Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಹಲ್ಲುಜ್ಜುವ ಬ್ರಷ್ ಯಾವಾಗ ಬದಲಾಯಿಸಬೇಕು..? ದೀರ್ಘಕಾಲ ಬಳಸಬಹುದೇ..?
ನಾವು ಬೆಳಗ್ಗೆ ಎದ್ದ ಕೂಡಲೇ ಬ್ರಷ್ ಮಾಡುತ್ತೇವೆ, ಕೆಲವರು ನೀರು, ಟೀ ಕುಡಿದ ಬಳಿಕ ಹಲ್ಲನ್ನು ಶುಚಿಗೊಳಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಈಗಂತು ಹತ್ತು ಹಲವು ಟೂತ್ ಪೇಸ್ಟ್‌ಗಳು ಬಂದಿವೆ. ಹೀಗಾಗಿ ಮನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಬ್ರಾಂಡ್‌ನ ಟೂತ್ಪೇಸ್ಟ್ ಇರುವುದು ಸಾಮಾನ್ಯ.
ಹಾಗೆ ನಾವು ಹಲ್ಲು ಉಜ್ಜಲು ಬಳಸುವ ಬ್ರಷ್ ಸಹ ಹತ್ತು ಹಲವು ಕಂಪನಿಗೆ ಸೇರಿರುತ್ತವೆ. ಕಡಿಮೆ ದರದ ಬ್ರಷ್‌ನಿಂದ ಹಿಡಿದು ದುಬಾರಿಯ ಬ್ರಷ್, ಎಲೆಕ್ಟ್ರಿಕ್ ಬ್ರಷ್‌ಗಳು ಸಹ ಈಗ ಮಾರುಕಟ್ಟೆಯಲ್ಲಿವೆ. ಆದ್ರೆ ನಾವು ಹಲ್ಲು ಉಜ್ಜಲು ಬಳಸು ಈ ಬ್ರಷ್ ಅನ್ನು ಯಾವಾಗ ಬದಲಾಯಿಸಬೇಕು? ಎಷ್ಟು ತಿಂಗಳು ಒಂದೇ ಬ್ರಷ್ ಬಳಸಬಹುದು ಎಂಬುದು ನಿಮಗೆ ಗೊತ್ತಾ?

ಬಾಯಿಯ ಆರೋಗ್ಯಕ್ಕೆ ಹಾಗೂ ಹಲ್ಲುಗಳ ಆರೋಗ್ಯಕ್ಕೆ ದಿನಾಲು ಬ್ರಷ್ ಮಾಡುವುದು ಉತ್ತಮ. ಅದರಲ್ಲೂ ನಿತ್ಯವೂ ಎರಡು ಸಮಯ ಬ್ರಷ್ ಮಾಡುವುದು ಹಲ್ಲಿನ ಆರೋಗ್ಯಕ್ಕೆ ಬಹಳ ಒಳ್ಳೆಯೆದು, ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಒಮ್ಮೆ ಹಲ್ಲುಜ್ಜುವುದು ಬಹಳ ಮುಖ್ಯ. ಆದ್ರೆ ಈ ಬ್ರಷ್ ಬದಲಾಯಿಸುವುದು ಬಹಳ ಮುಖ್ಯ.
ಆದ್ರೆ ಕೆಲವರು ಈ ಬ್ರಷ್ ಬದಲಿಸದೆ ಅದನ್ನೆ ಹಲವು ತಿಂಗಳ ಕಾಲ ಬಳಸುತ್ತಿರುತ್ತಾರೆ. ಬ್ರಷ್ ಸರಿ ಇದೆ ಎಂಬ ಕಾರಣಕ್ಕೆ ಅವರು ಒಂದೇ ಬ್ರಷ್ ಬಳಸುತ್ತಾ ಇರುತ್ತಾರೆ, ಇದರಿಂದ ಅವರು ಒಸಡು ಹಾಗೂ ಹಲ್ಲಿನ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾದ್ರೆ ಯಾವಾಗ ಬ್ರಷ್ ಬದಲಾಯಿಸಬೇಕು?, ಯಾವ ರೀತಿಯ ಬ್ರಷ್ ಬಳಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಮೇರಿಕನ್ ಡೆಂಟಲ್ ಅಸೋಸಿಯೇಷನ್ (ADA) ಪ್ರಕಾರ, ಪ್ರತಿ 3 ರಿಂದ 4 ತಿಂಗಳಿಗೊಮ್ಮೆ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಬೇಕಂತೆ. ಬ್ರಷ್ ಮೇಲಿರುವ ತೆಳುವಾದ ಕೂದಲಿನಂತ ಪ್ಲಾಸ್ಟಿಕ್ ಅಂಶಗಳು ಹಲ್ಲುಗಳ ಮೇಲಿರುವ ಕಲೆಗಳನ್ನು, ಕ್ಯಾವಿಟಿಯನ್ನು ತೆಗೆದು ಹಾಕುವ ಸಾಮರ್ಥ್ಯವನ್ನು ಬಹುಬೇಗ ಕಳೆದುಕೊಳ್ಳುತ್ತವೆ. ಅವು ಪರಿಣಾಮಕಾರಿಯಾಗಿ ಹಲ್ಲುಗಳನ್ನು ಸ್ವಚ್ಛ ಮಾಡುವುದಿಲ್ಲ.
ಈ ಟೂತ್ ಬ್ರಷ್‌ಗಳನ್ನು ಬಳಸುವುದೇ ಬ್ಯಾಕ್ಟೀರಿಯಾ ಹಾಗೂ ಕ್ಯಾವಿಟಿ ಕಡಿಮೆ ಮಾಡಲಿ ಎಂದು ಆದ್ರೆ 3ರಿಂದ 4 ತಿಂಗಳ ಕಾಲ ಒಂದೇ ಟೂತ್ ಬ್ರಷ್ ಬಳಸುವುದು ಈ ಕೆಲಸವನ್ನು ಸರಿಯಾಗಿ ನಿರ್ವಹಿಸದೇ ಇರಬಹುದು.
ಬ್ರಷ್ ಬದಲಾಯಿಸಲು ಇದು ಸೂಕ್ತ ಸಮಯ
ಬ್ರಷ್ ನೋಡಲು ಚೆನ್ನಾಗಿಯೇ ಇದ್ದು ಯಾವುದೇ ಹಾನಿ ಆಗಿರದೇ ಇದ್ದರೂ ಕೂಡ ಮೂರು ತಿಂಗಳ ಒಳಗೆ ಬದಲಾಯಿಸುವುದು ಸೂಕ್ತ. ಇಲ್ಲವೆ ನಿಮ್ಮ ಒಸಡಿಗೆ ಬ್ರಷ್‌ನಿಂದ ಪದೇ ಪದೇ ಹಾನಿಯಾಗುತ್ತಿದ್ದರೆ ಅಥವಾ ಹಲ್ಲುಜ್ಜುವಾಗ ಕಿರಿ ಕಿರಿಯಾಗುತ್ತಿದ್ದರೆ ಆ ಬ್ರಷ್ ಬದಲಾಯಿಸುವ ಸಮಯ ಬಂದಿದೆ ಎಂದರ್ಥ. ಹಲ್ಲುಗಳ ಸಂದಿಯಿಂದ ರಕ್ತ ಬರುವುದು, ಹಲ್ಲುಜ್ಜುವಾಗ ನೋವಾಗುವುದು ಹೀಗೆ ಈ ಎಲ್ಲಾ ಲಕ್ಷಣ ಕಂಡುಬಂದರೆ ತಕ್ಷಣ ಆ ಬ್ರಷ್ ಬದಲಾಯಿಸಿ.
ಬಣ್ಣ ಅಥವಾ ವಾಸನೆ ಬರುತ್ತಿದ್ದರೂ ಕೂಡ ಬ್ರಷ್ ಬದಲಾಯಿಸಿ. ಕೆಲವು ಬ್ರಷ್‌ಗಳು ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಅಥವಾ ಕಚ್ಚಾವಸ್ತುವಿನಿಂದ ಮಾಡಲ್ಪಟ್ಟಿರುತ್ತದೆ. ಇವು ಹಲವು ಬಾರಿ ರಾಸಾಯನಿಕ ಕ್ರಿಯೆಗೆ ಒಳಪಟ್ಟು ವಾಸನೆ ಬರುವುದು, ಬಣ್ಣ ಬದಲಾಗುವುದು ಕಂಡುಬಂದರೆ ಬದಲಾಯಿಸುವುದು ಉತ್ತಮ.
ಅದರಲ್ಲೂ ಮಕ್ಳಳ ಬ್ರಷ್‌ಗಳನ್ನು ಬಹುಬೇಗ ಬದಲಾಯಿಸುತ್ತಿರಿ. ಏಕೆಂದರೆ ಬ್ಯಾಕ್ಟೀರಿಯಲ್ ಸಮಸ್ಯೆಗೆ ಮಕ್ಕಳು ಬಹುಬೇಗ ತುತ್ತಾಗುತ್ತಾರೆ, ಹೀಗಾಗಿ ಅವರ ಬ್ರಷ್‌ಗಳ ಮೇಳೆ ಸ್ವಲ್ಪ ಹೆಚ್ಚಿನ ಗಮನವಿಡಿ. ಹಾಗೆ ಬ್ರಷ್‌ಗಳಿಗೆ ಬ್ಯಾಕ್ಟೀರಿಯಾ ಹರಡದಂತೆ ಎಚ್ಚರಿಕೆ ವಹಿಸುವುದು ಕೂಡ ಅಷ್ಟೇ ಮುಖ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications