Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಡೆಂಗ್ಯೂ ಪರೀಕ್ಷೆ ಯಾವಾಗ ಮಾಡಿಸಬೇಕು? ಯಾವ ಪರೀಕ್ಷೆ ಮಾಡಿಸಬೇಕು?
ಮಳೆಗಾಲದಲ್ಲಿ ಸೊಳ್ಳೆ ಕಾಟ ಹೆಚ್ಚಾಗುವುದು, ಅದರಲ್ಲೂ ಡೆಂಗ್ಯೂ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಈ ಸೊಳ್ಳೆಗಳ ಕಡಿತದ ಬಗ್ಗೆ ತುಂಬಾನೇ ಮುನ್ನೆಚ್ಚರಿಕೆವಹಿಸಬೇಕು. ಅದರಲ್ಲೂ ಜ್ವರ ಬಂದು ಮೂರು ದಿನವಾದರೂ ಜ್ವರ ಲಕ್ಷಣಗಳು ಕಡಿಮೆಯಾಗದಿದ್ದರೆ ಡೆಂಗ್ಯೂ ಪರೀಕ್ಷೆ ಮಾಡಿಸಲೇಬೇಕು, ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು.

ಯಾವಾಗ ಡೆಂಗ್ಯೂ ಪರೀಕ್ಷೆ ಮಾಡಿಸಬೇಕು? ಯಾವ ಪರೀಕ್ಷೆ ಮಾಡಿಸಬೇಕು ಎಂದು ನೋಡೋಣ ಬನ್ನಿ:
ಡೆಂಗ್ಯೂ ಲಕ್ಷಣಗಳು
* ಅತ್ಯಧಿಕ ಜ್ವರ
* ಚಳಿಜ್ವರ'
* ತುಂಬಾ ತಲೆನೋವು
* ಕಣ್ಣುಗಳಲ್ಲಿ ನೋವು
* ಹೊಟ್ಟೆ ನೋವು
* ವಾಂತಿ ಬೇಧಿ
* ತುಂಬಾ ಸುಸ್ತು
* ಹಸಿವು ಇಲ್ಲದಿರುವುದು
* ತ್ವಚೆಯಲ್ಲಿ ಗುಳ್ಳೆಗಳು ಕಂಡು ಬರುವುದು
ಈ ಬಗೆಯ ಲಕ್ಷಣಗಳು ಕಂಡು ಬಂದರೆ ತುರ್ತು ಚಿಕಿತ್ಸೆ ಅವಶ್ಯಕ
* ತುಂಬಾ ವಾಂತಿ, ಬೇಧಿ
* ವಾಂತಿಯಲ್ಲಿ ರಕ್ತ
* ಕಿಬ್ಬೊಟ್ಟೆಯಲ್ಲಿ ನೋವು
* ದವಡೆಗಳಲ್ಲಿ ರಕ್ತ ಬರುವುದು
* ರಕ್ತದೊತ್ತಡ ತುಂಬಾನೇ ಕಡಿಮೆಯಾಗುವುದು
* ಮೂರ್ಛೆರೋಗ
ಯಾವಾಗ ಡೆಂಗ್ಯೂ ಪರೀಕ್ಷೆ ಮಾಡಿಸಬೇಕು?
ವೈದ್ಯರಿಗೆ ನಿಮ್ಮ ಲಕ್ಷಣಗಳು ನೋಡಿದಾಗ ಡೆಂಗ್ಯೂ ಇರಬೇಕು ಎಂಬ ಸಂಶಯ ಬಂದ ಡೆಂಗ್ಯೂ ಪರೀಕ್ಷೆ ಮಾಡಲು ಹೇಳುತ್ತಾರೆ, ಒಂದು ವೇಳೆ ನೀವು ಜ್ವರ ಬಂದು ಮನೆಯಲ್ಲಿ ಔಷಧ ತೆಗೆದುಕೊಳ್ಳುತ್ತಿದ್ದರೆ ಈ ಮೇಲಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಧಾವಿಸಬೇಕು, ಆವಾಗ ಡೆಂಗ್ಯೂ ಪರೀಕ್ಷೆ ಮಾಡಲಾಗುವುದು.
ಡೆಂಗ್ಯೂ ಪರೀಕ್ಷೆಯನ್ನು 2 ಬಗೆಯಲ್ಲಿ ಮಾಡಬಹುದು
ಡೈರೆಕ್ಟ್ ಟೆಸ್ಟ್: RT-PCR ಟೆಕ್ನಿಕ್ ಬಳಸಿ ಡೆಂಗ್ಯೂ PCR ಪರೀಕ್ಷೆ ಮಾಡಲಾಗುವುದು.
ಇನ್ ಡೈರೆಕ್ಟ್ ಟೆಸ್ಟ್: ಇದನ್ನು ELISA ಟೆಕ್ನಿಕ್ ಬಳಸಿ ನೀಡಲಾಗುವುದು.
ಡೈರೆಕ್ಟ್ ಟೆಸ್ಟ್ ಮಾಡಿಸಿದರೆ ಪ್ರಾರಂಭದಲ್ಲಿಯೇ ಡೆಂಗ್ಯೂ ಕಾಯಿಲೆಯನ್ನು ಗುರುತಿಸಬಹುದು. ಇದನ್ನು ರೋಗ ಲಕ್ಷಣಗಳು ಕಂಡು 5 ದಿನದೊಳಗೆ ಮಾಡಲಾಗುವುದು. ಆದರೆ 7 ದಿನಗಳ ನಂತರ ನೆಗೆಟಿವ್ ಅಂತ ಬರುವ ಸಾಧ್ಯತೆ ಇದೆ.
ನಿಮಗೆ ಡೆಂಗ್ಯೂ ಲಕ್ಷಣಗಳು ಜ್ವರ ಬದಿ 5 ದಿನಗಳು ಕಳೆದ ಮೇಲೂ ಕಂಡು ಬರುವುದಾದರೆ ಡೆಂಗ್ಯೂ ಸೋಂಕು ಇದೆಯೇ ಇಲ್ಲವೇ? ಎಂಬುವುದನ್ನು ಹಿಮೋಗ್ಲೋಬಿನ್ ಆಂಟಿಬಾಡಿ ಪರೀಕ್ಷೆ ಮೂಲಕ ಮಾಡಲಾಗುವುದು.
ಮುನ್ನೆಚ್ಚರಿಕೆಯೇ ಡೆಂಗ್ಯೂ ತಡೆಗಟ್ಟಲು ಪರಿಹಾರ
ನೀವು ಡೆಂಗ್ಯೂ ತಡೆಗಟ್ಟಬೇಕೆಂದರೆ ಸೊಳ್ಳೆ ಕಚ್ಚದಂತೆ ಮುನ್ನೆಚ್ಚರಿಕೆವಹಿಸಬೇಕು, ಇದು ಸೊಳ್ಳೆ ಕಚ್ಚುವುದರಿಂದ ಬರುವ ಕಾಯಿಲೆಯಾಗಿರುವುದರಿಂದ ಡೆಂಗ್ಯೂ ಅಧಿಕವಿರುವ ಕಡೆ ಸೊಳ್ಳೆ ಕಚ್ಚದಂತೆ ಮುನ್ನೆಚ್ಚರಿಕೆವಹಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
