Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಣ್ಣದ ಕಾಟನ್ ಕ್ಯಾಂಡಿ ಬ್ಯಾನ್ ಆಗಲು ಇದೇ ಕಾರಣ.! ಏನಿದು ರೋಡಮೈನ್ ಬಿ.? ಎಲ್ಲೆಲ್ಲಾ ಬಳಸುತ್ತಾರೆ?
ರಾಜ್ಯದಲ್ಲಿ ಕೃತಕ ಬಣ್ಣ ಬಳಸಿ ತಯಾರಿಸಲಾಗುತ್ತಿದ್ದ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯ ಮಾರಾಟ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಜನರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ. ವಿಶೇಷವಾಗಿ ಈ ತಿಂಡಿಗಳಿಗೆ ಮಕ್ಕಳು ಒಗ್ಗಿಕೊಂಡಿದ್ದು, ಅವರ ಆರೋಗ್ಯದ ಮೇಲೆ ಇವು ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿವೆ ಎಂದು ಅಧ್ಯಯನದಲ್ಲಿ ತಿಳಿದುಬಂದಿತ್ತು.
ಕೃತಕ ಬಣ್ಣಕ್ಕಾಗಿ ಬಳಸಲಾಗುತ್ತಿದ್ದ ರಾಸಾಯನಿಕವು ಕ್ಯಾನ್ಸರ್ ಸೇರಿದಂತೆ ಹಲವು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ವರದಿಯಾಗಿತ್ತು. ಕೃತಕ ಬಣ್ಣವಾಗಿ ರೋಡಮೈನ್ ಬಿ ಬಳಸುತ್ತಿರುವುದು ಕಂಡುಬಂದಿತ್ತು. ಈ ರಾಸಾಯನಿಕ ಅತ್ಯಂತ ಹಾನಿಕಾರಕವಾಗಿದ್ದು, ಇದರಿಂದ ಮಕ್ಕಳಲ್ಲಿ ಅನೇಕ ಅನಾರೋಗ್ಯ ಸಮಸ್ಯೆ ಕಾಡಲಿದೆ ಎಂದು ದೃಢವಾಗಿದೆ.

ಹಾಗಾದರೆ ಏನಿದು ರೋಡಮೈನ್-ಬಿ ಇದರ ರಾಸಾಯನಿಕ ಸಂಯುಕ್ತಗಳೇನು.? ಯಾವ ತಿಂಡಿಗಳಲ್ಲಿ ಬಳಸುತ್ತಾರೆ. ಇದರ ಸೇವನೆಯಿಂದಾಗುವ ಅನಾರೋಗ್ಯಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರೋಡಮೈನ್ ಬಿ ಎಂದರೇನು?
ರೋಡಮೈನ್ ಬಿ (RhB) ಒಂದು ರಾಸಾಯನಿಕ ಸಂಯುಕ್ತವಾಗಿದ್ದು, ರೇಷ್ಮೆ, ಸೆಣಬು, ಚರ್ಮ, ಹತ್ತಿ ಮತ್ತು ಉಣ್ಣೆಯನ್ನು ಬಣ್ಣ ಮಾಡಲು ಸಿಂಥೆಟಿಕ್ ಬಣ್ಣಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ, ಹಾಗೆಯೇ ಸೌಂದರ್ಯವರ್ಧಕಗಳು ಮತ್ತು ಪ್ಲಾಸ್ಟಿಕ್ ಉದ್ಯಮಗಳಲ್ಲಿ ಹೇರಳವಾಗಿ ಇದನ್ನು ಬಳಸಲಾಗುತ್ತದೆ. ಇದು ಅತ್ಯಂತ ಕಡಿಮೆ ದರದಲ್ಲಿ ಸಿಗುವ ರಾಸಾಯನಿಕವಾಗಿರುವುದರಿಂದ ಬಹುಪಾಲು ಮಂದಿ ಇದರ ಬಳಕೆ ಮಾಡುತ್ತಾರೆ.
ಆಹಾರಗಳು ಹೆಚ್ಚು ಬಣ್ಣಯುಕ್ತವಾಗಿ ಕಾಣುವ ಸಲುವಾಗಿ ಈ ರಾಸಾಯನಿಕವನ್ನು ಬಳಸಲಾಗುತ್ತದೆ. ವಿಶೇಷವಾಗಿ ಮೆಣಸಿನ ಪುಡಿ ಮತ್ತು ಮೆಣಸಿನ ಎಣ್ಣೆಯಂತಹ ವಸ್ತುಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ರೋಡಮೈನ್ ಬಿ ಅನ್ನು ಏಕೆ ನಿಷೇಧಿಸಲಾಗಿದೆ?
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಪ್ರಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆಗಳು) ನಿಯಂತ್ರಣ, 2011 ರಲ್ಲಿ ಅನುಮತಿಸದ ಹೊರತು ಆಹಾರಕ್ಕೆ ಯಾವುದೇ ಬಣ್ಣವನ್ನು ಸೇರಿಸಬಾರದು ಎಂಬ ನಿಯಮವಿದೆ. ಈ ನಿಯಮದಡಿ ರೋಡಮೈನ್ ಬಿಯನ್ನು ಹೊರಗಿಡಲಾಗಿದೆ. ಇದರ ರಾಸಾಯನಿಕವು ಕ್ಯಾನ್ಸರ್ ಕಾರಕ ಎಂದು ವರದಿಯಾಗಿರುವುದರಿಂದ ಇದರ ಬಳಕೆ ನಿಷೇಧಿಸಲಾಗಿದೆ.
ಆದರೆ ಆಹಾರಗಳಲ್ಲಿ ಬಣ್ಣಗಳ ಬಳಸದೆ ಇರಲು ಸಾಧ್ಯವೇ ಇಲ್ಲ. ಹೀಗಾಗಿ ಈ ಸಂಸ್ಥೆ ಕೆಲವು ಅಧಿಕೃತ ಬಣ್ಣಗಳ ಬಳಸಲು ಅನುಮತಿ ನೀಡಿದೆ. ಹಾಗಾದರೆ ಯಾವೆಲ್ಲಾ ಸಿಂಥೆಟಿಕ್ ಬಣ್ಣಗಳಿಗೆ FSSAI ಅನುಮತಿ ನೀಡಿದೆ ಎಂಬುದನ್ನು ನೋಡಿ.
- ಕೆಂಪು - ಪೊನ್ಸೆಯು 4R, ಕಾರ್ಮೋಸಿನ್, ಎರಿಥ್ರೋಸಿನ್
- ಹಳದಿ - ಟಾರ್ಟ್ರಾಜೈನ್, ಸನ್‌ಸೆಟ್ ಹಳದಿ FCF
- ನೀಲಿ - ಇಂಡಿಗೊ ಕಾರ್ಮೈನ್, ಬ್ರಿಲಿಯಂಟ್ ಬ್ಲೂ FCF
- ಹಸಿರು - ಫಾಸ್ಟ್ ಗ್ರೀನ್ FCF
ಈ ಬಣ್ಣಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಲು FSSAI ಅನುಮತಿ ನೀಡಿದೆ. ಇದರ ಹೊರತಾಗಿಯೂ ಕೆಲವು ಬಣ್ಣವನ್ನು ಆಹಾರ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಆದರೆ ಅವು ಆರೋಗ್ಯದ ಮೇಲೆ ಅಷ್ಟೇನು ಹಾನಿ ಮಾಡುವುದಿಲ್ಲ.
ಯಾವ ತರಕಾರಿ ಕೆಂಪು ಕಾಣಿಸಲು ಈ ರಾಸಾಯನಿಕ ಬಳಸುತ್ತಾರೆ..?
ಈ ರಾಸಾಯನಿಕವನ್ನು ಆಹಾರ ತಯಾರಿಸುವಾಗ ಕೆಂಪು ಬಣ್ಣಕ್ಕೆ ಅಥವಾ ಹೊಳೆಯುವ ಬಣ್ಣ ಬರಲಿ ಎಂಬ ಕಾರಣಕ್ಕೆ ಬಳಸಲಾಗುತ್ತದೆ. ಇದರ ಜೊತೆಗೆ ತರಕಾರಿಗಳು ಹೊಳೆಯುವಂತೆ ಮಾಡಲು ಕಡು ಕೆಂಪು ಬಣ್ಣಕ್ಕೆ ತಿರುಗುವಂತೆ ಮಾಡಲು ಸಹ ಈ ರಾಸಾಯನಿಕವನ್ನು ಬಳಸಲಾಗುತ್ತದೆ. ಅದರಲ್ಲೂ ಕೆಂಪು ಮೆಣಸಿನ ಪುಡಿ, ಸಿಹಿ ಗೆಣಸು, ಮಕ್ಕಳ ಕೆಂಪು ಬಣ್ಣದ ಲಾಲಿಪಾಪ್‌ಗಳು ಸೇರಿ ಇನ್ನಿತರೆ ವಸ್ತುವಿನಲ್ಲಿ ಈ ಬಣ್ಣ ಬಳಕೆಯಾಗಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications