Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮದುವೆಗೆ ಮೊದಲು ಜೋಡಿ ಲಿವರ್ ಪರೀಕ್ಷೆ ಮಾಡಿಸಬೇಕು, ಏಕೆ? ಈ ಪರೀಕ್ಷ ವೈವಾಹಿಕ ಬದುಕಿಗೆ ಹೇಗೆ ಸಹಕಾರಿಯಾದೀತು?
ಮದುವೆ ಸಂಬಂಧ ಬರುವಾಗ ಅವರ ಜಾತಕ, ಮನೆತನ, ಆಸ್ತಿ, ಕೆಲಸ ಎಲ್ಲಾ ತಿಳಿದುಕೊಳ್ಳುತ್ತಾರೆ, ಅದರಲ್ಲಿಯೂ ಹುಡುಗಿ ಮನೆಯವರು ನಮ್ಮ ಹುಡುಗಿ ಹೋಗುವ ಮನೆಯಲ್ಲಿ ಚೆನ್ನಾಗಿ ಬಾಳಬೇಕೆಂದು ಹುಡುಗನ ಓದು, ಸಂಬಳ ಎಲ್ಲಾ ತಿಳಿಯಬಯಸುತ್ತಾರೆ, ಇನ್ನು ಹುಡುಗನ ಮನೆಯವರು ಕೂಡ ಹುಡುಗಿಯ ಓದು, ಅವಳು ಕೆಲಸದಲ್ಲಿ ಇದ್ದಾಳಾ? ಮನೆತನ ಹೇಗಿದೆ ಎಂಬ ಎಲ್ಲಾ ಅಂಶವನ್ನು ನೋಡಲಾಗುವುದು, ಎಲ್ಲಕ್ಕಿಂತ ಮುಖ್ಯವಾಗಿ ನೋಡಬೇಕಾಗಿರುವುದು ಅವರ ಆರೋಗ್ಯ. ಹೌದು ಮದುವೆ ಜೀವನದಲ್ಲಿ ಆರೋಗ್ಯದ ಪಾತ್ರ ಕೂಡ ಪ್ರಮುಖವಾಗಿರುತ್ತದೆ.

ಹೌದು ಮದುವೆ ಮುನ್ನ ಆರೋಗ್ಯ ಪರೀಕ್ಷೆ ಮಾಡಿಸಬೇಕು ಇದರಿಂದ ಹುಡುಗ-ಹುಡುಗಿಯ ಆರೋಗ್ಯದ ಬಗ್ಗೆ ತಿಳಿಯಬಹುದು
ಮನುಷ್ಯ ಎಂದ ಮೇಲೆ ಕಾಯಿಲೆ ಬರುವುದು ಸಹಜ, ಆದರೆ ಮದುವೆಯಾಗುವಾಗಲೇ ಹುಡುಗನಿಗೆ ಅಥವಾ ಹುಡುಗಿಗೆ ಕಾಯಿಲೆ ಇದೆ ಎಂದು ತಿಳಿದರೆ ಅದು ಪ್ರಾರಂಭದಲ್ಲಿಯೇ ಅವರ ಸಂಸಾರದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು. ಕೆಲವರು ಕಾಯಿಲೆಯಿದ್ದರೆ ಅದನ್ನು ಮರೆಮಾಚಿ ಮದುವೆ ಮಾಡುತ್ತಾರೆ, ಹೀಗೆ ಮದುವೆಯಾದ ಎಷ್ಟೋ ಮದುವೆಗಳು ಮುರಿದು ಹೋಗಿವೆ, ಕಾಯಿಲೆಯ ಗುಟ್ಟು ತುಂಬಾ ಸಮಯ ಮುಚ್ಚಿಡಲು ಸಾಧ್ಯವಿಲ್ಲ.
ಹೆಚ್ ಐವಿ ಪರೀಕ್ಷೆ ಮಾಡಿಸಬೇಕು
ಮದುವೆಯಾಗುವ ಹುಡುಗ ಮತ್ತು ಹುಡುಗಿ ಇಬ್ಬರೂ ಈ ಪರೀಕ್ಷೆ ಮಾಡಿಸಬೇಕು, ಇಬ್ಬರು ಜೊತೆಯಾಗಿ ಹೋಗಿ ಈ ಪರೀಕ್ಷೆ ಮಾಡಿಸಿ. ನೀವು ಮದುವೆಯಾಗುವವರೆಗೆ ಹೆಚ್‌ಐವಿ ಪರೀಕ್ಷೆ ಮಾಡಿಸಲು ಹೇಳಿದರೆ ಅವರು ತಪ್ಪಾಗಿ ಭಾವಿಸಬಹುದು ಎಂಬ ಭಯ, ಸಂಕೋಚವಿರಬಹುದು, ಆದರೆ ಮದುವೆ ಮೊದಲು ಆರೋಗ್ಯ ಪರೀಕ್ಷೆ ಮಾಡಿಸುವುದು ಅವಶ್ಯಕ. ನೀವು ಮತ್ತು ಅವರು ಇಬ್ಬರು ಹೋಗಿ ಕಂಪ್ಲೀಟ್ ಆರೋಗ್ಯ ತಪಾಸಣೆ ಮಾಡಿಸಿ. ಹೀಗೆ ಮಾಡಿಸಿದಾಗ ಅಲ್ಲಿ ತಪ್ಪು ಕಲ್ಪನೆ ಮೂಡುವುದಿಲ್ಲ.
SGPT ಪರೀಕ್ಷೆ ಮದುವೆಗೆ ಮೊದಲು ಮಾಡಿಸುವುದು ಅವಶ್ಯಕ
ಇದನ್ನು ALT ಪರೀಕ್ಷ ಎಂದು ಕರೆಯಲಾಗುವುದು. ಈ ಪರೀಕ್ಷೆ ಮಾಡುವುದರಿಂದ ಲಿವರ್ ಆರೋಗ್ಯದ ಬಗ್ಗೆ ತಿಳಿಯಬಹುದು. ಈ ಪರೀಕ್ಷೆ ಮಾಡಿಸುವುದರಿಂದ ಇಬ್ಬರಿಗೂ ತಮ್ಮ ಹಾಗೂ ಸಂಗಾತಿಯ ಆರೋಗ್ಯದ ಬಗ್ಗೆ ತಿಳಿಯಬಹುದು. ಲಿವರ್ ಸಮಸ್ಯೆ ಪ್ರಾರಂಭದಲ್ಲಿ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ, ಆದರೆ ಕ್ರಮೇಣ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ. ಅದೇ ಪ್ರಾರಂಭದಲ್ಲಿ ಲಿವರ್ ಸಮಸ್ಯೆ ತಿಳಿದು ಬಂದರೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು.
ಹೆಪಟೈಟಿಸ್ ಬಿ ಮತ್ತು ಸಿ ಇದ್ದರೆ ಕುಟುಂಬ ಜೀವನ ಪ್ರಾರಂಭಿಸುವಾಗ ಜಾಗ್ರತೆವಹಿಸಬೇಕಾಗುತ್ತದೆ:
ಹೆಪಟೈಟಿಸ್ ಬಿ ಮತ್ತು ಸಿ ಲೈಂಗಿಕ ಸೋಂಕು ಆಗಿದ್ದು, ಈ ಸೋಂಕು ಇದ್ದರೆ ಸಂಗಾತಿ ಗೆ ಹರಡುವುದು. ಈ ಪರೀಕ್ಷೆ ಮಾಡುವುದರಿಂದ ನಿಮ್ಮಿಬ್ಬರ ನಡುವೆ ಯಾವುದೇ ಮುಚ್ಚುಮರೆ ಇರಲ್ಲ, ಕುಟುಂಬ ಜೀವನದಲ್ಲಿ ನಂಬಿಕೆ ಇರಲಿದೆ.
ಲಿವರ್ ಸಮಸ್ಯೆಯಿದ್ದರೆ, ಉರಿಯೂತದ ಸಮಸ್ಯೆಯಿದ್ದರೆ, ಹೆಪಟೈಟಿಸ್, ಫ್ಯಾಟಿ ಲಿವರ್ ಸಮಸ್ಯೆ, ಮದ್ಯಪಾನದಿಂದ ಉಂಟಾದ ಲಿವರ್ ಸಮಸ್ಯೆ ಇವೆಲ್ಲಾ ಲಿವರ್ ಪರೀfಷೆ ಮಾಡುವುದರಿಂದ ತಿಳಿಯುತ್ತದೆ.
ಮದುವೆಗೆ ಮೊದಲು ತುಂಬಾ ಮದ್ಯಪಾನಿಗಳಾಗಿದ್ದರೆ ಈ ಪರೀಕ್ಷೆ ಮಾಡುವುದರಿಂದ ತಿಳಿಯುತ್ತದೆ
ಕೆಲವರು ಸುಳ್ಳು ಹೇಳಿ ಮದುವೆ ಮಾಡುತ್ತಾರೆ, ನಮ್ಮ ಹುಡುಗ ಮದ್ಯ ಮುಟ್ಟುವುದೇ ಇಲ್ಲ ಎಂದರೆ, ಇನ್ನು ಕೆಲವರು ಅಪರೂಪಕ್ಕೆ ಪಾರ್ಟಿ ಇದ್ದಾಗ ಮಾತ್ರ ಸ್ವಲ್ಪ ತೆಗೆದುಕೊಳ್ಳುತ್ತಾನೆ ಅಷ್ಟೇ ಎಂದು ಹೇಳಿ ಮದುವೆ ಮಾಡಿಸಲು ಪ್ರಯತ್ನಿಸುತ್ತಾರೆ, ಆದರೆ ಆತ ಸಂಪೂರ್ಣ ಮದ್ಯವ್ಯಸನಿಯಾಗಿದ್ದು ಮದುವೆ ಮಾಡಿದರೆ ಸರಿ ಹೋಗುತ್ತಾನೆ ಎಂದು ಮನೆಯವರು ಸುಳ್ಳು ಹೇಳಿ ಮದುವೆ ಮಾಡಿಸಲು ಪ್ರಯತ್ನಿಸುತ್ತಾರೆ. ಆದರೆ ಮದ್ಯಪಾನಿಗಳು ಬದಲಾಗುವುದು ಕಷ್ಟ, ಇದರಿಂದ ಅಂಥವವರನ್ನು ಮದುವೆಯಾಗಿ ಬದುಕು ಕಷ್ಟವಾಗುವುದು. ಲಿವರ್ ಪರೀಕ್ಷೆ ಮಾಡಿಸಿದರೆ ಅವರು ಮದ್ಯಪಾನಿಗಳೇ? ಎಂಬುವುದು ಕೂಡ ತಿಳಿದು ಬರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
