Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವೆಜೈನಾ ಸೋಂಕು ಉಂಟಾದಾಗ ಏನು ಮಾಡಬೇಕು? ಇದು ಬರದಂತೆ ತಡೆಯುವುದು ಹೇಗೆ?
ಮಹಿಳೆಯರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೆಂದರೆ ಜನನೇಂದ್ರೀಯದಲ್ಲಿ ಸೋಂಕು, ಅನೇಕ ಕಾರಣಗಳಿಂದ ಜನನೇಂದ್ರೀಯದಲ್ಲಿ ಸೋಂಕು ಉಂಟಾಗುವುದು. ಗರ್ಭಾವಸ್ಥೆಯ ಸಮಯದಲ್ಲಿ , ಮಧುಮೇಹಿ ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುವುದು.

ವೆಜೈನಾ ಸೋಂಕು ಉಂಟಾದರೆ ಈ ಬಗ್ಗೆ ಗಮನ ಹರಿಸಿ
* ಸ್ವಚ್ಛತೆ ಕಾಪಾಡಿ
ಆ ಭಾಗವನ್ನು ಸ್ವಚ್ಛವಾಗಿಡಿ. ಆ ಭಾಗಕ್ಕೆ ಸುಗಂಧ ದ್ರವ್ಯ ಇರುವ ಸೋಪು ಬಳಸಬೇಡಿ, ಬಾತ್‌ರೂಂಗೆ ಹೋದಾಗ ತೊಳೆದು ಒರೆಸಿ, ಈ ರೀತಿ ಮಾಡುವುದರಿಂದ ಸೋಂಕು ತಡೆಗಟ್ಟಬಹುದು. ತೊಳೆಯುವಾಗ ಸೋಪು ಬಳಸಬೇಡಿ, ಹದ ಬಿಸಿ ನೀರು ಬಳಸಿದರೆ ಇನ್ನೂ ಒಳ್ಳೆಯದು.
2. ಸಡಿಲವಾದ ಒಳ ಉಡುಪು ಧರಿಸಿ
ಬಿಗಿಯಾದ ಉಡುಪು ಬ್ಯಾಕ್ಟಿರಿಯಾ ಸೋಂಕು ಹೆಚ್ಚಿಸುತ್ತದೆ, ಆದ್ದರಿಂದ ಸಡಿಲವಾದ ಕಾಡನ್ ಬಟ್ಟೆ ಧರಿಸಿ, ಮಲಗುವಾಗ ಒಳ ಉಡುಪು ತೆಗೆದು ಮಲಗುವುದು ಒಳ್ಳೆಯದು. ಫ್ಯಾಬ್ರಿಕ್ ಬಟ್ಟೆ ಧರಿಸಬೇಡಿ, ಹತ್ತಿಯ ಬಟ್ಟೆ ತುಂಬಾ ಒಳ್ಳೆಯದು.
3. ಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಿ
ಸುರಕ್ಷಿತ ಲೈಂಗಿಕ ಕ್ರಮ ಅನುಸರಿಸಿ, ನಿಮ್ಮ ಸಂಗಾತಿ ಕಾಂಡೋಮ್ ಧರಿಸುವುದರಿಂದ ಈ ಬಗೆಯ ಸೋಂಕು ತಡೆಗಟ್ಟಲು ಸಹಕಾರಿ. ಸುರಕ್ಷಿತ ಲೈಂಗಿಕಕ್ರಿಯೆಯಿಂದ STIs ತಡೆಗಟ್ಟಬಹುದು. ಅಲ್ಲದೆ ನಿಮ್ಮ ಸಂಗಾತಿಗೂ ಸೋಂಕು ಹರಡುವುದನ್ನು ತಡೆಗಟ್ಟಬಹುದು.
4. ಪ್ಯಾಡ್, ಟ್ಯಾಂಫೂನ್ ತುಂಬಾ ಹೊತ್ತು ಬಳಸಬೇಡಿ
ಮುಟ್ಟಿನ ಸಮಯದಲ್ಲಿ ಪ್ಯಾಡ್ ಅಥವಾ ಟ್ಯಾಂಫೂನ್ ತುಂಬಾ ಹೊತ್ತು ಬಳಸಬೇಡಿ, ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಡೆಗೆ ಹೆಚ್ಚಿನ ಜಾಗ್ರತೆವಹಿಸಿ.
5. ಒದ್ದೆ ಒಳುಡುಪು ಬದಲಾಯಿಸಿ
ಬಿಳುಪು ಹೋಗಿ ಒಳ ಉಡುಪು ಒದ್ದೆಯಾಗಿದ್ದರೆ ಬದಲಾಯಿಸಿ, ಇಲ್ಲದಿದ್ದರೆ ಸೋಂಕು ಹರಡುವುದು.
6. ಆಹಾರಕ್ರಮದ ಕಡೆಯೂ ಗಮನಹರಿಸಿ
ನೀವು ಮೊಸರು, ಯೋಗರ್ಟ್ ಹೀಗೆ ಪ್ರೀಬಯೋಟಿಕ್ ಆಹಾರವನ್ನು ತಿನ್ನುವುದರಿಂದ ಆ ಭಾಗದಲ್ಲಿ ಒಳ್ಳೆಯ ಬ್ಯಾಕ್ಟಿರಿಯಾ ಉತ್ಪತ್ತಿ ಹೆಚ್ಚಾಗುವುದು, ಅಲ್ಲದೆ ಸಾಕಷ್ಟು ನೀರು ಕುಡಿಯಿರಿ.
ಈ ರೀತಿ ಮಾಡಬೇಡಿ
ಕೆಮಿಕಲ್ ಅಧಿಕವಿರುವ ಉತ್ಪನ್ನಗಳನ್ನು ಬಳಸಬೇಡಿ, ಆ ಭಾಗವನ್ನು ಬರೀ ನೀರಿನಿಮದ ತೊಳೆಯಿರಿ, ಸೋಂಕು ಉಂಟಾದಾಗ ವೈದ್ಯರು ಏನಾದರೂ ಕ್ರೀಮ್ ಸೂಚಿಸಿದ್ದರೆ ಕಡಿಮೆಯಾಗುವವರೆಗೆ ಅದನ್ನು ಬಳಸಿ.
ಸಕ್ಕರೆಯಂಶ ಸೇವಿಸಬೇಡಿ
ವೆಜೈನಾ ಸೋಂಕು ಇರುವಾಗ ಸಕ್ಕರೆಯಂಶ ಪದಾರ್ಥಗಳನ್ನು ಸೇವಿಸಬೇಡಿ, ಸಕ್ಕರೆಯಂಶ ಸೇವಿಸುವುದರಿಮದ ಸೋಂಕು ಹೆಚ್ಚಾಗುವುದು.
ಬಿಗಿಯಾದ ಉಡುಪು ಧರಿಸಬೇಡಿ
ಬಿಗಿಯಾದ ಒಳಉಡುಪು ಸೋಂಕು ಹೆಚ್ಚಿಸುತ್ತದೆ, ಆದ್ದರಿಂದ ಸಡಿಲವಾದ ಒಳ ಉಡುಪು ಧರಿಸಿ.
ಅಸುರಕ್ಷಿತ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಡಿ
ಜನನೇಂದ್ರೀಯದಲ್ಲಿ ಸೋಂಕು ಇದ್ದಾಗ ಲೈಂಗಿಕ ಚಟುವಟಿಕೆ ಮಾಡದಿದ್ದರೆ ಒಳ್ಳೆಯದು, ಇನ್ನು ಆಗಾಗ ಈ ಸಮಸ್ಯೆಗೆ ಗುರಿಯಾಗುತ್ತಿದ್ದರೆ ಲೈಂಗಿಕ ಚಟುವಟಿಕೆ ವೇಳೆ ಸುರಕ್ಷಿತ ಕ್ರಮ ಅನುಸರಿಸಿ.
ಸ್ವ ಚಿಕಿತ್ಸೆ ಮಾಡಬೇಡಿ
ವೆಜೈನಾ ಸೋಂಕು ಇರುವಾಗ ಸ್ವ ಚಿಕಿತ್ಸೆ ಮಾಡಬೇಡಿ, ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಅವರ ಸಲಹೆ ಸೂಚನೆ ಪಡೆಯಿರಿ.
ಮೂತ್ರ ಸೋಂಕಿಗೆ ಮನೆಮದ್ದು
ಜೀರಿಗೆ ನೀರು: ಜೀರಿಗೆ ನೀರು ಮಾಡಿ ಕುಡಿಯುವುದರಿಂದ ಮೂತ್ರ ಸೋಂಕಿನಿಂದ ಉಂಟಾಗುವ ಹೊಟ್ಟೆ ನೋವು ಸ್ವಲ್ಪ ಕಡಿಮೆಯಾಗುವುದು.
ಎಳನೀರು: ಎಳನೀರು ಕುಡಿಯುವುದು ಕೂಡ ಒಳ್ಳೆಯದು
ಬಾರ್ಲಿ ನೀರು: ಬಾರ್ಲಿ ನೀರು ಕೂಡ ವೆಜೈನಾ ಸೋಂಕಿನಿಂದ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ
ವಿಟಮಿನ್ ಸಿ ಅಧಿಕವಿರುವ ಆಹಾರ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
