Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕುತ್ತಿಗೆ ಲಟಿಕೆ ತೆಗೆಯುವುದು ಉತ್ತಮ ಅಭ್ಯಾಸವೇ..? ಇದರ ಪರಿಣಾಮವೇನು ಗೊತ್ತಾ?
ನಾವು ಕೈ ಕಾಕು, ಕುತ್ತಿಗೆ ಹೀಗೆ ದೇಹದ ಪ್ರತಿ ಅಂಗದ ಲಟಿಕೆ ತೆಗೆಯುತ್ತೇವೆ. ಅದ್ರಲ್ಲೂ ಹೆಚ್ಚಾಗಿ ಕೈ ಬೆರಳಿನ ಲಟಿಕೆ ತೆಗೆಯುವುದು ಸಾಮಾನ್ಯ ಅಭ್ಯಾಸ ಆಗಿಬಿಟ್ಟಿರುತ್ತೆ. ಕೈ ನೋವು, ಬೆನ್ನು ನೋವು ಉಂಟಾದಾಗಲು ಲಟಿಕೆ ತೆಗೆಯುವುದನ್ನು ಮಾಡುತ್ತೇವೆ. ಆದ್ರೆ ಕುತ್ತಿಗೆ ನೋವು ಉಂಟಾದಾಗ ಇಲ್ಲವೆ ಸಲೂನ್‌ಗಳಲ್ಲಿ ಕುತ್ತಿಗೆಯ ಲಟಿಕರ ತೆಗೆಯುವುದನ್ನು ನಾವು ನೋಡಿರುತ್ತೇವೆ. ನಾವು ಸಹ ಕುತ್ತಿಗೆಯ ಲಟಿಕೆ ತೆಗೆದುಕೊಳ್ಳುತ್ತೇವೆ.
ಆದ್ರೆ ನಿಮಗೆ ಗೊತ್ತಾ ಈ ರೀತಿ ಲಟಿಕೆ ತೆಗೆಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವೇ ಅಥವಾ ಕೆಟ್ಟದ್ದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಏಕೆಂದರೆ ಕೆಲವೊಮ್ಮೆ ಕುತ್ತಿಗೆ ಲಟಿಕೆ ತೆಗೆಯುವಾಗ ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ಉಂಟಾಗಿರಬಹುದು. ಹಾಗಾದ್ರೆ ಈ ರೀತಿ ಲಟಿಕೆ ತೆಗೆಯುವುದರ ಪರಿಣಾಮವೇನು ಎಂಬುದನ್ನು ನೋಡೋಣ.

ಕುತ್ತಿಗೆಯಲ್ಲಿ ಬಿಗಿತ, ನೋವು ಕಾಣಿಸಿಕೊಂಡಾಗ ಈ ರೀತಿ ಲಟಿಕೆ ತೆಗೆಯುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಒಂದು ಭಂಗಿಯಲ್ಲಿ ಮಲಗುವುದು ಅಥವಾ ಕುತ್ತಿಗೆ ಮೇಲೆ ಬಾರ ಬಿದ್ದಾಗ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಈ ವೇಳೆ ಹೆಚ್ಚಿನವರು ಯಾವುದಾದರು ಎಣ್ಣೆ ಹಚ್ಚಿ ಲಟಿಕೆ ತೆಗೆಯಲು ಮುಂದಾಗುತ್ತಾರೆ.
ಆದ್ರೆ ಈ ರೀತಿ ಮಾಡುವುದು ಪಾರ್ಶ್ವವಾಯುವಿಗೆ ಕಾರಣವಾಗಬಹುದೇ ಎಂಬ ಅನುಮಾನವು ಸಹ ಕಾಡುತ್ತದೆ. ಅಲ್ಲದೆ ಕ್ರ್ಯಾಕಿಂಗ್, ಸೆಳೆತ, ಸ್ನಾಯು ನೋವು ಸಹ ಕಾಣಿಸಿಕೊಳ್ಳಬಹುದು ಎಂಬುದು ತಜ್ಞರ ವಾದವಾಗಿದೆ.
ನಾವು ನಮ್ಮ ಕೈಯಿಂದ ಅಥವಾ ಹಾಗೆಯೇ ಕುತ್ತಿಗೆಯನ್ನು ಬಲವಾಗಿ ಒಂದು ಕಡೆ ತಿರುಗಿಸಿದಾಗ ಲಟಿಕೆ ಬರುತ್ತದೆ. ಕೆಲವು ಬಾರಿ ಲಟಿಕೆ ಬರುವುದಿಲ್ಲ ನೋವಿನ ಅನುಭವವಾಗುತ್ತದೆ. ಆದ್ರೆ ಈ ರೀತಿ ಲಟಿಕೆ ತೆಗೆಯುವುದು ಉತ್ತಮ ಅಭ್ಯಾಸವಲ್ಲವಂತೆ. ಲಟಿಕೆ ಬಂದಾಗ ನಿಮಗೆ ನಿರಾಳತೆಯ ಅನುಭವವಾಗಬಹುದು. ಆದ್ರೆ ಇದರಿಂದ ಹಾನಿ ಹೆಚ್ಚಾಗುತ್ತದೆ.
ಈ ರೀತಿ ಲಟಿಕೆ ತೆಗೆಯುವುದು ಕುತ್ತಿಗೆ ಮಾಂಸ ಖಂಡದ ಕ್ರ್ಯಾಕಿಂಗ್‌ಗೆ ಕಾರಣವಾಗುತ್ತದೆ. ಇದು ಬಹುತೇಕ ಮಂದಿಗೆ ನೋವಿನ ರೀತಿ ಕಾಡಬಹಯುದು, ಆದರೆ ಕೆಲವು ವಿಶೇಷ ಪ್ರಕರಣದಲ್ಲಿ ಇದು ಗಂಭೀರ ಸ್ವರೂಪ ತಾಳಬಹುದು. ಆ ಪ್ರದೇಶದಲ್ಲಿನ ರಕ್ತನಾಳದಲ್ಲಿ ಒಡಕು ಮೂಡಬಹುದು. ಇದು ಪಾರ್ಶ್ವವಾಯು ಸಂಭವನೆಯ ಅಪಾಯ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತದೆ.
ನಿಮ್ಮ ಮೆದುಳಿನ ಪ್ರದೇಶಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಅಥವಾ ಕಡಿತಗೊಳಿಸುತ್ತದೆ, ಇದು ಸಾಮಾನ್ಯವಾಗಿ ರಕ್ತ ಮತ್ತು ಆಮ್ಲಜನಕದಿಂದ ಪೂರೈಕೆಯಾಗುತ್ತದೆ, ಇದರಿಂದಾಗಿ ಪಾರ್ಶ್ವವಾಯು ಉಂಟಾಗುತ್ತದೆ. ಇಲ್ಲವೆ ತೀವ್ರ ಸ್ವರೂಪದ ತಲೆನೋವಿಗೆ ಕಾರಣವಾಗಬಹುದು. ಹಾಗೆ ಸ್ನಾಯು ರಜ್ಜುಗಳು, ಸ್ಪೈನಲ್ ಕಾರ್ಡ್, ರಕ್ತನಾಳ, ಕರಿದಾದ ಮೂಳೆಗಳ ರಚನೆಗೆ ಈ ಲಟಿಕೆ ತೆಗೆಯುವುದರಿಂದ ಹಾನಿಯಾಗುವ ಸಾಧ್ಯತೆ ಹೆಚ್ಚು.
ಹಾಗಾದ್ರೆ ಕುತ್ತಿಗೆ ನೋವಿಗೆ ಲಟಿಕೆಯ ಬದಲು ಯಾವ ಪರಿಹಾರ ಮಾಡಬೇಕು?
ಕುತ್ತಿಗೆ ನೋವು ಕಾಣಿಸಿಕೊಂಡಾಗ ಲಟಿಕೆ ತೆಗೆಯುವ ಬದಲಾಗಿ ಯಾವುದಾದರು ಲೋಷನ್ ಹಚ್ಚಿಕೊಳ್ಳುವುದು ಉತ್ತಮ. ನೋವು ನಿವಾರಕಗಳನ್ನು ಹಚ್ಚಿ ಮಸಾಜ್ ಮಾಡುವುದು ಬಹಳ ಸುರಕ್ಷಿತವಾದ ವಿಧಾನವಾಗಿದೆ. ಇದರಿಂದ ಕುತ್ತಿಗೆಗೆ ಯಾವುದೇ ಹಾನಿಯಾಗುವುದಿಲ್ಲ. ಅಥವಾ ಕುತ್ತಿಗೆ ಭಾಗಕ್ಕೆ ಎಣ್ಣೆ ಹಚ್ಚಿ ಅದರಿಂದ ಮಸಾಜ್ ಮಾಡಬೇಕು.
ಲಟಿಕೆ ತೆಗೆಯುವುದರಿಂದ ಉಂಟಾಗುವ ಇತರೆ ಸಮಸ್ಯೆಗಳು
ತಲೆನೋವು
ಕುತ್ತಿಗೆ ಭಾಗದಲ್ಲಿ ವಿಪರೀತ ನೋವು
ಮೈಗ್ರೇನ್
ರಕ್ತನಾಳ ಹಿಗ್ಗುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
