ಸ್ಟ್ರೋಕ್ ಹೆಚ್ಚಾಗಲು ಕಾರಣವೇನು? ತಡೆಗಟ್ಟಬಹುದೇ?

ನಮ್ಮ ಜೀವನ ಕ್ರಮ ಬದಲಾಗುತ್ತಿದ್ದಂತೆ, ನಮ್ಮ ಅಭ್ಯಾಸಗಳು, ಹವ್ಯಾಸಗಳು ಬದಲಾಗುತ್ತಿದ್ದಂತೆ ನಮ್ಮ ಆರೋಗ್ಯದ ಮೇಲೆ ಕೂಡ ಭಾರೀ ಪರಿಣಾಮ ಬೀರುತ್ತದೆ. ನಾವಿರುವ ವಾತಾವರಣ ಇರಬಹುದು, ಜೀವನ ಶೈಲಿ ಇರಬಹುದು ನಮ್ಮ ದೇಹದ ಮೇಲೆ ಬಹಳ ದೊಡ್ಡ ಪರಿಣಾಮ ಬೀರುತ್ತದೆ. ದೇಶದಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸಮಸ್ಯೆ ಹೆಚ್ಚಾಗುತ್ತಿದೆ ಇದರ ಜೊತೆಗೆ ಸ್ಟ್ರೋಕ್ ಅಥವಾ ಪಾರ್ಶ್ವ ವಾಯು ಕೂಡ ಹೆಚ್ಚಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದ್ದು ಜನರಲ್ಲಿ ಆತಂಕ ಮೂಡಿಸಿದೆ.

reason to increase the stroke

ಪಾರ್ಶ್ವ ವಾಯು ಸಂಭವಿಸುವುದಕ್ಕೆ ಕೆಲವು ಪ್ರಮುಖ ಕಾರಣಗಳು ಇವೆ. ಮೊದಲನೆಯದಾಗಿ ಮೆದುಳಿನ ಮೂಲಕ ರಕ್ತದ ಹರಿವಿನ ಬದಲಾವಣೆ ಪಾರ್ಶ್ವವಾಯು ಸಂಭವಿಸುವುದಕ್ಕೆ ಮುಖ್ಯ ಕಾರಣವಾಗಿರುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳು ಮೆದುಳಿನ ಕೋಶಕ್ಕೆ ತಲುಪಲು ರಕ್ತದ ಅರಿವು ಸಹಾಯ ಮಾಡುತ್ತದೆ ಆದರೆ ಈ ಹರಿವಿನಲ್ಲಿ ಅಡಚಣೆ ಉಂಟಾದಾಗ ಜೀವಕೋಶಗಳಿಗೆ ಆಮ್ಲಜನಕದ ಸಪ್ಲೈ ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ಪಾರ್ಶ್ವವಾಯು ಆರಂಭವಾಗುತ್ತದೆ. ಆತಂಕಕಾರಿ ವಿಷಯವೇನೆಂದರೆ, ಇತ್ತೀಚಿಗೆ ಭಾರತದಲ್ಲಿ 18 ಲಕ್ಷಕ್ಕೂ ಹೆಚ್ಚು ಪಾರ್ಶ್ವವಾಯು ಪ್ರಕರಣಗಳು ದಾಖಲಾಗಿವೆ. ಎ ಐ ಐ ಎಂ ಎಸ್ ವರದಿಯ ಪ್ರಕಾರ ಭಾರತದಲ್ಲಿ ಅಂದಾಜು ಸುಮಾರು 40 ಸೆಕೆಂಡ್ ಗಳಿಗೆ ಒಬ್ಬ ವ್ಯಕ್ತಿ ಪಾರ್ಶ್ವವಾಯು ರೋಗಕ್ಕೆ ತುತ್ತಾಗುತ್ತಿದ್ದಾನೆ. ಅಲ್ಲದೆ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಪಾಶ್ವ ವಾಯುವಿನಿಂದ ಒಬ್ಬ ವ್ಯಕ್ತಿಗೆ ಸಾವು ಕೂಡ ಸಂಭವಿಸುತ್ತದೆ ಎನ್ನುವ ಭಯಾನಕ ರಿಪೋರ್ಟ್ ಅನ್ನು AIIMS ಬಹಿರಂಗಪಡಿಸಿದೆ

ಪಾರ್ಶ್ವವಾಯು ಎಂದರೇನು?
ನಮ್ಮ ದೇಹದ ಒಂದು ಭಾಗದಲ್ಲಿ ದೌರ್ಬಲ್ಯ ಉಂಟಾಗುವುದು ಅಥವಾ ಒಂದು ಭಾಗ ಮರಗಟ್ಟಿದಂತೆ ಆಗುವುದು ಒಂದು ಕಣ್ಣಿನ ದೃಷ್ಟಿ ಕಾಣದೆ ಇರುವುದು ಈ ಲಕ್ಷಣಗಳನ್ನು ಪಾಶ್ವ ವಾಯು ಎನ್ನಬಹುದು ಅಂದರೆ ದೇಹದ ಒಂದು ಭಾಗದಲ್ಲಿ ಯಾವ ಶಕ್ತಿಯು ಇರುವುದಿಲ್ಲ. ಮೆದುಳಿನ ಅಥವಾ ತಲೆಯ ನರಮಂಡಲದ ಕೇಂದ್ರ ಭಾಗಕ್ಕೆ ರಕ್ತದ ಅರಿವು ಇದ್ದಕ್ಕಿದ್ದ ಹಾಗೆ ನಿಂತು ಹೋಗಬಹುದು ಅಥವಾ ಮೆದುಳಿನಲ್ಲಿ ಯಾವುದಾದರೂ ಒಂದು ನರದಲ್ಲಿ ರಕ್ತಸ್ರಾವ ಉಂಟಾಗಬಹುದು ಇದರಿಂದ ಪಾರ್ಶ್ವವಾಯು ಸಂಭವಿಸುತ್ತದೆ. ಇನ್ನು ಪಾರ್ಶ್ವ ವಾಯು ಎನ್ನುವುದು ಇದ್ದಕ್ಕಿದ್ದ ಹಾಗೆ ಸಂಭವಿಸುವ ಸಾಧ್ಯತೆಗಳು ಹೆಚ್ಚು. ಕೆಲವು ಪಾರ್ಶ್ವವಾಯು ಬಹಳ ದೊಡ್ಡ ಮಟ್ಟದಲ್ಲಿ ಆಗುವುದಿಲ್ಲ ಆಗ ಕೆಲವು ಚಿಕಿತ್ಸೆಗಳ ಮೂಲಕ ಕ್ರಮೇಣ ಅದನ್ನು ಗುಣಪಡಿಸಬಹುದು ಆದರೆ ಇನ್ನೂ ಕೆಲವರಲ್ಲಿ ಬಹಳ ತೀವ್ರ ಪ್ರಮಾಣದಲ್ಲಿ ಪಾರ್ಶ್ವ ವಾಯು ಉಂಟಾಗುತ್ತದೆ ಅಂತಹ ಸಂದರ್ಭದಲ್ಲಿ ಸಾವೂ ಕೂಡ ದಾಖಲಾಗುತ್ತವೆ.

ಪಾರ್ಶ್ವವಾಯು ವಿಧಗಳು:
ಸ್ಟ್ರೋಕ್ ಅಥವಾ ಪಾರ್ಶ್ವ ವಾಯುವಿನಲ್ಲಿ ಎರಡು ವಿಧ. ಇಸ್ಕಿಮಿಕ್ ಸ್ಟ್ರೋಕ್ ಹಾಗೂ ಹೇಮರಾಜಿಕ್ ಸ್ಟ್ರೋಕ್. ಇಸ್ಕಿಮಿಕ್ ಸ್ಟ್ರೋಕ್ ನಲ್ಲಿ ಮೆದುಳಿನ ಒಂದು ಭಾಗದಲ್ಲಿ ರಕ್ತದ ಹರಿವು ನಿಂತು ಹೋಗಬಹುದು ಅಥವಾ ರಕ್ತದ ಹರಿವಿಗೆ ಅಡಚಣೆ ಉಂಟಾಗಬಹುದು ಆದರೆ ಈ ರೋಗ ಲಕ್ಷಣವನ್ನು ನೀವು ಮೊದಲೇ ಗುರುತಿಸಿ, ಅದಕ್ಕೆ ಚಿಕಿತ್ಸೆ ನೀಡಬಹುದು ತಕ್ಷಣಕ್ಕೆ ಕೊಡುವ ಕೆಲವು ಚುಚ್ಚುಮದ್ದುಗಳು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಇನ್ನು ಎರಡನೇ ವಿಧವಾಗಿರುವ ಹೇಮರಾಜಿಕ್ ಸ್ಟ್ರೋಕ್ ತಕ್ಷಣ ಸಂಭವಿಸುವಂತದ್ದು ಇದಕ್ಕೆ ತುರ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿರುತ್ತದೆ ಒಂದು ವೇಳೆ ಶಸ್ತ್ರಚಿಕಿತ್ಸೆ ಮಾಡಿಸದೆ ಇದ್ದಲ್ಲಿ ಮೆದುಳಿನಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯಿಂದ ವ್ಯಕ್ತಿ ಮರಣ ಹೊಂದುವ ಸಾಧ್ಯತೆ ಇರುತ್ತದೆ.

ಪಾರ್ಶ್ವವಾಯು ಗುಣಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರಿಗೆ ತಿಳಿಸಬೇಕು ಪಾರ್ಶ್ವವಾಯು ಹಾಗೆ ಬಿಟ್ಟರೆ ವ್ಯಕ್ತಿಯ ದೇಹ ಜರ್ಜರಿತವಾಗುತ್ತದೆ ದೇಹದಲ್ಲಿ ಶಕ್ತಿ ಕಳೆದುಕೊಳ್ಳುತ್ತಾನೆ ಹಾಗೂ ಇದು ಮರಣಕ್ಕೂ ಕೂಡ ಕಾರಣವಾಗುತ್ತದೆ. ಪಾರ್ಶ್ವವಾಯು ಎನ್ನುವುದು ಯಾವುದೇ ವ್ಯಕ್ತಿಗೂ ಉಂಟಾಗಬಹುದು ಅದರಲ್ಲೂ 30 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಪಾರ್ಶ್ವವಾಯು ಸಂಭವಿಸುವ ಪ್ರಮಾಣ ಹೆಚ್ಚು. ಇನ್ನು ಪಾರ್ಶ್ವವಾಯು ಸಂಭವಿಸಲು ವ್ಯಕ್ತಿಯ ವಯಸ್ಸು ಕುಟುಂಬದ ಇತಿಹಾಸ l ಜನೇಟಿಕ್ ಕೂಡ ಕಾರಣವಾಗಿರಬಹುದು.

ಪಾರ್ಶ್ವವಾಯುವಿನ ಗುಣಲಕ್ಷಣಗಳನ್ನು ತೋರಿಸುವುದಾದರೆ ಈ ಕೆಲವು ಚಿಹ್ನೆಗಳನ್ನು ಗಮನಿಸಿ. ವ್ಯಕ್ತಿಯ ಮುಖದ ಭಾಗ ಇಳಿಮುಖವಾಗಿದ್ದರೆ ಅದನ್ನು ಪಾರ್ಶ್ವವಾಯು ಸಂಭಾವ್ಯ ಲಕ್ಷಣ ಎನ್ನಬಹುದು. ತೋಳುಗಳಲ್ಲಿ ಅಥವಾ ಕೈಗಳಲ್ಲಿ ದೌರ್ಬಲ್ಯ ಕಾಣಿಸಿಕೊಂಡರೆ, ಮಾತುಗಳು ಇದ್ದಕ್ಕಿದ್ದ ಹಾಗೆ ಅಸ್ಪಷ್ಟವಾಗಲು ಆರಂಭವಾದರೆ ಇದನ್ನು ಪಾಶ್ವ ವಾಯುವಿನ ಲಕ್ಷಣ ಎಂದು ಗುರುತಿಸಿ ತಕ್ಷಣವೇ ಆಸ್ಪತ್ರೆಗೆ ಸೇರಿಸುವುದು ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಪಾರ್ಶ್ವವಾಯು ಗುಣಲಕ್ಷಣಗಳು ಕಂಡುಬಂದರೆ ಮನೆಯಲ್ಲಿಯೇ ಚಿಕಿತ್ಸೆ ಮಾಡುವಂತಹ ರಿಸ್ಕ್ ತೆಗೆದುಕೊಳ್ಳಬೇಡಿ ಎಷ್ಟು ಬೇಗ ವೈದ್ಯರನ್ನು ಭೇಟಿ ಮಾಡುತ್ತಿರೋ ಅಷ್ಟು ಬೇಗ ಆ ರೋಗಿಯನ್ನು ಪಾರ್ಶ್ವ ವಾಯುವಿನಿಂದ ಗುಣಪಡಿಸಬಹುದು. ಸಿಟಿ ಸ್ಕ್ಯಾನ್ ಅಥವಾ ಎಂ ಆರ್ ಐ ಸ್ಕ್ಯಾನ್ ಮೂಲಕ ರೋಗದ ಬಗ್ಗೆ ಹೆಚ್ಚಿನ ತನಿಖೆ ಮಾಡಲಾಗುತ್ತದೆ.

ಪಾರ್ಶ್ವವಾಯು ಇಂದು ಸಣ್ಣ ವಯಸ್ಸಿನವರಲ್ಲಿಯೂ ಕೂಡ ಉಂಟಾಗುತ್ತಿದೆ ಇದಕ್ಕೆ ಮುಖ್ಯವಾದ ಕಾರಣ ಫಾಸ್ಟ್ ಲೈಫ್. ನಮ್ಮ ಅನಾರೋಗ್ಯಕರ ಆಹಾರ ಪದ್ಧತಿ ಅನಾರೋಗ್ಯಕರ ಜೀವನ ಶೈಲಿ ಕೂಡ ಪಾರ್ಶ್ವವಾಯು ಉಂಟಾಗುವಂತೆ ಮಾಡುತ್ತದೆ ಒತ್ತಡದ ಜೀವನ ಕೂಡ ಇದಕ್ಕೆ ಒಂದು ಪ್ರಮುಖ ಕಾರಣವಾಗಿರಬಹುದು. ಮದ್ಯಪಾನ ಮಾಡುವುದು, ಧೂಮಪಾನ ಮಾಡುವುದು ಮೊದಲಾದ ಚಟುವಟಿಕೆಗಳು ಪಾರ್ಶ್ವವಾಯು ಉಂಟಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಹಾಗಾಗಿ ಕೇವಲ ವಯಸ್ಸಾದವರಲ್ಲಿ ಬರಬಹುದು ಎಂದು ನೆಗ್ಲೆಟ್ ಮಾಡುವುದರ ಬದಲು ಪಾರ್ಶ್ವವಾಯು ಯಾರಿಗೆ ಯಾವಾಗ ಬೇಕಾದರೂ ಸಂಭವಿಸಬಹುದು ಎಂಬುದನ್ನು ನೆನಪಿನಲ್ಲಿಡಿ ಜೊತೆಗೆ ನಿಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯನ್ನು ಆರೋಗ್ಯಕರ ರೀತಿಯಲ್ಲಿ ಬದಲಾಯಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ಪಾರ್ಶ್ವವಾಯು ಎನ್ನುವ ರೋಗ ಮಾತ್ರವಲ್ಲ ಇನ್ನು ಹಲವು ರೋಗಗಳಿಂದ ನಾವು ದೂರ ಇರಬಹುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

What Is The Reason To Increase The Stroke, How To Prevent It?

Here are reason to increase the stroke, Which type of lifestyle help to prevent it?
X
Desktop Bottom Promotion