Latest Updates
-
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ! -
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ
ಚಿಕನ್‌ನ ಈ ಭಾಗ ಆರೋಗ್ಯಕ್ಕೆ ಒಳ್ಳೆಯದಲ್ಲ, ಯಾವ ಭಾಗಗಳಲ್ಲಿ ಕೊಬ್ಬು ಹೆಚ್ಚಿರುತ್ತದೆ?
ಚಿಕನ್ ಪ್ರೊಟೀನ್ ಅಧಿಕವಿರುವ ಆಹಾರ, ನಾನ್‌ವೆಜ್ ಪ್ರಿಯರು ತುಂಬಾ ಇಷ್ಟಪಟ್ಟು ತಿನ್ನುವ ಆಹಾರ, ಚಿಕನ್. ಚಿಕನ್ ತಿನ್ನವಷ್ಟು ಮಟನ್ ತಿನ್ನಲ್ಲ, ಕಾರಣ ಚಿಕನ್ ಮಟನ್ ಅಷ್ಟು ದುಬಾರಿಯಲ್ಲ, ಈ ಕಾರಣಕ್ಕೆ ಚಿಕನ್ ಹೆಚ್ಚಾಗಿ ತಯಾರಿಸಲಾಗುವುದು. ಇನ್ನು ಡಯಟ್ ಮಾಡುವವರು ಕೂಡ ಚಿಕನ್ ಹೆಚ್ಚಾಗಿ ಸೇವಿಸುತ್ತಾರೆ, ಚಿಕನ್ ಅನ್ನು ಗ್ರಿಲ್ಡ್ ಮಾಡಿ ಸೇವಿಸಲಾಗುವುದು.
ಆದರೆ ನೀವು ವೈದ್ಯರು ಹೇಳುವುದನ್ನು ಕೇಳಿರಬಹುದು ನೀವು ಚಿಕನ್ ಇಷ್ಟಪಡುವುದಾದರೆ ನಾಟಿ ಕೋಳಿ ತಿನ್ನಿ, ಈ ಫಾರಂ ಕೋಳಿ ಸ್ವಲ್ಪ ಕಡಿಮೆ ಮಾಡಿ ಎಂದು ಸಲಹೆ ನೀಡುತ್ತಾರೆ, ಚಿಕನ್‌ನ ಕೆಲವೊಂದು ಭಾಗಗಳನ್ನು ತಿನ್ನಬಾರದು, ಅವುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಹಾಗಾದರೆ ಚಿಕನ್‌ನ ಯಾವ ಭಾಗ ಒಳ್ಳೆಯದಲ್ಲ ಎಂದು ನೋಡೋಣ ಬನ್ನಿ:

ಚಿಕನ್‌ನ ಯಾವ ಭಾಗ ಒಳ್ಳೆಯದಲ್ಲ
ಸ್ಕಿನ್
ಚಿಕನ್ ಸ್ಕಿನ್ ಔಟ್ ಮಾಡುವುದು ಒಳ್ಳೆಯದಲ್ಲ, ಚಿಕನ್ ಸ್ಕಿನ್ ಒಳ್ಳೆಯದಲ್ಲ, ಅದರಲ್ಲಿ ಕೊಬ್ಬಿನಂಶ ಅಧಿಕವಿರುತ್ತದೆ, ಅಲ್ಲದೆ ಚಿಕನ್ ಫ್ರೆಷ್ ಆಗಿರಲು ಅದರಲ್ಲಿ ರಾಸಾಯನಿಕ ಹಚ್ಚಿರುವ ಸಾಧ್ಯತೆಯೂ ಇದೆ, ಆದ್ದರಿಂದ ಸ್ಕಿನ್‌ಔಟ್ ಮಾಡಿ ಸೇವಿಸುವುದು ಒಳ್ಳೆಯದು.
ಹೃದಯ ತಜ್ಞರು ಕೂಡ ಚಿಕನ್ ಸ್ಕಿನ್ ತಿನ್ನದಂತೆ ಸಲಹೆ ನೀಡುತ್ತಾರೆ, ನಾಟಿ ಕೋಳಿಯದ್ದು ಆದರೆ ಸ್ವಲ್ಪ ಬಳಸಬಹುದು, ಆದರೆ ನೀವು ಫಾರಂ ಕೋಳಿ ತಿನ್ನುವುದಾದರೆ ಸ್ಕಿನ್‌ಔಟ್ ಮಾಡಿಯೇ ಸೇವಿಸಿ.
ಚಿಕನ್ ಸ್ಕಿನ್‌ನಲ್ಲಿ ಅನ್‌ಸ್ಯಾಚುರೇಟಡ್ ಕೊಬ್ಬಿನಂಶವಿರುತ್ತದೆ, ಅಲ್ಲದೆ ಚಿಕನ್ ಸ್ಕಿನ್‌ನಲ್ಲಿ ಕ್ಯಾಲೋರಿ ಕೂಡ ಅಧಿಕವಿರುತ್ತದೆ. ಇನ್ನು ಅತ್ಯಧಿಕ ರಕ್ತದೊತ್ತಡವಿರುವವರು ಚಿಕನ್ ಸ್ಕಿನ್ ತಿನ್ನದಿದ್ದರೆ ಒಳ್ಳೆಯದು.
ಚಿಕನ್ ಸ್ಕಿನ್ ಸಂಪೂರ್ಣ ಹಾನಿಕಾರವೇ?
ನೀವು ಚಿಕನ್ ತುಂಬಾ ಅಪರೂಪಕ್ಕೆ 15 ದಿನಕ್ಕೊಮ್ಮೆ ತಿಂಗಳಿಗೊಮ್ಮೆ ತಿನ್ನುವುದಾದರೆ ತೊಂದರೆಯಿಲ್ಲ, ಏಕೆಂದರೆ ಚಿಕನ್ ಸ್ಕಿನ್‌ನಲ್ಲಿ ಒಮೆಗಾ 3, ಒಮೆಗಾ 6 ಕೊಬ್ಬಿನಂಶವಿದೆ, ಆದ್ದರಿಂದ ಇದನ್ನು ಅಲ್ಪ ಪ್ರಮಾಣದಲ್ಲಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ನೀವು ಚಿಕನ್ ಸ್ಕಿನ್ ಅನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿ.
ಚಿಕನ್‌ನ ಯಾವ ಭಾಗ ಒಳ್ಳೆಯದು?
ಚಿಕನ್ ಬ್ರೆಸ್ಟ್: ಚಿಕನ್ ಬ್ರೆಸ್ಟ್ ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿ ಪ್ರೊಟೀನ್ ಅಂಶ ಅಧಿಕವಿರುತ್ತದೆ. ಮೈ ತೂಕ ನಿಯಂತ್ರಿಸಲು ಇದು ತುಂಬಾನೇ ಒಳ್ಳೆಯದು, ಅಲ್ಲದೆ ಮಸಲ್ ಬಿಲ್ಡ್ ಮಾಡಲು ಕೂಡ ಚಿಕನ್ ಬ್ರೆಸ್ಟ್ ತುಂಬಾ ಒಳ್ಳೆಯದು.
ಚಿಕನ್ ತೊಡೆ: ಚಿಕನ್ ತೊಡೆಯಲ್ಲಿ ಕೊಬ್ಬಿನಂಶ ಅಧಿಕವಿರುತ್ತದೆ, ಚಿಕನ್ ಬ್ರೆಸ್ಟ್‌ಗಿಂತಲೂ ಅಧಿಕ ಕೊಬ್ಬಿನಂಶ ಅಧಿಕವಿರುತ್ತದೆ.
ಚಿಕನ್ ವಿಂಗ್ಸ್
ಚಿಕನ್ ವಿಂಗ್ಸ್‌ನಲ್ಲಿ ಕೊಬ್ಬಿನಂಶ ಅಧಿಕವಿರಲಿದೆ, ಇದರಲ್ಲಿ ಕ್ಯಾಲೋರಿ ಅಂಶ ಕೂಡ ಅಧಿಕವಿರಲಿದೆ, ಇದನ್ನು ಫ್ರೈ ಮಾಡುವುದಕ್ಕಿಂತ ಗ್ರಿಲ್ಡ್ ಮಾಡಿ ಸೇವಿಸುವುದು ಒಳ್ಳೆಯದು.
ಚಿಕನ್‌ನಲ್ಲಿ ಯಾವ ಚಿಕನ್ ಒಳ್ಳೆಯದು?
ಫಾರಂ ಕೋಳಿಗಿಂತ ನಾಟಿಕೋಳಿ ಒಳ್ಳೆಯದು. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಲ್ಲದೆ ಈ ಚಿಕನ್ ಸೇವಿಸುವುದರಿಂದ ಸಮತೋಲನದಲ್ಲಿಡಲು ಸಹಕಾರಿ.
ತೂಕ ನಿಯಂತ್ರಣಕ್ಕೆ ಸಹಕಾರಿ
ನಾಟಿ ಕೋಳಿ ಸೇವಿಸುವುದರಿಂದ ಮೈ ತೂಕ ಹೆಚ್ಚಾಗುವುದಿಲ್ಲ, ಇದರ ಸೇವನೆಯಿಂದ ದೇಹಕ್ಕೆ ಅವಶ್ಯಕವಾದ ಪ್ರೊಟೀನ್ ಅಧಿಕವಿರುತ್ತದೆ. ಆದ್ದರಿಂದ ಜಿಮ್‌ಗೆ ಹೋಗುವವರು ಚಿಕನ್ ಹೆಚ್ಚಾಗಿ ಬಳಸುತ್ತಾರೆ.
ಅವುಗಳು ನೈಸರ್ಗಿಕವಾಗಿ ಬೆಳೆಯುತ್ತದೆ
ಈ ಕೋಳಿಗಳು ನೈಸರ್ಗಿಕ ವಾತಾವರಣದಲ್ಲಿ ಬೆಳೆಯುತ್ತದೆ, ಅಲ್ಲದೆ ಫಾರಂ ಕೋಳಿಗಳಂತೆ ಬೇಗನೆ ಬೆಳವಣಿಗೆಯಾಗುವುದಿಲ್ಲ, ಹಾಗಾಗಿ ಈ ಚಿಕನ್ ಒಳ್ಳೆಯದು, ಅಲ್ಲದೆ ಚಿಕ್ಕ ಪ್ರಾಯದ ಹೆಣ್ಣು ಮಕ್ಕಳಿಗೆ ಈ ಚಿಕನ್ ನೀಡುವುದು ಒಳ್ಳೆಯದು. ನಾಟಿಕೋಳಿ ಸೇವನೆ ಫಾರಂ ಕೋಳಿಗಿಂತ ತುಂಬಾನೇ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications