Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಟ್ರೆಂಡ್‌ನಲ್ಲಿದೆ ಸೆಕ್ಸಿ ವಾಟರ್, ಏನಿದು ಸೆಕ್ಸಿ ವಾಟರ್, ಈ ವಾಟರ್ ಪ್ರಯೋಜನವೇನು?
ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ಸೆಕ್ಸಿ ವಾಟರ್ ತುಂಬಾನೇ ಟ್ರೆಂಡ್ ಆಗುತ್ತಿದೆ. ಏನುದು ಸೆಕ್ಸಿ ವಾಟರ್? ಇದನ್ನು ಕುಡಿದರೆ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

ಈ ಸೆಕ್ಸಿ ವಾಟರ್ ಕಂಡು ಹಿಡಿದವರು ಯಾರು?
ಇದು ಜನರಿಗೆ ಹೆಚ್ಚು ಪರಿಚಯವಾಗಿದ್ದು ಟಿಕ್‌ಟಾಕ್ ಕ್ರಿಯೇಟರ್ Kelly Stranick (@kellygracemae) ಎಂಬವರಿಂದ , ಈ ಸೆಕ್ಸಿ ವಾಟರ್ ಹೆಸರು ಕೇಳಿದರೆ ಮಾದಕವಾಗಿದೆ ಅಲ್ವಾ? ಇದೇನು ಎಂದು ನೋಡುವುದಾದರೆ ಒಂದು ದೊಡ್ಡ ಗ್ಲಾಸ್ ಕೆಲ ವಸ್ತುಗಳನ್ನು ಹಾಕಿರುವ ಒಂದು ಪಾನೀಯ.
ಈ ಸೆಕ್ಸಿ ವಾಟರ್ ಹೇಗೆ ಮಾಡಲಾಗುವುದು? ಯಾವಾಗ ಕುಡಿಯಬೇಕು?
ಈ ಸೆಕ್ಸಿ ವಾಟರ್ ಎಂದರೆ ಬೆಳಗ್ಗೆ ಒಂದು ದೊಡ್ಡ ಲೋಟ ನೀರು ತೆಗೆದುಕೊಂಡು ಅದಕ್ಕೆ ನಿಂಬೆ ತುಂಡು, ಪುದೀನಾ, ಸೌತೆಕಾಯಿ ಇವುಗಳನ್ನು ಹಾಕಿ ಅದಕ್ಕೆ ಒಂದು ಸ್ಟ್ರಾ ಇಟ್ಟು ನೀಡು ನೀರು, ನೋಡಲು ಆಕರ್ಷಕ, ಆರೋಗ್ಯ ಅಂತೂ ತುಂಬಾನೇ ಒಳ್ಳೆಯದು.
ಈ ಸೆಕ್ಸಿ ವಾಟರ್ ಪ್ರಯೋಜನವೇನು?
ನೀರನ್ನು ನೀವು ಹಾಗೆಯೇ ತೆಗೆದುಕೊಳ್ಳುವುದಕ್ಕಿಂತ ಹೀಗೆ ಮಾಡಿ ಕುಡಿಯುವುದರಿಂದ ದೊರೆಯುವ ಪ್ರಯೋಜನವೆಂದರೆ ಒಂದು ಈ ರೀತಿ ಕುಡಿಯಲು ತುಂಬಾ ಇಂಟೆರೆಸ್ಟಿಂಗ್ ಅನಿಸುವುದು. ಜೊತೆಗೆ ದೇಹಕ್ಕೆ ತುಂಬಾ ಒಳ್ಳೆಯದು. ಇದು ಒಂದು ರೀತಿಯ ಡಿಟಾಕ್ಸ್ ಪಾನೀಯ. ಈ ಪಾನೀಯ ಕುಡಿಯುವುದರಿಂದ ದೇಹದಲ್ಲಿನ ಕಷ್ಮಲ ಮಲ-ಮೂತ್ರದ ಮೂಲಕ ಹೊರ ಹೋಗುತ್ತದೆ, ಇದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಕೆಲವರು ಸೆಕ್ಸಿ ವಾಟರ್‌ಗೆ ಕೆಲ ಪ್ರೊಟೀನ್ ಪುಡಿಯನ್ನು ಸೇರಿಸುತ್ತಾರೆ, ಆದರೆ ಅದೇನು ಬೇಕಾಗಲು ಸಿಂಪಲ್ ನೀರು, ಶಾಕರ್ಷಕ ಗ್ಲಾಸ್ ನಿಂಬೆ ಹಣ್ಣಿನ ತುಂಡು, ಪುದೀನಾ, ಸೌತೆಕಾಯಿ ತುಂಡುಗಳು ಇದ್ದರೆ ಸಾಕು. ಅಲ್ಲದೆ ಈ ಪಾನೀಯ ಕುಡಿಯುವುದರಿಂದ ಚಟುವಟಿಕೆಯಿಂದ ಇರಲು ಸಹಕಾರಿ.
ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯಬೇಕು , ನೀವು ಈ ರೀತಿಯ ಸೆಕ್ಸಿ ವಾಟರ್ ತೆಗೆದುಕೊಳ್ಳಬಹುದು ಅಥವಾ ಬಿಸಿ ನೀರು ತೆಗೆದುಕೊಳ್ಳಬಹುದು, ಆದರೆ ಬೆಳಗ್ಗೆ ಎದ್ದ ಮೇಲೆ ನೀರು ಕುಡಿಯಬೇಕು, ಈ ರೀತಿ ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಈ ಪ್ರಯೋಜನಗಳಿವೆ:
ಬೆಳಗ್ಗೆ ಎದ್ದ ತಕ್ಷಣ ಅರ್ಧ ಲೀಟರ್ ನೀರು ಕುಡಿಯಿರಿ
ನೀರು ಕುಡಿದ ಬಳಿಕ 45 ನಿಮಿಷದವರೆಗೆ ತಿಂಡಿ ತಿನ್ನಬಾರದು
ಊಟದ ಅರ್ಧ ಗಂಟೆ ಮೊದಲು ನೀರು ಕುಡಿಯುವುದು ಒಳ್ಳೆಯದು
ಊಟ ಮಾಡುವಾಗ ನೀರು ಕುಡಿಯುವುದು ಒಳ್ಳೆಯದಲ್ಲ, ಊಟವಾದ ಅರ್ಧ ಅಥವಾ ಒಂದು ಗಂಟೆಯ ಬಳಿಕ ನೀರು ಕುಡಿಯುವುದು ಒಳ್ಳೆಯದು.
ಈ ರೀತಿ ನೀರು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಒಳ್ಳೆಯ ಪ್ರಯೋಜನವಿದೆ, ಅದರಲ್ಲೂ ಈ ಬಗೆಯ ಸಮಸ್ಯೆ ಇರುವವರು ಒಳ್ಳೆಯ ರಿಸಲ್ಟ್ ಪಡೆಯಬಹುದು:
ರಕ್ತದೊತ್ತಡ, ಮಧುಮೇಹಿಗಳಲ್ಲಿ 30 ದಿನಕ್ಕೆ ಒಳ್ಳೆಯ ರಿಸಲ್ಟ್ ಸಿಗುವುದು
ಮಲಬದ್ಧತೆ ಸಮಸ್ಯೆಯಿದ್ದರೆ 10 ದಿನದಲ್ಲಿ ಕಡಿಮೆಯಾಗುವುದು
ಟಿಬಿ ರೋಗಿಗಳು 90 ದಿನದಲ್ಲಿ ಒಳ್ಳೆಯ ಫಲಿತಾಂಶ ಪಡೆಯಬಹುದು.
ಅಲ್ಲದೆ ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಮುಖದಲ್ಲಿ ಕಾತಿ ಹೆಚ್ಚಾಗುವುದು.
ರಕ್ತ ಸಂಚಾರ ಉತ್ತಮವಾಗಿ ನಡೆಯುವುದು
ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತ್ವಚೆಯಲ್ಲಿ ನೆರಿಗೆ ಬೀಳುವುದು.
ತೂಕ ನಿಯಂತ್ರಣಕ್ಕೆ ಸಹಕಾರಿ
ನೀವು ದಿನದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ತೂಕ ನಿಯಂತ್ರಣಕ್ಕೂ ಸಹಕಾರಿ.
ಕಿಡ್ನಿ ಸ್ಟೋನ್ ತಡೆಗಟ್ಟುವುದು
ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುವುದು. ಅಲ್ಲದೆ ಗಾಲ್‌ಬ್ಲೇಡರ್ ಸಮಸ್ಯೆ ತಡೆಗಟ್ಟಲು ಸಹಕಾರಿ. ಆದ್ದರಿಂದ ದಿನದಲ್ಲಿ 2 ಲೀಟರ್ ನೀರು ಕುಡಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications