Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಇದ್ದಕ್ಕಿದ್ದಂತೆ ಹಲ್ಲಿನ ನಡುವೆ ಗ್ಯಾಪ್ ಉಂಟಾಗಿದೆಯೇ? ಹೀಗಾಗಲು ಕಾರಣವೇನು?
ಕೆಲವರಿಗೆ ಹಲ್ಲಿನಲ್ಲಿ ಇದ್ದಕ್ಕಿದ್ದಂತೆ ಗ್ಯಾಪ್ ಕಂಡು ಬರುತ್ತದೆ. ಚಿಕ್ಕ ಪ್ರಾಯದಲ್ಲಿ ಹಲ್ಲು ಚೆನ್ನಾಗಿಯೇ ಇರುತ್ತದೆ, ಆದರೆ ಇತ್ತೀಚೆಗೆ ಏಕೋ ಸ್ವಲ್ಪ ಗ್ಯಾಪ್ ಆದಂತೆ ಅನಿಸಲಾರಂಭಿಸುವುದು. ಕೆಲವು ದಿನಗಳಲ್ಲಿ ಹಲ್ಲಿನಲ್ಲಿ ಗ್ಯಾಪ್ ಬಂದಿರುತ್ತದೆ. ಏಕೆ ಈ ರೀತಿಯಾಗುವುದು? ಇದನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ: ಹಲ್ಲಿನಲ್ಲಿ ಗ್ಯಾಪ್ ಉಂಟಾಗಲು ಕಾರಣವೇನು?
ವಯಸ್ಸಾದಾಗ ಹಲ್ಲಿನಲ್ಲಿ ಗ್ಯಾಪ್ ಉಂಟಾಗುವುದು
ನಾವು ವಯಸ್ಸಾಗುತ್ತಿದ್ದಂತೆ ನಮ್ಮ ದೇಹದಲ್ಲಿ ತುಂಬಾನೇ ಬದಲಾವಣೆಯಾಗುತ್ತದೆ, ನಮ್ಮ ದವಡೆ ಕೂಡ ಅದರಿಂದ ಹೊರತೇನೂ ಅಲ್ಲ. ವಯಸ್ಸಾಗುತ್ತಿದ್ದಂತೆ ವಸಡಿನ ಬಲ ಕಡಿಮೆಯಾಗುವುದು. ಎಲ್ಲರಲ್ಲಿ ಈ ರೀತಿಯಾಗುವುದಿಲ್ಲ, ಆದರೆ ಕೆಲವರಲ್ಲಿ ಹಲ್ಲುಗಳ ನಡುವೆ ಗ್ಯಾಪ್ ಉಂಟಾಗುವುದು.

ಹಲ್ಲಿನ ಸಮಸ್ಯೆ ಇದ್ದರೆ
ನೀವು ಹಲ್ಲಿನ ಸಮಸ್ಯೆ ಈ ಮೊದಲು ಹೊಂದಿದ್ದರೆ ಅಥವಾ ಕ್ಲಿಪ್ ಹಾಕಿಸಿ ಹಲ್ಲು ಸಡಿಲ ಮಾಡಿದ್ದರೆ ಕೆಲವರಿಗೆ ವಯಸ್ಸಾಗುತ್ತಿದ್ದಂತೆ ಮತ್ತೆ ಹಲ್ಲುಗಳ ನಡುವೆ ಗ್ಯಾಪ್ ಉಂಟಾಗುವುದು. ಕೆಲವೊಮ್ಮೆ ಯಾವುದಾದರೂ ಒಂದು ಒಂದು ಹಲ್ಲು ತೆಗೆದರೆ ಅದರಿಂದ ಕೂಡ ಈ ರೀತಿ ಉಂಟಾಗುವುದು.
ಹಲ್ಲು ಕಚ್ಚುವ ಅಭ್ಯಾಸ
ಕೆಲವರಿಗೆ ಹಲ್ಲು ಕಚ್ಚುವ ಅಭ್ಯಾಸವಿರುತ್ತದೆ. ನಿದ್ದೆಯಲ್ಲಿ ಹಲ್ಲು ಕಚ್ಚುತ್ತಾರೆ. ಇದರಿಂದ ಹಲ್ಲುಗಳ ಮೇಲೆ ಅಧಿಕ ಒತ್ತಡ ಬೀಳುವುದು, ಈ ರೀತಿಯ ಅಭ್ಯಾಸ ಇರುವವರಿಗೆ ಸ್ವಲ್ಪ ಸಮಯದ ಬಳಿಕ ಹಲ್ಲುಗಳಲ್ಲಿ ಬಿರುಕು ಕಂಡು ಬರುವುದು.
ಹಲ್ಲುಗಳ ನಡುವೆ ನಾಲಗೆ ಮುಟ್ಟಿಸುವುದು
ಈ ಬಗೆಯ ಅಭ್ಯಾಸ ಇರುವವರಲ್ಲಿ ಕೂಡ ಗ್ಯಾಪ್ ಹಲ್ಲಿನ ಸಮಸ್ಯೆ ಕಂಡು ಬರುವುದು ಸಹಜ. ನಾಲಗೆಯಿಂದ ಹಲ್ಲಿಗೆ ತಾಗಿಸುತ್ತಿದ್ದರೆ ಕೂಡ ಹಲ್ಲಿನ ನಡುವೆ ಗ್ಯಾಪ್ ಉಂಟಾಗುವುದು. ಆದ್ದರಿಂದ ಈ ರೀತಿಯ ಅಭ್ಯಾಸವಿದ್ದರೆ ಅದನ್ನು ಬಿಡಿ.
ಹಲ್ಲಿನ ನಡುವೆ ಗ್ಯಾಪ್ ತಡೆಗಟ್ಟುವುದು ಹೇಗೆ?
ಬಾಯಿಯ ಸ್ವಚ್ಛತೆ ಕಡೆಗೆ ಗಮನಹರಿಸಬೇಕು. ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಹಲ್ಲುಜ್ಜಬೇಕು. ಅಲ್ಲದೆ ಬಾಯಿಯ ಆರೋಗ್ಯಕ್ಕಾಗಿ ನಿಯಮಿತ ಚೆಕಪ್ ಮಾಡಿಸಬೇಕು. ಈ ರೀತಿ ಮಾಡುವುದರಿಂದ ಹಲ್ಲಿನ ನಡುವೆ ಗ್ಯಾಪ್ ಉಂಟಾಗುವುದನ್ನು ತಡೆಗಟ್ಟಬಹುದು.
ಮೌತ್‌ಗಾರ್ಡ್ ಧರಿಸಿ
ನಿಮಗೆ ಹಲ್ಲು ಕಚ್ಚುವ ಅಭ್ಯಾಸವಿದ್ದರೆ ಕಸ್ಟಮೈಸ್ ಮಾಡಿರುವ ಮೌತ್‌ಗಾರ್ಡ್ ಸಿಗುತ್ತದೆ, ಅದನ್ನು ಧರಿಸುವುದರಿಂದ ನಿದ್ದೆ ಮಾಡಿದಾಗ ನಿದ್ದೆಯಲ್ಲಿ ಕಲ್ಲು ಕಡಿಯುವ ಅಭ್ಯಾಸ ತಡೆಗಟ್ಟಬಹುದು. ಇದರಿಂದ ಹಲ್ಲುಗಳ ನಡುವೆ ಗ್ಯಾಪ್ ಉಂಟಾಗುವುದನ್ನು ತಡೆಗಟ್ಟಬಹುದು.
ಹಲ್ಲುಗಳ ನಡುವೆ ಗ್ಯಾಪ್ ತಡೆಗಟ್ಟಲು ಟ್ರೀಟ್ಮೆಂಟ್ ಪಡೆಯಿರಿ
ನಿಮ್ಮ ಹಲ್ಲಿನ ನಡುವೆ ಸ್ವಲ್ಪ ಗ್ಯಾಪ್ ಗೋಚರಿಸಿದರೆ ದಂತ ವೈದ್ಯರಿಗೆ ತೋರಿಸಿ. ಅವರು ನಿಮಗೆ ಯಾವ ಬಗೆಯ ಚಿಕಿತ್ಸೆ ಒಳ್ಳೆಯದು ಎಂಬುವುದರ ಬಗ್ಗೆ ಸೂಕ್ತ ಸಲಹೆ-ಸೂಚನೆ ನೀಡುತ್ತಾರೆ. ಅವರು ನಿಮಗೆ ಅಲೈನರ್ ಸೂಚಿಸಬಹುದು, ಇದನ್ನು ಧರಿಸುವುದರಿಂದ ಹಲ್ಲುಗಳ ನಡುವೆ ಗ್ಯಾಪ್ ಉಂಟಾಗುವುದು ತಡೆಗಟ್ಟಬಹುದು, ಅಲ್ಲದೆ ಹಲ್ಲುಗಳು ಮೊದಲಿನ ಸ್ಥಿತಿಗೆ ಬರುತ್ತದೆ.
ಡೆಂಟಲ್ ಇಪ್ಲ್ಯಾಂಟ್ ಅಥವಾ ಬ್ರಿಡ್ಜಸ್
ಈಗಾಗಲೇ ಎರಡು ಹಲ್ಲಿನ ನಡುವೆ ಗ್ಯಾಪ್ ಬಂದಿದ್ದರೆ ಡೆಂಡಲ್ ಇಂಪ್ಲ್ಯಾಂಟ್ ಅಥವಾ ಬ್ರಿಡ್ಜಸ್ ಮಾಡಿಸಿ ಹಲ್ಲಿನ ನಡುವೆ ಗ್ಯಾಪ್ ಉಂಟಾಗಿರುವುದನ್ನು ತಡೆಗಟ್ಟಬಹುದು.
ರಿಟೆನೈರ್ ಬಳಸಿ
ಹಲ್ಲಿನ ಚಿಕಿತ್ಸೆ ಬಳಿಕ ರಿಟನೈರ್ ಬಳಿಸಿದರೆ ಹಲ್ಲುಗಳಲ್ಲಿ ಮತ್ತೆ ಗ್ಯಾಪ್ ಉಂಟಾಗುವುದನ್ನು ತಡೆಗಟ್ಟಬಹುದು.
ಹಲ್ಲಿನಲ್ಲಿ ಗ್ಯಾಪ್ ಉಂಟಾದರೆ ಉಂಟಾಗುವ ಸಮಸ್ಯೆಯೇನು?
ಆರೋಗ್ಯದ ಬಗ್ಗೆ ಗಮನಿಸಿದರೆ ಹಲ್ಲಿನ ನಡುವಿನ ಗ್ಯಾಪ್ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ. ಆದರೆ ಹಲ್ಲಿನ ನಡುವಿನ ಗ್ಯಾಪ್ ನೀವು ನಕ್ಕಾಗಿ ನಗುವಿನ ಅಂದಕ್ಕೆ ಅಡ್ಡಿಯಾಗುವುದು. ಸುಂದರ ನಗುವಿಗಿಂತ ಹಲ್ಲಿನ ನಡುವೆ ಗ್ಯಾಪ್ ಎದ್ದು ಕಾಣುವುದು, ಇದರಿಂದ ಮುಖ ಲಕ್ಷಣ ಕೂಡ ಹಾಳಾಗುತ್ತದೆ. ಈ ಕಾರಣಕ್ಕೆ ಹಲ್ಲಿನ ನಡುವೆ ಗ್ಯಾಪ್ ಉಂಟಾಗುವುದನ್ನು ಇಷ್ಟಪಡುವುದಿಲ್ಲ.
ಹಲ್ಲುಗಳ ನಡುವೆ ಗ್ಯಾಪ್ ನಿಮಗೆ ಯಾವುದೇ ವಯಸ್ಸಿನಲ್ಲಿ ಬೇಕಾದರೂ ಉಂಟಾಗಬಹುದು. ಆದ್ದರಿಂದ ತುಂಬಾ ಗ್ಯಾಪ್ ಬಂದ ಮೇಲೆ ಫಿಲ್ ಮಾಡುವ ಬದಲಿಗೆ ಸ್ವಲ್ಪ ಗ್ಯಾಪ್ ಬರುತ್ತಿದ್ದಾಗಲೇ ಚಿಕಿತ್ಸೆ ಮಾಡಿದರೆ ಅಲೈನ್ ಚಿಕಿತ್ಸೆ ಪಡೆಯುವ ಮೂಲಕ ನಿಮ್ಮ ನಗುವಿನ ಅಂದ ಹೆಚ್ಚಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
