಇಲ್ಲ, ಹಿಂದೆಯೆಲ್ಲಾ ಟೂತ್‌ಪೇಸ್ಟ್‌ ಬದಲಿಗೆ ಇದ್ದಿಲಿನ ಪುಡು ಅಥವಾ ಭತ್ತದ ಸಿಪ್ಪೆ ಪುಡಿ ಮಾಡಿ ಅದಕ್ಕೆ ಉಪ್ಪು ಹಾಕಿ ಮಿಕ್ಸ್ ಮಾಡಿ ಬಳಸುತ್ತಿದ್ದರು, ಆದರೆ ಈ ಕಾಲದಲ್ಲಿ ಆ ರೀತಿಯಿಲ್ಲ, ಎಲ್ಲರೂ ಟೂತ್‌ಪೇಸ್ಟ್‌ ಬಳಸುತ್ತೇವೆ, ನೀವು ಬಳಸುವ ಟೂತ್ ಪೇಸ್ಟ್‌ನಲ್ಲಿ ಕೆಲವೊಂದು ಕಲರ್‌ ಕೋಡ್‌ ಇದೆ, ಆ ಕಲರ್ ಕೋಡ್‌ ಏಕೆ ಇದೆ? ಅದರ ಅರ್ಥವೇನು ಎಂದು ನೋಡೋಣ ಬನ್ನಿ:

tooth paste color code

ಚೌಕಾಕಾರದ ಹಸಿರು ಬಣ್ಣ: ಟೂತ್‌ಪೇಸ್ಟ್‌ನಲ್ಲಿ ಚಿಕ್ಕ ಚೌಕಾಕಾರದಲ್ಲಿ ಹಸಿರು ಬಣ್ಣವಿದ್ದರೆ ಅದನ್ನು ಸಸ್ಯೋತ್ಪನ್ನಗಳನ್ನು ಬಳಸಿ ತಯಾರಿಸಲಾಗಿದೆ ಎಂದರ್ಥ.

ಬ್ಲೂ ಮಾರ್ಕ್‌: ಇದರಲ್ಲಿ ನೈಸರ್ಗಿಕ ಉತ್ಪನ್ನಗಳ ಜೊತೆಗೆ ಕೆಲವೊಂದು ಔಷಧೀಯ ಅಂಶಗಳು ಕೂಡ ಇರಲಿದೆ.

ರೆಡ್‌ ಮಾರ್ಕಿಂಗ್: ಇದರಲ್ಲಿ ನೈಸರ್ಗಿಕ ಉತ್ಪನ್ನಗಳು ಹಾಗೂ ರಾಸಾಯನಿಕ ಉತ್ಪನ್ನಗಳು ಇರಲಿದೆ.

ಚೌಕಾಕಾರದ ಕಪ್ಪು ಬಣ್ಣ
ಈ ರೀತಿ ಇದ್ದರೆ ಆ ಟೂತ್‌ಪೇಸ್ಟ್‌ ಅನ್ನು ಬರೀ ರಾಸಾಯನಿಕ ಬಳಸಿ ತಯಾರಿಸಲಾಗಿದೆ ಎಂದರ್ಥ.

ಪ್ರತಿಯೊಂದು ಟೂತ್‌ಪೇಸ್ಟ್‌ನಲ್ಲಿ ಈ ರಾಸಾಯನಿಕಗಳಿರುತ್ತದೆ, ಅವುಗಳು ಈ ಕಾರ್ಯವನ್ನು ಮಾಡುತ್ತದೆ

ಗ್ಲಿಸರಿನ್‌, sorbitol, ಇದು ಟೂತ್‌ ಪೇಸ್ಟ್‌ ಒಣಗದಂತೆ ತಡೆಗಟ್ಟುತ್ತದೆ.
ಕ್ಯಾಲ್ಸಿಯಂ ಕಾರ್ಬೋನೇಟ್‌, ಸಿಲಿಕಾ ಇದು ಹಲ್ಲುಗಳಲ್ಲಿನ ಹಳದಿ ಅತವಾ ಕಪ್ಪು ಬಣ್ಣವನ್ನು ತೆಗೆದು ಹಲ್ಲಿನ ಹೊಳಪು ಹೆಚ್ಚಿಸುವುದು
xanthan gum, carrageenan ಈ ಅಂಶ ಟೂತ್‌ಪೇಸ್ಟ್‌ ಹದ ಪೇಸ್ಟ್‌ ರೀತಿ ಇರಲು ಸಹಾಯ ಮಾಡುತ್ತದೆ.
saccharin, xylitol ಹಲ್ಲುಗಳು ಹುಳುಕು ಉಂಟಾಗದಂತೆ ತಡೆಗಟ್ಟುತ್ತದೆ.
ಸೋಡಿಯಂ ಲೌರಿಯಲ್ ಸಲ್ಪೇಟ್‌: ಇದು ಟೂತ್‌ ಪೇಸ್ಟ್‌ ಹಾಕಿ ಹಲ್ಲುಜ್ಜುವಾಗ ನೊರೆ ನೊರೆಯಾಗಿ ಬರುವಂತೆ ಮಾಡುವುದು.

ಆ್ಯಂಟಿಬ್ಯಾಲ್ಟಿರಿಯಾ ಏಜೆಂಟ್‌: ಇದು ಹಲ್ಲುಗಳಿಗೆ ರಕ್ಷಣೆ ನೀಡುತ್ತದೆ.

ಈ ಎಲ್ಲಾ ಅಂಶಗಳು ಟೂತ್‌ಪೇಸ್ಟ್‌ನಲ್ಲಿ ಇರುವುದರಿಂದ ಇದು ಹಲ್ಲಿನಲ್ಲಿರುವ ಗಲೀಜು ತೆಗೆಯುತ್ತದೆ, ಹಲ್ಲುಗಳ ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಗಟ್ಟುತ್ತದೆ. ಅಲ್ಲದೆ ಬಾಯಿ ದುರ್ವಾಸನೆ ಬೀರುವುದನ್ನು ತಡೆಗಟ್ಟುತ್ತದೆ. ನಮ್ಮ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹಲವಾರು ಟೂತ್‌ಪೇಸ್ಟ್‌ ಮಾರುಕಟ್ಟೆಯಲ್ಲಿದೆ, ನೀವು ನಿಮಗೆ ಯಾವ ಟೂತ್‌ಪೇಸ್ಟ್‌ ಹೇಗೆ ಆಯ್ಕೆ ಮಾಡಬೇಕು?

ಫ್ಲೋರೈಡ್‌ ಟೂತ್‌ಪೇಸ್ಟ್ :ಈ ಟೂತ್‌ಪೇಸ್ಟ್‌ ಅನ್ನು ಮಕ್ಕಳು ಹಾಗೂ ದೊಡ್ಡವರು ಬಳಸಬಹುದು, ಇದು ಹಲ್ಲುಗಳು ಹುಳುಕು ಆಗುವುದನ್ನು ತಡೆಗಟ್ಟಲು ಸಹಕಾರಿ.

ವೈಟ್ನಿಂಗ್‌ ಟೂತ್‌ಪೇಸ್ಟ್‌: ಇದನ್ನು ಡೆಂಟಿಸ್ಟ್ ನಿಮಗೆ ಸೂಚಿಸುತ್ತರೆ, ಹಲ್ಲುಗಳು ತುಂಬಾ ಹಳದಿ ಬಣ್ಣದಲ್ಲಿದ್ದರೆ ಹಲ್ಲನ್ನು ಬಿಳುಪಾಗಿಸಲು ಇದನ್ನು ಬಳಸಲಾಗುವುದು.

ಆ್ಯಂಟಿ ಬ್ಯಾಕ್ಟಿರಿಯಾ ಟೂತ್‌ಪೇಸ್ಟ್: ಬಾಯಿನೊಳಗಡೆ ಕೆಟ್ಟ ಬ್ಯಾಕ್ಟಿರಿಯಾ ಬೆಳವಣಿಗೆಯನ್ನು ತಡೆಗಟ್ಟಲು, ತುಂಬಾ ಬಾಯಿ ದುರ್ವಾಸನೆ ಸಮಸ್ಯೆಯಿದ್ದರೆ ಅದನ್ನು ತಡೆಗಟ್ಟಲು ಈ ಟೂತ್‌ಪೇಸ್ಟ್‌ ಸೂಚಿಸಲಾಗುವುದು.

ಸೆನ್ಸಿಟಿವ್ ಟೂತ್‌ಪೇಸ್ಟ್: ಯಾರಿಗೆ ಸೆನ್ಸಿಟಿವ್‌ ಟೂತ್‌ಪೇಸ್ಟ್‌ ಇರುತ್ತದೋ ಅವರಿಗೆ ಈ ಟೂತ್‌ ಪೇಸ್ಟ್‌ ಬಳಸುವಂತೆ ಸೂಚಿಸಲಾಗುವುದು. ಸೆನ್ಸಿಟಿವ್ ಟೂತ್ ಇದ್ದರೆ ಬಿಸಿ ಆಹಾರ ವಸ್ತುಗಳು, ಐಸ್‌ ಕ್ರೀಮ್‌ ಬಾಯಿಗೆ ತಾಗಿದರೆ ಸಾಕು ತುಂಬಾನೇ ನೋವುಂಟಾಗುವುದು.

ನ್ಯಾಚುರಲ್ ಟೂತ್‌ಪೇಸ್ಟ್‌:
ನ್ಯಾಚುರಲ್‌ ಟೂತ್‌ಪೇಸ್ಟ್‌ ಅನ್ನು ನೈಸರ್ಗಿಕವಾದ ವಸ್ತುಗಳನ್ನು ಬಳಸಿ ತಯಾರಿಸಲಾಗಿರುತ್ತದೆ, ಇದರಲ್ಲಿ ಯಾವುದೇ ಕೃತಕ ಬಣ್ಣ ಕೂಡ ಬಳಸಿರುವುದಿಲ್ಲ.

ಮಕ್ಕಳ ಟೂತ್‌ಪೇಸ್ಟ್‌: ಈ ಟೂತ್‌ ಪೇಸ್ಟ್‌ ಹೆಚ್ಚು ಖಾರವಿರುವುದಿಲ್ಲ ಹಾಗಾಗಿ ಮಕ್ಕಳು ಈ ಟೂತ್‌ಪೇಸ್ಟ್‌ ಬಳಸಿ ಹಲ್ಲುಜ್ಜಲು ಇಷ್ಟಪಡುತ್ತಾರೆ, ಇಲ್ಲದಿದ್ದರೆ ಮಕ್ಕಳು ಖಾರ ಅಂತಾರೆ.

ಸ್ಮೋಕರ್ ಟೂತ್‌ಪೇಸ್ಟ್‌: ಇದ ಹಲ್ಲುಗಳಲ್ಲಿ ಉಜ್ಜಿದರೂ ಹೋಗದ ಕಲೆ ತೆಗೆಯಲು ಬಳಸಲಾಗುವುದು.

ಹರ್ಬಲ್ ಟೂತ್‌ಪೇಸ್ಟ್: ಇದನ್ನು ಟೀ ಟ್ರೀ ಆಯಿಲ್, ಪುದೀನಾ ಕಹಿ ಬೇವಿನ ಎಲೆ ಈ ಬಗೆಯ ವಸ್ತುಗಳನ್ನು ಹಾಕಿ ತಯಾರಿಸಲಾಗಿರುತ್ತದೆ.


ಟೂತ್‌ ಪೇಸ್ಟ್‌ ಪ್ರಯೋಜನಗಳು

ಹುಳುಕು ಹಲ್ಲು, ದಂತಕ್ಷಯ ಈ ಬಗೆಯ ಸಮಸ್ಯೆಗಳನ್ನು ತಡೆಟಗಟ್ಟಲು ಸಹಕಾರಿಯಾಗಿದೆ.
ಬಾಯಿಯ ಆರೋಗ್ಯಕ್ಕೆ ಒಳ್ಳೆಯದು: ಹಲ್ಲುಗಳನ್ನು ಬಿಳುಪಾಗಿಸುವುದು ಮಾತ್ರವಲ್ಲ ಬಾಯಿಯ ಶುಚಿತ್ವಕ್ಕೆ ಕೂಡ ಅನುಕೂಲಕರ.

ಬಾಯಿ ದುರ್ವಾಸನೆ ಬೀರುವುದನ್ನು ತಡೆಗಟ್ಟಲು ಸಹಕಾರಿ
ಹಲ್ಲುಜ್ಜುವುದರಿಂದ ಬಾಯಿ ದುರ್ವಾಸನೆ ಬೀರುವುದನ್ನು ತಡೆಗಟ್ಟಬಹುದು.

ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು
ಹಲ್ಲುಗಳು ಬಿಳುಪಾಗಿದ್ದರೆ, ಬಾಯಿ ದುರ್ವಾಸನೆ ಬೀರದಿದ್ದರೆ ನಮ್ಮಲ್ಲಿ ಕೂಡ ಒಂದು ರೀತಿಯ ಆತ್ಮವಿಶ್ವಾಸ ಹೆಚ್ಚಾಗುವುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Why Toothpaste Tube Has A Colour Code, Which Color Suits To Your Teeth

Do you know why toothpaste tube has a colour code, how to choose right toothpaste?
Story first published: Saturday, June 22, 2024, 17:51 [IST]
X
Desktop Bottom Promotion