Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೃತಕ ಬಣ್ಣ ಬಳಸದ ಆಹಾರ ಯಾವುದು? ಕೃತಕ ಬಣ್ಣ ಮಕ್ಕಳಿಗೆ ಎಷ್ಟು ಅಪಾಯ ಗೊತ್ತಾ?
ರಾಜ್ಯದಲ್ಲಿ ಈ ಹಿಂದೆ ಗೋಬಿ ಹಾಗೂ ಬಣ್ಣ ಮಿಶ್ರಿತ ಬಾಂಬೆ ಮಿಠಾಯಿಯಲ್ಲಿ ಕೃತಕ ಬಣ್ಣ ಕಂಡುಬಂದಿದ್ದ ಕಾರಣ ಅದನ್ನು ಬ್ಯಾನ್ ಮಾಡಲಾಗಿತ್ತು. ಇದಾದ ಬಳಿಕ ಹಲವು ರೀತಿಯ ಫುಡ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಕೆಲವೊಂದು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದ್ದು ನೋಡಬಹುದು. ಆದ್ರೆ ಈಗ ರಾಜ್ಯದ ಬೇಕರಿ ಉತ್ಪನ್ನಗಳಲ್ಲಿ ಕ್ಯಾನ್ಸರ್ ಉಂಟು ಮಾಡುವ ಅಂಶಗಳು ಪತ್ತೆಯಾಗಿದೆ.
ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಕೇಕ್ ಮಾದರಿಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳನ್ನು ಪತ್ತೆ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕೃತಕ ಬಣ್ಣಗಳನ್ನು ಹೊಂದಿರುವ ಕೇಕ್‌ಗಳನ್ನು ಮಾರಾಟ ಮಾಡುವ ಬಗ್ಗೆ ಬೇಕರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಆರೋಗ್ಯ ಅಧಿಕಾರಿಗಳು 235 ಕೇಕ್ ಮಾದರಿಗಳನ್ನು ಪರೀಕ್ಷೆ ಒಳಪಡಿಸಿದ್ದರು. ಅದರಲ್ಲಿ 223 ಬಳಕೆಗೆ ಹಾಗೂ ಸೇವನೆಗೆ ಸುರಕ್ಷಿತ ಎಂದು ವರದಿಯಾಗಿದೆ. ಆದರೆ ಉಳಿದ 12ರಲ್ಲಿ ಕಾರ್ಸಿನೋಜೆನಿಕ್ ಮತ್ತು ಅನೇಕ ರಾಸಾಯನಿಕ ಅಂಶಗಳಿವೆ ಎಂದು ತಿಳಿಸಿದೆ. ಕೃತಕ ಬಣ್ಣಗಳಾದ ಅಲ್ಲುರಾ ರೆಡ್, ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್, ಪೊನ್ಸೆಯು 4 ಆರ್, ಟಾರ್ಟ್ರಾಜಿನ್ ಮತ್ತು ಕಾರ್ಮೋಸಿನ್ ಅಂಶ ಪತ್ತೆಯಾಗಿದೆ.
ಯಾವ ಆಹಾರದಲ್ಲಿ ಬಣ್ಣಗಳನ್ನು ಬಳಸಲಾಗುವುದಿಲ್ಲ..!
ಡೈರಿ ಉತ್ಪನ್ನಗಳಲ್ಲಿ ಈ ಕೃತಕ ಬಣ್ಣ ಬಳಕೆಯಾಗವುದಿಲ್ಲ. ಅದರಲ್ಲಿ ಹಾಲು, ಮೊಸರು, ಚೀಸ್ಲ, ಬೆಣ್ಣೆ, ತುಪ್ಪ, ಕಾಟೇಜ್ ಚೀಸ್, ಮೊಟ್ಟೆ, ಮಾಂಸ ಸೇರಿ ಕಾಳುಗಳಿಂದ ಮಾಡಲ್ಪಟ್ಟ ಆಹಾರಕ್ಕೆ ಬಹುತೇಕ ಯಾವುದೇ ಬಣ್ಣ ಬಳಸಿರುವುದಿಲ್ಲ. ಹಾಗೆ ಮೀನು, ಮಾಂಸ, ತಾಜಾ ಹಣ್ಣಿನ ಜ್ಯೂಸ್, ತರಕಾರಿ, ಓಟ್ಸ್, ಬ್ರೌನ್ ರೈಸ್, ಬಾರ್ಲಿ, ದ್ವಿದಳ ಧಾನ್ಯಗಳು, ಕಡಲೆ, ಬ್ಲಾಕ್ ಬೀನ್ಸ್, ಬಾದಾಮಿ ಉತ್ಪನ್ನ, ಸೂರ್ಯಕಾಂತಿ ಎಣ್ಣೆಗೆ ಕೃತಕ ಬಣ್ಣಗಳ ಬಳಸಲು ಆಗುವುದಿಲ್ಲ.
ಕೃತಕ ಬಣ್ಣಗಳು ಕ್ಯಾನ್ಸರ್ ಅಪಾಯ ಹೆಚ್ಚಿಸುವುದಲ್ಲದೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದು ಮಕ್ಕಳಲ್ಲಿ ಹೈಪರ್ ಆಕ್ಟಿವ್ ಡಿಸಾರ್ಡರ್, ಅಲರ್ಜಿ ಸೇರಿದಂತೆ ಹಲವು ರೀತಿಯ ಅನಾರೋಗ್ಯ ಸಮಸ್ಯೆ ತಂದೊಡ್ಡಲಿದೆ. FSSAI ಮಾರ್ಗಸೂಚಿಗಳ ಪ್ರಕಾರ, ಹೆಚ್ಚಿನ ಆಹಾರ ಬಣ್ಣಗಳು ಪ್ರತಿ ಕೆಜಿಗೆ 100mg ಆಗಿರಬೇಕು. ಅಲೂರಾ ರೆಡ್, ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್, ಪೊನ್‌ಸಿಯು 4ಆರ್, ಟಾರ್ಟ್ರಾಜಿನ್ ಮತ್ತು ಕಾರ್ಮೋಸಿನ್ ಅನ್ನು ಪ್ರತಿ ಕೆಜಿಗೆ ಗರಿಷ್ಠ 100 ಮಿ.ಗ್ರಾಂ ನಷ್ಟ ಮಾತ್ರ ಆಹಾರ ಪದಾರ್ಥಗಳಿಗೆ ಸೇರಿಸಬೇಕು ಎಂಬ ನಿಯಮವಿದೆ.
ಆಹಾರಗಳಿಗೆ ಸೇರಿಸಲಾಗುವ ಕೃತಕ ಸಿಹಿ ಹಾಗೂ ಬಣ್ಣಗಳಲ್ಲಿ ಹಲವು ಪ್ರಕಾರಗಳಿವೆ. ಒಂದೊಂದು ಒಂದೊಂದು ರೀತಿಯಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತವೆ, ಅದರಲ್ಲಿ ಈ ಕೆಂಪು ಬಣ್ಣ ಅತ್ಯಧಿಕ ಮಟ್ಟದ ಹಾನಿಗೆ ಕಾರಣವಾಗಲಿದೆ. ಕೆಂಪು ಬಣ್ಣವನ್ನು ಎರಿಥ್ರೋಸಿಸ್ ಅಂತಲೂ ಕರೆಯುತ್ತಾರೆ. ಇದು ಥೈರಾಯ್ಡ್ ಸಮಸ್ಯೆಗೆ ಮೂಲ ಕಾರಣವಾಗಬಹುದು ಎಂದು ಅಧ್ಯಯನಗಳು ತಿಳಿಸಿವೆ. ಇಲಿಯ ಮೇಲೆ ನಡೆಸಲಾದ ಅಧ್ಯಯನದಲ್ಲಿ ಈ ಎಥ್ರೋಸಿಸ್ ಥೈರಾಯ್ಡ್ ಸಮಸ್ಯೆಗೆ ಕಾರಣವಾಗಿದ್ದನ್ನು ಅಧ್ಯಯನ ತಿಳಿಸಿದೆ. ಹೀಗಾಗಿ ಇದು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಂಶವಾಗಿದೆ.
ಕೆಂಪು, ಹಳದಿ 5 ಮತ್ತು ಹಳದಿ 6 ಕ್ಯಾನ್ಸರ್-ಉಂಟುಮಾಡುವ ಪದಾರ್ಥಗಳೆಂದು ಕರೆಯಲ್ಪಡುವ ರಾಸಾಯನಿಕ ಅಂಶಗಳನ್ನು ಹೊಂದಿವೆ. ಬೆಂಜಿಡಿನ್, 4-ಅಮಿನೊಬಿಫೆನಿಲ್ ಮತ್ತು 4-ಅಮಿನೊಅಜೋಬೆನ್ಜೆನ್ ಆಹಾರದ ಬಣ್ಣಗಳಲ್ಲಿ ಕಂಡುಬರುವ ಸಂಭಾವ್ಯ ಕಾರ್ಸಿನೋಜೆನ್‌ಗಳಾಗಿವೆ, ಇವು ಸಂಭಾವ್ಯ ಕ್ಯಾನ್ಸರ್ ಕಾರಕಗಳು ಎಂದು ವಿಂಗಡಿಸಲಾಗಿದೆ.
ಈ ಹಿಂದೆ ಗೋಬಿ ಹಾಗೂ ಮಿಠಾಯಿಯಲ್ಲಿ ಅಥವಾ ಕಾಟನ್ ಕ್ಯಾಂಡಿಯಲ್ಲಿ ರಂಡೋಮನ್ ಬಿ ಅಂಶ ಇರೋದು ಪತ್ತೆಯಾಗಿತ್ತು. ಗೋಬಿ ಮಂಚೂರಿಗೆ ಹಾಕುವ ಕಲರ್ ಜಲ್ಲಿಗಳನ್ನ ಟೌನ್ ಟೆಸ್ಟ್ ಗೆ ಒಳಪಡಿಸಿದಾಗ ಅದರಲ್ಲೂ ಕ್ಯಾನ್ಸರ್ ಕಾರಕ ಅಂಶ ಇರುವುದು ಪತ್ತೆಯಾಗಿತ್ತು. ಹೀಗಾಗಿ ರಾಜ್ಯದಲ್ಲಿ ಇವುಗಳನ್ನು ನಿಷೇಧ ಮಾಡುವ ನಿರ್ಧಾರ ಮಾಡಲಾಗಿತ್ತು. ಗೋಬಿ ಹಾಗೂ ಕಾಟನ್ ಕ್ಯಾಂಡಿಯನ್ನು ಮಕ್ಕಳು ಹೆಚ್ಚಾಗಿ ಸೇವಿಸುವುದರಿಂದ ಅವರ ಆರೋಗ್ಯದ ಮೇಲೆ ಇನ್ನಿಲ್ಲದ ಪರಿಣಾಮ ಬೀರಲಿದೆ ಎಂದು ತಿಳಿಸಲಾಗಿತ್ತು. ಹಾಗೆ ಯಾವುದೇ ಬೀದಿ ಬದಿಯ ವ್ಯಾಪಾರಿಯಗಳು ಈ ಕೃತಕ ಬಣ್ಣ ಬಳಸದಂತೆ ಸೂಚನೆ ನೀಡಲಾಗಿತ್ತು. ಬಳಸಿದರೆ ಅಂತವರ ವಿರುದ್ಧ ಕಾನೂನಾತ್ಮಕ ಕ್ರಮದ ಜೊತೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿತ್ತು.
ಆಹಾರಕ್ಕೆ ಸೇರಿಸಬಹುದಾದ ನೈಸರ್ಗಿಕ ಬಣ್ಣಗಳೇನು?
ಆಹಾರಗಳಿಗೆ ಕೃತಕ ಬಣ್ಣಗಳು ಮಾತ್ರವಲ್ಲ ಆರೋಗ್ಯಕ್ಕೆ ಉತ್ತಮವಾಗಿರುವ ನೈಸರ್ಗಿಕ ಬಣ್ಣವನ್ನು ಸಹ ಬಳಸಬಹುದು. ಅದರಲ್ಲಿ ಅರಿಶಿನ, ಬೀಟ್ ಜ್ಯೂಸ್ ಅಥವಾ ಪೌಡರ್, ಪಾಲಕ್ ಅಥವಾ ಮಚ್ಚಾ ಪೌಡರ್, ಕೆಂಪುಮೆಣಸು ಅಥವಾ ಕೆಂಪು ಮೆಣಸಿನ ಪುಡಿ, ಕೇಸರಿ ಹೀಗೆ ಹತ್ತಾರು ಅಂಶಗಳು ಆಹಾರಕ್ಕೆ ನೈಸರ್ಗಿಕ ಬಣ್ಣ ನೀಡಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications