Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುರುಷರು ಸಿಹಿ ಕುಂಬಳ ಬೀಜ ಏಕೆ ಸೇವಿಸಬೇಕು? ಸೂಪರ್ ಫುಡ್ ಬಗ್ಗೆ ನಿಮಗೆ ಗೊತ್ತಾ?
ಹಣ್ಣುಗಳಲ್ಲಿರುವ ಪೋಷಕಾಂಶ, ವಿಟಮಿನ್ ಹಾಗೂ ಸಾರವು ದೇಹದ ಆರೋಗ್ಯಕ್ಕೆ ಬಹಳ ಉತ್ತಮ ಎಂದು ತಿಳಿದಿದ್ದೇವೆ. ಹಣ್ಣುಗಳ ಸೇವನೆ ಆರೋಗ್ಯಕರ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರು ತಮ್ಮ ಅಡುಗೆ, ಜೀವನ ಶೈಲಿಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ತಂದಿರುವುದಂತು ನಾವು ನೋಡುತ್ತಿದ್ದೇವೆ. ಹಾಗೆ ಅಡುಗೆ ಮನೆಯಲ್ಲಿ ಈಗ ಆರೋಗ್ಯಕರ ಅಂಶಗಳು ಅಥವಾ ವಸ್ತುಗಳು ಹೆಚ್ಚಾಗಿ ಬಳಸುವುದು ರೂಢಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಇಡೀ ದೇಹವನ್ನು ಸದೃಢವಾಗಿಡಲು ಎಲ್ಲರು ಬಹಳ ಸುಲಭದ ಹಾಗೆ ಮನೆಯಲ್ಲೇ ಬಳಸುವ ವಸ್ತುಗಳ ಪ್ರಯೋಜನ ಪಡೆಯಲು ಮುಂದಾಗೋದು ನೋಡಬಹುದು. ಇಂತಹ ವಸ್ತುಗಳ ಪೈಕಿ ಸಿಹಿ ಕುಂಬಳ ಬೀಜಗಳು ಸಹ ಒಂದಾಗಿದೆ. ಹಲವು ರೀತಿಯ ಖಾದ್ಯಗಳ ಮಾಡಲು ಸಿಹಿ ಕುಂಬಳ ಬಳಸುವುದು ನೋಡಿರುತ್ತೀರಿ. ಆದ್ರೆ ಅದರ ಬೀಜದಿಂದ ಆಗುವ ಪ್ರಯೋಜನ ತಿಳಿದರೆ ನಿಮಗೂ ಶಾಕ್ ಆಗೋದು ಖಚಿತ.

ಅದ್ರಲ್ಲೂ ಈ ಸಿಹಿ ಕುಂಬಳ ಬೀಜಗಳು ಪುರುಷರ ಆರೋಗ್ಯಕ್ಕೆ ಒಂದು ಸೂಪರ್ ಫುಡ್ ಎನ್ನಬಹುದು. ಪುರುಷರಿಗೆ ಪ್ರತಿದಿನ ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದಾಗುವ ಅದ್ಭುತ ಪ್ರಯೋಜನಗಳ ಪಡೆಯಬಹುದು. ಸಿಹಿ ಕುಂಬಳಕಾಯಿಯಲ್ಲೂ ಬೀಟಾ ಕ್ಯಾರೋಟಿನ್ ಎಂಬ ಪೋಷಕಾಂಶವಿದ್ದು ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿದೆ. ಹಾಗೆ ಇದು ಪುರುಷರ ಆರೋಗ್ಯದ ದೃಷ್ಟಿಯಿಂದ ಹಲವು ರೀತಿಯ ಪ್ರಯೋಜನಗಳ ಹೊಂದಿದೆ. ಹಾಗಾದ್ರೆ ಈ ಸಿಹಿ ಕುಂಬಳ ಬೀಜವನ್ನು ಪುರುಷರು ಏಕೆ ಸೇವಿಸಬೇಕು ಗೊತ್ತಾ?
ವೀರ್ಯಾಣು ಗುಣಮಟ್ಟ ಹೆಚ್ಚಿಸುವ ಗುಣ
ಪುರುಷರಲ್ಲಿ ಇತ್ತೀಚಿಗೆ ಬಂಜೆತನ ಹೆಚ್ಚುತ್ತಿರುವುದು ನೋಡಬಹುದು. ಅಂದರೆ ಅವರ ವೀರ್ಯಾಣುವಿನ ಸಮಸ್ಯೆಯಿಂದಾಗಿ ಮಕ್ಕಳಾಗದೆ ಇರುವು ಪ್ರಕರಣಗಳ ಸಂಖ್ಯೆ ಕೂಡ ಅಧಿಕವಾಗಿದೆ. ಆದರೆ ಸಿಹಿ ಕುಂಬಳದಲ್ಲಿನ ಬೀಜಗಳು ಸೇವಿಸುವುದು ಈ ಅಪಾಯವನ್ನು ಕಡಿಮೆ ಮಾಡಲಿದೆ. ಈ ಬೀಜಗಳು ಹೆಚ್ಚಿನ ಪ್ರಮಾಣದ ಸತುವನ್ನು ಹೊಂದಿರುತ್ತವೆ. ಪುರುಷ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಸತುವು ಪ್ರಮುಖ ಪಾತ್ರ ವಹಿಸುತ್ತದೆ. ಇದು ವೀರ್ಯಾಣುಗಳ ಸಂಖ್ಯೆ, ವೀರ್ಯದ ಗುಣಮಟ್ಟ, ಉತ್ಕರ್ಷಣ ನಿರೋಧಕಗಳು ವೀರ್ಯ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ. ಮೆಗ್ನೀಸಿಯಮ್ ಮತ್ತು ಅರ್ಜಿನೈನ್‌ನಂತಹ ಪೋಷಕಾಂಶಗಳು ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಒಟ್ಟಾರೆ ಸಂತಾನೋತ್ಪತ್ತಿ ಸಂಬಂಧಿತ ವಿಚಾರದಲ್ಲಿ ಇವು ಬಹಳ ಅನುಕೂಲಕರ ಎಂದು ಸಾಬೀತಾಗಿದೆ.
ಹೃದಯ ಆರೋಗ್ಯಕ್ಕೂ ಇದು ಬೆಸ್ಟ್
ಯುವಕರಲ್ಲಿ ಕಂಡುಬರುತ್ತಿರುವ ಹೃದಯ ಸಂಬಂಧಿ ಸಮಸ್ಯೆಗಳಿಗೂ ಇದು ಪರಿಹಾರ ನೀಡಲಿದೆ. ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಲಿದೆ. ಇದರಲ್ಲಿರುವ ಆರೋಗ್ಯಕರ ಕೊಬ್ಬುಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಅಪಾಯಗಳ ಕಡಿಮೆ ಮಾಡಲಿದೆ.
ವೃಷಣ ಸಮಸ್ಯೆಗಳ ದೂರಾಗಿಸಲಿದೆ
ಪ್ರಮುಖವಾಗಿ ಪುರುಷರಲ್ಲಿ ಕಾಣಿಸುವ ಪ್ರಾಸ್ಟೇಟ್ ಉರಿಯೂತ ಅಥವಾ ಕ್ಯಾನ್ಸರ್. ಕುಂಬಳಕಾಯಿ ಬೀಜಗಳಲ್ಲಿರುವ ಸತು ಮತ್ತು ಫೈಟೊಸ್ಟೆರಾಲ್‌ಗಳು ಪ್ರಾಸ್ಟೇಟ್ ಗ್ರಂಥಿಯ ಆರೋಗ್ಯವನ್ನು ರಕ್ಷಿಸುತ್ತವೆ. ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯ ಒಂದು ಸಣ್ಣ ಗ್ರಂಥಿಯಾಗಿದ್ದು, ಇದು ಮೂತ್ರಕೋಶದ ಕೆಳಗೆ ಮತ್ತು ಮೂತ್ರನಾಳವನ್ನು ಸುತ್ತುವರೆದಿದೆ; ಇದರ ಮುಖ್ಯ ಕೆಲಸ ವೀರ್ಯಾಣುಗಳನ್ನು ಸಾಗಿಸುವ ದ್ರವವನ್ನು ಉತ್ಪಾದಿಸುವುದು. ಈ ಕಾರ್ಯ ಸಲೀಸಾಗಿ ನಿರ್ವಹಿಸುವಲ್ಲಿ ಈ ಸಿಹಿ ಕುಂಬಳದ ಬೀಜಗಳು ನೆರವಾಗಲಿವೆ.
ಹಕ್ಕು ನಿರಾಕರಣೆ: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ. ಇದು ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರಲು ಉದ್ದೇಶಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ನಿಮ್ಮ ವೈದ್ಯರನ್ನು ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ.



Click it and Unblock the Notifications