Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಪೆಟ್ಟಿಕೋಟ್ ಕ್ಯಾನ್ಸರ್ ಬಗ್ಗೆ ಕೇಳಿದ್ದೀರಾ? ಮಹಿಳೆಯರೇ ಪಟ್ಟಿಕೋಟ್‌ನಿಂದ ಮಾತ್ರ ಇದು ಬರುತ್ತೆ ಅಂದುಕೊಳ್ಳಬೇಡಿ
ಪೆಟ್ಟಿಕೋಟ್ ಕ್ಯಾನ್ಸರ್ ಬಗ್ಗೆ ಕೇಳಿದ್ದೀರಾ? ನಾವು ಭಾರತೀಯ ನಾರಿಯರು ಅರಿಯಲೇಬೇಕದ ವಿಷಯವಿದು. ಸೀರೆ ನಮ್ಮ ಗುರುತು, ನಮ್ಮ ಸಾಂಪ್ರದಾಯಕ ಉಡುಪು, ಸೀರೆಯನ್ನು ಹಲವು ರೀತಿಯಲ್ಲಿ ಉಡುತ್ತೇವೆ. ಸೀರೆ ಉಡುವಾಗ ಒಳಗಡೆ ಪೆಟ್ಟಿಕೋಟ್ ಅಥವಾ ಒಳಲಂಗ ಹಾಕುತ್ತೇವೆ, ಈ ಒಳಲಂಗದಿಂದ ಕ್ಯಾನ್ಸರ್ ಬರುವುದೇ? ಎಂದು ಕೇಳುವುದಾದರೆ ಇದರಿಂದ ಕ್ಯಾನ್ಸರ್ ಅಪಾಯವಿದೆ ಎಂದು ವಿಜ್ಞಾನ ಹೇಳುತ್ತದೆ, ಆದರೆ ಪೆಟ್ಟಿಕೋಟ್ ಹಾಕಿದರೆ ಕ್ಯಾನ್ಸರ್ ಬರುವುದಲ್ಲ, ಅದನ್ನು ಹೇಗೆ ಧರಿಸಿದರೆ ಕ್ಯಾನ್ಸರ್ ಬರುತ್ತದೆ ಎಂದು ತಿಳಿದುಕೊಂಡರೆ ಈ ಪೆಟ್ಟಿಕೋಟ್ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ:

ಪೆಟ್ಟಿಕೋಟ್ ತುಂಬಾ ಬಿಗಿಯಾಗಿ ಧರಿಸುವುದು ಒಳ್ಳೆಯದಲ್ಲ
ಪೆಟ್ಟಿಕೋಟ್ ತುಂಬಾ ಬಿಗಿಯಾಗಿ ಧರಿಸುವುದು ಒಳ್ಳೆಯದಲ್ಲ, ತುಂಬಾ ಮಹಿಳೆಯರಿಗೆ ಈ ಅಭ್ಯಾಸವಿದೆ, ಪೆಟ್ಟಿಕೋಟ್ ಬಿಗಿಯಾಗಿ ಕಟ್ಟುವುದರಿಂದ ಗಾಯವಾಗುವುದು, ಆ ಭಾಗದಲ್ಲಿ ತುರಿಕೆ ಉಂಟಾಗುವುದು. ಲಂಗ ಗಟ್ಟಿಯಾಗಿದ್ದರೆ ಸೀರೆ ಉಟ್ಟರೆ ಕಂಫರ್ಟ್ ಅನಿಸುವುದು, ಇಲ್ಲದಿದ್ದರೆ ಬಿಚ್ಚಿ ಹೋದಂತೆ ಅನಿಸುವುದು ಎಂದು ಬಿಗಿಯಾಗಿ ಕಟ್ಟುತ್ತಾರೆ.
ಅಪರೂಪಕ್ಕೆ ಸೀರೆ ಉಡುವವರಾದರೆ ಅಷ್ಟೊಂದು ಅಪಾಯಕಾರಿಯಲ್ಲ, ಆದರೆ ದಿನಾ ಸೀರೆ ಉಡುವವರಾದರೆ ಮಾತ್ರ ಈ ಅಭ್ಯಾಸ ಒಳ್ಳೆಯದಲ್ಲ, ಲಂಗವನ್ನು ತುಂಬಾ ಬಿಗಿಯಾಗಿ ಕಟ್ಟುತ್ತಿದ್ದರೆ ಸೊಂಟದ ಸುತ್ತ ಕಪ್ಪು ಕಲೆ ಬಿದ್ದಿರುತ್ತದೆ, ಅಲ್ಲದೆ ಗಾಯವಾಗಿರುತ್ತದೆ. ಇದು ಕ್ಯಾನ್ಸರ್‌ವಾಗಬಹುದು.
ಬರಿ ಲಂಗದಿಂದ ಮಾತ್ರ ಈ ಪೆಟ್ಟಿಕೋಟ್ ಕ್ಯಾನ್ಸರ್ ಬರುತ್ತದೆ ಎಂದಲ್ಲ
ನೀವು ಪ್ಯಾಂಟ್ ಅಥವಾ ಶಾರ್ಟ್ಸ್ ದಾರವಾಗಿರಬಹುದು, ಜೂಡಿದಾರ ಪ್ಯಾಂಟ್‌ನ ದಾರವಾಗಿರಬಹುದು ತುಂಬಾ ಬಿಗಿಯಾಗಿ ಕಟ್ಟಬಾರದು. ಈ ರೀತಿಕಟ್ಟುವುದರಿಂದಲೇ ಈ ಪೆಟ್ಟಿಕೋಟ್ ಕ್ಯಾನ್ಸರ್ ಬರುವುದು. ಹಾಗಾಗಿ ಬರಿ ಪೆಟ್ಟಿಕೋಟ್ ಲಂಗ ಕಟ್ಟುವುದರಿಂದ ಈ ಪೆಟ್ಟಿಕೋಟ್ ಕ್ಯಾನ್ಸರ್ ಬರುತ್ತೆ, ಜೂಡಿದಾರದಿಂದ ಬರಲ್ಲ ಅಂತ, ಒಟ್ಟಿನಲ್ಲಿ ಇದು ಬರುವುದು ನೀವು ಸೊಂಟದ ಸುತ್ತ ಬಿಗಿಯಾಗಿ ಕಟ್ಟುವುದರಿಂದ.
ಪೆಟ್ಟಿಕೋಟ್ ಕ್ಯಾನ್ಸರ್ ಲಕ್ಷಣಗಳೇನು?
ಗಾಯವಾಗಿದ್ದರೆ ಆ ಗಾಯ ಮತ್ತಷ್ಟು ದೊಡ್ಡದಾಗುತ್ತಾ ಹೋಗುತ್ತದೆ, ಆ ಭಾಗದಲ್ಲಿ ರಕ್ತ ಬರುವುದು, ದುರ್ವಾಸನೆ ಬೀರುವುದು ಇವೆಲ್ಲಾ ಪೆಟ್ಟಿಕೋಟ್ ಕ್ಯಾನ್ಸರ್‌ನ ಲಕ್ಷಣವಾಗಿದೆ.
ಪೆಟ್ಟಿಕೋಟ್ ಕ್ಯಾನ್ಸರ್ ಉಂಟಾದಾಗ ತುಂಬಾನೇ ತುರಿಕೆ ಉಂಟಾಗುವುದು
ತ್ವಚೆಯಲ್ಲಿ ಗಾಯವಾಗಿ, ಅಲ್ಸರ್ ಆಗುವುದು, ಇದರಿಂದ ಕಾಲ ಕ್ರಮೇಣ ಕ್ಯಾನ್ಸರ್ ಆಗಿ ಬದಲಾಗುವುದು. ಈ ಭಾಗದಲ್ಲಿ ತುಂಬಾನೇ ತುರಿಕೆ ಇರುತ್ತದೆ. ಹಾಗಾಗಿ ನೀವು ತುಂಬಾ ಬಿಗಿಯಾಗಿ ಲಂಗ ಕಟ್ಟುತ್ತಿದ್ದರೆ ಹಾಗೆ ಕಟ್ಟಬೇಡಿ.
ತ್ವಚೆಯಲ್ಲಿ ರಕ್ತ ಸಂಲನಕ್ಕೆ ಅಡಚಣೆ ಉಂಟಾಗುತ್ತದೆ
ಲಂಗವನ್ನು ತುಂಬಾನೇ ಬಿಗಿಯಾಗಿ ಕಟ್ಟುವುದರಿಂದ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದು. ಆ ಭಾಗದಲ್ಲಿ ಕಪ್ಪು ಕಲೆಗಳು ಉಂಟಾಗಬಹುದು, ಗಾಯವಾಗಬಹುದು, ಆದ್ದರಿಂದ ಸೊಂಟದ ಬಾಗದಲ್ಲಿ ಕಪ್ಪುಕಲೆ ಅಥವಾ ಗಾಯ ಉಂಟಾಗಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ಲಂಗವನ್ನು ಸ್ವಲ್ಪ ಸಡಿಲವಾಗಿ ಕಟ್ಟಿ.
ತ್ವಚೆ ಕ್ಯಾನ್ಸರ್ ಹಿಸ್ಟರಿ ಇದ್ದರೆ ಮತ್ತಷ್ಟು ಜಾಗ್ರತೆವಹಿಸಬೇಕು
ಕುಟುಂಬದಲ್ಲಿ ಯಾರಿಗಾದರು ತ್ವಚೆ ಕ್ಯಾನ್ಸರ್ ಇದ್ದರೆ ತುಂಬಾನೇ ಜಾಗ್ರತೆವಹಿಸಬೇಕು. ಹಾಗಗಾಗಿ ತ್ವಚೆ ಸುತ್ತ ಚಿಕ್ಕ ಗಾಯವಾಗಿದ್ದರೂ ನಿರ್ಲಕ್ಷ್ಯ ಮಾಡು ಹೋಗಲೇಬೇಡಿ.
ಇದನ್ನು ತಡೆಗಟ್ಟುವುದು ಹೇಗೆ?
ಸೊಂಟದ ಸುತ್ತ ತುಂಬಾ ಬಿಗಿಯಾಗಿ ದಾರ ಕಟ್ಟಬೇಡಿ
ಲಂಗವನ್ನು ಬಿಗಿಯಾಗಿ ಕಟ್ಟಬೇಡಿ
ಗಾಯವಾಗಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ, ಸರಿಯಾದ ರೀತಿಯಲ್ಲಿ ಆರೈಕೆ ಮಾಡಿ
ರಾತ್ರಿ ಮಲಗುವಾಗ ಪೆಟ್ಟಿಕೋಟ್ ಹಾಕಿ ಮಲಗಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
