Latest Updates
-
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ
ಮಂಕಿಪಾಕ್ಸ್ ಹೊಸ ಕೋವಿಡ್ ಅಲ್ಲ: ಈ ಭಯಾನಕ ಕಾಯಿಲೆಗಳ ಬಗ್ಗೆ ಜಾಗ್ರತೆ
ಭಾರತದಲ್ಲಿ ಮಂಕಿಪಾಕ್ಸ್ ಬಗ್ಗೆ ತುಂಬಾನೇ ಕಟ್ಟೆಚ್ಚರವಹಿಸಲಾಗಿದೆ. ವಿದೇಶದಿಂದ ಬಂದಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದಿದ್ದು ಆರೋಗ್ಯ ಇಲಾಖೆ ಈ ರೋಗಿಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲು ಮುಂದಾಗಿದೆ.
ಇದನ್ನೆಲ್ಲಾ ಕೇಳುವಾಗ ಇದು ಕೂಡ ಕೋವಿಡ್ ರೀತಿಯ ವೈರಸ್ ಆಗಿರಬಹುದೇ ಎಂಬ ಸಂಶಯ ಜನರನ್ನು ಕಾಡುತ್ತಿದೆ. ಆದರೆ ಭಯಪಡಬೇಡಿ ಮಂಕಿಪಾಕ್ಸ್ ಹೊಸ ಕೋವಿಡ್ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪರಿಣಿತರು ಹೇಳಿದ್ದಾರೆ.

ಮಂಕಿಪಾಕ್ಸ್‌ಗೆ 450 ಬಲಿ
ಡಿಆರ್‌ಸಿಯಲ್ಲಿ (ಡೆಮೋಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ) ಇತ್ತೀಚೆಗೆ 450 ಜನರು ಮಂಕಿಪಾಕ್ಸ್‌ಗೆ ಬಲಿಯಾಗಿದ್ದಾರೆ. ತಜ್ಞರ ಪ್ರಕಾರ ಈ ಮಂಕಿಪಾಕ್ಸ್ ವೇಗವಾಗಿ ಹರಡುತ್ತಿಲ್ಲ, ಆದರೆ ಈ ಕಾಯಿಲೆ ಭಯಾನಕವಾಗಿದೆ. ಹಾಗಾಗಿ ಈ ಕಾಯಿಲೆ ಬಗ್ಗೆ ನಿರ್ಲಕ್ಷ್ಯ ಬೇಡ, ಇದರ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಟ್ಟೆಚ್ಚರವಹಿಸಬೇಕಾಗಿದೆ.
2022ರಲ್ಲಿ ಯುರೋಪ್‌ನಲ್ಲಿ ಭೀಕರವಾಗಿ ಕಾಡಿತ್ತು
ಈ ಮಂಕಿಪಾಕ್ಸ್ ಕೋವಿಡ್ ಬಳಿಕ 2022ರಲ್ಲಿ ಹೆಚ್ಚಿನ ಜನರನ್ನು ಬಾಧಿಸಿತ್ತು. ಈ ಮಂಕಿಪಾಕ್ಸ್ ಬಂದವರಲ್ಲಿ ಜ್ವರ, ಗುಳ್ಳೆಗಳು ಏಳುವುದು ಈ ಬಗೆಯ ಲಕ್ಷಣಗಳು ಕಂಡು ಬರುವುದು. ಈ ಮಂಕಿಪಾಕ್ಸ್ ವಿಶ್ವದ ಎಲ್ಲಾ ಕಡೆ ಹರಡುವ ಸಾಧ್ಯತೆ ಇರುವುದರಿಂದ ತುಂಬಾನೇ ಜಾಗ್ರತೆವಹಿಸಿ.
ಮಂಕಿಪಾಕ್ಸ್ ವೈರಸ್ ತಗುಲಿದ 7-14 ದಿನಗಳಲ್ಲಿ ಈ ರೋಗ ಲಕ್ಷಣಗಳು ಕಂಡು ಬರುವುದು. ಜ್ವರ, ವಿಪರೀತ ತಲೆನೋವು, ಸ್ನಾಯುಗಳಲ್ಲಿ ದೌರ್ಬಲ್ಯ, ಗುದಧ್ವಾರದಲ್ಲಿ ನೋವು ಶಿಶ್ನಗಳಲ್ಲಿ ನೋವು, ದುಗ್ಥರಸ ಗ್ರಂಥಿಗಳಲ್ಲಿ ಊತ ಈ ಬಗೆಯ ಲಕ್ಷಣಗಳು ಕಂಡು ಬರುವುದು. ಮೈ ಮೇಲಿನ ಚರ್ಮದಲ್ಲಿ ಗುಳ್ಳೆಗಳು ಕಂಡು ಬರುವುದು.
ಮಕ್ಕಳಲ್ಲಿ ಮಂಕಿಪಾಕ್ಸ್ ಲಕ್ಷಣಗಳು
ಮಕ್ಕಳಲ್ಲಿ ಮಂಕಿಪಾಕ್ಸ್ ಸೋಂಕು ತಗುಲಿದೆ ಅವರ ಮೈಮೇಲೆ ದದ್ದುಗಳು ಕಂಡು ಬರುವುದು. ಈ ಗುಳ್ಳೆಗಳು ಮುಖದ ಮೇಲೆ, ಬಾಯಿಯಲ್ಲಿ , ಕೈಗಳು, ಪಾದಗಳು, ಎದೆ ಭಾಗದಲ್ಲಿ ಗುಳ್ಳೆಗಳು ಕಂಡು ಬರುವುದು. ಇದರ ಜೊತೆಗೆ ತಲೆನೋವು, ಮೈಕೈ ನೋವು ಈ ಬಗೆಯ ಲಕ್ಷಣಗಳೂ ಕಂಡು ಬರುವುದು.
ಮಂಕಿಪಾಕ್ಸ್ ಸೋಂಕು ಹೇಗೆ ಹರಡುತ್ತದೆ?
ಈ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ, ಅಲ್ಲದೆ ಮನುಷ್ಯರಿಂದ ಮನುಷ್ಟಯರಿಗೆ ಹರಡುವುದು. ಸೋಂಕು ಇರುವ ವ್ಯಜ್ತಿಯ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿದ್ದರೆ, ಅವರ ಎಂಜಲು, ದೇಹದ ದ್ರವಾಂಶ ಮೈಗೆ ತಾಗಿದರೆ , ಅವರನ್ನು ತಬ್ಬಿಕೊಳ್ಳುವುದು, ಅವರ ಕಣ್ಣೀರು ಇವುಗಳಿಂದ ಕೂಡ ಸೋಂಕು ಹರಡುವುದು.
ಅಲ್ಲದೆ ಸೋಂಕು ಮುಟ್ಟಿದ ವಸ್ತುಗಳನ್ನು ಮುಟ್ಟಿದಾಗ, ಅವರ ಬಟ್ಟೆಗಳನ್ನು ಮುಟ್ಟುವುದರಿಂದ , ಸೋಂಕಿತ ಪ್ರಾಣಿಗಳು ಕಚ್ಚಿದರೆ ಮಂಕಿಪಾಕ್ಸ್ ಹರಡುವುದು.
ಮಕ್ಕಳು ಹಾಗೂ ಗರ್ಭಿಣಿಯರು ಜಾಗ್ರತೆವಹಿಸಬೇಕು
ಮಕ್ಕಳಲ್ಲಿ ಹಾಗೂ ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಜಾಗ್ರತೆವಹಿಸಬೇಕು. ಆದರೆ ತುಂಬಾ ಆತಂಕ ಪಡಬೇಡಿ ಜಾಗ್ರತೆವಹಿಸಿ. ರೋಗ ಲಕ್ಷಣಗಳು ಕಂಡು ಬಮದವರ ಸಮೀಪ ಹೋಗಬೇಡಿ. ರೋಗ ಲಕ್ಷಣಗಳು ಕಂಡು ಬಂದವರನ್ನು ಐಸೋಲೇಟ್ ಮಾಡಿ ಚಿಕಿತ್ಸೆ ನೀಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications