Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಾಪ್‌ಕಾರ್ನ್ ಲಂಗ್ಸ್ ಎಂದರೇನು? ಈ ಶ್ವಾಸಕೋಶದ ಸಮಸ್ಯೆ ತುಂಬಾ ಅಪಾಯಕಾರಿ ಏಕೆ?
ಪಾಪ್‌ಕಾರ್ನ್ ಲಂಗ್ಸ್ ಸಮಸ್ಯೆ ಬಗ್ಗೆ ಕೇಳಿದ್ದೀರಾ? ಇದೊಂದು ಶ್ವಾಸಕೋಸದ ಸಮಸ್ಯೆಯಾಗಿದ್ದು ಇದನ್ನು ಮೆಡಿಕಲ್ ಭಾಷೆಯಲ್ಲಿ Broncholitis Obliterans ಎಂದು ಕರೆಯಲಾಗುವುದು. ಈ ಶ್ವಾಸಕೋಸ ಸಮಸ್ಯೆಯ ಪರಿಣಾಮ ಮಾತ್ರ ಭೀಕರವಾಗಿದೆ.
ಪಾಪ್‌ಕಾರ್ನ್ ಶ್ವಾಸಕೋಸದ ಸಮಸ್ಯೆ ಉಂಟಾದರೆ ಉಸಿರಾಡುವುದು ಕಷ್ಟವಾಗುವುದು, ಅಂಗಾಂಗಗಳಲ್ಲಿ ಉರಿಯೂತದ ಸಮಸ್ಯೆ ಕಂಡು ಬರುವುದು. ಈ ಪಾಪ್‌ಕಾರ್ನ್ ಶ್ವಾಸಕೋಶದ ಲಕ್ಷಣಗಳೇನು, ಈ ಸಮಸ್ಯೆಗೆ ಕಾರಣವೇನು ಎಂದು ನೋಡೋಣ ಬನ್ನಿ:

ಪಾಪ್‌ಕಾರ್ನ್ ಶ್ವಾಸಕೋಸದ ಸಮಸ್ಯೆಗೆ ಕಾರಣವೇನು?
ತಜ್ಞರ ಪ್ರಕಾರ ಆಹಾರದಲ್ಲಿನ ಹಾನಿಕಾರಕ ರಾಸಾಯನಿಕಗಳಿಂದಾಗಿ ಈ ಸಮಸ್ಯೆ ಉಂಟಾಗುವುದು. ಕೃತಕ ಬೆಣ್ಣೆ ರುಚಿಯ ಪದಾರ್ಥಗಳನ್ನು ಸೇವಿಸಿದಾಗ ಈ ರೀತಿ ಉಂಟಾಗುವುದು, FDA ಇದನ್ನು ತಿನ್ನಲು ಸುರಕ್ಷಿತ ಎಂದು ಹೇಳಿದರೂ ಇಂಥ ಆಹಾರಗಳು ಶ್ವಾಸಕೋಸದ ಸಮಸ್ಯೆ ಉಂಟಾಗುವುದು.
ಕಾಫು, ಪ್ಯಾಕ್ ಮಾಡಿದ ಫ್ರೂಟ್ ಡ್ರಿಂಕ್ಸ್, ಕ್ಯಾರಮೆಲ್ ಹಾಗೂ ಕೆಲವೊಂದು ಹಾಲಿನ ಉತ್ಪತ್ತಿಗಳಲ್ಲಿ ಈ ರೀತಿಯ ಅಂಶ ಕಂಡುಬರುವುದು.
ಈ ಪಾಪ್‌ಕಾರ್ನ್ ಶ್ವಾಸಕೋಸದ ಸಮಸ್ಯೆ ಸಾಮನ್ಯವೇ?
ಈ ಶ್ವಾಸಕೋಸದ ಸಮಸ್ಯೆ ತುಂಬಾ ಅಪರೂಪವಾಗಿದ್ದು ಯಾರಿಗೂ ಬೇಕಾದರೂ ಬರಬಹುದು, ಕೆಲವೊಂದು ಆಹಾರಗಳನ್ನು ಸೇವಿಸಿದಾಗ ಈ ರೀತಿ ಉಂಟಾಗುವುದು, ಅಲ್ಲದೆ ಶ್ವಾಸಕೋಸದ ಟ್ರಾನ್ಸ್‌ಪ್ಲ್ಯಾಂಟ್ ಮಾಡಿದವರಲ್ಲೂ ಈ ಸಮಸ್ಯೆ ಕಂಡು ಬರಬಹುದು. ಶ್ವಾಸಕೋಶದ ಬದಲಿ ಚಿಕಿತ್ಸೆ ಮಾಡಿದವರಲ್ಲಿ ಈ ಸಮಸ್ಯೆ ಬರುವ ಸಾಧ್ಯತೆ ಶೇ. 50ರಷ್ಟು ಅಧಿಕ. ಅಲ್ಲದೆ ಮಜ್ಜೆಯನ್ನು ದಾನವಾಗಿ ಪಡೆದವರಲ್ಲಿ 5 ವರ್ಷದೊಳಗೆ ಈ ಸಮಸ್ಯೆ ಕಂಡು ಬರುವುದು.
ಪಾಪ್‌ಕಾರ್ನ್‌ನ ಲಕ್ಷಣಗಳೇನು?
- ತೀವ್ರ ಉಸಿರಾಟದ ಸಮಸ್ಯೆ
- ವಿಪರೀತ ಒಣಕೆಮ್ಮು
- ತೀವ್ರ ಜ್ವರ
- ಸುಸ್ತು
- ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುವುದು
- ಅಸ್ತಮಾ
- ಕಣ್ಣು, ತ್ವಚೆ, ಬಾಯಿ, ಮೂಗಿನಲ್ಲಿ ಕಿರಿಕಿರಿ
- ರಾತ್ರಿಯಲ್ಲಿ ಮೈ ತುಂಬಾ ಬೆವರುವುದು
- ತ್ವಚೆಯಲ್ಲಿ ಗುಳ್ಳೆಗಳು ಏಳುವುದು
ಇಂಥವರಿಗೂ ಪಾಪ್‌ಕಾರ್ನ್ ಲಂಗ್ಸ್ ಉಂಟಾಗುವ ಸಾಧ್ಯತೆ ಇದೆ
- ನ್ಯೂಮೋನಿಯಾ, ಬ್ರೋಂಕಲೈಟಿಸ್
- ವೈರಲ್ ಸೋಂಕು
- ರುಮೋಥಾಯ್ಡ್ ಆರ್ಥರೈಟಿಸ್
- ಚರ್ಮ ಸುಲಿದು ಬರುವುದು
- ಈ ಬಗೆಯ ಸಮಸ್ಯೆ ಇರುವವರಲ್ಲಿಯೂ ಪಾಪ್‌ಕಾರ್ನ್ ಲಂಗ್ಸ್ ಸಮಸ್ಯೆ ಬರುವುದು.
ಪಾಪ್‌ಕಾರ್ನ್ ಲಂಗ್ಸ್ ತಡೆಗಟ್ಟುವುದು ಹೇಗೆ?
ಧೂಮಪಾನ, ಇ ಸಿಗರೇಟ್ ಸೇವನೆ ಮಾಡಬಾರದು
ಮತ್ತೊಬ್ಬರು ಸೇದಿದ ಸಿಗರೇಟ್ ಸೇದಬೇಡಿ, ಅವರು ಸೇದು ಬಿಟ್ಟ ಹಿಗೆ ಸೇವಿಸಬೇಡಿ.
ಶ್ವಾಸಕೋಸಕ್ಕೆ ಹಾನಿಯಾಗುವ ಸೋಂಕು ಬರದಂತೆ ಎಚ್ಚರವಹಿಸಿ
ಇನ್ನು ಹಾನಿಕಾರಕ ಜಾಗದಲ್ಲಿ ಕೆಲಸ ಮಾಡುವಾಗ ಸುರಕ್ಷತೆ ಕ್ರಮ ಅನುಸರಿಸಿ.
ಶ್ವಾಸಕೋಶದ ಆರೋಗ್ಯಕ್ಕೆ ಈ ಆಹಾರ ಒಳ್ಳೆಯದು
ಸೇಬು ಹಣ್ಣು
ಸಾಲ್ಮನ್
ಹಣ್ಣುಗಳು ಮತ್ತು ತರಕಾರಿಗಳು
ಧಾನ್ಯಗಳು
ಬೆಳ್ಳುಳ್ಳಿ
ಶುಂಠಿ
ಕಾಳುಮೆಣಸು
ಬ್ರಕೋಲಿ
ಆಲಿವ್ ಎಣ್ಣೆ
ಗ್ರೀನ್ ಟೀ
ಕಾಫಿ ಬೀಜಗಳು
ಶ್ವಾಸಕೋಶದ ಆರೋಗ್ಯಕ್ಕೆ ಉಸಿರಾಟದ ವ್ಯಾಯಾಮ ಮಾಡಿ
ಭ್ರಮರಿ ವ್ಯಾಯಾಮ ಮಾಡಿ
ಚಾಪೆಯಲ್ಲಿ ನೀವು ಸಿದ್ಧಾಸನದಲ್ಲಿ ಕುಳಿತುಕೊಳ್ಳಿ ನಂತರ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಬಾಹ್ಯ ಶಬ್ದಗಳನ್ನು ತಡೆಯಲು ನಿಮ್ಮ ತೋರು ಅಥವಾ ಮಧ್ಯದ ಬೆರಳನ್ನು ನಿಮ್ಮ ಕಿವಿಗೆ ಸೇರಿಸಿ. ನಿಮ್ಮ ಹುಬ್ಬುಗಳ ಮಧ್ಯದಲ್ಲಿ ನಿಮ್ಮ ಗಮನವನ್ನು ಹರಿಸಿ.
ಆಳವಾದ ಉಸಿರನ್ನು ತೆಗೆದುಕೊಳ್ಳಿ ನಂತರ ನಿಧಾನಕ್ಕೆ ಉಸಿರು ಬಿಡಿ, ಹೀಗೆ ಮಾಡುವಾಗ ನ್ ಅಥವಾ ಮ್ ಅಂತ ಗುನುಗಿ.
ಹೀಗೆ ಮಾಡುವಾಗ ನಿಮ್ಮ ದವಡೆ, ವಿಶೇಷವಾಗಿ ನಾಲಿಗೆ, ಹಲ್ಲುಗಳು ಮತ್ತು ಮೂಗಿನ ಕಾಲುವೆಗಳು ಕಂಪಿಸಬೇಕು
ಹೀಗೆ ನೀವು ಆರರಿಂದ ಹತ್ತು ಸುತ್ತುಗಳನ್ನು ನಿರ್ವಹಿಸಬಹುದು
ನೀವು ಭ್ರಮರಿ ಮುಗಿಸಿದ ನಂತರ, ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಒಂದು ನಿಮಿಷ ಸಾಮಾನ್ಯವಾಗಿ ಉಸಿರಾಡಿ
ಹೀಗೆ ಶ್ವಾಸಕೋಶದ ಆರೋಗ್ಯದ ಕಡೆಗೆ ಗಮನಹರಿಸಿ, ಹೀಗೆ ಮಾಡುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುವುದು, ಅಲ್ಲದೆ ದೂಳಿನಲ್ಲಿ ಓಡಾಡುವಾಗ ಮಾಸ್ಕ್ ಧರಿಸಿ, ಮೇಲೆ ಹೇಳಿದ ಆಹಾರಗಳಿಂದ ದೂರವಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









