Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿದರೆ ಈ ಅದ್ಭುತ ಪ್ರಯೋಜನಗಳಿವೆ ಗೊತ್ತಾ?
ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮಲ್ಲಿ ಬಹುತೇಕರು ಬೆಳಗ್ಗೆ ಎಂದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯುವ ಅಭ್ಯಾಸ ಬಹುತೇಕ ನಿಮಗೂ ಇರಬಹುದು ಅಲ್ವಾ? ವಿಷಯ ಏನಪ್ಪಾ ಅಂದರೆ ಬ್ರೆಷ್ ಮಾಡದೆ ಕುಡಿದರೆ ಇನ್ನೂ ಒಳ್ಳೆಯದು. ನೀವು ಹಲ್ಲುಜ್ಜಿದ ಬಳಿಕ ನೀರು ಕುಡಿಯುವುದಕ್ಕಿಂತ ಹಲ್ಲುಜ್ಜದೆ ಕುಡಿದರೆ ಲಾಭ ಹೆಚ್ಚು.
ಬೆಳಗ್ಗೆ ನಮ್ಮ ದಿನವನ್ನು ಒಂದು ಲೋಟ ನೀರಿನಿಂದ ಪ್ರಾರಂಭಿಸಿದರೆ ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ಮಲ, ಮೂತ್ರ ಮೂಲಕ ಹೊರಹಾಕಲು ಸಹಾಯ ಮಾಡುತ್ತದೆ. ಬೆಳಗ್ಗೆ ಎದ್ದ ಮೇಲೆ ಬಿಸಿ ನೀರಿಗೆ ನಿಂಬೆರಸ ಸೇರಿಸಿ ಕುಡಿದರೆ ಒಳ್ಳೆಯದು. ಹೀಗೆ ಕುಡಿಯುವಾಗ ಸಾಮಾನ್ಯವಾಗಿ ನಾವು ಹಲ್ಲುಜ್ಜಿದ ಬಳಿಕ ಕುಡಿಯುತ್ತೇವೆ, ಆದರೆ ಬ್ರೆಷ್ ಮಾಡದೆ ನೀರು ಕುಡಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಹೇಗೆ ಎಂದು ನೋಡೋಣ ಬನ್ನಿ:

ಬೆಳಗ್ಗೆ ಎದ್ದ ತಕ್ಷಣ ಬ್ರೆಷ್ ಮಾಡದೆ ನೀರು ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು:
* ದೇಹದಲ್ಲಿ ನೀರಿನಂಶ ಕಾಪಾಡುತ್ತದೆ: ನಾವು ಮಲಗಿದ ಮೇಲೆ ಮಧ್ಯದಲ್ಲಿ ಎದ್ದು ನೀರು ಕುಡಿಯುವವರು ತಂಬಾ ಕಡಿಮೆ. ಹೆಚ್ಚಿನವರು ಮಲಗಿದರೆ ಬೆಳಗ್ಗೆ ಎಚ್ಚರವಾದ ಮೇಲಷ್ಟೇ ನೀರು ಕುಡಿಯುವುದು. ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡಬಹುದು.
* ರೋಗ ನಿರೋಧಕ ಶಕ್ತಿ ಹೆಚ್ಚುವುದು: ನಾವು ರೋಗ ನಿರೋಧಕ ಶಕ್ತಿ ಹೆಚ್ಚಬೇಕೆಂದು ಏನೆಲ್ಲಾ ಮಾಡುತ್ತೇವೆ, ಅಂದ ಮೇಲೆ ಇಷ್ಟು ಸರಳವಾಗಿರುವ ವಿಧಾನವನ್ನು ಬಿಡಲು ಹೇಗೆ ಸಾಧ್ಯ ಅಲ್ವಾ? ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜದೆ ನೀರು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.
* ರಕ್ತದೊತ್ತಡ ಕಡಿಮೆ ಮಾಡುತ್ತದೆ: ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಈ ಅಭ್ಯಾಸ ರೂಢಿಸಿಕೊಂಡರೆ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು. ಅಲ್ಲದೆ ಈ ಅಭ್ಯಾಸದಿಂದ ಸಕ್ಕರೆಯಂಶ ಕೂಡ ನಿಯಂತ್ರಣದಲ್ಲಿರುತ್ತದೆ.
* ಗ್ಯಾಸ್ಟ್ರಿಕ್ ಸಮಸ್ಯೆ ತಡೆಗಟ್ಟುತ್ತದೆ: ಗ್ಯಾಸ್ಟ್ರಿಕ್ ಎಂಬುವುದು ಸರ್ವೇಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಅಜೀರ್ಣ ಸಮಸ್ಯೆಯಿಂದಾಗಿ ಗ್ಯಾಸ್ಟ್ರಿಕ್ ಉಂಟಾಗುವುದು. ಹಲ್ಲುಜ್ಜದೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ತಡೆಗಟ್ಟಬಹುದು.
* ತ್ವಚೆಗೆ ಒಳ್ಳೆಯದು: ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜದೆ ನೀರು ಕುಡಿಯುವುದರಿಂದ ತ್ವಚೆಗೆ ಕೂಡ ತುಂಬಾ ಒಳ್ಳೆಯದು. ತ್ವಚೆಯಲ್ಲಿ ನೀರಿನಂಶ ಕಾಪಾಡುವುದರಿಂದ ತ್ವಚೆ ಡ್ರೈಯಾಗುವುದು ಕಡಿಮೆಯಾಗುತ್ತದೆ.
ಬೆಳಗ್ಗೆ ಎದ್ದಾಗ ಬಾಯಿಯ ದುರ್ವಾಸನೆ ತಡೆಗಟ್ಟಲು ಏನು ಮಾಡಬೇಕು?
ಬೆಳಗ್ಗೆ ಎದ್ದಾಗ ಬಾಯಿ ದುರ್ವಾಸನೆ ಬೀರುತ್ತಿದ್ದರೆ ಹಲ್ಲುಜ್ಜಿಯೇ ನೀರು ಕುಡಿಯಬೇಕೆನಿಸುವುದು. ರಾತ್ರಿ ಮಲಗಿದಾಗ ಎಂಜಲು ಉತ್ಪತ್ತಿ ಕಡಿಮೆಯಾಗುವುದು. ಇದರಿಂದ ಬಾಯಿ ದುರ್ವಾಸನೆ ಉಂಟಾಗುವುದು. ಅಲ್ಲದೆ ತಿಂದ ಆಹಾರ ಹಲ್ಲುಗಳಲ್ಲಿದ್ದರೆ ಅದು ದುರ್ವಾಸನೆ ಬೀರುವುದು. ಆದ್ದರಿಂದ ನೀವು ಮಲಗುವ ಮುನ್ನ ಹಲ್ಲುಜ್ಜಿ ನೀರು ಕುಡಿದು ಮಲಗಿ. ಇದರಿಂದ ಬೆಳಗ್ಗೆ ಎದ್ದಾಗ ಬಾಯಿ ದುರ್ವಾಸನೆ ಬೀರುವುದು ಕಡಿಮೆಯಾಗುತ್ತದೆ.
ಹಲ್ಲುಜ್ಜಿದ ತಕ್ಷಣ ನೀರು ಕುಡಿಯುವ ಅಭ್ಯಾಸವಿದೆಯೇ? ಬೇಡ್ವೆ ಬೇಡ
ನಿಮಗೆ ಹಲ್ಲುಜ್ಜಿದ ತಕ್ಷಣ ನೀರು ಕುಡಿಯುವ ಅಭ್ಯಾಸವಿದ್ದರೆ ಅದು ಬೇಡ್ವೆ ಬೇಡ, ನೀರು ಅಂತಲ್ಲ ಯಾವುದೇ ಆಹಾರವನ್ನು ಹಲ್ಲುಜ್ಜಿದ ತಕ್ಷಣ ಸೇವಿಸಬಾರದು. ಹಲ್ಲುಜ್ಜಿದ ಟೂತ್ ಪೇಸ್ಟ್ ಬರೀ ಅನಾರೋಗ್ಯಕರ ಬ್ಯಾಕ್ಟರಿಯಾ ಮಾತ್ರವಲ್ಲ, ಆರೋಗ್ಯಕರ ಬ್ಯಾಕ್ಟಿರಿಯಾ ಇಲ್ಲವಾಗುವುದು. ಆದ್ದರಿಂದ ನೀವು ಹಲ್ಲುಜ್ಜಿ ಒಂದು ನಿಮಿಷದ ಬಳಿಕ ಆಹಾರ ಸೇವಿಸಿದರೆ ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

