Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೀನಿಗೂ ಆರೋಗ್ಯಕ್ಕೂ ಇದೆ ನಂಟು..! ಸೀನು ಬಂದಾಗ ತಡೆದರೆ ಏನಾಗುತ್ತೆ ಗೊತ್ತಾ.!!
ನೀವು ನಿತ್ಯ ಎಷ್ಟು ಬಾರಿ ಸೀನುತ್ತೀರಿ..? ಬಹುಶಃ ನೀವು ಅದನ್ನು ಲೆಕ್ಕ ಇಡಲು ಹೋಗುವುದಿಲ್ಲ. ಏಕೆಂದರೆ ಅದೇನು ನಿಮಗೆ ಅಷ್ಟೊಂದು ಮುಖ್ಯವಾಗಿರುವುದಿಲ್ಲ. ಆದರೆ ಸೀನುವುದು ನಿಮ್ಮ ಆರೋಗ್ಯದ ಗುಟ್ಟನ್ನು ತಿಳಿಸುತ್ತದೆ ಎಂದರೆ ನೀವು ನಂಬುತ್ತೀರಾ? ಹೌದು ಸೀನು ಬರುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದಂತೆ.
ನಾವು ಮೂಗಿಗೆ ಧೂಳು ಹೋದಾಗ, ಇಲ್ಲವೆ ಕಿರಿಕಿರಿಯಾದಾಗ ಮಾತ್ರ ಸೀನು ಬರುತ್ತದೆ ಎಂದುಕೊಂಡಿದ್ದೇವೆ. ಯಾರಾದರು ಪದೇ ಪದೇ ಸೀನುತ್ತಿದ್ದರೆ ಅವರಿಗೆ ನೆಗಡಿಯಾಗಿದೆ ಎಂದುಕೊಳ್ಳುತ್ತೇವೆ. ಆದ್ರೆ ಈ ಸೀನುವಿಕೆಯ ಹಿಂದೆ ನಿಮ್ಮ ಆರೋಗ್ಯದ ಗುಟ್ಟು ಅಡಗಿರುತ್ತದೆ.

ಹಾಗಾದರೆ ಹೆಚ್ಚು ಸೀನು ಬಂದರೆ ಏನರ್ಥ? ಸೀನುವುದನ್ನು ಏಕೆ ತಡೆ ಹಿಡಿಯಬಾರದು? ಸೀನುವಿಕೆಗೂ ಆರೋಗ್ಯಕ್ಕೂ ಇರುವ ಸಂಬಂಧವೇನು? ಹೀಗೆ ಎಲ್ಲಾ ನಿಮ್ಮ ಪ್ರಶ್ನೆಗಳಿಗೂ ನಾವಿಂದು ಉತ್ತರ ನೀಡುತ್ತೇವೆ.
ಬಹುಪಾಲು ಜನ ಶೀತ, ನೆಗಡಿ, ಜ್ವರವಿದ್ದಾಗ ಹೆಚ್ಚು ಹೆಚ್ಚು ಸೀನು ಹೊಡೆಯುತ್ತಾರೆ. ಇದರರ್ಥ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂಬುದಾಗಿದೆ. ಸೀನುವಿಕೆಯು ಮೂಗಿನಲ್ಲಿ ಪ್ರಾರಂಭವಾದಾಗ, ಸೀನುವಿಕೆಯು ವಾಸ್ತವವಾಗಿ ಮೂಗು, ಮೆದುಳು ಮತ್ತು ನಿಮ್ಮ ದೇಹದಾದ್ಯಂತ ವಿವಿಧ ಸ್ನಾಯುಗಳ ನಡುವಿನ ಸಾಕಷ್ಟು ಸಂಕೀರ್ಣವಾದ ಪರಸ್ಪರ ಕ್ರಿಯೆಯಾಗಿದೆ.
"ಸೀನುವಿಕೆಯು ಪ್ರತಿಫಲಿತ (ಅನೈಚ್ಛಿಕ) (ನಿಮ್ಮ ನಿಯಂತ್ರಣದಲ್ಲಿ ಇಲ್ಲದ) ಕ್ರಿಯೆಯಾಗಿದೆ ಮತ್ತು ಮೂಗಿನ ಮಾರ್ಗಗಳ ಒಳಪದರವನ್ನು ಕೆರಳಿಸುವ ಮೂಗಿನ ತುದಿಯಿಂದ ಮೂಗಿನ ಹಿಂಭಾಗದ ಒಳಗೆ ಯಾವುದೋ ಒಂದು ಅಂಶದಿಂದ ಪ್ರಚೋದಿಸಲ್ಪಡುತ್ತದೆ.
ಒಂದು ಸೀನು ಬರುವ ಹಿಂದೆ ಎಷ್ಟು ಕಾರ್ಯ ನಡೆಯುತ್ತದೆ ಗೊತ್ತಾ?
ಉದ್ರೇಕಕಾರಿಯು ಮೂಗಿನ ಒಳಪದರದಲ್ಲಿ (ಮ್ಯೂಕೋಸಾ) (ಲೋಳೆ) ಇಳಿಯುತ್ತದೆ. ಲೋಳೆಪೊರೆಯ ಸಂವೇದಕಗಳು ಮೆದುಳಿಗೆ ಸಂವೇದನಾ ಸಂದೇಶವನ್ನು ಕಳುಹಿಸುತ್ತವೆ. ಮೆದುಳು ಏನಾಗುತ್ತಿದೆ ಎಂಬುದನ್ನು ಗುರುತಿಸುತ್ತದೆ ಮತ್ತು ಪ್ರಕ್ರಿಯೆಗೊಳಿಸುತ್ತದೆ. ಗಾಳಿಯ ಆಳವಾದ ಸೇವನೆಯನ್ನು ತೆಗೆದುಕೊಳ್ಳಲು ಮೆದುಳು ಎದೆ ಮತ್ತು ಡಯಾಫ್ರಾಮ್ಗೆ ಸಂದೇಶವನ್ನು ಕಳುಹಿಸುತ್ತದೆ. ನಂತರ ಮೆದುಳು ಮತ್ತೊಂದು ಸಂದೇಶವನ್ನು ಕಳುಹಿಸುತ್ತದೆ, ಇದು ಮೂಗಿನ ಮೂಲಕ ತೀಕ್ಷ್ಣವಾದ ಗಾಳಿಯನ್ನು ತಳ್ಳುತ್ತದೆ, ಇದು ಸೀನುವಿಕೆಗೆ ಕಾರಣವಾಗುತ್ತದೆ.
ಕುತೂಹಲಕಾರಿ ಅಂಶವೆಂದರೆ ಗಾಳಿಯಲ್ಲಿರುವ ಕಣಗಳು ಮಾತ್ರ ಸೀನುವಿಕೆಗೆ ಕಾರಣವಾಗಿರುವುದಿಲ್ಲ. ಒಂದು ಅಧ್ಯಯನದ ಪ್ರಕಾರ ನಮ್ಮಲ್ಲಿ ಶೇ. 35ಕ್ಕಿಂತ ಹೆಚ್ಚು ಜನರು ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕಿಗೆ ಬಂದಾಗ ಸೀನುತ್ತಾರೆ. ಈ ವಿದ್ಯಮಾನವನ್ನು ಸಾಮಾನ್ಯವಾಗಿ ಫೋಟಿಕ್ ಸೀನು ಪ್ರತಿಫಲಿತ ಎಂದು ಕರೆಯಲಾಗುತ್ತದೆ.
ಆರೋಗ್ಯ ಕಾಪಾಡುತ್ತದೆ
ಸೀನುವಿಕೆಯೂ ನಮ್ಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮೂಗಿನಿಂದ ದೇಹ ಸೇರುವ ಧೂಳು, ವೈರಸ್, ಬ್ಯಾಕ್ಟೀರಿಯಾ ದೇಹ ಸೇರುವ ಮೊದಲೇ ಸೀನುವಿಕೆಯ ಮೂಲಕ ಅದನ್ನು ಹೊರಹಾಕುತ್ತದೆ. ಇದರಿಂದ ನಿಮಗೆ ಹಲವು ಅಲರ್ಜಿಗಳು, ಸೋಂಕು ಹರಡದಂತೆ ತಡೆಯುತ್ತದೆ.
ಸೀನು ಬಂದರೆ ತಡೆಯಬಾರದು ಏಕೆ.?
ಕೆಲವರು ಸೀನು ಬಂದರೆ ಅದನ್ನು ತಡೆ ಹಿಡಿಯುತ್ತಾರೆ. ಹೀಗೆ ಮಾಡುವುದು ನಮ್ಮ ಆರೋಗ್ಯಕ್ಕೆ ಉತ್ತಮವಲ್ಲ. ಇನ್ನೂ ಅಚ್ಚರಿ ಎಂದರೆ ಸೀನುವಾಗ ನಮ್ಮ ಹೃದಯವು ಕೆಲವೇ ಮಿಲಿ ಸೆಕೆಂಡುಗಳ ಕಾಲ ತನ್ನ ಕಾರ್ಯ ನಿಲ್ಲಿಸುತ್ತದೆ. ಇದು ನಿಮ್ಮ ಅರಿವಿಗೆ ಬಾರದ ಸಮಯವಾಗಿದ್ದು, ನಮಗೆ ಗೊತ್ತಾಗುವುದಿಲ್ಲ. ಹೀಗಾಗಿ ಸೀನುವಾಗ ಅರ್ಧಕ್ಕೆ ನಿಲ್ಲಿಸುವುದು, ಅದನ್ನು ತಡೆಯುವುದು ಮಾಡಬಾರದು. ನೀವು ಎಷ್ಟು ವೇಗವಾಗಿ ಸೀನುತ್ತೀರೋ ಅಷ್ಟು ಒಳ್ಳೆಯದು.
ಸೀನು ತಡೆದವನ ಗಂಟಲಲ್ಲಿ ರಂಧ್ರ
ಕಳೆದ ವರ್ಷ ಏಪ್ರಿಲ್‌ನಲ್ಲಿ ಈ ರೀತಿಯ ವಿಚಿತ್ರ ಘಟನೆಯೊಂದು ನಡೆದಿತ್ತು. ಸೀನು ಬಂದಾಗ ಆತ ತಡೆಹಿಡಿದ ಕಾರಣ ಆತನ ಗಂಟಲಲ್ಲಿ ಸಣ್ಣ ರಂಧ್ರ ಕಾಣಿಸಿಕೊಂಡಿತ್ತು. 30 ವರ್ಷದ ಯುಸ್‌ನ ವ್ಯಕ್ತಿಯೊಬ್ಬ ವಾಹನ ಚಲಾಯಿಸುವಾಗ ಸೀನು ತಡೆಯಲು ಮುಂದಾಗಿದ್ದ ಆದರೆ ಇದು ಆತನ ಗಂಟಲಲ್ಲಿ ಸಣ್ಣ ರಂಧ್ರಕ್ಕೆ ಕಾರಣವಾಯಿತು. ಸೀನು ಬಂದಾಗ ಆತ ಬಾಯಿ, ಮೂಗು ಗಟ್ಟಿಯಾಗಿ ಮುಚ್ಚಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಕುತ್ತಿಗೆ ನೋವು ಕಾಣಿಸಿಕೊಂಡಿತು. ಗಾಬರಿಯಿಂದ ಆತ ವೈದ್ಯರ ಬಳಿ ಓಡಿದ್ದ, ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಆತನ ಗಂಟಲಲ್ಲಿ ಸಣ್ಣ ರಂಧ್ರವನ್ನು ಪತ್ತೆ ಮಾಡಿದರು.
ಎಕ್ಸ್ ರೇ ಮಾಡಿ ನೋಡಿದಾಗ ಒಳಾಂತರ ಗಂಟಲು ನಾಳದಲ್ಲಿ ಬಿರುಕು ಬಂದು ಗಂಟಲಲ್ಲಿ ಸಣ್ಣದಾದ ರಂಧ್ರವಾಗಿತ್ತು. ಇದಕ್ಕೆ ಕಾರಣ ಸೀನುವಾಗ ಆತನ ಗಂಟಲ ಮೇಲಿನ ಒತ್ತಡವು ಶೇ,40ರಷ್ಟು ಹೆಚ್ಚಾಯಿತು. ಇದು ಆತನ ನಾಳ ಸೀಳಿ ಗಂಟಲಲ್ಲಿ ರಂಧ್ರಕ್ಕೆ ಕಾರಣವಾಯಿತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
