Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಿಕ್ಸ್ ಪ್ಯಾಕ್ ಇರೋ ಫ್ಲಾಟ್ ಹೊಟ್ಟೆ ಬೇಕು ಅಂದ್ರೆ ಈ ಫುಡ್ ಮರೆತುಬಿಡಿ..! ಆಹಾರ ತಜ್ಞರ ಸಲಹೆ ಇದು..!
ನೀವು ನಿಮ್ಮ ಹೊಟ್ಟೆಯ ಗಾತ್ರ ಹೆಚ್ಚಾಗುತ್ತಿರುವ ಭಯದಲ್ಲಿ ಇರಬಹುದು. ಅಥವಾ ಹೊಟ್ಟೆಯ ಭಾಗವು ಮುಂದೆ ಬರುತ್ತಿರುವುದನ್ನು ಗಮನಿಸುತ್ತಿರಬಹುದು. ನಿಧಾನವಾಗಿ ನಿಮ್ಮ ತೂಕ ಹೆಚ್ಚಾಗುತ್ತಿರುವ ಜೊತೆಗೆ ಹೊಟ್ಟೆ ಕೂಡ ದೊಡ್ಡದಾಗುತ್ತಿರಬಹುದು. ಇದಕ್ಕೆ ನೀವು ಸೇವಿಸುವ ಆಹಾರ ಹಾಗೂ ಜೀವನ ಶೈಲಿ ಕಾರಣ ಎಂಬುದನ್ನು ನೀವು ತಿಳಿದಿದ್ದೀರಿ. ಹಾಗೆ ನೀವು ಸಿಕ್ಸ್ ಪ್ಯಾಕ್ ಹೊಂದಿರುವ ಹೊಟ್ಟೆ ಹೊಂದಬೇಕು ಅಂದರೆ ಈ ರೀತಿ ಸುಲಭದ ಉಪಾಯ ಮಾಡುವುದು ಒಳಿತು.
ಫ್ಲಾಟ್ ಆಗಿರುವ ಹೊಟ್ಟೆ ಪಡೆಯಬೇಕು ಅಂದರೆ ನಿತ್ಯ ಜಿಮ್‌ಗೆ ಹೋಗಬೇಕು, ವ್ಯಾಯಾಮ ಮಾಡಬೇಕು, ಗಂಟೆಗಳ ಕಾಲ ಕಸರತ್ತು ಮಾಡಬೇಕು ಎಂಬುದಿಲ್ಲ. ಬದಲಿಗೆ ನೀವು ನಿತ್ಯ ಸೇವಿಸುವ ಕೆಲವೊಂದು ಆಹಾರದ ಮೇಲೆ ಗಮನವಿಟ್ಟರೆ ಸಾಕಂತೆ. ಹೀಗಂತ ನ್ಯೂಟ್ರಿಷಿನಲಿಸ್ಟ್ ಆಗಿರುವ ಲೋಗಾ ಪ್ರೀತಿಕಾ ಶ್ರೀನಿವಾಸ್ ಹೇಳುತ್ತಾರೆ. ಅವರು ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ರೀತಿಯ ಕೆಲವೊಂದು ಸಲಹೆಗಳ ಹೇಳಿರುವುದು ನೋಡಬಹುದು.

ಹಾಗಾದ್ರೆ ಅವರ ಪ್ರಕಾರ ಫ್ಲಾಟ್ ಹೊಟ್ಟೆ ಪಡೆಯಲು ಏನೆಲ್ಲಾ ಮಾಡಬೇಕು? ಯಾವ ಆಹಾರವು ನಮ್ಮ ಹೊಟ್ಟೆಯ ಗಾತ್ರ ಹೆಚ್ಚಾಗಲು ಕಾರಣವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಕ್ಕರೆ ಭರಿತ ಆಹಾರಗಳು
ನಮ್ಮ ಹೊಟ್ಟೆಯು ದಪ್ಪವಾಗಲು ಕಾರಣವಾಗುವ ಪ್ರಮುಖ ಆಹಾರಗಳೆಂದರೆ ಅದು ಸಕ್ಕರೆ ಭರಿತ ಆಹಾರಗಳಂತೆ. ಅದರಲ್ಲೂ ಕೇಕ್, ಕುಕ್ಕೀಸ್, ಚಾಕೊಲೆಟ್, ಟೀ ಕಾಫಿ, ಹೆಚ್ಚಾಗಿ ಸೇವಿಸುವುದು. ಅದರಲ್ಲೂ ಸಂಜೆ 6 ಗಂಟೆಯ ಬಳಿಕ ಈ ಆಹಾರಗಳ ಸೇವಿಸುವುದು ನಿಮ್ಮ ಹೊಟ್ಟೆಯಲ್ಲಿ ಕೊಬ್ಬಿನಾಂಶ ಶೇಖರಣೆ ಆಗಲು ಸಹಕಾರಿಯಾಗಲಿದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುವ ಅಂಶವಾಗಿದೆ.
ಭಾರೀ ಮೊತ್ತದ ಪ್ರೋಟಿನ್
ನಿಮ್ಮ ದೇಹದ ತೂಕಕ್ಕೆ ಅಗತ್ಯವಾಗ ಪ್ರೋಟಿನ್‌ಗಿಂತ ಹೆಚ್ಚು ಸೇವಿಸುವುದು ಕೂಡ ತೂಕ ಹೆಚ್ಚಳ ಹಾಗೂ ಕೊಬ್ಬಿನಾಂಶ ಶೇಖರಣೆಗೆ ಕಾರಣವಾಗುತ್ತದೆ. ಹೆಚ್ಚು ಪ್ರೋಟಿನ್ ತುಂಬಿರುವ ಆಹಾರ ಸೇವಿಸಿದ ಬಳಿಕವೂ ದಿನದ ಅಗತ್ಯಕ್ಕಿಂತ ಹೆಚ್ಚಿನ ಪ್ರೋಟಿನ್ ಸೇವಿಸುವುದು ತೂಕ ದುಪ್ಪಟ್ಟಾಗಲು ಕಾರಣವಾಗುತ್ತದೆ.
ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು
ಸಂಸ್ಕರಿತ ಕಾರ್ಬೋಹೈಡ್ರೇಟ್‌ಗಳ್ನು ಸೇವಿಸದೆ ಇರುವುದು ನಿಮ್ಮ ಬಯಕೆಯ ಫ್ಲಾಟ್ ಹೊಟ್ಟೆ ಪಡೆಯಲು ಒಂದು ಪ್ರಮುಖ ಅಂಶವಾಗಿದೆ. ನೀವು ಹೆಚ್ಚಿನ ಬಿಳಿ ಅಕ್ಕಿ ಅನ್ನ, ಪಾಸ್ತಾ, ಬ್ರೆಡ್ ಸೇವಿಸುವ ಅಭ್ಯಾಸ ಇಟ್ಟುಕೊಂಡಿದ್ದರೆ ಅದನ್ನು ನಿಲ್ಲಿಸುವುದು ಬಹಳ ಉತ್ತಮ. ಅದರಲ್ಲು ಅತೀ ಹೆಚ್ಚು ಅನ್ನ ಸೇವಿಸುವುದು ಹೊಟ್ಟೆಯ ಗಾತ್ರ ಹೆಚ್ಚಾಗಲು ಕಾರಣವಾಗುತ್ತದೆ.
ಡೀಪ್-ಫ್ರೈಡ್ ಆಹಾರಗಳು
ನೀು ಫ್ರೆಂಚ್ ಫ್ರೈಸ್, ಪಕೋಡಾಗಳು, ಕಚೋರಿ ಮತ್ತು ಸಮೋಸಾಗಳಂತಹ ಡೀಪ್-ಫ್ರೈಡ್ ಆಹಾರಗಳ ಸೇವಿಸುವುದನ್ನು ತಪ್ಪಿಸಬೇಕು. ಈ ಆಹಾರಗಳು ಹೆಚ್ಚಿನ ಕ್ಯಾಲೋರಿಗಳಿಂದ ತುಂಬಿರುತ್ತವೆ. ಇದು ನಿಮ್ಮ ಚಯಾಪಚಯ ಕ್ರಿಯೆ ನಿಧಾನಗೊಳಿಸುತ್ತವೆ. ಇದು ಹೆಚ್ಚು ಕೊಬ್ಬಿನ ಅಂಶ ದೇಹದಲ್ಲೇ ಉಳಿಯಲು ಕಾರಣಾಗುತ್ತದೆ. ಹೀಗಾಗಿ ಇಂತಹ ಆಹಾರದಿಂದ ದೂರವೇ ಇರಿ.
ಕಾರ್ಬೊನೇಟೆಡ್ ಪಾನೀಯಗಳು
ಇತ್ತೀಚಿನ ದಿನಗಳಲ್ಲಿ ನಗರ ವಾಸಿಗಳು ಅದರಲ್ಲೂ ಯುವ ಜನತೆಯು ಈ ಕಾರ್ಬೊನೇಟೆಡ್ ಪಾನೀಯಗಳ ಸೇವನೆ ಹೆಚ್ಚು ಮಾಡುತ್ತಿರುವುದು ನೋಡಬಹುದು. ಇದು ಆರೋಗ್ಯದ ದೃಷ್ಟಿಯಿಂದ ಎಂದಿಗೂ ಉತ್ತಮವಲ್ಲ. ಅದರಲ್ಲೂ ಈ ಆಹಾರಗಳನ್ನು ಮಲಗುವ ಮುನ್ನ ಅಥವಾ ಸಂಜೆ 6 ಗಂಟೆಯ ಬಳಿಕ ಸೇವಿಸದೆ ಇರುವುದು ಬಹಳ ಮುಖ್ಯ.
ಡೈರಿ ಉತ್ಪನ್ನಗಳು
ಡೈರಿ ಉತ್ಪನ್ನಗಳಾದ ಹಾಲು, ಚೀಸ್, ತುಪ್ಪದಂತಹ ಆಹಾರವನ್ನು ನಿತ್ಯ ನಿಮ್ಮ ಆಹಾರದಲ್ಲಿ ಸೇವಿಸುವ ಬದಲಾಗಿ ಆಗಾಗ ಮಾತ್ರ ಸೇವಿಸಬೇಕು. ಅದರಲ್ಲೂ ಸಂಜೆ 6 ಗಂಟೆಯ ನಂತರ ಇವುಗಳ ಸೇವನೆ ಬಿಡುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









