Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪ್ಯಾಕೆಟ್ ಹಾಲು ಬೇಗನೆ ಹಾಳಾಗಲ್ಲ ಏಕೆ ಗೊತ್ತೆ?
ನಾವು ರೈತರಿಂದ ಹಾಲು ಪಡೆದರೆ ಒಂದು ದಿನ ಪೂರ್ತಿ ಇಡಲು ಸಾಧ್ಯವಾಗಲ್ಲ. ಕೆಲವೊಮ್ಮೆ ಬೆಳಗ್ಗೆ ಬಂದ ಹಾಕು ಸಂಜೆ ಹೊತ್ತಿಗೆ ಒಡೆದಿರುತ್ತದೆ. ಅದರಲ್ಲೂ ಕಾಯಿಸದೆ ಇಟ್ಟರೆ ಬೇಗನೆ ಹಾಳಾಗುತ್ತದೆ. ಹಾಲನ್ನು ಕಾಯಿಸಿ ಇಟ್ಟರೆ ಸ್ವಲ್ಪ ಸಮಯ ಬಳಸಬಹುದು.
ಅದೇ ಪ್ಯಾಕೆಟ್ ಹಾಲು ಪ್ಯಾಕ್ ಆಗಿ ನಮಗೆ ಸಿಗಲು ಕೆಲ ದಿನ ಬೇಕಾಗುತ್ತದೆ. ಅದರ ಮೇಲೆ ಕೂಡ ಇಷ್ಟು ದಿನ ಬಾಳಿಕೆ ಬರುತ್ತದೆ ಎಂದು ಬರೆದಿರುತ್ತದೆ. ಅಲ್ಲದೆ ಟೋನ್ಡ್ ಮಿಲ್ಕ್ ಅಂತೂ ಎಷ್ಟು ತಿಂಗಳುಗಟ್ಟಲೆ ಇಟ್ಟು ಬಳಸುತ್ತಾರೆ. ಏಕೆ ಪ್ಯಾಕ್ ಮಾಡಿದ ಹಾಲು ಹಾಳಾಗುವುದಿಲ್ಲ ಎಂದು ನೋಡೋಣ ಬನ್ನಿ:

ಹಾಲು ಪೋಷಕಾಂಶಗಳ ಆಗರ
ಹಾಲನ್ನು ಡೈರಿಯಿಂದ ಸಂಗ್ರಹಿಸಿ ಅದನ್ನು ಪ್ಯಾಕೆಟ್‌ನಲ್ಲಿ ಪ್ಯಾಕ್ ಮಾಡಿ ಮತ್ತೆ ಗ್ರಾಹಕರಿಗೆ ನೀಡುವಾಗ ಕೆಲವೊಂದು ವಿಧಾನಗಳಿರುತ್ತದೆ. ಹೀಗೆ ಹಾಲನ್ನು ಪ್ಯಾಕ್ ಮಾಡುವಾಗ ಹಾಲಿನಲ್ಲಿರುವ ಪೋಷಕಾಂಶ ಕಡಿಮೆಯಾಗಬಾರದು. ಅದೇ ರೀತಿ ಹಾಲು ಹಾಳಾಗಲೂಬಾರದು.ಈ ರೀತಿ ಮುನ್ನೆಚ್ಚರಿಕೆವಹಿಸಿ ಹಾಲನ್ನು ಪ್ಯಾಕ್ ಮಾಡಲಾಗುವುದು.
ಏಕೆ ಹಾಲು ಹಾಳಾಗುವುದಿಲ್ಲ
ಆಹಾರ ಇಲಾಖೆಯ ಮಾನದಂಡದ ಪ್ರಕಾರ ಹಾಲನ್ನು ಪಾಶ್ಚರೈಸರ್ ಮಾಡಿ ಹಾಲನ್ನು ಪ್ಯಾಕ್ ಮಾಡಿ. ಪಾಶ್ಚರೈಸರ್‌ನಲ್ಲಿ ಹಾಲನ್ನು ಹೀಟ್ ಪ್ರಾಸೆಸಿಂಗ್ (ಕಾಯಿಸುವ ವಿಧಾನ) ಮಾಡುವುದರಿಂದ ಹಾಲು ಬಾಳಿಕೆ ಬರುವುದು ಹೆಚ್ಚಾಗುವುದು. ಪಾಶ್ಚರೈಸರ್ ಸಿಸ್ಟಮ್‌ನಲ್ಲಿ ಹಾಲನನ್ಉ 71.5 ° C ಉಷ್ಣಾಂಶದಲ್ಲಿ 15 ಸೆಕೆಂಡ್ ಕಾಯಿಸಲಾಗುವುದು, ಆದರೆ 25 ಸೆಕೆಂಡ್‌ಗಿಂತ ಹೆಚ್ಚು ಕಾಯಿಸಬಾರದು. ಹಾಲನ್ನು ಕಾಯಿಸಿ ನಂತರ ತಣ್ಣಗಾಗಿಸಿ ಪ್ಯಾಕ್ ಮಾಡಲಾಗುವುದು. ಇದನ್ನು ಡೈರಿ ಭಾಷೆಯಲ್ಲಿ ಹೀಟ್ ಎಕ್ಸ್‌ಚೇಂಜರ್ (heat exchanger) ಎಂದು ಹೇಳಲಾಗುವುದು. ಇದರಿಂದ ಹಾಲಿನ ಬಾಳಿಕೆ ಹೆಚ್ಚಾಗುವುದು.
ಪ್ಯಾಕೆಟ್ ಹಾಲಿನಲ್ಲಿ 3 ವಿಧ
ಟೋನ್ಡ್ ಹಾಲು
ಡಬಲ್ ಟೋನ್ಡ್ ಹಾಲು
ಫುಲ್ ಕ್ರೀಮ್ ಹಾಲು
ಫುಲ್ ಕ್ರೀಮ್ ಹಾಲು: ಇದನ್ನು ಪಾಶ್ಚರೈಸರ್ ಅಷ್ಟೇ ಮಾಡುವುದು, ಆದರೆ ಅದರಲ್ಲಿ ಕೆನೆ ಹಾಗೆಯೇ ಇರುತ್ತದೆ. ಪ್ಯಾಕೆಟ್ ಹಾಲಿನಲ್ಲಿ ಕೆನೆ ಇರುತ್ತದೆ. ನೀವು ಪ್ಯಾಕೆಟ್ ಹಾಲು ತಂದು ಅದರಿಂದ ಬೆಣ್ಣೆ, ತುಪ್ಪ ತಯಾರಿಸಬಹುದು.
ಟೋನ್ಡ್ ಹಾಲು
ಟೋನ್ಡ್ ಹಾಲಿನಿಂದ ಕೆನೆಯನ್ನು ತೆಗೆಯಲಾಗಿರುತ್ತದೆ ಅಲ್ಲದೆ ಅಧಿಕ ಉಷ್ಣಾಂಶದಲ್ಲಿ ಕುದಿಸಿ ಆರಿಸಿ ಪ್ಯಾಕ್ ಮಾಡಲಾಗಿರುತ್ತದೆ. ಇದರಿಂದ ಇದು ಬೇಗನೆ ಹಾಳಾಗುವುದಿಲ್ಲ. ಟೋನ್ಡ್ ಹಾಲಿನಲ್ಲಿ 6 ಲೇಯರ್ ಪ್ರೊಟೆಕ್ಷನ್ ಇರುತ್ತದೆ.
ಹಾಲು ಬೇಗನೆ ಹಾಳಾಗಬಾರದೆಂದರೆ ಟೆಟ್ರಾ ಪ್ಯಾಕ್ ಬೆಸ್ಟ್
ನೀವು ಹಾಲನ್ನು ಒಂದು ವಾರದವರೆಗೆ ಇಟ್ಟು ಬಳಸಬೇಕು ಎಂದು ನೀವು ಬಯಸುವುದಾದರೆ ಟೋನ್ಡ್ ಹಾಲು ಒಳ್ಳೆಯದು. ಆದರೆ ನೀವು ಒಂದೇ ದಿನದಲ್ಲಿ ಬಳಸುತ್ತೀರಿ ಎಂದಾದರೆ ನೀವು ಪ್ಯಾಕೆಟ್ ಹಾಲನ್ನು ಬಳಸಬಹುದು. ಇದರಲ್ಲಿ ಕೆನೆಯಂಶ ಕೂಡ ಇರುತ್ತದೆ.
ಯಾವುದೇ ಕೆಮಿಕಲ್ ಬಳಸಲ್ಲ
ಕೆಲವರಲ್ಲಿ ಹಾಲಿಗೆ ಪ್ರಿಸರ್ವೇಟಿವ್ ಬಳಸುತ್ತಿರಬಹುದು ಆದ್ದರಿಂದ ಹಾಳಾಗಲ್ಲ ಎಂದು ಭಾವಿಸುತ್ತಾರೆ. ಆದರೆ ಪ್ರಿಸರ್ವೇಟಿವ್ ಬಳಸಲ್ಲ, ಬದಲಿಗೆ ಪಾಶ್ಚರೈಸರ್ ವಿಧಾನ ಮೂಲಕವಷ್ಟೇ ಹಾಲು ಕೆಡದಂತೆ ಸಂರಕ್ಷಿಸಲಾಗುವುದು. ಆದ್ದರಿಂದ ಈ ಹಾಲುಗಳು ಕುಡಿಯಲು ಯೋಗ್ಯವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

