Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಲಿಫ್ಟ್‌ನಲ್ಲಿ ಕನ್ನಡಿಗಳು ಇರುವುದೇಕೆ.? ಮಾನಸಿಕ ಆರೋಗ್ಯಕ್ಕೂ ಇದಕ್ಕೂ ಸಂಬಂಧವೇನು?
ನೀವು ಮಾಲ್‌ಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳಿಗೆ ತೆರಳುವಾಗ ಇಲ್ಲವೆ ಅಪಾರ್ಟ್‌ಮೆಂಟ್‌ಗಳಲ್ಲಿ ಲಿಫ್ಟ್ ಹಾಕಿರುತ್ತಾರೆ, ಎತ್ತರದ ಕಟ್ಟಡ ಮೆಟ್ಟಿಲು ಬಳಸಿ ಏರುವುದು ಬಹಳ ಕಷ್ಟ ಅದರಲ್ಲೂ ವಯಸ್ಸಾಗಿದ್ದರೆ, ಅನಾರೋಗ್ಯ ಹೊಂದಿರುವ ಮಂದಿ ಮೆಟ್ಟಿಲು ಹತ್ತುವುದು ಕಷ್ಟ ಸಾಧ್ಯ. ಹೀಗಾಗಿ ಲಿಫ್ಟ್ ಬಳಕೆ ಮಾಡುವುದನ್ನು ನಾವು ನೋಡಿದ್ದೇವೆ.
ಆದ್ರೆ ಲಿಫ್ಟ್‌ನೊಳಗೆ ಬಹುತೇಕ ಎಲ್ಲಾ ಲಿಫ್ಟ್‌ನಲ್ಲಿ ಕನ್ನಡಿ ಇರುವುದನ್ನು ನೀವು ನೋಡಿರಬಹುದು. ಲಿಫ್ಟ್‌ನ ಬಾಗಿಲು ತೆರೆದಾಗ ಅಲ್ಲಿ ದೊಡ್ಡ ಕನ್ನಡಿ ಇರುವುದು ನೋಡಬಹುದು. ಬಹುತೇಕ ಎಲ್ಲಾ ಕಡೆ ಇದೇ ರೀತಿ ವಿನ್ಯಾಸದಲ್ಲಿಯೇ ಲಿಫ್ಟ್ ಇರುತ್ತದೆ. ಆದ್ರೆ ಈ ರೀತಿ ವಿನ್ಯಾಸದಲ್ಲಿ ಲಿಫ್ಟ್ ಏಕೆ ಮಾಡಿರುತ್ತಾರೆ ಗೊತ್ತಾ? ಇದರಿಂದ ಏನು ಪ್ರಯೋಜನ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಲಿಫ್ಟ್‌ನಲ್ಲಿರುವ ಈ ಕನ್ನಡಿಗಳಿಗೂ ನಿಮ್ಮ ಮಾನಸಿಕ ಆರೋಗ್ಯಕ್ಕೂ ಸಂಬಂಧವಿದೆ. ಹೌದು ನಿಮಗೆ ಈ ವಿಚಾರ ಕೇಳಿದರೆ ಅಚ್ಚರಿಯಾಗಬಹುದು. ಲಿಫ್ಟ್‌ನಲ್ಲಿ ಕನ್ನಡಿ ಇಡುವುದರಿಂದ ಮಾನಸಿಕ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆಯಂತೆ. ಮನೋವಿಜ್ಞಾನಿಗಳು ಕನ್ನಡಿಗಳು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಅನೇಕ ವಸ್ತುಗಳಲ್ಲಿ ಪ್ರಮಾಣಿತ ವಿನ್ಯಾಸ ಅಂಶದ ಭಾಗವಾಗಿದೆ ಎಂದು ಹೇಳುತ್ತಾರೆ.
ಜಪಾನ್‌ನ ಎಲಿವೇಟರ್ ಅಸೋಸಿಯೇಷನ್‌ನ ಪ್ರಕಾರ, ಪ್ರಯಾಣಿಕರಿಗೆ ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಒದಗಿಸಲು ಎಲಿವೇಟರ್‌ಗಳಲ್ಲಿ ಕನ್ನಡಿಗಳನ್ನು ಕಡ್ಡಾಯವಾಗಿ ಅಳವಡಿಸುವ ಮಾರ್ಗಸೂಚಿ ಇದೆ. ಇನ್ನು ಮತ್ತೊಂದು ಕಡೆ ಇದೊಂದು ಸುರಕ್ಷಿತ ಅಂಶವೂ ಹೌದು. ಲಿಫ್ಟ್‌ನಲ್ಲಿ ಕನ್ನಡಿ ಇಡುವುದು ನಿಮ್ಮ ಸುತ್ತಲಿನ ಮಂದಿಯ ನಡತೆ ಮೇಲೂ ಕಣ್ಣಿಡಬಹುದು.
ಮಾನಸಿಕ ಆರೋಗ್ಯಗಳಲ್ಲಿ ಹೆಚ್ಚಾಗಿ ಒತ್ತಡ, ಆತಂಕ, ಭಯವನ್ನು ದೂರ ಮಾಡಲು ಇದು ಸಹಕಾರಿಯಾಗಲಿದೆಯಂತೆ. ಒಂದು ವೇಳೆ ಕಟ್ಟಡ ಅತ್ಯಂತ ಎತ್ತರವಾಗಿದ್ದರೆ ನಿಮಿಷಗಳ ಕಾಲ ಲಿಫ್ಟ್‌ನಲ್ಲಿ ತೆರಳಬೇಕಾದರೆ ಈ ಕನ್ನಡಿಯು ನಿಮ್ಮನ್ನು ಒಬ್ಬಟ್ಟಿ ಎಂಬ ಭಾವನೆ ಉದ್ಭವಿಸಲು ಬಿಡುವುದಿಲ್ಲವಂತೆ.
ಲಿಫ್ಟ್‌ನಲ್ಲಿರುವ ಕನ್ನಡಿಯಿಂದ ವ್ಯಕ್ತಿಯ ಆತ್ಮಸ್ಥೈರ್ಯ ಹೆಚ್ಚಿಸಲಿದೆಯಂತೆ. ಆತ ತನ್ನ ಆಫೀಸ್ ಅಥವಾ ಮನೆ ಹಾಗೆ ಯಾವುದೇ ಜಾಗಕ್ಕೆ ತೆರಳುವ ಮುನ್ನ ಲಿಫ್ಟ್ ಬಳಸಿದರೆ ಆತನಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಲಿದೆಯಂತೆ, ಆತ ಲಿಫ್ಟ್‌ನಲ್ಲಿ ತನ್ನ ಪ್ರತಿಬಿಂಬ ನೋಡಿದಾಗ ಹೆಚ್ಚು ಧೈರ್ಯದಿಂದ ಆತ್ಮವಿಶ್ಬಾಸದಿಂದ ಆ ಕೆಲಸ ಮಾಡಿ ಮುಗಿಸಬಹುದಂತೆ.
ಇನ್ನು ಲಿಫ್ಟ್‌ಗಳು ಸುಂದರವಾಗಿ ಕಾಣುವ ಉದ್ದೇಶದಿಂದಲೂ ಕೂಡ ಕನ್ನಡಿಯನ್ನು ಬಳಸಲಾಗುತ್ತದೆ. ನೀವು ಹಳೆಯ ಲಿಫ್ಟ್‌ನಲ್ಲಿ ಅಥವಾ ಕನ್ನಡಿ ಇಲ್ಲದ ಲಿಫ್ಟ್ ನೋಡಿರಬಬುದು. ಅದರು ಹೆಚ್ಚು ಸುಂದರವಾಗಿ ಕಾಣಿಸಿವುದಿಲ್ಲ. ಕನ್ನಡಿಯ ಲಿಫ್ಟ್‌ಗಳು ಹೆಚ್ಚು ಆಕರ್ಷಣೆ ಹೊಂದಿರುತ್ತವೆ.
ಜಿಮ್‌ನಲ್ಲಿ ದೊಡ್ಡ ದೊಡ್ಡ ಕನ್ನಡಿಗಳು ಏಕಿರುತ್ತವೆ?
ಲಿಫ್ಟ್ ಮಾತ್ರವಲ್ಲ ನಾವು ಜಿಮ್ ಹಾಗೂ ವರ್ಕ್‌ಔಟ್ ಮಾಡುವ ಸ್ಥಳದಲ್ಲೂ ದೊಡ್ಡ ದೊಡ್ಡ ಕನ್ನಡಿಗಳ ನೋಡಬಹುದು, ಇದು ಕೂಡ ನಮ್ಮ ಮನಸ್ಸಿಗೆ ಸಂಬಂಧಿಸಿದ ವಿಚಾರವಾಗಿದೆ. ಜಿಮ್‌ನಲ್ಲಿರುವ ಕನ್ನಡಿಯೂ ನಿಮ್ಮನ್ನು ಹೆಚ್ಚು ಹೆಚ್ಚು ವ್ಯಾಯಾಮ ಮಾಡಲು ಉತ್ತೇಜಿಸಲಿದೆ. ಹಾಗೆ ನೀವು ನಿತ್ಯ ಜಿಮ್‌ಗೆ ಬರಲು ಈ ಕನ್ನಡಿಗಳು ಸಹ ಪ್ರೋತ್ಸಾಹ ನೀಡುವ ವಸ್ತುಗಳಂತೆ. ನೀವು ಕನ್ನಡಿಯಲ್ಲಿ ನಿಮ್ಮ ದೇಹವನ್ನು ನೋಡುವುದು ಜಿಮ್ ಮಾಡಲು ಉತ್ತೇಜಿಸಲಿದೆ. ನಿತ್ಯ ನಿಮ್ಮಲ್ಲಿ ಆಗುತ್ತಿರುವ ಬದಲಾವಣೆಯನ್ನು ನೋಡಿ ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯಲು ಇದು ನೆರವಾಗಲಿದೆಯಂತೆ.
ಇನ್ನೊಂದು ಕಡೆ ಜಿಮ್‌ನಲ್ಲಿ ಅಕ್ಕ ಪಕ್ಕ ವಸ್ತುಗಳಿರುತ್ತವೆ, ಕಬ್ಬಿಣದಿಂದ ಕೂಡಿದ ತೂಕದ ವಸ್ತುಗಳಿರುವುದರಿಂದ ಎಚ್ಚರಿಕೆ ಅಗತ್ಯವಾಗುತ್ತದೆ. ಹೀಗಾಗಿ ವ್ಯಾಯಾಮ ಮಾಡುವಾಗಲು ನಿಮ್ಮ ಸುತ್ತ ಏನಿದೆ? ಯಾರಾದರು ಇದ್ದಾರಾ? ಎಂಬುದನ್ನು ಕನ್ನಡಿಯಲ್ಲಿ ನೋಡಿಯೂ ತಿಳಿಯಬಹುದು ಇದೂ ಕೂಡ ಒಂದು ಕಾರಣ ಎನ್ನಲಾಗುತ್ತದೆ.
ಜಿಮ್‌ನಲ್ಲಿ ನೀವು ತರಬೇತುದಾರ ಹೇಳಿದಂತೆ ಕಸರತ್ತು ಮಾಡುತ್ತಿರುತ್ತೀರಿ, ಕೆಲವೊಂದು ಕಸರತ್ತುಗಳು ನೇರವಾಗಿ ನಿಂತು ಮಾಡಬೇಕಾಗುತ್ತದೆ. ನಿಮ್ಮ ಕಾಲು, ಕೈಗಳ ಮೇಲೆ ಗಮನವಿಟ್ಟು ನೇರವಾಗಿ ನಿಂತು ಮಾಡುವಾಗ ಕನ್ನಡಿಯೂ ನೆರವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
